9 ವರ್ಷದಿಂದ ಕತ್ತಲೆ ಮನೆಯಲ್ಲೇ ಜೀವನ
ಕಂಬ, ತಂತಿ ಎಳೆಯಲು ಖಾಸಗಿ ಜಮೀನಿನವರ ವಿರೋಧ
Team Udayavani, Feb 3, 2020, 5:39 PM IST
ನೆಲಮಂಗಲ: ದೇಶದ ಎಲ್ಲಾ ಕುಟುಂಬಗಳು ವಿದ್ಯುತ್ ಸೌಲಭ್ಯ ಪಡೆದಿವೆ ಎಂಬ ಘೋಷಣೆಯ ನಂತರವು 9ವರ್ಷದಿಂದ ವಿದ್ಯುತ್ ಸೌಲಭ್ಯವಿಲ್ಲದೆ ಕತ್ತಲ ಜೀವನ ಮಾಡುತಿರುವ ಕುಟುಂಬಗಳು ಹಾಗೂ ಒಂದು ವರ್ಷದಿಂದ ಮೇಣದ ಬತ್ತಿ ಬೆಳಕಲ್ಲಿ ಓದುವ ಮಕ್ಕಳ ಪರಿಸ್ಥಿತಿ ರಾಜಧಾನಿ ಬಳಿಯಿರುವ ಮೈಲನಹಳ್ಳಿಯಲ್ಲಿದೆ.
ತಾಲೂಕಿನ ಗೊಲ್ಲಹಳ್ಳಿ ಗ್ರಾಪಂನ ಮೈಲಹಳ್ಳಿಯ ಕುಟುಂಬಗಳು ವಿದ್ಯುತ್ ಸೌಲಭ್ಯದಿಂದ ವಂಚಿತರಾಗಿದ್ದರೆ, 70ವರ್ಷದ ರಾಜಣ್ಣ 2011ರಿಂದ ಕತ್ತಲೆಯ ಮನೆಯಲ್ಲಿ ವಿದ್ಯುತ್ ಬೆಳಕುಕಾಣದೆ ಜೀವನ ಸಾಗಿಸುತಿದ್ದಾರೆ.
ಮೇಣದಬತ್ತಿಯೇ ಆಧಾರ: ಹಳೆಯಮನೆ ಬೀಳುವಾಗ ಹೊಸಮನೆಗೆ ಬಂದ ಕುಮಾರ್ ಹಾಗೂ ಹೇಮಾವತಿ ಕುಟುಂಬದವರಿಗೆ ಎದುರಾದ ಸಮಸ್ಯೆ ಮನೆಯಲ್ಲಿ ವಿದ್ಯುತ್ ಇಲ್ಲ, ಸೀಮೆಎಣ್ಣೆ ಸರ್ಕಾರ ನಿಷೇಧಿಸಿದೆ, ಸೋಲಾರ್‌ಲೈಟ್ ಒಂದು ಗಂಟೆಗೆ ಸಿಮೀತ ಇದರ ನಡುವೆ 10ನೇತರಗತಿಯ ಮಗಳು ಭೂಮಿಕಾ ಹಾಗೂ 7ನೇತರಗತಿಯ ಮಗ ಮನೋಜ್ ಓದಲು ಮೇಣದಬತ್ತಿಯೇ ಆಧಾರವಾಗಿದೆ.
ವಿದ್ಯುತ್ ವಂಚಿತ ಮನೆಗಳು: ಮೈಲನಹಳ್ಳಿ ಮುಖ್ಯರಸ್ತೆಯಿಂದ 150ಮೀ ದೂರದ ಜಮೀನಿನಲ್ಲಿ 1ವರ್ಷದ ಹಿಂದೆ ನಿರ್ಮಿಸಿದ ಮನೆಗೆ ವಿದ್ಯುತ್ ಸೌಲಭ್ಯ ನೀಡುವಂತೆ ಗ್ರಾಪಂ, ಬೆಸ್ಕಾಂ ಇಲಾಖೆಗೆ ಮನವಿ ಮಾಡಿದರೆ ಸೌಲಭ್ಯ ನೀಡಲು ನಾವು ಸಿದ್ಧ ಆದರೆ ಖಾಸಗಿ ಜಮೀನಿನವರು ವಿರೋಧ ಮಾಡುತಿದ್ದಾರೆ, ಅವರು ಒಪ್ಪಿಗೆ ಸೂಚಿಸುವವರೆಗೂ ವಿದ್ಯುತ್ ಸೌಲಭ್ಯ ನೀಡಲಾಗುವುದಿಲ್ಲ ಎಂದು ಅಧಿಕಾರಿಗಳು ಸೌಲಭ್ಯವನ್ನೇ ನೀಡಿಲ್ಲ.
