ನಗರಸಭೆ:1.50 ಕೋಟಿ ರೂ. ಉಳಿತಾಯ ಬಜೆಟ್
Team Udayavani, Mar 1, 2018, 12:37 PM IST
ದೊಡ್ಡಬಳ್ಳಾಪುರ: ನಗರಸಭೆ ಅಗತ್ಯವಾಗಿ ನಿರ್ವಹಿಸಬೇಕಾಗಿರುವ ನಿರ್ವಹಣೆ ಮತ್ತು ನಾಗರಿಕ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿದ್ದು, ನಗರಸಭೆ 1.50 ಕೋಟಿ ರೂ.ಗಳ ಉಳಿತಾಯ ನಿರೀಕ್ಷಿಸಲಾಗಿದೆ ಎಂದು ನಗರಸಭೆ ಅಧ್ಯಕ್ಷ ಟಿ.ಎನ್.ಪ್ರಭುದೇವ್ ತಿಳಿಸಿದ್ದಾರೆ.
ನಗರಸಭೆಯಲ್ಲಿ ನಡೆದ ಬಜೆಟ್ ವಿಶೇಷ ಸರ್ವ ಸದಸ್ಯರ ಸಭೆಯಲ್ಲಿ 2018-19ನೇ ಸಾಲಿಗೆ ಬಜೆಟ್ ಮಂಡಿಸಿ ಅವರು ಮಾತನಾಡಿದರು.
ಆದಾಯ ನಿರೀಕ್ಷೆ: ನಗರಸಭೆಗೆ ಅತಿ ಮುಖ್ಯ ಆದಾಯವಾದ ಮನೆ ಕಂದಾಯ, ನೀರಿನ ತೆರಿಗೆ, ಮಳಿಗೆ ಬಾಡಿಗೆ, ಪರವಾನಗಿ ಶುಲ್ಕ, ಇತರೆ ತೆರಿಗೆಗಳು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳಾದ 14ನೇ ಹಣಕಾಸು ಯೋಜನೆ, ಎಸ್‌ಎಫ್ಸಿ ಮೂಲಗಳಿಂದ ಹೆಚ್ಚಿನ ಆದಾಯ ನಿರೀಕ್ಷಿಸಿದೆ ಎಂದರು.
ವೈಯುಕ್ತಿಕ ಶೌಚಾಲಯಕ್ಕೆ ಸಹಾಯಧನ: ನಗರದ ಉದ್ಯಾನವನಗಳ ಅಭಿವೃದ್ಧಿಗಾಗಿ 46.35 ಲಕ್ಷ ರೂ. ಗಳನ್ನು ಅಂದಾಜಿಸಲಾಗಿದ್ದು ಹಾಗೂ ಸದರಿ ಉದ್ಯಾನವನಗಳ ನಿರ್ವಹಣೆಗಾಗಿ 23.45ಲಕ್ಷ ರೂ. ಅಂದಾಜಿಸಲಾಗಿದೆ. ಒಳಚರಂಡಿ ಶುದ್ಧೀಕರಣ ಫಟಕ ಸುತ್ತಲು ಸಸಿಗಳನ್ನು ಬೆಳೆಸಲು 5.54 ಲಕ್ಷ ರೂ.ಗಳು ಹಾಗೂ ನಗರದ ಪ್ರಮುಖ ರಸ್ತೆ ಬದಿಗಳಲ್ಲಿ ಸಸಿ ನೆಡುವ ಮತ್ತು ಟ್ರೀ ಗಾರ್ಡ್ಸ್‌ಗಳನ್ನು ಅಳವಡಿಸಲು ದಿವಂಗತ ಡಿ. ಕೊಂಗಾಡಿಯಪ್ಪಹಸಿರು ವೃಕ್ಷ ಕಾರ್ಯ ಕ್ರಮ ಹಮ್ಮಿಕೊಳ್ಳಲು 20 ಲಕ್ಷ ರೂ.