ಉಪಗ್ರಹ ಆಧಾರಿತ ತರಬೇತಿಗೆ ಅಧಿಕಾರಿಗಳು ಚಕ್ಕರ್‌


Team Udayavani, Sep 25, 2019, 3:00 AM IST

upagraha

ನೆಲಮಂಗಲ: ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಇಲಾಖೆಗಳ ಯೋಜನೆ ಹಾಗೂ ಜನಸ್ನೇಹಿ ಯೋಜನೆಗಳನ್ನು ರೂಪಿಸಲು ಕೇಂದ್ರ ಸರಕಾರದ ಸಬ್‌ ಕೀ ಯೋಜನಾ ಸಬ್‌ ಕೀ ವಿಕಾಸ್‌ ಎಂಬ ಉಪಗ್ರಹ ಆಧಾರಿತ ತರಬೇತಿ ಅಧಿಕಾರಿಗಳ ಬದಲು ಖಾಲಿ ಕುರ್ಚಿಗಳಿಗೆ ನೀಡಲಾಗಿದೆ.

ತಾಲೂಕಿನ 29 ಇಲಾಖೆ ಮುಖ್ಯಸ್ಥರು ಹಾಗೂ ಹೋಬಳಿ ಮಟ್ಟದ ಅಧಿಕಾರಿಗಳಿಗಾಗಿ ಕೇಂದ್ರ ಸರ್ಕಾರದ ಪಂಚಾಯತ್‌ ರಾಜ್‌ ಮಂತ್ರಾಲಯ ಮೈಸೂರಿನಿಂದ ನೇರವಾಗಿ ವೀಡಿಯೊ ಕಾನ್ಪರೆನ್ಸ್‌ ಮೂಲಕ ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ನಡೆದ ತರಬೇತಿಯಲ್ಲಿ ಇಬ್ಬರು ಅಧಿಕಾರಿಗಳು ಮಾತ್ರ ಭಾಗವಹಿಸಿದ್ದು, ಉಪಗ್ರಹ ಆಧಾರಿತ ತರಬೇತಿ ಖಾಲಿ ಕುರ್ಚಿಗಳಿಗೆ ಸೀಮಿತವಾಯಿತು.

ಅಧಿಕಾರಿಗಳ ಗೈರು: ಅಚ್ಚರಿ ಎಂಬಂತೆ ತರಬೇತಿಗೆ ಇಬ್ಬರು ಅಧಿಕಾರಿಗಳು ಪೂರ್ಣವಿದ್ದರೆ, 4 ಮಂದಿ ಅಧಿಕಾರಿಗಳು ಸಹಿ ಮಾಡಿ. ಅಧಿಕಾರಿಗಳಿಲ್ಲ ಎಂದು ವಾಪಸ್‌ ಹೋದರು. 25 ಇಲಾಖೆಯ ಮುಖ್ಯಸ್ಥರು ಹಾಗೂ ಅಧಿಕಾ‌ರಿಗಳು ತರಬೇತಿಗೆ ಗೈರಾಗಿದ್ದು, ಇದರಿಂದ ಖಾಲಿ ಕುರ್ಚಿಗಳು ಮಾತ್ರ ಪರದೆಯ ಮೂಲಕ ಉಪಗ್ರಹ ಆಧಾರಿತ ತರಬೇತಿಯನ್ನು ವೀಕ್ಷಣೆ ಮಾಡಿದಂತಿತ್ತು. ಲಕ್ಷಾಂತರ ಹಣ ಖರ್ಚುಮಾಡಿ ಅಧಿಕಾರಿಗಳಿಗೆ ತರಬೇತಿ ನೀಡುವ ಕೇಂದ್ರ ಸರಕಾರದ‌ ಪ್ರಯತ್ನಕ್ಕೆ ಅಧಿಕಾರಿಗಳು ಸ್ಪಂಧಿಸಲಿಲ್ಲ.

ಇಬ್ಬರ ಉಪಸ್ಥಿತಿ: ತರಬೇತಿಯಲ್ಲಿ ತಾಲೂಕಿನ ರೇಷ್ಮೆ ಇಲಾಖೆಯ ಶ್ರೀನಿವಾಸಮೂರ್ತಿ, ಪಶು ಸಂಗೋಪನೆ ಇಲಾಖೆಯ ಶಾರದಮ್ಮ ಪೂರ್ಣ ಭಾಗವಹಿಸಿದರೆ, ಮೀನುಗಾರಿಕೆ, ಬೆಸ್ಕಾಂ ಹಾಗೂ ಪುರಸಭೆ ಇಲಾಖೆಯ 4 ಸಿಬ್ಬಂದಿ ಸೇರಿ ಜನರು ಸಹಿ ಮಾಡಿ ಅರ್ಧಗಂಟೆ ಮಾತ್ರ ತರಬೇತಿಯಲ್ಲಿ ಭಾಗವಸಿದ್ದರು. 29 ಇಲಾಖೆಯ 100ಕ್ಕೂ ಹೆಚ್ಚು ಅಧಿಕಾರಿಗಳು ಭಾಗವಸಗಿಬೇಕಾದ ತರಬೇತಿಯಲ್ಲಿ ಕೇವಲ 6 ಮಂದಿ ಅಧಿಕಾರಿಗಳು ಭಾಗಹಿಸಿದ್ದು, ತರಬೇತಿಗೆ ಅರ್ಥವಿಲ್ಲದಂತಾಯಿತು.