ಸಮಸ್ಯೆ ಪರಿಹಾರ ನೀಡುವರ್ಯಾರು: ಗ್ರಾಮದಲ್ಲಿ ಮನೆಯಿಲ್ಲದೆ, ಹೊಸ ಮನೆಕಟ್ಟಲು ಜಾಗವಿಲ್ಲದೆ ಇರುವಾಗ ಸ್ವಂತ ಜಮೀನಿನಲ್ಲಿ ಮನೆ ನಿರ್ಮಿಸಿ ಜೀವನ ಮಾಡಲು ಮುಂದಾದ ಕುಟುಂಬಕ್ಕೆ ಸಮಸ್ಯೆ ಎದುರಾಗಿದ್ದು, ಕತ್ತಲೆಯಲ್ಲಿ ಬದುಕಬೇಕಾಗಿದೆ. ಇದರ ಬಗ್ಗೆ ಬೆಸ್ಕಾಂ ಹಾಗೂ ಗ್ರಾಪಂ ಅಧಿಕಾರಿಗಳು ಪಕ್ಕದ ಜಮೀನಿನವರ ಅನುಮತಿ ಬೇಕು ಎನ್ನುತ್ತಾರೆ. ಖಾಸಗಿ ಜಮೀನಿನವರು ಅನುಮತಿ ನಿರಾಕರಿಸಿದ್ದಾರೆ ಇಂತಹ ಸಂದರ್ಭದಲ್ಲಿ ಸಮಸ್ಯೆ ಬಗೆಹರಿಸುವವರ್ಯಾರು ಸರಕಾರ ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕಿದೆ.
ಮಕ್ಕಳ ಶಿಕ್ಷಣಕ್ಕೆ ನೇರವಾಗಿ: ಸರ್ಕಾರ ಹಾಗೂ ಮೇಲಧಿಕಾರಿಗಳಿಂದ ಕುಟುಂಬಗಳಿಗೆ ವಿದ್ಯುತ್ ಸೌಲಭ್ಯ ನೀಡಿ ಬೆಳಕು ನೀಡುವ ಅನಿವಾರ್ಯತೆ ಇದೆ. 10ತರಗತಿಯ ವಿದ್ಯಾರ್ಥಿನಿಯ ಭವಿಷ್ಯ,70ವರ್ಷದ ಮದುಕನ ಕತ್ತಲ ಜೀವನದಲ್ಲಿ ಬೆಳಕು ಮೂಡಿಸಲು ಅಧಿಕಾರಿಗಳು ಮುಂದಾಗಬೇಕಾಗಿದೆ.
ಖಾಸಗಿ ಜಮೀನಿನಲ್ಲಿ ಕಂಬಗಳು ಹಾಗೂ ವಿದ್ಯುತ್ ತಂತಿ ಎಳೆಯಲು ಅವರ ಅನುಮತಿ ಬೇಕು. ಸ್ಥಳಪರಿಶೀಲಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು. –ದಾಸಪ್ಪ, ಬೆಸ್ಕಾಂ ಸಹಾಯಕ ಎಂಜಿನಿಯರ್
ಮೈಲನಹಳ್ಳಿಯ ಕೆಲವು ಮನೆಗಳಿಗೆ ವಿದ್ಯುತ್ ನೀಡದಿರುವ ಬಗ್ಗೆ ಮಾಹಿತಿಯಿಲ್ಲ. ಮಾಹಿತಿ ಪಡೆದು ಸಂಬಂದಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗುತ್ತದೆ. –ಎಂ ಶ್ರೀನಿವಾಸಯ್ಯ , ತಹಶೀಲ್ದಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.