ಗಳನ್ನು ಅಂದಾಜಿ ಸಲಾಗಿದೆ. ನಗರವನ್ನು ಸುಂದರ, ಸ್ವತ್ಛ ಹಾಗೂ ನಿರ್ಮಲ ನಗರವನ್ನಾಗಿಸುವ ದೃಷ್ಟಿಯಿಂದ ನಗರ ನೈರ್ಮಲ್ಯ ಹಾಗೂ ಸ್ವತ್ಛತೆ ಕಾರ್ಯಗಳಿಗೆ ಮತ್ತು ಘನ ತ್ಯಾಜ್ಯ ವಸ್ತು ನಿರ್ವಹಣೆ ಕಾಮಗಾರಿಗಳಿಗಾಗಿ 3.36ಕೋಟಿ ಸ್ವತ್ಛತೆಗಾಗಿಯೇ ಮೀಸಲಿಡಲಾಗಿದೆ. ನಗರವನ್ನು ಬಯಲು ಶೌಚಾಲಯ ಮುಕ್ತ ನಗರವ ನ್ನಾಗಿಸಲು ವೈಯುಕ್ತಿಕ ಶೌಚಾಲಯಕ್ಕೆ ಸಹಾಯಧನ ಮತ್ತು ಸಮುದಾಯ ಶೌಚಾಲಯಗಳ ನಿರ್ಮಾಣ ಕ್ಕಾಗಿ 31.50 ಲಕ್ಷ ರೂ.ಗಳನ್ನು ಅಂದಾಜಿಸಲಾಗಿದೆ ಎಂದರು.
ನಗರ ನೈರ್ಮಲ್ಯ ನಿರ್ವಹಣೆಗಾಗಿ ಹಾಗೂ ಘನತ್ಯಾಜ್ಯ ನಿವೇಶನ ಅಭಿವೃದ್ಧಿಗಾಗಿ ಒಟ್ಟು 229.79 ಲಕ್ಷ ರೂ. ಅಂದಾಜಿಸಲಾಗಿದೆ. ನೈರ್ಮಲ್ಯ ನಿರ್ವಹಿಸಲು ಈ ವರ್ಷದ ಆಯ-ವ್ಯಯದಲ್ಲಿ 132.71 ಲಕ್ಷ ರೂ. ಹಾಗೂ ಪ್ರಸ್ತುತ ಘನತ್ಯಾಜ್ಯ ವಸ್ತು ನಿರ್ವಹಣೆಯಲ್ಲಿ ಮನೆ ಮನೆಯಿಂದ ಕಸ ಸಂಗ್ರಹಣೆ ಕಾರ್ಯ ನಡೆಯುತ್ತಿದ್ದು, ಈ ಕಾರ್ಯವನ್ನು ನಗರದ ಇತರೆ ಭಾಗಗಳಿಗೂ ವಿಸ್ತರಿಸಿ ಏಜೆಸ್ಸಿದಾರರಿಂದ ಹೊರಗುತ್ತಿಗೆ ಆಧಾರದ ಮೇಲೆ ಪೂರೈಸಲು ಪ್ರಸಕ್ತ ಸಾಲಿನಲ್ಲಿ 50.28 ಲಕ್ಷ ರೂ.ಗಳನ್ನು ಅಂದಾಜಿಸಲಾಗಿದೆ. ನಗರದಲ್ಲಿ ಬೀದಿನಾಯಿಗಳ ನಿಯಂತ್ರಣಕ್ಕಾಗಿ 15 ಲಕ್ಷ ರೂ. ಅಂದಾಜಿಸಲಾಗಿದೆ ಎಂದರು.
ಒಳಚರಂಡಿ ಸಂಪರ್ಕಗಳ ವ್ಯವಸ್ಥೆ: ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಪೈಪ್‌ಲೈನ್ ಕಾಮಗಾರಿ, ಬೋರ್‌ವೆಲ್ ಹಾಗೂ ಇತರೆ ಕಾಮಗಾರಿಗಳಿಗಾಗಿ ಸುಮಾರು 114.69 ಲಕ್ಷ ರೂ.ಗಳನ್ನು ಖರ್ಚು ಮಾಡಲಾಗುವುದು.
