ಮೂರು ತಿಂಗಳೊಳಗೆ ನೀರು ಹರಿಸುವೆ
ಜಿಲ್ಲಾ ಉಸ್ತುವಾರಿ ಎಂಟಿಬಿ ನಾಗರಾಜ್ ಭರವಸೆ | ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ
Team Udayavani, Oct 8, 2021, 3:16 PM IST
ವಿಜಯಪುರ: ಏತನೀರಾವರಿ ಯೋಜನೆಯಡಿ ನೀರು ಹರಿಸುವುದರಿಂದ ರೈತರಿಗೆ ಹಾಗೂ ಜಾನುವಾರಗಳಿಗೆ ನೀರಿನ ಸಮಸ್ಯೆ ಬಗೆಹರಿಯಲಿದೆ. ಕಾಮಗಾರಿ ಸಂಬಂಧಿಸಿದಂತೆ ಪೈಪ್‌ಲೈನ್ ಸಹ ಚಾಲ್ತಿಯಲ್ಲಿದ್ದು 3 ತಿಂಗಳ ಒಳಗಾಗಿ ಒಂದು ಕೆರೆಗಾದರು ನೀರು ಹರಿಸುವುದು ನನ್ನ ಗುರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ. ನಾಗರಾಜ್ ಹೇಳಿದರು.
ಹೊಸಕೋಟೆ ತಾಲೂಕಿನ ಜಡಿಗೇನಹಳ್ಳಿ ಹೋಬಳಿಯ ಅತ್ತಿವಟ್ಟ, ತವಟಹಳ್ಳಿ ಹಾಗೂ ತಗ್ಗಲಿಹೊಸಹಳ್ಳಿ ಗ್ರಾಮಗಳಲ್ಲಿ ವಿಧಾನಪರಿಷತ್ ಸದಸ್ಯರ ವಿಶೇಷ ಅನುದಾನದಲ್ಲಿ ಹಮ್ಮಿಕೊಂಡಿದ್ದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ತೆನೆಯೂರು ಸರ್ವೆ ನಂ.37ರ ಸ್ಮಶಾನವನ್ನು ಶಾಸಕರಾದಂತಹವರು ತನ್ನ ಹೆಸರಿಗೆ ಮಾಡಿಸಿಕೊಂಡಿರುವುದು ಸರಿಯೇ? ನಾನು ಹೊಸಕೋಟೆ ತಾಲೂಕಿಗೆ ಚುನಾವಣೆಗೆ ಬಂದಿದ್ದು 2004ರಲ್ಲಿ, ಆದರೆ ಈ ಹಿಂದೆಯೇ 1995-96 ರಲ್ಲಿ ಈ ಭಾಗದಲ್ಲಿ ಜಮೀನು ಖರೀದಿ ಮಾಡಿದ್ದು ಯಾವೊಬ್ಬ ರೈತರಿಂದ ಸಹ ಕಡಿಮೆ ಬೆಲೆಗೆ ಭೂಮಿ ಖರೀದಿ ಮಾಡಿಲ್ಲ. ಶಾಸಕರು ಹಾಗೂ ಸಂಸದರ ರೀತಿಯಲ್ಲಿ ಸರಕಾರಿ ಕಚೇರಿಗಳಲ್ಲಿ ದಾಖಲಾತಿಗಳನ್ನು ಕದ್ದು ಸರಕಾರಿ ಜಾಗವನ್ನು ತಮ್ಮ ಹೆಸರಿಗೆ ಮಾಡಿಕೊಡಿಲ್ಲ.
