ಬನ್ನೇರುಘಟ್ಟ: 53 ಕೋಟಿ ಆದಾಯ ಸಂಗ್ರಹ


Team Udayavani, Apr 10, 2023, 2:46 PM IST

ಬನ್ನೇರುಘಟ್ಟ: 53 ಕೋಟಿ ಆದಾಯ ಸಂಗ್ರಹ

ಆನೇಕಲ್‌: ಕಳೆದ ಮೂರು ವರ್ಷಗಳು ಕೊರೊನಾ ಹಿನ್ನೆಲೆ ನೆಲಕ್ಕಚ್ಚಿದ್ದ ಬನ್ನೇರುಘಟ್ಟ ಬಯೋಲಾಜಿಕಲ್‌ ಪಾರ್ಕ್‌ ಆದಾಯ, ಈ ವರ್ಷ ದಾಖಲೆ ಬರೆದಿದೆ. ಬರೋಬ್ಬರಿ 53 ಕೋಟಿ ಕಲೆಕ್ಷನ್‌ ಮಾಡುವ ಮೂಲಕ ಪ್ರಮುಖ ಪ್ರವಾಸಿ ತಾಣಗಳಿಗೆ ಪೈಪೋಟಿಯಲ್ಲಿ ಮುಂದಿದೆ.

ತಾಲೂಕಿನ ಬೆಂಗಳೂರು ಬನ್ನೇರುಘಟ್ಟ ಬಯೋ ಲಾಜಿಕಲ್‌ ಪಾರ್ಕ್‌ 2020-21 ರಲ್ಲಿ ಅತಿ ಹೆಚ್ಚು ನಷ್ಟ ಹೊಂದಿತ್ತು, 2022 -23ನೇ ಸಾಲಿನಲ್ಲಿ 53 ಕೋಟಿ ಸಂಗ್ರಹ ಮಾಡುವ ಮೂಲಕ ಮತ್ತೆ ಪುಟಿದೆದ್ದಿದೆ. ಕಳೆದೆರಡು ವರ್ಷ ಪ್ರಾಣಿಗಳಿಗೆ ಊಟ ಉಪಚಾರಕ್ಕೂ ಕಷ್ಟ ಅನುಭವಿಸಿದ್ದ ಬನ್ನೇರುಘಟ್ಟ ಬಯೋಲಾಜಿಕಲ್‌ ಪಾರ್ಕ್‌ ಆಗ ಪ್ರಾಣಿಗಳನ್ನು ದತ್ತು ತೆಗೆದು ಕೊಳ್ಳುವಂತೆ ಪ್ರಾಣಿ ಪ್ರಿಯರಲ್ಲಿ ಮನವಿ ಮಾಡಿತ್ತು. ಆದರೆ, ಈಗ ಅತಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಮೂಲಕ ತನ್ನ ಆದಾಯ ಮೂಲ ವೃದ್ಧಿಸಿಕೊಂಡಿದೆ.

ಆದಾಯದಲ್ಲಿ ಪ್ರಗತಿ: ಸದಾ ವಿಭಿನ್ನತೆ ಹಾಗೂ ಪ್ರವಾಸಿಗರನ್ನು ಆಕರ್ಷಣೆ ಮಾಡಲು ಒಂದಲ್ಲ ಒಂದು ರೀತಿಯಲ್ಲಿ ಭಿನ್ನ ಕಾರ್ಯ ಕ್ರಮಗಳನ್ನು ಹಮ್ಮಿ ಕೊಳ್ಳುತ್ತಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನ ಈ ಬಾರಿ ಆದಾಯದಲ್ಲಿ ಪ್ರಗತಿ ಕಂಡಿರುವುದು ಪಾರ್ಕಿನ ಸಿಬ್ಬಂದಿಗೂ ಖುಷಿ ತಂದಿದೆ. ಬನ್ನೇರುಘಟ್ಟ ಬಯಲಾಜಿಕಲ್‌ ಪಾರ್ಕ್‌ ರಾಜ್ಯದ ಫ್ರಂಟ್‌ ಲೈನ್‌ ಪ್ರವಾಸಿ ತಾಣಕ್ಕೂ ಕಡಿಮೆ ಇಲ್ಲ ಅನ್ನೋ ದನ್ನು ತನ್ನ ಹಣ ಸಂಗ್ರಹದ ಮೂಲಕ ಸಾಬೀತು ಪಡಿಸಿದೆ. ಕೊರೊನಾ ಬಳಿಕ ಅಂದರೆ 2022-23ನೇ ವರ್ಷದಲ್ಲಿ ಬರೊಬ್ಬರಿ 2ಲಕ್ಷ, 22 ಸಾವಿರದ 993 ಪ್ರವಾಸಿಗರು ಭೇಟಿ ಕೊಟ್ಟಿದ್ದು, 53 ಕೋಟಿ 89 ಲಕ್ಷ 75 ಸಾವಿರದಷ್ಟು ಹಣ ಸಂಗ್ರಹ ಆಗಿದೆ.

