ಮಸೀದಿ ವಿಚಾರದಲ್ಲಿ ಯಾರಿಗೂ ಗೊಂದಲ ಬೇಡ; ಗೃಹ ಸಚಿವ ಆರಗ
ನಮ್ಮ ಮೂರು ಸ್ಥಾನ ಪಡೆಯುವಲ್ಲಿ ನಾವು ಯಶಸ್ವಿಯಾಗಿದ್ದೇವೆ.
Team Udayavani, Jun 11, 2022, 1:29 PM IST
ನೆಲಮಂಗಲ: ಜಾಮಿಯಾ ಮಸೀದಿ ವಿಚಾರದಲ್ಲಿ ಯಾರೂ ಗೊಂದಲ ಮಾಡುವ ಅವಶ್ಯಕತೆ ಯಿಲ್ಲ, ಆ ಪ್ರಕರಣ ಕಾನೂನು ಅಡಿ ನ್ಯಾಯಾಲಯದಲ್ಲಿ ತೀರ್ಮಾನವಾಗಲಿದ್ದು, ಸುಖಾಸು ಮ್ಮನೆ ಶಾಂತಿಕದಡುವ ಕೆಲಸ ಮಾಡಬಾರದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅಭಿಪ್ರಾಯಪಟ್ಟರು.
ತಾಲೂಕಿನ ಆನಂದ ನಗರದ ಶ್ರೀ ಜಿನ್ನಾಗರದಮ್ಮ ಮತ್ತು ದಂಡಿನ ಮಾರಮ್ಮ ದೇವಿಯ ಪ್ರತಿ ಷ್ಠಾಪನಾ ಮಹೋತ್ಸವ ಹಾಗೂ ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯಸಭೆ ಚುನಾವಣೆಯ ಗೆಲುವು ಬಿಜೆಪಿ ಮತ್ತಷ್ಟು ಬಲವರ್ಧನೆಗೆ ಮುನ್ನುಡಿ ಯಾ ಗಿದ್ದು, ರಾಜ್ಯದಲ್ಲಿ ಕಮಲದ ಶಕ್ತಿ ಪ್ರದರ್ಶನವಾಗಿದೆ. ಆನಂದ ನಗರದಲ್ಲಿ ಬಡವರು, ಹಿಂದುಳಿದ ವರ್ಗದವರಿಂದ ದೇವಸ್ಥಾನ ನಿರ್ಮಾಣ ಮಾಡಲಾಗಿದ್ದು, ಜನರಿಗೆ ನೆಮ್ಮದಿಯ ತಾಣವಾಗಿದೆ. ದೇವಸ್ಥಾನಗಳಿಂದ ಒತ್ತಡದ ಜನರಿಗೆ ನೆಮ್ಮದಿ ನೀಡಿ ಆತ್ಮಹತ್ಯೆ ಕಡಿಮೆ ಮಾಡುವ ಔಷಧಿಯಾಗಿದೆ ಎಂದರು.
ಶಾಂತಿ ಕಾಪಾಡಲು ಸೂಚನೆ: ರಾಜ್ಯದಲ್ಲಿ ನಡೆಯುವ ಪ್ರತಿಭಟನೆ ಹಾಗೂ ಹೋರಾಟಗಳ ಬಗ್ಗೆ ಹೆಚ್ಚು ನಿಗಾವಹಿಸಿದ್ದು, ಶಾಂತಿ ಸುವ್ಯವಸ್ಥೆ ಕಾಪಾಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀ ಸ ರಿಗೆ ಸೂಚನೆ ನೀಡಲಾಗಿ ಕ್ರಮ ತೆಗೆದುಕೊಳ್ಳಲಿದ್ದಾರೆ. ಯಾರೂ ಸಾರ್ವಜನಿಕ ಆಸ್ತಿ ಪಾಸ್ತಿಗಳನ್ನು ನಷ್ಟ ಮಾಡಬಾರದು ಎಂದರು.
