ಹೊಸಕೋಟೆ: ಕಾರಿನಲಿ ಹಣ ತರುತ್ತಿದ್ದ ವ್ಯಕ್ತಿ ದಾರಿ ಮಧ್ಯೆ ನಾಪತ್ತೆ

Team Udayavani, Apr 5, 2022, 3:52 PM IST

Untitled-1

ಹೊಸಕೋಟೆ: ತಾಲೂಕು ನಂದಗುಡಿ ಪೊಲೀಸ್‌ ಠಾಣೆಯಲ್ಲಿ ವ್ಯಾಪ್ತಿಯ ಬೆಂಗಳೂರು-ಚಿಂತಾಮಣಿ ರಸ್ತೆಯಲ್ಲಿ ಬೆಂಗಳೂರು ಮೂಲದ ಲೋಹಿತ್‌ (36) ಎಂಬುವರು ಕೆಲಸಗಾರರಿಗೆ ಸಂಬಳ ಕೊಡಲು ಕಾರಿನಲ್ಲಿ ಹಣ ತರುತ್ತಿರುವಾಗ ಮಾರ್ಗ ಮಧ್ಯದಲ್ಲಿ ನಾಪತ್ತೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮಾ.28ರಂದು ಸಂಬಳ ಸಲುವಾಗಿ ಹಣದೊಂದಿಗೆ ಬೆಂಗಳೂರಿನಿಂದ ನಂದಗುಡಿ ಯತ್ತ ಬರುತ್ತಿರುವಾಗ ನಾಪತ್ತೆ ಯಾಗಿದ್ದಾರೆ. ನಂದಗುಡಿಯ ಅರಣ್ಯದ ಬಳಿ ರಸ್ತೆಯ ಬದಿ ಕಾರು ಪಂಕ್ಚರ್‌ ಆಗಿದ್ದು, ಚಕ್ರ ಬದಲಿಸಿಕೊಂಡು ನಂದ ಗುಡಿಗೆ ಹೋಗಿ ಬರಲು ತಡವಾಗುತ್ತದೆ ಎಂದು ಲೋಹಿತ್‌ ಕುಟುಂಬಸ್ಥರಿಗೆ ಕರೆ ಮಾಡಿದ್ದಾರೆ. ಇತ್ತ ಹಳೇಊರು ರೇಸ್‌ ಟ್ರ್ಯಾಕ್‌ ಉಸ್ತುವಾರಿ ವಹಿಸಿಕೊಂಡಿದ್ದ ತಮ್ಮ ಕೆಲಸಗಾರ ನಿತಿನ್‌ ಲೋಹಿತ್‌ಗೆ ಕರೆ ಮಾಡಿದಾಗ ಕಾರು ಟಯರ್‌ ಚೇಂಜ್‌ ಮಾಡುತ್ತಿದ್ದು, ಬರುವುದಾಗಿ ತಿಳಿಸಿದ್ದಾರೆ.

ಕರೆ ಬಂದ ಅರ್ಧ ಗಂಟೆ ನಂತರ ಮತ್ತೆ ನಿತಿನ್‌ ಲೋಹಿತ್‌ಗೆ ಕರೆ ಮಾಡಿ ದಾಗ ಫೋನ್‌ ಸ್ವೀಚ್‌ ಆಫ್‌ ಆಗಿತ್ತು. 29ರಂದು ಬೆಳಗ್ಗೆ ನಿತಿನ್‌ ಕಾರು ನಿಂತ ಜಾಗಕ್ಕೆ ಹೋದಾಗ, ಕಾರು ಟಯರ್‌ ಬಿಚ್ಚಿದ್ದು, ಕಾರಿ ನೊಳಗಡೆ ರಕ್ತದ ಕಲೆಗಳು ಕಂಡು ಬಂದಿದ್ದು ಚಪ್ಪಲಿ, ಬೆಲ್ಟ್ ಬಿದ್ದಿದ್ದು, ಹಾಗೂ ಎಳೆದಾಡಿರುವ ಗುರುತುಗಳು ಪತ್ತೆಯಾಗಿದೆ.

ಕಾರಿನಲ್ಲಿದ್ದ ಲೋಹಿತ್‌ ಸುಳಿವು ಇರದೇ ಇದ್ದುದನ್ನು ಕಂಡು ನಂದ ಗುಡಿ ಪೊಲೀಸರಿಗೆ ಕರೆ ಮಾಡಿದ್ದರು. ಈ ಘಟನೆಗೆ ಸಂಬಂಧಿಸಿದಂತೆ 29 ರಂದು ಬೆಂಗಳೂರು ಕೆ.ಪಿ. ಅಗ್ರಹಾರದ ವಾಸಿ ಅಭಿನಾಗ್‌ ಎಂಬುವರು ನಂದಗುಡಿ ಪೊಲೀಸ್‌ ಠಾಣೆಯಲ್ಲಿ ನಮ್ಮ ಬಾವಾ ಕಾಣೆಯಾಗಿದ್ದಾರೆಂದು ದೂರು ದಾಖಲಿಸಿದ್ದಾರೆ.

