ನೆಲಮಂಗಲ; ಗ್ರಾಪಂ ಅಭಿವೃದ್ಧಿಗೆ ಶಾಪವಾದ ಪಿಡಿಒ
ಆರ್ ಎಸ್ ಎಸ್ ಮುಖ್ಯಸ್ಥ ಕಲ್ಲಡ್ಕ ಪ್ರಭಾಕರ್ ಭಟ್ ಹೆಸರು ದುರ್ಬಳಕೆ
Team Udayavani, Aug 19, 2022, 5:36 PM IST
ನೆಲಮಂಗಲ: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಬೇ ಕಾದ ಪಿಡಿಒ ಉಷಾ ಅವರು, ಪಂಚಾಯಿತಿ ಅಭಿವೃದ್ಧಿಗೆ ಶಾಪವಾಗಿದ್ದಾರೆಂದು ಶಾಸಕ ಡಾ.ಕೆ ಶ್ರೀನಿವಾಸ ಮೂರ್ತಿ ಎದುರು ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ತಾಲೂಕಿನ ಟಿ.ಬೇಗೂರು ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಟಿ.ಬೇಗೂರು ಗ್ರಾಮ ಪಂಚಾಯಿತಿಯ ಟಿ. ಬೇಗೂರು, ಮಾರೋಹಳ್ಳಿ, ಭುವನೇ ಶ್ವರಿನಗರದ ಗ್ರಾಮದ 1.5 ಕೋಟಿ ರೂ. ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಆಗ ಮಿಸಿದ್ದ ಶಾಸಕ ಡಾ.ಕೆ ಶ್ರೀನಿವಾಸಮೂರ್ತಿಯವರ ಎದುರು ಸಾರ್ವಜನಿಕರು ಹಾಗೂ ಸ್ಥಳೀಯ ಸದಸ್ಯರು ಪಿಡಿಒ ಉಷಾ ವರ್ತನೆಗಳನ್ನು ವಿರೋಧಿಸಿ ಬೇಸರ ವ್ಯಕ್ತಪಡಿಸಿದರು. ಸಾರ್ವಜನಿಕರ ಆರೋಪವನ್ನು ಪಿಡಿಒಗೆ ಪ್ರಶ್ನೆ ಮಾಡಿದ ಶಾಸಕರ ಎದುರು ಉತ್ತರ ನೀಡದೇ, ನಾನು ಶಾಸಕರ ಅಭಿವೃದ್ಧಿ ಕಾಮಗಾರಿ ಚಾಲನೆ ನೀಡುವ ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ದರ್ಪ ತೋರಿದ್ದಾರೆ.
ಕಲ್ಲಡ್ಕ ಪ್ರಭಾಕರ್ ಭಟ್ ಹೆಸರು ದುರ್ಬಳಕೆ:
ಟಿ.ಬೇಗೂರು ಗ್ರಾಮ ಪಂಚಾಯಿತಿಗೆ ಪಿಡಿಒ ಉಷಾರವರು ಬಂದು 10 ತಿಂಗಳಾಗಿದೆ. ಒಂದು ದಿನವೂ ಸಹ ಸರಿಯಾದ ಸಮಯಕ್ಕೆ ಕಚೇರಿಗೆ ಬಂದಿಲ್ಲ. ಕೇಳಿದರೆ ಕಾರಣಗಳನ್ನು ಹೇಳುತ್ತಾರೆ.
ಮೇಲಾಧಿಕಾರಿಗಳಿಗೆ ದೂರು ನೀಡಿ ಪ್ರಶ್ನೆ ಮಾಡಿದರೆ, ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ನಮ್ಮ ಮಾವ, ನಾನು ಸಿಎಂ ಮಟ್ಟದಲ್ಲಿ ಮಾತನಾಡುವೆ ಎಂದು ಹೇಳಿ ಕೊಂಡು ನಮ್ಮ ಪಂಚಾಯಿತಿ ಅಭಿವೃದ್ಧಿಗೆ ಈ ಪಿಡಿಒ ಶಾಪವಾಗಿದ್ದಾರೆ ಎಂದು ಗ್ರಾಪಂ ಮಾಜಿ ಸದಸ್ಯ ಬಿ.ಕೆ ಮುನಿರಾಜು, ಗ್ರಾಪಂ ಅಧ್ಯಕ್ಷ ಶ್ರೀನಿವಾಸ್ ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಅವರು, ಆರ್ ಎಸ್ ಎಸ್ ಮುಖ್ಯಸ್ಥ ಕಲ್ಲಡ್ಕ ಪ್ರಭಾಕರ್ ಭಟ್ ಹೆಸರು ದುರ್ಬಳಕೆ ಮಾಡಿಕೊಂಡು ಮೇಲಾಧಿಕಾರಿಗಳನ್ನು ಕೈಕಟ್ ಬಾಯ್ ಮುಚ್ಚು ಎಂಬ ಪರಿಸ್ಥಿತಿಗೆ ತಂದಿದ್ದಾರೆ ಎಂದು ಆರೋಪಿಸಿದರು.