ಸಾರ್ವಜನಿಕರಿಗಾಗಿ ಶುದ್ಧಕುಡಿ ಯುವ ನೀರು ಒದಗಿಸಲು 500 ಎಲ್‌ಪಿಎಚ್ ಸಾಮರ್ಥ್ಯವುಳ್ಳ ಶುದ್ಧೀಕರಣ ಘಟಕ ನಿರ್ಮಾಣಕ್ಕಾಗಿ 19.60ಲಕ್ಷ ರೂ.ಗಳನ್ನು ಖರ್ಚು ಮಾಡಲಾಗುವುದು. ಹೊಸದಾಗಿ ಅನುಷ್ಠಾನಗೊಂಡಿರುವ ಒಳಚರಂಡಿ ವ್ಯವಸ್ಥೆ ಹೊರಗುತ್ತಿಗೆ ಮೋರಿ ನಿರ್ವಹಣೆಗಾಗಿ 50ಲಕ್ಷ ರೂ.ಗಳನ್ನು ಹಾಗೂ ದುರಸ್ತಿಗಾಗಿ 54.81 ಲಕ್ಷ ರೂ.ಗಳನ್ನು ಅಂದಾಜಿಸಲಾಗಿದೆ.
ವಿವಿಧ ರಸ್ತೆ, ಚರಂಡಿಗಳ ನಿರ್ಮಾಣ ಹಾಗೂ ನಿರ್ವಹಣೆಗಾಗಿ 203.63 ಲಕ್ಷಗಳು, ಬೀದಿ ದೀಪ ಅಳವಡಿಕೆಗಾಗಿ 68.72 ಲಕ್ಷಗಳು, ಮಳೆನೀರು ಚರಂಡಿ, ಕಲ್ವರ್ಟ್‌ಗಳ ಮತ್ತು ಕವರಿಂಗ್ ಸ್ಲ್ಯಾಬ್ ನಿರ್ಮಾಣ 126.89 ಲಕ್ಷಗಳು ಸದರಿ ಅಭಿವೃದ್ಧಿ ಕಾಮಗಾರಿಗಳಿಗೆ ಒಟ್ಟು ಸುಮಾರು 399.24 ಲಕ್ಷ ರೂ.ಗಳ ಕಾಮಗಾರಿ ಕೈಗೊಳ್ಳಲು ಉದ್ದೇಶಿಸಲಾಗಿದೆ. ನೂತನ ಕೆ.ಆರ್.ಮಾರುಕಟ್ಟೆ ಮಳಿಗೆಗಳ ನಿರ್ಮಾಣಕ್ಕಾಗಿ 4.35 ಕೋಟಿ ರೂ. ಗಳನ್ನು ಅಂದಾಜಿಸಲಾಗಿದೆ.
ಗಾಡಿಯಪ್ಪ ಬಸ್ ನಿಲ್ದಾಣ ಉನ್ನತೀಕರಣಕ್ಕಾಗಿ 15 ಲಕ್ಷ ರೂ.ಗಳನ್ನು ಮೀಸಲಿರಿಸಲಾಗಿದೆ. ನಗರಕ್ಕೆ ಆಧುನಿಕ ಕಸಾಯಿಖಾನೆ ನಿರ್ಮಾಣಕ್ಕಾಗಿ ಜಾಗ ಗುರುತಿಸಲಾಗಿದ್ದು, ಸದರಿ ಜಾಗಕ್ಕೆ ಕಾಂಪೌಂಡ್ ಮತ್ತು ತಂತಿಗಳನ್ನು ನಿರ್ಮಿಸಲು 20 ಲಕ್ಷ ರೂ.ಗಳನ್ನು ಅಂದಾಜಿಸಲಾಗಿದೆ. ನಗರಸಭೆ ಸ್ವತ್ತುಗಳಿಗೆ ತಂತಿ ಬೇಲಿ ಅಳವಡಿಸಲು 20 ಲಕ್ಷ ರೂ.ಗಳನ್ನು ಅಂದಾಜಿಸಲಾಗಿದೆ.
ಕಲ್ಯಾಣ ಕಾರ್ಯಕ್ರಮ: ನಗರಸಭೆ ನೂತನ ಕಚೇರಿ ಕಟ್ಟಡದ 490 ಲಕ್ಷ ರೂ.ಗಳು ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಸದರಿ ನೂತನ ಕಟ್ಟಡ ನಿರ್ಮಾಣಕ್ಕಾಗಿ ಪ್ರಸಕ್ತ ಸಾಲಿನಲ್ಲಿ 320 ಲಕ್ಷ ರೂ.ಗಳನ್ನು ಅಂದಾಜಿಸಲಾಗಿದೆ. ರಸ್ತೆ ಅಗಲೀಕರಣಕ್ಕಾಗಿ ದೊಡ್ಡಬಳ್ಳಾಪುರ ನಗರದ ಪ್ರಮುಖ ರಸ್ತೆಗಳ ಒತ್ತುವರಿ ತೆರವು ಮತ್ತು ಅಗಲೀಕರಣದ ಮೊದಲ ಹಂತಕ್ಕಾಗಿ 1 ಕೋಟಿ ರೂ. ಮೀಸಲಿಡಲಾಗಿದೆ. ಕ್ರೀಡಾಂಗಣ ಅಭಿವೃದ್ಧಿಗಾಗಿ ಮತ್ತು ಕ್ರೀಡಾಂಗಣದಲ್ಲಿ ಬರುವ ಮಳೆ ನೀರು ಚರಂಡಿ ಕವರಿಂಗ್ ಸ್ಲ್ಯಾಬ್ ಕಾಮಗಾರಿಗೆ 16.80 ಲಕ್ಷ ರೂ. ಅಂದಾಜಿಸಲಾಗಿದೆ. ಯುವಜನ ಕ್ರೀಡಾ ಇಲಾಖೆ ಸಹಯೋಗದೊಂದಿಗೆ ನಗರ ವ್ಯಾಪ್ತಿಯಲ್ಲಿ ಈಜುಕೊಳ ನಿರ್ಮಾಣಕ್ಕಾಗಿ 10 ಲಕ್ಷ ರೂ.ಗಳನ್ನು ಅಂದಾಜಿಸಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ವರ್ಗಗಳ ಬಡಜ ನರ ಕಲ್ಯಾಣಕ್ಕಾಗಿ 142.95 ಲಕ್ಷಗಳು, ಇನ್ನಿತರೆ ವರ್ಗದ ಬಡ ಜನಾಂಗದವರ ಅಭಿವೃದ್ಧಿಗಾಗಿ 42.70 ಲಕ್ಷಗಳು, ಅಂಗವಿಕಲರ ಕಲ್ಯಾಣಕ್ಕಾಗಿ 19.51ಲಕ್ಷಗಳು ಒಟ್ಟಾರೆ ಕಲ್ಯಾಣ ಕಾರ್ಯಕ್ರಮಗಳಿಂದ 205.16 ಲಕ್ಷ ರೂ. ಗಳನ್ನು ಅಂದಾಜಿಸಲಾಗಿದೆ. ಪೌರಕಾರ್ಮಿಕರ ಬಿಸಿಯೂಟಕ್ಕಾಗಿ ಶೇ 24.10 ಮೀಸಲಿರಿಸಲಾಗಿದೆ.
ರಾಜ್ಯ ಸರ್ಕಾರದ ಪೌರಕಾ ರ್ಮಿಕ ಗೃಹಭಾಗ್ಯ ಯೋಜನೆಯಡಿ ವಸತಿ ರಹಿತ ಪೌರಕಾರ್ಮಿಕರಿಗೆ ಗೃಹ ನಿರ್ಮಾಣಕ್ಕಾಗಿ ಪೌರ ಕಾರ್ಮಿಕರಿಗೆ 14 ಲಕ್ಷ ರೂ.ಗಳನ್ನು ವಿನಿಯೋಗಿ ಸಲಾಗುವುದು. ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯಡಿ ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡದ ವರು ವಾಸವಿರುವ ವಿವಿಧ ವಾರ್ಡ್‌ಗಳ ರಸ್ತೆ ಮತ್ತು ಚರಂಡಿ ಅಭಿವೃದಿಗಾಗಿ 232 ಲಕ್ಷ ರೂ.ಗಳನ್ನು ಅಂದಾಜಿಸಲಾಗಿದೆ.