ಸುದ್ದಿ ತಿಳಿದ ಸ್ಥಳಕ್ಕೆ ಧಾವಿಸಿದ ನಂದಗುಡಿ ಪೊಲೀಸರು ಕಾರನ್ನು ಪರಿಶೀಲನೆ ನಡೆಸಿ ವಶಕ್ಕೆ ಪಡೆದು ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಬಳಸಿ ತನಿಖೆ ನಡೆಸಿದರೂ ಡ್ರೋನ್‌ ಕ್ಯಾಮರಾ ಬಳಸಿ ಅರಣ್ಯವನ್ನೆಲ್ಲಾ ಸುತ್ತಾಡಿದರೂ ಸಹ ನಾಪತ್ತೆಯಾಗಿರುವ ಲೋಹಿತ್‌ ಸುಳಿವು ಸಿಕ್ಕಿಲ್ಲ.

ಬೆಂಗಳೂರು ಮೂಲದ ಲೋಹಿತ್‌ ಬಿನ್ನಿಪೇಟೆ ವಿಧಾನಸಭಾ ಕ್ಷೇತ್ರದ ಕೆ.ಪಿ. ಅಗ್ರಹಾರದ ನಿವಾಸಿಯಾಗಿದ್ದು, ಇವರ ಪತ್ನಿ ಐಶ್ವರ್ಯ ಬಿಬಿಎಂಪಿ ಹಾಲಿ ಸದಸ್ಯೆಯಾಗಿದ್ದಾರೆ. ಈ ಪ್ರಕರಣ ವನ್ನು ಭೇದಿಸಲು ಡಿವೈಎಸ್‌ಪಿ ಉಮಾಶಂಕರ್‌ ನೇತೃತ್ವದ ವಿಶೇಷ ತಂಡ ರಚಿಸಿ ತನಿಖೆ ಚುರುಕುಗೊಳಿಸಿದ್ದಾರೆ ಎಂದು ಪಿಎಸ್ಐ ಶಂಕರಪ್ಪ ತಿಳಿಸಿದ್ದಾರೆ.

ಟಾಪ್ ನ್ಯೂಸ್

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ

ಮಾರ್ಗದರ್ಶಕರನ್ನು ಕಳೆದುಕೊಂಡುಕೊಂಡಿದ್ದೇವೆ… ಮನಮೋಹನ್ ಸಿಂಗ್ ನಿಧನಕ್ಕೆ ರಾಹುಲ್ ಸಂತಾಪ

ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ

2-gangavathi

Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Bheema-Naik

KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ

MM-Singh-ACC-Pm

Accidental Prime Minister: ದ ಮೇಕಿಂಗ್‌ ಆ್ಯಂಡ್‌ ಅನ್‌ಮೇಕಿಂಗ್‌ ಆಫ್ ಡಾ.ಸಿಂಗ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tragic: ಮದುವೆ ಹರಕೆ ಹೊತ್ತು ಘಾಟಿ ದೇಗುಲಕ್ಕೆ ಬಂದಿದ್ದ ಯುವತಿ ಸಾವು

Tragic: ಮದುವೆ ಹರಕೆ ಹೊತ್ತು ಘಾಟಿ ದೇಗುಲಕ್ಕೆ ಬಂದಿದ್ದ ಯುವತಿ ಸಾವು

2-

Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾವು

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು

4

Crime: ರೌಡಿಶೀಟರ್‌ ಕೊಲೆ ಯತ್ನ; ಆರೋಪಿಗೆ ಗುಂಡೇಟು

Doddaballapur: ಎರಡೂ ಬಸ್‌ ನಿಲ್ದಾಣಕ್ಕೆ ಬೇಕಿದೆ ಕಾಯಕಲ್ಪ!

Doddaballapur: ಎರಡೂ ಬಸ್‌ ನಿಲ್ದಾಣಕ್ಕೆ ಬೇಕಿದೆ ಕಾಯಕಲ್ಪ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ

ಮಾರ್ಗದರ್ಶಕರನ್ನು ಕಳೆದುಕೊಂಡುಕೊಂಡಿದ್ದೇವೆ… ಮನಮೋಹನ್ ಸಿಂಗ್ ನಿಧನಕ್ಕೆ ರಾಹುಲ್ ಸಂತಾಪ

ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ

2-gangavathi

Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.