ಕಾಮಗಾರಿಗೆ ಶಾಸಕರಿಂದ ಚಾಲನೆ: ಟಿ.ಬೇಗೂರು ಗ್ರಾಪಂನ ಭುವನೇಶ್ವರಿ ನಗರದ ಸೋಮ ನಾಥೇಶ್ವರ ದೇವಸ್ಥಾನದ ರಸ್ತೆ, ಮಾರೋಹಳ್ಳಿ ರಸ್ತೆ ಹಾಗೂ ಟಿ.ಬೇಗೂರಿನ ರಸ್ತೆ ಅಭಿವೃದ್ಧಿಗೆ 1.50 ಕೋಟಿ ರೂ. ಶಾಸಕರ ಅನುದಾನದಲ್ಲಿ ಕಾಮಗಾರಿ ಆರಂಭ ಮಾಡಿದ್ದು, ಶಾಸಕ ಡಾ.ಕೆ ಶ್ರೀನಿವಾಸಮೂರ್ತಿ ಗುದ್ದಲಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ತಿಮ್ಮರಾಯಪ್ಪ, ಎಪಿಎಂಸಿ ನಿರ್ದೇಶಕ ಬೂದಿಹಾಳ್ ಗೋವಿಂದ ರಾಜು, ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷ ಮಮತಾ, ಸದಸ್ಯರಾದ ಗಣೇಶ್, ಮಂಜುನಾಥ್. ಟಿಎಸ್, ಅರಿಶಿನಕುಂಟೆ ಮಂಜುನಾಥ್, ಬೂದಿಹಾಳ್ ಮಂಜುನಾಥ್, ಡಿಎಂಎಲ್ ಎನ್ ಮೂರ್ತಿ, ರಾಮಯ್ರೆಡ್ಡಿ, ಮುನಿಯಪ್ಪ ಹಾಗೂ ಮತ್ತಿತರರಿದ್ದರು.
ಪಿಡಿಒ ವಿರುದ್ಧ ಶಾಸಕ ಡಾ.ಶ್ರೀನಿವಾಸಮೂರ್ತಿ ಗರಂ
ಗ್ರಾಪಂ ಪಿಡಿಒ ಗ್ರಾಮದ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕು. ಆದರೆ, ಟಿ.ಬೇಗೂರು ಗ್ರಾಪಂ ಪಿಡಿಒ ಉಷಾ ಮಧ್ಯಾಹ್ನ 12ಕ್ಕೆ ಕಚೇರಿಗೆ ಬರುವುದು, ಮನಸ್ಸಿಗೆ ಬಂದಂತೆ ಹೋಗುವುದು. ಈ ರೀತಿಯ ವರ್ತನೆಗಳ ಬಗ್ಗೆ ಸಾಕಷ್ಟು ದೂರು ಬಂದಿದೆ. ಮೇಲಾಧಿಕಾರಿಗೆ ತಿಳಿಸಿದರೂ ಕ್ರಮವಾಗಿಲ್ಲ. ಗುರುವಾರ ಸಹ ಅಭಿವೃದ್ಧಿ ಕಾಮಗಾರಿ ಚಾಲನೆಗೆ, ಸಮಯಕ್ಕೆ ಸರಿಯಾಗಿ ಆಗಮಿಸದೇ ಸಮಸ್ಯೆ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ದರ್ಪ ತೋರಿದ್ದಾರೆ. ಇಂತವರು ನಮ್ಮ ತಾಲೂಕಿನಲ್ಲಿ ಕಾರ್ಯ ನಿರ್ವ ಹಿಸುವುದು ಅವಶ್ಯಕತೆ ಇಲ್ಲ ಎಂದು ಪಿಡಿಒ ನಡೆಗೆ ಶಾಸಕ ಡಾ.ಕೆ ಶ್ರೀನಿವಾಸಮೂರ್ತಿ ಗರಂ ಆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.