ನಿವಾರ್‌ನಿಂದ ನೆಲಕಚ್ಚಿದ ರಾಗಿ ಬೆಳೆ
Team Udayavani, Nov 29, 2020, 10:57 AM IST
ದೇವನಹಳ್ಳಿ: ಜಿಲ್ಲೆಯ ರೈತರು ರಾಗಿ ಕಟಾವು ಹಂತಕ್ಕೆ ಬಂದಿದ್ದರಿಂದ ನಿವಾರ್ ಚಂಡಮಾರುತದಪ್ರವಾಹದಿಂದ ಬೀಳುತ್ತಿರುವ ಜಡಿ ಮಳೆಗೆ ರಾಗಿ ಬೆಳೆ ಕಟಾವಿಗೆಕಂಟಕ ಎದುರಾಗಿದೆ.
ವಾರದ ಹಿಂದೆ ಸುರಿದ ಜಡಿಮಳೆಯಿಂದ ಕಟಾವಿಗೆ ಬಂದಿರುವ ರಾಗಿ ಫಸಲು ನಾಶವಾಗುವಆತಂಕ ಎದುರಿಸುತ್ತಿರುವ ಜಿಲ್ಲೆಯ ರೈತರು ಜಡಿ ಮಳೆಗೆ ಆತಂಕಗೊಂಡಿದ್ದಾರೆ. ಜಡಿ ಮಳೆ ಹೀಗೆ ಮುಂದುವರಿದರೆ, ರಾಗಿ ಫಸಲಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀಳುತ್ತದೆ ಎಂಬುದು ರೈತರಲ್ಲಿ ಆತಂಕ ಮತ್ತಷ್ಟು ಮನೆ ಮಾಡಿದೆ.
ಬಯಲು ಸೀಮೆ ಪ್ರದೇಶವಾಗಿರುವುದರಿಂದ ಅತೀ ಮುಖ್ಯವಾಗಿ ರಾಗಿ ಬೆಳೆ ಬೆಳೆಯುತ್ತಾರೆ. ಈ ಬಾರಿ ದಾಖಲೆ ಬಿತ್ತನೆ ಜತೆಗೆ ನಿರೀಕ್ಷೆಗೂ ಮೀರಿ ರಾಗಿ ಫಸಲು ಬಂದಿದೆ. ಚಂಡಮಾರುತ ಪ್ರಭಾವದಿಂದ ರೈತರು ಮತ್ತಷ್ಟು ಕಂಗಾಲು ಮಾಡುವಂತಾಗಿದೆ. ಈ ವರ್ಷ ಉತ್ತಮವಾಗಿ ರಾಗಿ ಫಸಲು ಚೆನ್ನಾಗಿ ಬಂದಿದೆ.ಈತುಂತುರು ಮಳೆಯಿಂದಾಗಿ ಹೊಲಗಳಲ್ಲಿಯೇ ರಾಗಿ ತೆನೆ ಬಂದು, ನೆಲಕಚ್ಚಿವೆ. ಕಟಾವು ಮಾಡುವ ಸಮಯದಲ್ಲಿ ಈ ರೀತಿ ಜಡಿಮಳೆ ಕಾಟ ರೈತರಿಗೆ ಸಂಕಷ್ಟ ತಂದೊಡ್ಡಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ನಿರ್ಮಾಣವಾಗುತ್ತಿದೆ. ಒಂದು ಬಾರಿ ಬರಗಾಲ ಆವರಿಸುತ್ತದೆ. ಮತ್ತೂಂದು ಬಾರಿ ಮಳೆರಾಯನ ಕಾಟ ಕಾಡುತ್ತಿದೆ. ಎಂದು ರೈತರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.
ಸೈಕ್ಲೋನ್ ರಾಗಿ ಬೆಳೆಗಾರರ ಪಾಲಿಗೆ ದುಸ್ವಪ್ನವಾಗಿದ್ದು, ಕೊಯಿಲು ಮಾಡಿ ಹೊಲದಲ್ಲಿ ಹಾಗೆಯೇ ಬಿಟ್ಟ ರಾಗಿ ಬೆಳೆಗೆ ನಿರಂತರ ಮಳೆ ನೀರಿನ ತೇವಾಂಶ ರಾಗಿ ಕಾಳಿನಲ್ಲಿ ಮೊಳಕೆ ಒಡೆಯಲು ಕಾರಣವಾಗುತ್ತದೆ. ಸಂಪೂರ್ಣನಾಶದತ್ತ ಸಾಗುತ್ತದೆ. ಕೂಲಿ ಕಾರ್ಮಿಕರ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುತ್ತಿದೆ. ರಾಗಿ ಕಟಾವು ಸಮಯದಲ್ಲಿ ಕೂಲಿಗಾರರ ಸಮಸ್ಯೆ ರೈತರನ್ನು ಕಾಡುತ್ತದೆ. ಕೆಲವರು ಕಟಾವು ಮಾಡದೇ ಹೊಲಗಳಲ್ಲಿ ಹಾಗೆಯೇ ಬಿಟ್ಟಿದ್ದಾರೆ.
ಈ ಬಾರಿ ಉತ್ತಮ ಮಳೆಯಾದರೂ ರಾಗಿಫಸಲು ಉತ್ತಮವಾಗಿಬಂದಿತ್ತು. ನಿವಾರ್‌ಚಂಡ ಮಾರುತ ದಿಂದ ಜಡಿಮಳೆ ಹಿಡಿದಿರುವುದರಿಂದ ರಾಗಿ ಕಟಾವು ಹಂತದಲ್ಲಿ ರಾಗಿ ಕಟಾವು ಮಾಡುವ ಸಮಯದಲ್ಲಿಈ ಮಳೆ ರೈತರಿಗೆ ಸಾಕಷ್ಟುಅನಾನುಕೂಲವಾಗುತ್ತಿದೆ.ಮಳೆ ನೀರು ತೇವಾಂಶಹೆಚ್ಚಾದರೆ, ರಾಗಿ ಕಾಳಿನಲ್ಲಿ ಮೊಳಕೆಬರುತ್ತದೆ. – ಶ್ರೀರಾಮ್, ರೈತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Election: ರಾಜ್ ಠಾಕ್ರೆ ಎಂಎನ್‌ಎಸ್ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!
Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.