ಇದನ್ನೂ ಓದಿ:- ಹಾನಗಲ್ ಉಪಚುನಾವಣೆ: ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ
ಒಂದು ವೇಳೆ ಅವರು ತಪ್ಪು ಮಾಡಿಲ್ಲವೆಂದರೆ ಮನೆ ದೇವರ ಮೇಲೆ ಆಣೆ ಮಾಡಲಿ ಎಂದು ಸವಾಲು ಹಾಕಿದರು. ಸತ್ಯಹರಿಶ್ಚಂದ್ರರ ಮೊಮ್ಮಕ್ಕಳ ರೀತಿ ಮಾತನಾಡುವುದಲ್ಲ. ನಾನು ಹಣ ನೀಡಿ ಖರೀದಿ ಮಾಡಿದ್ದೇನೆ. ಆದರೆ ಇವರು ಸರಕಾರಿ ದಾಖಲಾತಿಗಳನ್ನು ಕದ್ದು ಆಸ್ತಿ ಖರೀದಿ ಮಾಡಿದ್ದಾರೆ. ಸಂಸದರು, ಶಾಸಕರು ಮೂಲತಃ ಹೊಸಕೋಟೆಯವರಲ್ಲ ಆವತಿಯಿಂದ ವಲಸೆ ಬಂದು ಇಲ್ಲಿ ರಾಜಕೀಯ ಮಾಡುತ್ತಿದ್ದು ನನ್ನ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ನಾನು ಬಂದಿರುವುದರಿಂದ ತಾಲೂಕು ಇಷ್ಟು ಮಾತ್ರ ಅಭಿವೃದ್ಧಿ ಆಗಿದೆ. ಇಲ್ಲವಾದಲ್ಲಿ ಇನ್ನೂ ಅನೇಕ ಮಂದಿ ಊರುಗಳನ್ನು ಖಾಲಿ ಮಾಡುತ್ತಿದ್ದರು ಎಂದು ಶಾಸಕರು ಹಾಗೂ ಸಂಸದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಪರಿಷತ್ ಸದಸ್ಯರಾಗಿದ್ದ ಸಮಯದಲ್ಲಿ ಯಾರೂ ಇಷ್ಟು ಅನುದಾನ ತಂದಿಲ್ಲ. ನಾನು ಮೊದಲ ಬಾರಿಗೆ ಇಷ್ಟು ಅನುದಾನ ತಂದು ತಾಲೂಕಾದ್ಯಂತ ಗ್ರಾಮೀಣ ಭಾಗಗಳಲ್ಲಿ ರಸ್ತೆ ಅಭಿವೃದ್ಧಿ ಮಾಡಿಸಿದ್ದೇನೆ. ಎಲೆ ಮಲ್ಲಪ್ಪನಶೆಟ್ಟಿ ಕೆರೆಯಿಂದ ಏತ ನೀರಾವರಿ ಯೋಜನೆಗೆ ಪ್ರಸ್ತಾವನೆ ಇಟ್ಟಿದ್ದು ಸರಕಾರ ಸಹ 12 ಕೋಟಿ ವೆಚ್ಚದ ಅನುದಾನಕ್ಕೆ ಮಂಜೂರಾತಿ ನೀಡಿದ್ದು ಮುಂದಿನ ದಿನಗಳಲ್ಲಿ ಕಾಮಗಾರಿ ನಡೆಸಲಾಗುವುದು ಎಂದರು.
ಬಿಎಂಆರ್ ಡಿಎ ಅಧ್ಯಕ್ಷ ಚನ್ನಸಂದ್ರ ಸಿ.ನಾಗರಾಜ್, ತಾ. ಬಿಜೆಪಿ ಘಟಕದ ಅಧ್ಯಕ್ಷ ಕೆ.ಸತೀಶ್, ತಾಪಂ ಮಾಜಿ ಅಧ್ಯಕ್ಷ ವಿ.ಸಿ.ಜಯದೇವಯ್ಯ, ತಾಲೂಕು ಎಸ್.ಸಿ. ಮೋರ್ಚಾ ಅಧ್ಯಕ್ಷ ಕೆ. ನಾಗೇಶ್, ತಾಲೂಕು ಯುವ ಮೋರ್ಚಾ ಅಧ್ಯಕ್ಷ ತವಟಹಳ್ಳಿ ಆರ್. ರಾಮು, ಅತ್ತಿವಟ್ಟ ಕೆ.ನಾಗೇಶ್, ಅನಿಲ್‌ಕುಮಾರ್, ನಾಗರಾಜಣ್ಣ, ರಾಜಣ್ಣ, ರಾಮಣ್ಣ, ಚಿಕ್ಕನಾರಾಯಣಸ್ವಾಮಿ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Doddaballapur: ಹೊಲದಲ್ಲಿ ಹೂ ಬಿಡಿಸುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ: ಸಾವು
Road Mishap: ಬೈಕ್ ವ್ಹೀಲಿಂಗ್ ಮಾಡುವಾಗ ಕ್ಯಾಂಟರ್‌ಗೆ ಡಿಕ್ಕಿ; ಇಬ್ಬರು ಸಾವು
Tragic: ಮದುವೆ ಹರಕೆ ಹೊತ್ತು ಘಾಟಿ ದೇಗುಲಕ್ಕೆ ಬಂದಿದ್ದ ಯುವತಿ ಸಾವು
Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!
Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.