2ನೇ ಅಲೆ ವೈರಸ್ ಮೀರಿಸುವ ಹೊಸ ವೈರಸ್?
Team Udayavani, Apr 22, 2021, 1:39 PM IST
ಆನೇಕಲ್: ಕೋವಿಡ್ 2ನೇ ಅಲೆಯ ವೈರಸ್ ಅನ್ನುಮೀರಿಸುವಂತ ಮತ್ತೂಂದು ವೈರಸ್‌ಹರಡುತ್ತಿರುವುದು ಸಾವಿನ ಸಂಖ್ಯೆ ಹೆಚ್ಚಾಗಲುಕಾರಣ ಎಂಬ ಆತಂಕಕಾರಿ ಸಂಗತಿ ಹೊರ ಬಂದಿದೆ.ಆನೇಕಲ್ ತಾಲೂಕಿನ ಹೊಸೂರು ಮುಖ್ಯರಸ್ತೆಯ ಆಕ್ಸ್‌ಫರ್ಡ್‌ಆಸ್ಪತ್ರೆಯಲ್ಲಿನ ವಿಧಿವಿಜ್ಞಾನ ತಜ್ಞ ಡಾ.ದಿನೇಶ್‌ಅವರು ಈ ಹೊಸ ವೈರಸ್‌ಹರಡುತ್ತಿರುವುದರ ಬಗ್ಗೆಅನುಮಾನ ವ್ಯಕ್ತಪಡಿಸಿದ್ದಾರೆ.
ಡಾ.ದಿನೇಶ್ ಕಳೆದಏ.7 ರಂದು 68 ವರ್ಷದಸೋಂಕಿತ ಅಮೇರಿಕಾದೇಶದ ಮಹಿಳಾ ಪ್ರಜೆಮೃತಪಟ್ಟಿದ್ದರು. ಮೃತಳಮನೆಯವರು ಸಾವಿಗೆನಿಖರ ಕಾರಣ ತಿಳಿಯ ಬೇಕೆಂದು ಶವ ಪರೀಕ್ಷೆನಡೆಸಲು ಮನವಿ ಮಾಡಿದ್ದರು.
ಪರೀಕ್ಷೆ ವೇಳೆ ನೆಗೆಟಿವ್ ವರದಿ: ಈ ವೇಳೆ ಮೃತದೇಹದ ವಿವಿಧ ಅಂಗಾಂಗಗಳನ್ನು ಆರ್‌ಟಿಪಿಸಿಆರ್‌ಪರೀಕ್ಷೆ ಮಾಡಲಾಗಿತ್ತು. ಪರೀಕ್ಷೆ ವೇಳೆ ಕೋವಿಡ್-19ನೆಗೆಟಿವ್ ಬಂದಿರುವುದು ಅಚ್ಚರಿ ಮೂಡಿಸಿದೆ.
ಮೃತಳ ದೇಹದಲ್ಲಿ ಕೋವಿಡ್ ಸೋಂಕುಇಲ್ಲವಾದರೂ ಅಂಗಾಂಗಗಳಿಗೆ ಹಾನಿ ಮಾಡಿರುವವೈರಸ್ ಯಾವುದು ಎಂಬ ಪ್ರಶ್ನೆ ಮೂಡಿ,ಆರೋಗ್ಯವಾಗಿದ್ದ ವ್ಯಕ್ತಿ ಸಾವಿಗೆ ಕಾರಣ ಏನುಎಂಬುದೇ ವಿಧಿ ವಿಜ್ಞಾನ ತಜ್ಞರಿಗೆ ಕಾಡಿತ್ತು. ಇದೇವೈದ್ಯರು ಕಳೆದ ವರ್ಷ ಕೋವಿಡ್ 19 ನಿಂದ ಮೃತವ್ಯಕ್ತಿಯ ಶವ ಪರೀಕ್ಷೆ ನಡೆಸಿದ್ದರು.