ಸಿಬ್ಬಂದಿ ಹೆಚ್ಚಿಸಲಾಗುತ್ತದೆ: ರಾಜ್ಯದಲ್ಲಿ ಈಗಾಗಲೇ ಪಿಐ ಠಾಣೆಗಳಾಗಿ ಪರಿವರ್ತಿಸಿದ್ದು, ನೆಲ ಮಂಗಲದ ಸಂಚಾರ ಠಾಣೆಯಂತೆ ಅನೇಕ ಕಡೆಗಳಲ್ಲಿ ಸಿಬ್ಬಂದಿ ಕೊರತೆ ಎದುರಾಗಿದೆ. ಕೆಲವೇ ದಿನಗಳಲ್ಲಿ ಸಿಬ್ಬಂದಿಗಳ ಕೊರತೆ ನಿವಾರಣೆ ಮಾಡಲಾಗುತ್ತದೆ ಎಂದರು. ಪಠ್ಯ ಪುಸ್ತಕ ಪರಿಷ್ಕ ರಣೆ ವೇಳೆ ಆರ್ ಎಸ್ ಎಸ್ ಸಂಸ್ಥಾಪಕ ಹೆಗಡೇವಾರ್ ವಿಷಯದಲ್ಲಿ ಗೊಂದಲ ಉಂಟಾಗಿದ್ದ ಬೆನ್ನಲ್ಲೆ ಹಿಂದೂ-ಮುಸ್ಲಿಮರು ವಾಸಿಸುವ ಆನಂದ ನಗರದ ಕಾರ್ಯಕ್ರಮದಲ್ಲಿ ಹಿಂದೂ ಪರ ಕಾರ್ಯಕರ್ತರು ಗೃಹ ಸಚಿವರಿಗೆ ಹೆಗಡೇವಾರ್ ಫೋಟೋ ವನ್ನು ನೀಡಿ ಅಭಿನಂದನೆ ಸಲ್ಲಿಸಿ ದರು.
ಸಮಾನತೆ ಸಾರಲು ಸಹಕಾರಿ: ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ದೇವಾಲಯಗಳು ಆಧ್ಯಾತ್ಮಿಕ ಶಕ್ತಿ ಕೇಂದ್ರಗಳಾಗಿದ್ದು, ಗ್ರಾಮದಲ್ಲಿರುವ ಶಾಲೆಯೊಂದಿಗೆ ಜ್ಞಾನ ದಾಸೋಹವನ್ನು ಪರಸ್ಪರ ಸಾರುವಂತಹ ಶ್ರದ್ಧಾ ಕೇಂದ್ರಗಳಾಗಿವೆ. ನಮ್ಮ ಸಂಸ್ಕೃತಿ, ಸಂಸ್ಕಾರ ಬೆಳೆಸುವ ರೀತಿ, ಯುವಕರನ್ನು ಧಾರ್ಮಿಕತೆಯತ್ತ ಕೊಂಡೊ ಯ್ದಾಗ ಮಾತ್ರ ಸಮಾಜದಲ್ಲಿ ಶಾಂತಿ ಸಹಭಾಳ್ವೆ ಸಾಧ್ಯ ಎಂದ ಅವರು, ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರಿಗೂ ಸಮಾನತೆ ಸಾರಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿದೆ.
ಗ್ರಾಮಗಳಲ್ಲಿ ಎಲ್ಲರೂ ಒಂದಾಗಲೂ ಇಂತಹ ಕಾರ್ಯಕ್ರಮ ಸಹಕಾರಿ ಯಾಗಿದೆ. ರಾಷ್ಟ್ರೀಯ ಭಾವೈಕ್ಯತೆ ಸಾರಿ ಎಲ್ಲ ಸಮುದಾಯ ದವರು ಗ್ರಾಮದಲ್ಲಿ ಒಂದಾಗಿರುವುದು ಶ್ಲಾಘನಾರ್ಹ ವಿಚಾರ ಎಂದರು.