20 ಕೋಟಿಗೂ ಹೆಚ್ಚು ಆದಾಯ: 2019-20ರಲ್ಲಿ 31ಕೋಟಿ 99ಲಕ್ಷ, 2020-21 ಬರೀ 15 ಕೋಟಿ ಕಲೆಕ್ಷನ್‌ ಆಗಿತ್ತು, ಈ ಬಾರಿ 20ಕೋಟಿಗೂ ಹೆಚ್ಚು ಆದಾಯ ಗಿಟ್ಟಿಸಿ ಕೊಳ್ಳುವ ಮೂಲಕ ದಾಖಲೆ ಸಂಗ್ರಹ ಮಾಡಿದೆ.

ಕೋವಿಡ್‌ ವೇಳೆ 2 ವರ್ಷ ಆರ್ಥಿಕ ಸಂಕಷ್ಟ : ಕೋವಿಡ್‌ 19ನಿಂದ ಉದ್ಯಾನವನ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು, ಇಡೀ ಉದ್ಯಾನವನದ ಇತಿಹಾಸದಲ್ಲಿ ಆ ಎರಡು ವರ್ಷ ಕರಾಳ ದಿನಗಳಂತಿತ್ತು. ಅದಾದ ಬಳಿಕ ನಿಧಾನವಾಗಿ ಪ್ರವಾಸಿಗರು ಬರ ತೊಡಗಿದರು. ಇದರಿಂದ ಈ ವರ್ಷ ಅತಿ ಹೆಚ್ಚು ಆದಾಯ ಸಂಗ್ರಹವಾಗಿರುವು ದರಿಂದ ಪ್ರವಾಸಿಗರಿಗೆ ಮತ್ತಷ್ಟು ಅನುಕೂಲಗಳನ್ನು ಕಲ್ಪಿಸುವ ಗುರಿಯನ್ನು ಹೊಂದಲಾಗಿದೆ ಎಂದು ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ಸುನಿಲ್‌ ಪನ್ವಾರ್‌ ತಿಳಿಸಿದರು.

ಪಿಕ್‌ನಿಕ್‌ಗೆ ಹೇಳಿಮಾಡಿಸಿದ ಜಾಗ: ಬೆಂಗಳೂರಿನಿಂದ ಕೇವಲ 30 ಕಿ.ಮಿ ದೂರದಲ್ಲಿ ರುವ ಬನ್ನೇರುಘಟ್ಟ ಬಯೋಲಾಜಿಕಲ್‌ ಪಾರ್ಕ್‌ ಒಂದು ದಿನದ ಪಿಕ್‌ನಿಕ್‌ಗಾಗಿ ಹೇಳಿ ಮಾಡಿಸಿದ ಜಾಗ, ಹೀಗಾಗಿ ಬಹುತೇಕ ಕುಟುಂಬಸ್ಥರು ವೀಕೆಂಡ್‌ ಇಲ್ಲಿ ಕಾಲ ಕಳೆಯಲು ಬಯಸುತ್ತಾರೆ, ಹುಲಿ, ಸಿಂಹ, ಆನೆ, ಕರಡಿ ಸಫಾರಿ ಇದ್ದು, ಜೂ ಕೂಡ ಇರೋದ್ರಿಂದ ಇದು ಮಕ್ಕಳ ಫೇವರೇಟ್‌ ಜಾಗ ಅನಿಸಿದೆ. ಬೇಸಿಗೆ ಕಾಲದಲ್ಲಿ ಇನ್ನಷ್ಟು ಜನ ಇಲ್ಲಿ ಸಮಯ ಕಳೆಯಲು ಬರುವುದರಿಂದ ಈ ವರ್ಷ ಕೂಡ ಇನ್ನಷ್ಟು ಮೊತ್ತದ ಸಂಗ್ರಹ ಆಗಬಹುದೆಂಬ ನಿರೀಕ್ಷೆಯಲ್ಲಿದೆ.