ಮಳೆನೀರು ಕೊಯ್ಲು ಸಂಗ್ರಹಣೆ ವ್ಯವಸ್ಥೆ ಅಳವಡಿ ಸಿಕೊಳ್ಳುವವರ ಉತ್ತೇಜನಕ್ಕಾಗಿ ಪ್ರೋತ್ಸಾಹ ಧನವಾಗಿ 5 ಲಕ್ಷ ರೂ. ಅಂದಾಜಿಸಲಾಗಿದೆ. ನೇಕಾರ ಭವನ ನಿರ್ಮಾಣಕ್ಕಾಗಿ ನಗರಸಭೆಯಿಂದ ವಂತಿಕೆ 15 ಲಕ್ಷ ರೂ.ಗಳನ್ನು ಅಂದಾಜಿಸಲಾಗಿದೆ. ನಗರದ ಒಳಚ ರಂಡಿ ರಚ್ಚು ನೀರನ್ನು ಆಧುನಿಕ ರೀತಿಯಲ್ಲಿ ಸಂಸ್ಕರಿಸಿ ಪುನರ್ ಬಳಕೆ ಯೋಜನೆ ತಯಾರಿಕೆಗಾಗಿ 15 ಲಕ್ಷ ರೂ., ಬಯಲು ರಂಗಮಂದಿರ ನಿರ್ಮಣ ಕ್ಕಾಗಿ 10 ಲಕ್ಷ ರೂ., ಮುಖ್ಯಮಂತ್ರಿಗಳ ನಗರೋತ್ಥಾನ ಹಂತ 3ರ ಯೋಜನೆಯಡಿ ನಗರದ ವಿವಿಧ ರಸ್ತೆ ಮತ್ತು ಚರಂಡಿಗಳ ಅಭಿವೃದ್ಧಿಗಾಗಿ 1623.55 ಲಕ್ಷ ರೂ. ಯೋಜನೆ ರೂಪಿಸಲಾಗಿದೆ. ನಗರದಲ್ಲಿ ನಡೆ ಯುವ ಕ್ರೀಡಾ ಚಟುವಟಿಕೆಗಳಿಗೆ ಹಾಗೂ ವ್ಯಾಯಾಮ ಶಾಲೆಗಳಿಗೆ ಸಹಾಯಧನಕ್ಕಾಗಿ 8 ಲಕ್ಷ ರೂ.ಗಳನ್ನು, ಶೇ 7.25ರ ಯೋಜನೆಯಡಿ ನಗರದ ಲ್ಲಿನ ಪದವಿಧರ ವಿದ್ಯಾರ್ಥಿಗಳಿಗೆ ಸ್ಪರ್ಧಾತಾತ್ಮಕ ಪರೀಕ್ಷೆಗಳಿಗಾಗಿ ತರಬೇತಿ ಶಿಬಿರ ಏರ್ಪಡಿಸಲು ಹಾಗೂ ವಕೀಲರ ಪುಸ್ತಕ ಭಂಡಾರಕ್ಕೆ ಕಾನೂನು ಪುಸ್ತಕ ಗಳನ್ನು ಖರೀದಿಸಲು ಯೋಜನೆ ರೂಪಿಸಲಾಗಿದೆ ಎಂದರು. ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಜಯಲಕ್ಷ್ಮೀ ನಟರಾಜ್, ಪೌರಾಯುಕ್ತ ಆರ್.ಮಂಜುನಾಥ್ ಹಾಗೂ ಸದಸ್ಯರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.