ಮಹಿಳೆಯರ ಸಮಾನತೆ: ಶಿವಗಂಗೆಯ ಮೇಲಣಗವಿಮಠದ ಶ್ರೀ ಮಲಯಶಾಂತಮುನಿ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಈ ಗ್ರಾಮದಲ್ಲಿ ದೇವಾಲಯಗಳಲ್ಲಿ ಮಹಿಳೆಯರ ಸಮಾನತೆ ಎದ್ದು ಕಾಣುತ್ತಿರುವುದು ಉತ್ತಮ ಬೆಳವಣಿಗೆ. ಜಿನ್ನಾಗರದಮ್ಮ ದೇವಿ ಮತ್ತು ದಂಡಿನಮಾರಮ್ಮದೇವಿಯ ಪೂಜೆ ಮಹಿಳೆಯರ ಸಮಾನತೆಗೆ ಹೊಸ ದಿಕ್ಕನ್ನು ತೋರಿಸಿದೆ. ದೇವರ ಪೂಜೆಯ ಜೊತೆಗೆ ದೇವಿಗೆ ಮಹತ್ವ ನೀಡಿರುವುದು ಸ್ವಾಗತಾರ್ಹ ವಿಚಾರ ಎಂದರು.
ದೇವಿಗೆ ವಿಶೇಷ ಅಲಂಕಾರ, ಪೂಜೆ: ಕಾರ್ಯಕ್ರಮ ದಲ್ಲಿ ದೇವಿಗೆ ವಿಶೇಷ ಅಲಂಕಾರ, ಪೂಜೆ, ಹೋಮ ಹವನ, ದೇವಾಲಯಕ್ಕೆ ಬಲಿಹರಣ ಇನ್ನಿತರ ಧಾರ್ಮಿಕ ಕಾರ್ಯಕ್ರಮವನ್ನು ಅರ್ಚಕ ವೆಂಕಟೇಶ್ ಮತ್ತು ಚಂದ್ರ ಹಾಗೂ ಪ್ರಧಾನ ಅರ್ಚಕ ಕೃಷ್ಣಪ್ಪಾಚಾರ್ಯ ನೇತೃತ್ವದಲ್ಲಿ ಜರುಗಿತು. ಪವಾಡ ಬಸವಣ್ಣ ದೇವರ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಶಿವಾನಂದ ಆಶ್ರಮದ ಶ್ರೀ ರಮಣಾನಂದ ಸ್ವಾಮೀಜಿ, ಜಗಣ್ಣಯ್ಯ ನಮಠದಶ್ರೀ, ವನಕಲ್ಲು ಮಠದ ಶ್ರೀಬಸವರಮಾ ನಂದ ಸ್ವಾಮೀಜಿ ಸೇರಿದಂತೆ ತಾಲೂಕಿನ ಸುತ್ತಮುತ್ತಲಿನ 20ಕ್ಕೂ ಅಧಿಕಮಠಗಳ ಹರಗುರು ಚರ ಮೂರ್ತಿಗಳು, ಮಾಜಿ ಶಾಸಕ ಎಂ.ವಿ. ನಾಗರಾಜು, ಬೇಗೂರು ಗ್ರಾಪಂ ಅಧ್ಯಕ್ಷ ಬಿ.ಕೆ.ಶ್ರೀನಿವಾಸ್, ಉಪಾಧ್ಯಕ್ಷೆ ಮಮತಾ, ಎನ್‌ಡಿಎ ಅಧ್ಯಕ್ಷ ಮಲ್ಲಯ್ಯ, ಡಾ. ರಮಣ ರಾವ್, ಸುನೀಲ್ ಕುಮಾರ್, ಮುಖಂಡ ಹೊಂಬಯ್ಯ, ಎಂ.ಎನ್.ರಾಮು, ರಾಮಕೃಷ್ಣಯ್ಯ, ಜಗದೀಶ್ ಚೌಧರಿ, ವೆಂಕಟೇಶ್ ದೊಡ್ಡೇರಿ, ವೀಕ್ಷಕ ಶ್ರೀನಿವಾಸ್, ಮಿಲಿ ಮೂರ್ತಿ, ತಾಪಂ ಸದಸ್ಯ ಬಿ. ಕೆ. ಮುನಿರಾಜು, ವೆಂಕಟರಸಪ್ಪ, ಸತೀಶ್, ಮಾರಗೊಂಡನಹಳ್ಳಿ ರಮೇಶ್, ಪುನೀತ್, ಯುವ ಮುಖಂಡ ಹರೀಶ್, ಮುನಿಸ್ವಾಮಿ, ರಂಗನಾಥ್, ಮರಿಯಪ್ಪ, ರಂಗಸ್ವಾಮಿ, ಮಡಿವಾಳ ಸಂಘದ ಮಂಜುನಾಥ್, ಕಲಾವಿದ ಗುರುರಾಜ್ ಹೊಸಕೋಟೆ ಹಾಗೂ ಮತ್ತಿತರರಿದ್ದರು.