ಟಾಪ್ ನ್ಯೂಸ್

BSN-Gowda-yatnal

ಬಿ.ವೈ.ವಿಜಯೇಂದ್ರ ಕಲೆಕ್ಷನ್ ಮಾಸ್ಟರ್, ಧೀಮಂತ ತಂದೆಯ ಜೈಲಿಗೆ ಕಳಿಸಿದ ಮಹಾನಾಯಕ: ಯತ್ನಾಳ್‌

ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು

ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು

Champions Trophy: ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತ ಕ್ರಿಕೆಟ್ ತಂಡ ಪ್ರಕಟ…

Champions Trophy: ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತ ಕ್ರಿಕೆಟ್ ತಂಡ ಪ್ರಕಟ…

7

Udupi ನಗರಸಭೆಗೆ ಸರಕಾರದಿಂದ 5 ಸದಸ್ಯರ ನಾಮ ನಿರ್ದೇಶನ

Jimmy Carter Life Journey: ಜಿಮ್ಮಿ ಕಾರ್ಟರ್‌- ಮಾನವೀಯತೆ, ಶಾಂತಿಯ ಶಿಲ್ಪಿ

Jimmy Carter Life Journey: ಜಿಮ್ಮಿ ಕಾರ್ಟರ್‌- ಮಾನವೀಯತೆ, ಶಾಂತಿಯ ಶಿಲ್ಪಿ

Court Verdict: ಕೊಲ್ಕತ್ತಾ ಅತ್ಯಾಚಾರ ಪ್ರಕರಣ: ಆರೋಪಿ ಸಂಜಯ್ ರಾಯ್ ದೋಷಿ, ಕೋರ್ಟ್ ತೀರ್ಪು

Court Verdict: ಕೋಲ್ಕತ್ತಾ ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣ… ಆರೋಪಿ ಸಂಜಯ್ ರಾಯ್ ದೋಷಿ

12-metro

Metro: ನಾಡಿದ್ದಿನಿಂದ ಮೆಟ್ರೋ ಪ್ರಯಾಣ ದರ ಏರಿಕೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Life imprisonment: ಕೊಲೆ, ದರೋಡೆ ಪ್ರಕರಣ; 8 ಮಂದಿಗೆ ಜೀವಾವಧಿ ಶಿಕ್ಷೆ

Life imprisonment: ಕೊಲೆ, ದರೋಡೆ ಪ್ರಕರಣ; 8 ಮಂದಿಗೆ ಜೀವಾವಧಿ ಶಿಕ್ಷೆ

14-bbk

Bigg Boss ಶೋ ಸ್ಥಗಿತಗೊಳಿಸಿ: ಬೆಂಗಳೂರು ಜಿಪಂ ಸಿಇಒ ಸೂಚನೆ

Gas cylinder leakage: ಮನೆ ಛಿದ್ರ ಛಿದ್ರ, ಇಬ್ಬರಿಗೆ ಗಾಯ

Gas cylinder leakage: ಮನೆ ಛಿದ್ರ ಛಿದ್ರ, ಇಬ್ಬರಿಗೆ ಗಾಯ

13-ghati-1

Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ

Nelamangala: ಸಾಕು ನಾಯಿ ಸತ್ತಿದ್ದಕ್ಕೆ ಮಾಲಕ ಆತ್ಮಹ*ತ್ಯೆ

Nelamangala: ಸಾಕು ನಾಯಿ ಸತ್ತಿದ್ದಕ್ಕೆ ಮಾಲಕ ಆತ್ಮಹ*ತ್ಯೆ

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

BSN-Gowda-yatnal

ಬಿ.ವೈ.ವಿಜಯೇಂದ್ರ ಕಲೆಕ್ಷನ್ ಮಾಸ್ಟರ್, ಧೀಮಂತ ತಂದೆಯ ಜೈಲಿಗೆ ಕಳಿಸಿದ ಮಹಾನಾಯಕ: ಯತ್ನಾಳ್‌

Dubai: ಬಹುಮುಖ ಪ್ರತಿಭೆಯ ದುಬಾೖಯ ಶ್ರೀಖಾ ಶೆಣೈ

Dubai: ಬಹುಮುಖ ಪ್ರತಿಭೆಯ ದುಬಾೖಯ ಶ್ರೀಖಾ ಶೆಣೈ

20

Ban: ಏರ್‌ ಶೋ ವೇಳೆ ಕಟ್ಟಡ ನಿರ್ಮಾಣಕ್ಕಾಗಿ ಕ್ರೇನ್‌ ಬಳಕೆ ನಿಷೇಧ: ಪಾಲಿಕೆ ಆದೇಶ

ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು

ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು

19-

EV: ಇವಿ ಬಳಕೆಗೆ ಉತ್ತೇಜನ: ದೇಶದಲ್ಲೇ ನಂಬರ್‌ 1 ಸ್ಥಾನ ಪಡೆದ ಕರ್ನಾಟಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.