ಮಾಹಿತಿ ನೀಡಲು ನಿರ್ಲಕ್ಷ್ಯ: ನೆಲಮಂಗಲ ತಹಶೀಲ್ದಾರ್‌ಗೆ 10ಸಾವಿರ ರೂ. ದಂಡ
Team Udayavani, Jun 22, 2023, 2:25 PM IST
ನೆಲಮಂಗಲ: ಮಾಹಿತಿ ನೀಡಲು ನಿರ್ಲಕ್ಷ್ಯ ಧೋರಣೆ ಹಾಗೂ ಆಯೋಗದ ವಿಚಾರಣೆಗೆ ಗೈರು ಹಾಜರಾಗಿರುವ ಪರಿಣಾಮ ತಹಶೀಲ್ದಾರ್ ಅರುಂಧತಿ ಅವರಿಗೆ 10ಸಾವಿರ ರೂ.ದಂಡವನ್ನು ವಿಧಿಸಿ ಕರ್ನಾಟಕ ಮಾಹಿತಿ ಆಯೋಗ ಆದೇಶ ನೀಡಿದ್ದು ಕಾನೂನಿನ ಮಹತ್ವ ತಿಳಿಸಿದೆ.
ತಾಲೂಕು ವ್ಯಾಪ್ತಿಯ ಸೋಂಪುರ ಹೋಬಳಿ- 2ರಲ್ಲಿ ಕಾರ್ಯನಿರ್ವಹಿ ಸುವ ರಾಜಸ್ವ ನಿರೀಕ್ಷಕರು, ಗ್ರಾಮಲೆಕ್ಕಾಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ವಾಸವಿರುವ ದಾಖಲೆಗಳನ್ನು 2020ರಿಂದ 2022ರ ತನಕ ನೀಡುವಂತೆ ತಾಲೂಕಿನ ಶಿವಶಂಕರ್.ಎಸ್ ಎಂಬವರು ಆರ್ ಟಿಐ ಮೂಲಕ ಅರ್ಜಿ ಸಲ್ಲಿಸಿದ್ದರು. ಮಾಹಿತಿ ನೀಡದ ಪರಿಣಾಮ ಶಿವಶಂಕರ್ ಮೇಲ್ಮನವಿ ಸಲ್ಲಿಸಿದ್ದು ಆಯೋಗ ಮಾಹಿತಿ ನೀಡಲು ಸೂಚನೆ ನೀಡಿತ್ತು. ಆದರೆ ತಹಶೀಲ್ದಾರ್ ಅರುಂಧತಿ ಆಯೋಗಕ್ಕೆ ದಾಖಲೆ ನೀಡದೇ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆಯೋಗ ದಂಡವಿಧಿಸಿದೆ.
ದಂಡ: ಮೇಲ್ಮನವಿದಾರರಿಗೆ ನಿಗಧಿತ ಅವಧಿ ಯೊಳಗೆ ಮಾಹಿತಿ ಒದಗಿಸದೆ ಇರುವುದು, ಆಯೋಗದ ಆದೇಶಗಳನ್ನು ಪಾಲನೆ ಮಾಡದೇ ನಿರ್ಲಕ್ಷ್ಯ ಧೋರಣೆ ತೋರಿರುವುದು, ಮೇಲ್ಮನವಿದಾರರಿಗೆ ನಿಗದಿತ ಅವಧಿಯೊಳಗೆ ಮಾಹಿತಿ ಒದಗಿಸದೆ ಇರುವುದರಿಂದ ದಂಡವಿಧಿಸುವುದಾಗಿ ನಿರ್ದೇಶನ ನೀಡಿದ್ದರೂ ಲಿಖಿತ ಸಮಜಾಯಿಷಿ ನೀಡದೇ ಆಯೋಗದ ವಿಚಾರಣೆಗೆ ಗೈರಾಗಿದ್ದರಿಂದ ದಂಡ ವಿಧಿಸಿ ಕ್ರಮದ ಎಚ್ಚರಿಕೆ ನೀಡಿದ್ದಾರೆ.
ಮೇಲ್ಮನವಿದಾರ ಶಿವಶಂಕರ್ ಮಾತ ನಾಡಿ, ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದರೆ ಎಂಬ ವಿಚಾರವಾಗಿ ಮಾಹಿತಿ ಕೇಳಿದ್ದು ನಮ್ಮ ಮನವಿಗೆ ತಹಶೀಲ್ದಾರ್ ಸ್ಪಂದನೆ ನೀಡದೇ ಕೆಟ್ಟ ದಾಗಿ ನಡೆಸಿಕೊಂಡ ಪರಿಣಾಮ ಮೇಲ್ಮನವಿ ಹೋಗಿದ್ದೆನು. ಕರ್ನಾಟಕ ಮಾಹಿತಿ ಆಯೋಗ ತಹಶೀಲ್ದಾರ್‌ರಿಗೆ ದಂಡವಿಧಿಸಿ ಎಚ್ಚರಿಕೆ ನೀಡಿರುವುದು ಸಂತೋಷವಾಗಿದೆ. ಕಾನೂನು ಜನಪರವಾಗಿದೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.