ರಾಜ್ಯದಲ್ಲಿ ಹೊಸ ಪರ್ವ ಆರಂಭ: ಗೃಹಸಚಿವ
ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಮೂರು ಸ್ಥಾನವನ್ನು ಗೆದ್ದಿದ್ದು, ಬಿಜೆಪಿ ಬಲವರ್ಧನೆಗೆ ಶಕ್ತಿ ಯಾಗಿದೆ. ಚುನಾವಣೆಯಲ್ಲಿ ಅಡ್ಡ ಮತದಾನ ನಡೆದಿದ್ದು, ವಿಪಕ್ಷಗಳ ಆಟಾಟೋಪ ಕೊನೆ ಯಾಗಿದೆ. ನಮ್ಮ ಮೂರು ಸ್ಥಾನ ಪಡೆಯುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ರಾಜ್ಯಸಭಾ ಚುನಾವಣೆಯಿಂದ ರಾಜ್ಯದಲ್ಲಿ ಹೊಸ ಪರ್ವ ಆರಂಭ ಆಗಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Doddaballapur: ಹೊಲದಲ್ಲಿ ಹೂ ಬಿಡಿಸುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ: ಸಾವು
Road Mishap: ಬೈಕ್ ವ್ಹೀಲಿಂಗ್ ಮಾಡುವಾಗ ಕ್ಯಾಂಟರ್‌ಗೆ ಡಿಕ್ಕಿ; ಇಬ್ಬರು ಸಾವು
Tragic: ಮದುವೆ ಹರಕೆ ಹೊತ್ತು ಘಾಟಿ ದೇಗುಲಕ್ಕೆ ಬಂದಿದ್ದ ಯುವತಿ ಸಾವು
Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!
Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Assam; ಚಹಾರ್ ಜಿಲ್ಲೆ 4 ಗ್ರಾಮ ಬಾಲ್ಯ ವಿವಾಹ ಮುಕ್ತ: ಸಿಎಂ ಹಿಮಾಂತ್
Kushtagi: ವಸತಿ ಶಾಲೆ ಆವರಣ ಗೋಡೆ ಜಿಗಿದು ಕಾಲ್ಕಿತ್ತ 4 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು
Mumbai-Nagpur ಹೆದ್ದಾರಿಯಲ್ಲಿ ಏಕಕಾಲದಲ್ಲಿ 50 ವಾಹನಗಳ ಟಯರ್ ಪಂಕ್ಚರ್
Kottigehara:ಸಿಲಿಂಡರ್ ಸ್ಫೋಟ, ಮನೆ ಸಂಪೂರ್ಣ ನೆಲಸಮ,ಕೆಲಸಕ್ಕೆ ಹೋಗಿದ್ದರಿಂದ ಮನೆಮಂದಿ ಪಾರು
TestTeam; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್ ತಂಡಕ್ಕೆ ಭಾರತೀಯ ನಾಯಕ; ರೋಹಿತ್ ಅಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.