ರಾಜ್ಯದಲ್ಲಿ ಮೋದಿ-ಅಮಿತ್ ಶಾ ಮ್ಯಾಜಿಕ್ ನಡೆಯಲ್ಲ
Team Udayavani, Aug 12, 2017, 12:36 PM IST
ದೇವನಹಳ್ಳಿ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ 150 ಸ್ಥಾನ ಬರುತ್ತವೆ ಎಂದು ಭವಿಷ್ಯ ಹೇಳುತ್ತಾ ಓಡಾಡುತ್ತಾರೆ. ಅಶಾಮಿತ್, ಮೋದಿ ಮ್ಯಾಜಿಕ್ ಮಾಡುತ್ತಾರೆಂದು ಕನಸು ಕಾಣುತ್ತಿದ್ದಾರೆ. ಆದರೆ, ಕರ್ನಾಟಕದಲ್ಲಿ
ಅವರ ಆಟ ನಡೆಯೊಲ್ಲ, ಮುಂದಿನ ಚುನಾವಣೆಯಲ್ಲೂ ಕಾಂಗ್ರೆಸ್ ಸರ್ಕಾರ ಬರುವುದು ಖಚಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪುನರುಚ್ಚರಿಸಿದರು. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯ್ತಿ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಅನಾವರಣ ಹಾಗೂ ಅಂಬೇಡ್ಕರ್ ಭವನ, ಸರ್ಕಿಟ್ ಹೌಸ್ ಉದ್ಘಾಟನೆ, ಹೆಬ್ಟಾಳ-ನಾಗವಾರ ವ್ಯಾಲಿಯಲ್ಲಿನ ತ್ಯಾಜ್ಯ ನೀರು ಸಂಸ್ಕರಣಾ ಘಟಕದಿಂದ ಬೆಂಗಳೂರು ಗ್ರಾಮಾಂತರ, ನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆ ಕಾಮಗಾರಿ ಶಂಕುಸ್ಥಾಪನೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕರ್ನಾಟಕ ಬಸವ, ಕನಕದಾಸರ, ಕೆಂಪೇಗೌಡರ, ಟಿಪ್ಪು ಜನ್ಮಸ್ಥಳದ ನಾಡಾಗಿದೆ. ಉತ್ತರ ಪ್ರದೇಶ, ಗುಜರಾತ್ ತರಹ ರಾಜ್ಯ ಕರ್ನಾಟಕವಲ್ಲ, ಪ್ರಧಾನಿ ಮೋದಿ – ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮ್ಯಾಜಿಕ್ ಇಲ್ಲಿ ನಡೆಯುವುದಿಲ್ಲ, ವಿರೋಧ ಪಕ್ಷದವರು ರೈತರ ಆತ್ಮಹತ್ಯೆ, ಸಾಲಮನ್ನಾ, ನೀರಿನ ವಿಚಾರದಲ್ಲಿ ರಾಜಕೀಯ ಬೆರೆಸುತ್ತಾರೆ. ಶವ ಇಟ್ಟು ರಾಜಕೀಯ ಬಣ್ಣ ಮಾಡುತ್ತಾರೆ ಎಂದು ದೂರಿದರು. ದಲಿತರಿಗೆ ಕೊಟ್ಟು ಮದುವೆ ಮಾಡಲಿ:
ದಲಿತರ ಮನೆಗೆ ಹೋಗಿ ಹೋಟೆಲ್‌ನಲ್ಲಿ ಇಡ್ಲಿ-ವಡೆ, ದೋಸೆ ತರೆಸಿ ತಿನ್ನುತ್ತಾರೆ. ಅವರಿಗೆ ಧೈರ್ಯವಿದ್ದರೆ ದಲಿತರ ಹೆಣ್ಣು
ಮಗಳನ್ನು ಮದುವೆ ಮಾಡಿಕೊಳ್ಳಲಿ, ಇಲ್ಲ ಅವರಿಗೆ ಕೊಟ್ಟು ಮದುವೆ ಮಾಡಲಿ, ದಲಿತರ ಕೇರಿಯಲ್ಲಿ ಹೋಗಿ ಊಟ-ಉಪಹಾರ
ಸೇವಿಸುವುದರಲ್ಲಿ ಎಷ್ಟು ಅರ್ಥವಿರುತ್ತದೆ ಎಂದು ಸವಾಲು ಹಾಕಿದರು.
ಗೇಯುವ ಎತ್ತಿಗೆ ಮತ ಹಾಕಿ: ಕಾಂಗ್ರೆಸ್ ಸರ್ಕಾರ ಬಂದ ಅರ್ಧ ಗಂಟೆಯಲ್ಲಿ ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ವರ್ಗಗಳ ನಿಗಮಗಳಿಂದ ಮಾಡಿದ ಸಾಲ ಬಡ್ಡಿ ಸಂಪೂರ್ಣ ಮನ್ನಾ ಮಾಡಿದೆ. ಎಸ್ಸಿ, ಎಸ್ಟಿ ಬಗ್ಗೆ ಮಾತನಾಡುವ ನೈತಿಕ ಹಕ್ಕು ಯಾರಿಗೂ ಇಲ್ಲ, ಮತ ಹಾಕುವ ಪ್ರಜೆಗಳೇ ದೇವರು, ಚಿತ್ರನಟ ಡಾ.ರಾಜ್ ಕುಮಾರ್ ಹೇಳಿದಂತೆ ಅಭಿಮಾನಿಗಳೇ ದೇವರು ಎನ್ನುತ್ತಾರೆ ಹಾಗೆಯೇ ಮತದಾರರು ತಮಗೆ ದೇವರು, ಗೇಯುವ ಎತ್ತಿಗೆ ಹುಲ್ಲು ಹಾಕುತ್ತಾರೆ. ಕೆಲಸ ಮಾಡದೇ ಇರುವ ಎತ್ತಿಗೆ ಹಾಕುವುದಿಲ್ಲ ಎಂಬುವ ಹಾಗೆ ತಾವು ಕೆಲಸ ಮಾಡುವವರಿಗೆ ಮತವನ್ನು ಹಾಕಿ ಎಂದು ಮನವಿ ಮಾಡಿದರು. ನೀಡಿದ್ದ ಭರವಸೆ ಈಡೇರಿಸಿದ್ದೇವೆ: ಚುನಾವಣೆ ಸಂದರ್ಭದಲ್ಲಿ 165 ಆಶ್ವಾಸನೆಗಳನ್ನು ನೀಡಿದ್ದು, ಅದರಲ್ಲಿ 150 ಆಶ್ವಾಸನೆಗಳನ್ನು ಈಡೇರಿಸಿರುತ್ತೇವೆ. ಇದರಲ್ಲಿ ತಾವು ನುಡಿದಂತೆ ನಡೆದ ಸರ್ಕಾರವಾಗಿದೆ. ಕೆರೆ ಡಿನೊಟಿಫಿಕೇಷನ್ ಮಾಡಲು ಇನ್ನೂ ತೀರ್ಮಾನ ಮಾಡಿಲ್ಲ, ಈಗಲೂ ಕೆಲವು ಕಡೆ ಕರೆಗಳ ಹೆಸರಿನಲ್ಲಿಯೇ ಜಾಗಗಳಿದ್ದು, ಅದರ ಮಾಹಿತಿ ಪಡೆಯುವಾಗ ಡಿನೋಟಿಫಿಕೆಷನ್ ಎಂದು ಹೇಳಿಕೊಳ್ಳುವುದಕ್ಕೆ ನಾಚಿಕೆ
ಮಾನಮರ್ಯಾದೆ ಇಲ್ಲ ಸಂಸತ್‌ನಲ್ಲಿ ಅಧಿವೇಶನದಲ್ಲಿ ಬಿಜೆಪಿಯ ಹುಬ್ಬಳ್ಳಿ ಸಂಸದ ಪ್ರಹ್ಲಾದ್ ಜೋಶಿ ಇದರ ವಿಚಾರದ ಬಗ್ಗೆ
ಮಾತನಾಡುತ್ತಾರೆ ಎಂದು ಹರಿಹಾಯ್ದರು. ಕಾಮಗಾರಿಗಳಿಗೆ ಚಾಲನೆ: ದೇವನಹಳ್ಳಿ ಜಿಲ್ಲೆಯಲ್ಲಿಯೇ ಡಾ.ಬಿ.ಆರ್.ಅಂಬೇಡ್ಕರ್ ಭವನ ಸುಸಜ್ಜಿತವಾದ ಭವನ ನಿರ್ಮಾಣವಾಗಿದೆ. ಎಲ್ಲಿಯೂ ಇಂತಹ ಭವನ ಇಲ್ಲ, ಕಾಂಗ್ರೆಸ್ ಸರ್ಕಾರ ಹೆಚ್ಚಿನ ಅನುದಾನವನ್ನು ನೀಡಿದೆ. ದಕ್ಷಿಣ ಭಾರತದಲ್ಲಿಯೇ ಅತೀ ಎತ್ತರದ 14 ಅಡಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ದೇವನಹಳ್ಳಿಯಲ್ಲಿ ನಿರ್ಮಾಣವಾಗಿದೆ.
ಕೋಲಾರದಿಂದ ದೇವನಹಳ್ಳಿಯವರೆಗೆ ಲೋಕೋಪಯೋಗಿ ಇಲಾಖೆಯ ಪಿಪಿಪಿ ಡಿಬಿಎಫ್ಒಟಿವಿಜಿಎಫ್ ಟೋಲ್ ಆಧಾರದಡಿಯಲ್ಲಿ ದೇವನಹಳ್ಳಿಯಿಂದ ವಿಜಯಪುರ ಮತ್ತು ವೇಮ್‌ಗಲ್ ಮಾರ್ಗವಾಗಿ ಕೋಲಾರವರೆಗೆ ರಾಜ್ಯ ಹೆದ್ದಾರಿ 96ರ ಅಭಿವೃದ್ಧಿಗೆ 140 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದ್ದೇವೆ ಎಂದು ಹೇಳಿದರು. ಕೋಲಾರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಬಯಲು ಸೀಮೆಯ ಜಿಲ್ಲೆಗಳಲ್ಲಿ ಅಂತರ್ಜಲ ಕುಸಿತವಾಗಿದ್ದು, ಇಲ್ಲಿ ನೀರಾವರಿ ಯೋಜನೆಗಳನ್ನು ರೂಪಿಸಲು ಸರ್ಕಾರ ಯೋಜನೆಗಳನ್ನು ರೂಪಿಸಿದೆ. ಬಯಲುಸೀಮೆಯ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಕಲ್ಪಿಸುವ ಎತ್ತಿನಹೊಳೆ ಯೋಜನೆಗೆ 13 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಯೋಜನೆ ಕಾರ್ಯಗತವಾಗುತ್ತಿದೆ. ಆದರೆ, ವಿರೋಧ ಪಕ್ಷದವರು ಇದಕ್ಕೆ ರಾಜಕೀಯ ಬಣ್ಣ ಕಟ್ಟುತ್ತಿದ್ದಾರೆ. ಯೋಜನೆ ಕಾರ್ಯಗತವಾಗುತ್ತಿರುವುದನ್ನು ಬೇಕಾದರೆ ಪರಿಶೀಲಿಸಬಹುದಾಗಿದೆ. ಎರಡನೇ ಹಂತದಲ್ಲಿ ತಮ್ಮ ಸರ್ಕಾರವೇ ಬರುವುದರಿಂದ 180 ಕೆರೆಗಳಿಗೆ ತ್ಯಾಜ್ಯ ಸಂಸ್ಕರಿಸಿದ ನೀರನ್ನು ಹರಿಸಲಾಗುವುದು ಎಂದು ಹೇಳಿದರು. ಈ ಭಾಗಕ್ಕೆ 970 ಕೋಟಿ ರೂ. ವೆಚ್ಚದಲ್ಲಿ ಹಾಗೂ ಕೋಲಾರಕ್ಕೆ 1300 ಕೋಟಿ ರೂ. ಅನುದಾನವನ್ನು ನೀಡಿದ್ದು, ಕೋಲಾರದ ನರಸಾಪುರ ಕೆರೆಗೆ ನವೆಂಬರ್-ಡಿಸೆಂಬರ್ ಒಳಗೆ ನೀರು ಬರುವಂತೆ ಆಗುತ್ತದೆ. ಇಡೀ ದೇಶದಲ್ಲಿಯೇ ಯಾವುದೇ ರಾಜ್ಯದಲ್ಲಿ ತ್ಯಾಜ್ಯ ಸಂಸ್ಕರಿಸಿದ ನೀರನ್ನು ಕೆರೆಗಳಿಗೆ ಹರಿಸುವ ಪ್ರಯತ್ನವನ್ನು ಯಾರು ಸಹ ಮಾಡಿಲ್ಲ,ಇದೇ ಪ್ರಥಮ ಅಂತರ್ಜಲ ಮಟ್ಟ ಹೆಚ್ಚಿಸಲು ಇದರಿಂದ ಸಹಕಾರಿಯಾಗುತ್ತದೆ ಎಂದರು. ಯಾವುದೇ ಸರ್ಕಾರಗಳು ಬಯಲುಸೀಮೆಗಳಿಗೆ ಶಾಶ್ವತ ನೀರಿನ ಬಗ್ಗೆಗಮನ ಹರಿಸಿರಲಿಲ್ಲ, ನಮ್ಮ ಸರ್ಕಾರ ಇಂತಹ ಯೋಜನೆಯನ್ನು ಮಾಡಿ ಕೆರೆಗಳಲ್ಲಿ ನೀರುತುಂಬಿ ಪುನರ್ ಅಂತರ್ಜಲ ಹೆಚ್ಚಳಕ್ಕೆ ಆದ್ಯತೆ ನೀಡಿದ್ದೇವೆ. ಎತ್ತಿನ ಹೊಳೆ ಯೋಜನೆಯ ಕಾಮಗಾರಿ ಅತೀ ವೇಗವಾಗಿ ನಡೆಯುತ್ತಿದೆ. ಎತ್ತಿನ ಹೊಳೆ ಯೋಜನೆಯಲ್ಲಿ ನೀರು ಬರುವುದಿಲ್ಲವೆಂದು ಕೆಲವರು ಟೀಕೆ, ಟಿಪ್ಪಣಿಗಳನ್ನು ಮಾಡುತ್ತಾರೆ. ಅದಕ್ಕೆ 13 ಸಾವಿರ ಕೋಟಿ ರೂಪಾಯಿಗಳು ಖರ್ಚುಮಾಡುವುದಕ್ಕೆ ನಾವೇನು ಹುಚ್ಚರ!, ನೀರು
ಬರುವುದರಿಂದ ಖರ್ಚು ಮಾಡುತ್ತಿದ್ದೇವೆಂದು ವಿರೋಧ ಪಕ್ಷದವರಿಗೆ ತಿರುಗೇಟು ನೀಡಿದರು
“ಕೇಂದ್ರದಿಂದ ರೈತರ ಸಾಲಮನ್ನಾ ಮಾಡಿಸಿ” ಸಾಲಮನ್ನಾ ಮಾಡಿ, ಇಲ್ಲ ವಿಧಾನಸಭೆಯಲ್ಲಿ ಮುತ್ತಿಗೆ ಹಾಕುತ್ತೇವೆಂದು ವಿರೋಧ ಪಕ್ಷದವರು ಹೇಳಿಕೊಳ್ಳುತ್ತಿದ್ದರು. ಈಗ ತಾವು 50 ಸಾವಿರ ರೂ.ವರೆಗಿನ ಸಹಕಾರಿ ಬ್ಯಾಂಕ್‌ನಲ್ಲಿನ ರೈತರ ಸಾಲಮನ್ನಾ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ವಿವಿಧ ಕಾಮಗಾರಿಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇವನಹಳ್ಳಿ ಜಿಲ್ಲೆಗೆ 24 ಸಾವಿರ ರೈತರಿಗೆ 21 ಕೋಟಿ ಸಾಲವನ್ನು ಮನ್ನಾಮಾಡಿದ್ದೇವೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ ಸಾಲವನ್ನು ಮನ್ನಾ ಮಾಡುವುದಕ್ಕೆ ಬಿಜೆಪಿ ನಾಯಕರಾದ ಯಡಿಯೂರಪ್ಪ, ಈಶ್ವರಪ್ಪ, ಎಲ್ಲರನ್ನೂ ದೆಹಲಿಗೆ ಕರೆದುಕೊಂಡು ಹೋದರೆ ಅವರು ಇದರ ಬಗ್ಗೆ ಚಕಾರವನ್ನೇ ಎತ್ತುವುದಿಲ್ಲ ಎಂದು ದೂರಿದರು. ಎಸ್‌ಸಿಪಿ, ಟಿಎಸ್‌ಪಿ ಯೋಜನೆಯನ್ನು ತಂದು ಸಮಾಜ ಕಲ್ಯಾಣ ಇಲಾಖೆಯಿಂದ 78 ಸಾವಿರ ಕೋಟಿ ರೂ. ಖರ್ಚುಮಾಡಿ ಆಗಿನ ಬಿಜೆಪಿ ಸರ್ಕಾರಕ್ಕಿಂತ ನಾಲ್ಕು ಪಟ್ಟು ಖರ್ಚುಮಾಡಿದ್ದೇವೆ. ಎಸ್‌ಸಿ, ಎಸ್‌ಟಿಗೆ 50 ಲಕ್ಷ ರೂ.ವರೆಗೆ ಗುತ್ತಿಗೆಮಾಡಲು ಸುಗ್ರಿವಾಜ್ಞೆಯನ್ನು ತಂದಿದ್ದೇವೆ ಎಂದು ಹೇಳಿದರು.ಯುಪಿಎ ಸರ್ಕಾರ ಇದ್ದವೇಳೆಯಲ್ಲಿ 70 ಸಾವಿರ ಕೋಟಿ ರೂ. ರಾಷ್ಟ್ರೀಕೃತ ಬ್ಯಾಂಕುಗಳ ಸಾಲಮನ್ನಾ ಮಾಡಿದ್ದೇವೆ. ಈಗಿನ ಹಣಕಾಸಿನ ಸಚಿವ ಅರುಣ್ ಜೆಟ್ಲಿ ಒಂದು ಬಿಡಿಗಾಸು ಕೊಡುವುದಿಲ್ಲ ಎಂದು ಹೇಳಿದ್ದರು. ಸುಮಾರು 86 ಕೋಟಿ ರೂ. ಉದ್ಯಮಿಗಳ ಸಾಲಮನ್ನಾ ಮಾಡಲು ಕೇಂದ್ರ
ಸರ್ಕಾರ ಹೊರಟಿದೆ. ರೈತರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲದ ಬಿಜೆಪಿಯವರು ಬರೀ ಡೋಂಗಿ ಮಾತುಗಳನ್ನು ಆಡಿ ಜನರನ್ನು
ಮರಳು ಮಾಡಲು ಹೊರಟಿದ್ದಾರೆ ಎಂದು ಹೇಳಿದರು
ಕಾಂಗ್ರೆಸ್‌ಗೆ ಬನ್ನಿ ಗೆಲ್ಲತೀರಾ: ಶಾಸಕ ಪಿಳ್ಳಮುನಿಶಾಮಪ್ಪ ಅವರೇ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ದೇವನಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುತ್ತೆ, ಹೀಗಾಗಿ ತಮ್ಮ ಪಕ್ಷದಿಂದ ಸ್ಪರ್ಧೆ ಮಾಡು ಎಂದು ಬಹಿರಂಗ ಸಮಾರಂಭದಲ್ಲಿ ಪಕ್ಷಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಹ್ವಾನಿಸಿದರು. ಕ್ಷೇತ್ರದಲ್ಲಿ ಶಾಸಕ ಪಿಳ್ಳಮುನಿಶಾಮಪ್ಪಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅದಕ್ಕೆ ತಮ್ಮ ಸರ್ಕಾರದ ಹಣವನ್ನು ನೀಡುತ್ತಿದ್ದೇವೆ ಎಂದು ಕಾಲೆಳದರು. ದೇವನಹಳ್ಳಿಯಲ್ಲಿ ಇಷ್ಟು ದೊಡ್ಡ ಪ್ರಮಾಣದ ಸುಮಾರು 1150 ಕೋಟಿ ರೂ. ಕಾಮಗಾರಿ ಉದ್ಘಾಟನೆ ಮಾಡುತ್ತಿದ್ದೇವೆ. ಇದು ದೇವನಹಳ್ಳಿಯಲ್ಲಿ ಸುವರ್ಣ ಅಕ್ಷರಗಳಲ್ಲಿ ಬರೆಯುವಂತಹ
ದಿನವಾಗಿದೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hyderabad: ಈರುಳ್ಳಿ ಬಾಂಬ್ ಪಟಾಕಿ ಸ್ಫೋಟ; ಒಬ್ಬ ಸಾವು, 6 ಮಂದಿಗೆ ಗಾಯ
Udupi: ಗೀತಾರ್ಥ ಚಿಂತನೆ- 81: ಮೇಲ್ನೋಟದಲ್ಲಿ ಕಳಕಳಿ, ಒಳನೋಟದಲ್ಲಿ ರಾಜ್ಯಲೋಭ!
Kannada Rajyotsava: ಮುಖ್ಯಮಂತ್ರಿಗಳು ಇವ ನಮ್ಮವ ಎಂದಿದ್ದರು!
Unity lesson: ರಾಜ್ಯ ಸರ್ಕಾರ ಫೇಲಾಗ್ಬಾರ್ದು, ಒಗ್ಗಟ್ಟಾಗಿರಿ: ಎಐಸಿಸಿ ಅಧ್ಯಕ್ಷ ಖರ್ಗೆ ಪಾಠ
Waqf Property: ಉತ್ತರ ಕರ್ನಾಟಕದ ಆರು ಜಿಲ್ಲೆಗಳ ಮುಸ್ಲಿಮರಿಗೂ ವಕ್ಫ್ ನೋಟಿಸ್ ಬಿಸಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.