ಅದಾದ ಬಳಿಕಇದೇ ವೈದ್ಯ ದಿನೇಶ್ ಈಗ 2ನೇ ಪರೀಕ್ಷೆ ನಡೆಸಿದ್ದಾರೆ.ಶವ ಪರೀಕ್ಷೆ ನಡೆಸಿದಾಗ ದೇಹದ 6 ಭಾಗದವಿವಿಧ ಅಂಗಾಂಗ ಪರೀಕ್ಷೆ ನಡೆಸಲಾಗಿತ್ತು.ಮೆದುಳು, ಶ್ವಾಸಕೋಶಕ್ಕೆ ತೀವ್ರ ಹಾನಿಯಾಗಿತ್ತು.ಇದಕ್ಕೆ ಯಾವ ವೈರಸ್ ಎಂಬುದು ನಿಖರವಾಗಿತಿಳಿಯಲು ಸಾಧ್ಯವಾಗುತ್ತಿಲ್ಲ ಎಂದು ಡಾ.ದಿನೇಶ್‌ಹೇಳಿದರು.
ರೂಪಾಂತರ ಮತ್ತಷ್ಟು ಆತಂಕಕಾರಿ: ಬೆಂಗಳೂರಿನಲ್ಲಿಇರುವ ರೂಪಾಂತರಿ ಹಾಗೂ ಬೇರೆಡೆ ಇರುವರೂಪಾಂತರಿ ಬೇರೆ ಬೇರೆ ಇದೆ. ಸೋಂಕು ಇದ್ದರೂಮನೆಗೆ ಹೋಗಿ ಹೋಂ ಕ್ವಾರಂಟೈನ್‌ನಲ್ಲಿ ಇರಿಎಂದರೆ ಮತ್ತಷ್ಟು ಆತಂಕಕಾರಿ ಎಂಬುದನ್ನೂ ವೈದ್ಯರುಹೇಳಿದ್ದಾರೆ.ಕಳೆದ ವರ್ಷ ಕೊರೊನಾ ಪ್ರಾರಂಭದಲ್ಲಿ ಮೃತಪಟ್ಟಸೋಂಕಿತನ ದೇಹದಲ್ಲೂ ವೈರಸ್ ಕಂಡು ಬಂದಿತ್ತು.ಕೊರೊನಾ ತೀವ್ರತೆ ಕಡಿಮೆಯಾದರೆ ಸದ್ಯ ಶವಪರೀಕ್ಷೆ ನಡೆಸಿದಾಗ ಕಂಡು ಬಂದಿರುವ ಅಪರಿಚಿತಅಥವಾ ಮೂರನೇ ಅಲೆಯಂತಿರುವ ವೈರಸ್ ನಿಂದತೊಂದರೆ ಹೆಚ್ಚು.
ಉಸಿರಾಟ ನಿಂತು ಹೋಗುತ್ತೆ:ಶ್ವಾಸಕೋಶದಲ್ಲಿಒಂದು ರೀತಿಯ ಚರ್ಮದಂತೆ ಬೆಳೆದುಉಸಿರಾಟವೇ ನಿಂತು ಹೋಗುತ್ತದೆ. ಅಷ್ಟರ ಮಟ್ಟಿಗೆಇದು ಡೇಂಜರ್. ಹೀಗಾಗಿ ಹೊಸ ವೈರಸ್ ಬಗ್ಗೆಸಂಶೋಧನೆ ನಡೆಸಿ ವೈರಸ್ ಯಾವುದು ಎಂದುಕಂಡು ಹಿಡಿಯಬೇಕು ಎಂದು ಹೇಳಿದರು.ಸದ್ಯ ಕೊರೊನಾಗಿಂತ ಹೊಸ ವೈರಸ್ ಆತಂಕಕಾರಿಆಗಿರುವುದರಿಂದ ಸರ್ಕಾರ ಇದರ ಬಗ್ಗೆ ವಿಶೇಷಕಾಳಜಿ ವಹಿಸಿ ಸಂಶೋಧನೆ ನಡೆಸಿ ವೈರಸ್‌ನಿಯಂತ್ರಣ ಬಗ್ಗೆ ಮಾರ್ಗಸೂಚಿ ಕಂಡುಕೊಳ್ಳಬೇಕಿದೆಎಂದೂ ಸಲಹೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.