ಶುದ್ಧ ನೀರಿನ ಘಟಕಗಳಲ್ಲಿ ನೀರಿಲ್ಲ
Team Udayavani, Dec 29, 2019, 5:02 PM IST
ದೇವನಹಳ್ಳಿ : ಜಿಲ್ಲೆಯಲ್ಲಿ ಅಂರ್ತಜಲ ಕುಸಿತದಿಂದಾಗಿ ಫ್ಲೋರೈಡ್ ಯುಕ್ತ ನೀರು ಸೇವನೆ ಮಾರಕ ರೋಗಗಳಿಗೆ ಕಾರಣವಾಗಲಿದೆ ಎನ್ನುವ ಉದ್ದೇಶದಿಂದ ಸ್ಥಾಪಿಸಲಾದ ಶುದ್ಧ ಕುಡಿಯುವ ನೀರಿನ ಘಟಕಗಳು ಅನೇಕ ಕಡೆ ತಾಂತ್ರಿಕ ದೋಷಗಳಿಂದ ಸ್ಥಗಿತ ಗೊಂಡಿದ್ದು, ಶುದ್ದ ಕುಡಿಯುವ ನೀರಿಗಾಗಿ ಪ್ಲೋರೈಡ್ ಯುಕ್ತ ನೀರು ಬಳಕೆ ಮಾಡುವುದು ಅನಿವಾರ್ಯವಾಗಿದೆ.
ಜಿಲ್ಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಪೈಕಿ ಕರ್ನಾಟಕ ಮೂಲ ಸೌಕರ್ಯ ಅಭಿವೃದ್ಧಿ ನಿಗಮದಿಂದ ಸ್ಥಾಪಿಸಿರುವ ಘಟಕಗಳೇ ಹೆಚ್ಚು ದುರಸ್ತಿ ಜೊತೆಗೆ ಸಮರ್ಪಕವಾಗಿ ನಿರ್ವಹಣೆಯಾಗುತ್ತಿಲ್ಲ ದೂರು ಕೇಳಿಬಂದಿದೆ. ಜಿಲ್ಲೆಯ ಎಲ್ಲಾ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಸಾಮಾನ್ಯಾಗಿ ಪ್ರತಿ 20ಲೀ ನೀರಿಗೆ 5 ರೂ. ನಿಗದಿಪಡಿಸಲಾಗಿದೆ. ಇದರಿಂದ ಸಂಗ್ರಹವಾಗುವನ ಹಣ ಆಯಾ ಘಟಕಗಳ ತಿಂಗಳ, ವಿದ್ಯುತ್ ಬಿಲ್, ನಿರ್ವಹಣೆಗೆಗಾರನ ವೇತನ , ಸಣ್ಣ ಪುಟ್ಟ ದುರಸ್ತಿ ಕಾರ್ಯಗಳಿಗೆ ಬಳಕೆ ಮಾಡಲಾಗುತ್ತಿದೆ. ಪೂರ್ಣ ಪ್ರಮಾಣವಾಗಿ ನಿರ್ವಹಣೆಗೆ ಈ ಹಣ ಸಾಲುತ್ತಿಲ್ಲ ಎಂಬ ದೂರು ನಿರ್ವಹಕರಿಂದ ಕೇಳಿ ಬರುತ್ತಿದೆ.
ಜಿಪಂ ಸಾಮಾನ್ಯ ಸಭೆ ಮತ್ತು ಕೆಡಿಪಿ ಸಭೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿಯ ಬಗ್ಗೆ ಚಿರ್ಚಸಲಾಗಿದ್ದು, ಆದಷ್ಟು ಬೇಗ ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. – ಜಯಮ್ಮ, ಜಿಪಂ ಅಧ್ಯಕೆ
-ಎಸ್ ಮಹೇಶ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.