ಕೇಳೋರಿಲ್ಲ: ತಾಪಂ ಇಒ ಅವರಿಂದ ಸಬ್‌ ಕೀ ಯೋಜನಾ ಸಬ್‌ ಕೀ ವಿಕಾಸ್‌ ಎಂಬ ಉಪಗ್ರಹ ಆಧಾರಿತ ತರಬೇತಿ ಬಗ್ಗೆ ಜ್ಞಾಪನ ಪತ್ರವನ್ನು ನೀಡಲಾಗಿದ್ದು, ಕಂದಾಯ, ವಲಯ ಅರಣ್ಯ, ಆರೋಗ್ಯ, ತಾಪಂ, ತೋಟಗಾರಿಕೆ, ಕೃಷಿ, ನೀರಾವರಿ, ಶಿಶು ಹಾಗೂ ಮಹಿಳಾ ಸಬಲೀಕರಣ, ಶಿಕ್ಷಣ ಸೇರಿದಂತೆ 24 ಇಲಾಖೆಯ ಮುಖ್ಯಸ್ಥರು, ಅಧಿಕಾರಿಗಳು ತರಬೇತಿಗೆ ಆಗಮಿಸದಿದ್ದರೂ ಯಾರು ಕೇಳೋರಿಲ್ಲದಂತಾಗಿದೆ.

ಸಿಇಓ ಸಭೆ ಕಾರಣವೇ?: ತಾಪಂಯಲ್ಲಿ ಜಿಪಂ ಸಿಇಒ ನಾಗರಾಜು ಅವರು, ಪಿಡಿಓ ಹಾಗೂ ನರೇಗಾ ಯೋಜನೆಯ 8 ಇಲಾಖೆಗಳ ಸಭೆ ಕರೆಯಲಾಗಿತ್ತು, ಸಭೆಯಲ್ಲಿ ಎಲ್ಲಾ ಪಂಚಾಯತಿ ಪಿಡಿಓ ಹಾಗೂ 8 ಇಲಾಖೆ ಮುಖ್ಯಸ್ಥರು ಹಾಜರಿದ್ದರು. ಆದರೆ ಕೆಲವು ಅಧಿಕಾರಿಗಳು ಸಿಇಓ ಸಭೆ ಎಂದು ಹೇಳಿ ತರಬೇತಿಗೆ ಗೈರಾಗಿದ್ದಾರೆ, ತರಬೇತಿಯಲ್ಲಿ ಭಾಗವಸಲು ಸಿಇಓ ಸಭೆ ಕಾರಣವಲ್ಲ ಎಂದು ಸಿಇಓ ತಿಳಿಸಿದ್ದಾರೆ.

ಇಂದಾದರೂ ಬನ್ನಿ : ಪಿಡಿಒ ಹಾಗೂ ಅಧಿಕಾರಿಗಳಿಗೆ ಸೆ.25 ರಿಂದ ಸೆ.27ರವರಗೆ ಉಪಗ್ರಹ ಆಧಾರಿತ ತರಬೇತಿ ನಡೆಯಲಿದ್ದು ಈಗಲಾದರೂ, ತರಬೇತಿ ಪಡೆದು ಸಾರ್ವಜನಿಕರ ಯೋಜನೆಗಳು ಕ್ರಮಬದ್ದವಾಗಿ ತಲುಪಲಿ ಎಂಬುದು ಸಾರ್ವಜನಿಕರ ಆಶಯ. ಸಾರ್ವಜನಿಕರ ಅನಕೂಲಕ್ಕಾಗಿ ಅಧಿಕಾರಿಗಳಿಗೆ ತರಬೇತಿ ಉಪಗ್ರಹ ಆಧಾರಿತ ತರಬೇತಿ ನೀಡಲು ಸರ್ಕಾರ ಮುಂದಾದರೆ, ಮೇಲಾಧಿಕಾರಿಗಳು ಯಾರು ನೋಡುವುದಿಲ್ಲ, ಕೇಳುವುದಿಲ್ಲ ಎಂದು ಈ ರೀತಿ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಪ್ರತಿಕ್ರಿಯಿಸಿ ಉಪಗ್ರಹ ಆಧಾರಿತ ತರಬೇತಿಯ ಬಗ್ಗೆ ನನಗೆ ಮಾತಿಯಿಲ್ಲ. ಇದ್ದಿದ್ದರೆ, ಸಭೆ ಮುಂದೂಡಬಹುದಿತ್ತು. ಅಧಿಕಾರಿಗಳು ತರಬೇತಿಗೆ ಬರದಿರಲು ನಮ್ಮ ಸಭೆ ಕಾರಣವಲ್ಲ. ತರಬೇತಿಯ ಸ್ಥಳ ಪರಿಶೀಲಿಸಿ ಗೈರಾದವರಿಗೆ ನೋಟಿಸ್‌ ನೀಡುವಂತೆ ತಿಳಿಸಿದ್ದೇನೆ.
-ನಾಗರಾಜು, ಜಿಪಂ ಸಿಇಒ

* ಕೊಟ್ರೇಶ್‌. ಆರ್‌

ಟಾಪ್ ನ್ಯೂಸ್

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

8-belthangady

Belthangady: ಕ್ರಿಸ್ಮಸ್‌ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

Crime: ರೌಡಿಶೀಟರ್‌ ಕೊಲೆ ಯತ್ನ; ಆರೋಪಿಗೆ ಗುಂಡೇಟು

Doddaballapur: ಎರಡೂ ಬಸ್‌ ನಿಲ್ದಾಣಕ್ಕೆ ಬೇಕಿದೆ ಕಾಯಕಲ್ಪ!

Doddaballapur: ಎರಡೂ ಬಸ್‌ ನಿಲ್ದಾಣಕ್ಕೆ ