![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Nov 18, 2019, 3:00 AM IST
ಹೊಸಕೋಟೆ: ಅಕ್ರಮವಾಗಿ ಗಳಿಸಿರುವ ಆಸ್ತಿಯನ್ನು ರಕ್ಷಿಸಿಕೊಂಡು ಐಟಿ, ಇಡಿಯಿಂದ ಪಾರಾಗಲು ಎಂಟಿಬಿ ನಾಗರಾಜ್ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಆರೋಪಿಸಿದರು. ಅವರು ತಾಲೂಕಿನ ಸೂಲಿಬೆಲೆ ಹೋಬಳಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಉಪಚುನಾವಣೆಯು ಹಣ ಮತ್ತು ಜನಬಲದ ನಡುವಿನ ಸಮರವಾಗಿದದು ಸ್ವಾರ್ಥ ಸಾಧಕರನ್ನು ತಿರಸ್ಕರಿಸಿ ಸ್ವಾಭಿಮಾನವನ್ನು ರಕ್ಷಿಸಿಕೊಳ್ಳಬೇಕು. ತಾಲೂಕಿನಲ್ಲಿ ತಮ್ಮ ಪರವಾಗಿ ಮತದಾರರ ಒಲವಿದ್ದು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ನೆರೆದಿದ್ದ ಸಹಸ್ರಾರು ಬೆಂಬಲಿಗರೇ ನಿದರ್ಶನವಾಗಿದ್ದಾರೆ.
5 ವರ್ಷಗಳ ಅವಧಿಗೆ ಜನಾದೇಶ ಪಡೆದಿದ್ದಾಗ್ಯೂ ಒಂದೂವರೆ ವರ್ಷಕ್ಕೆ ಮತ್ತೂಮ್ಮೆ ಚುನಾವಣೆ ನಡೆಯಲು ಕಾರಣವಾಗುವ ಮೂಲಕ ಮತದಾರರ ನಂಬಿಕೆಗೆ ದ್ರೋಹ ಎಸಗಿದಂತಾಗಿದ್ದು ಇದೀಗ ದಿನಕ್ಕೊಂದು ಸುಳ್ಳು ಹೇಳುವ ಮೂಲಕ ಜನರಲ್ಲಿ ಗೊಂದಲ ನಿರ್ಮಿಸುತ್ತಿದ್ದಾರೆ. ಕೆಲವು ವ್ಯಕ್ತಿಗಳ ಷಡ್ಯಂತ್ರದಿಂದಾಗಿ ತಾಲೂಕಿನಲ್ಲಿ ಪಕ್ಷವನ್ನು ಬಲಿಷ್ಠಗೊಳಿಸಲು ಶ್ರಮಿಸಿದವರನ್ನು ಕಡೆಗಣಿಸಲಾಗಿದೆ.
ಪಕ್ಷೇತರ ಅಭ್ಯರ್ಥಿಯಾಗಿರುವ ಕಾರಣ ಯಾವುದೇ ಪ್ರಮುಖ ವ್ಯಕ್ತಿಗಳ ತಮ್ಮ ಪರವಾಗಿ ಪ್ರಚಾರದಲ್ಲಿ ತೊಡಗುವುದಿಲ್ಲವಾದ ಕಾರಣ ಬೆಂಬಲಿಗರು, ಕಾರ್ಯಕರ್ತರೇ ತಮಗೆ ಸ್ಟಾರ್ ಕ್ಯಾಂಪೇನರ್ ಆಗಿದ್ದು ತಾಲೂಕಿನ ಸ್ವಾಭಿಮಾನ ಉಳಿಸಲು ಹೋರಾಟ ಮಾಡಬೇಕಾಗಿದೆ.
ನ.21ರಂದು ಸ್ಪರ್ಧಿಸುವ ಚಿಹ್ನೆ ದೊರಕಲಿದ್ದು ಪ್ರತಿಯೊಬ್ಬ ಕಾರ್ಯಕರ್ತರು ಸಹ ತಮ್ಮ ಪರವಾಗಿ ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಬೇಕು ಎಂದು ಮನವಿ ಮಾಡಿದರು. ಟಿಎಪಿಸಿಎಂಎಸ್ ಉಪಾಧ್ಯಕ್ಷ ಬಿ.ಎನ್.ಗೋಪಾಲಗೌಡ, ಸೂಲಿಬೆಲೆ ರೇಷ್ಮೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ವಿ. ಸತೀಶ್‌ಗೌಡ, ಮುಖಂಡ ಬಿ.ತಮ್ಮೇಗೌಡ ಇನ್ನಿತರರು ಭಾಗವಹಿಸಿದ್ದರು.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.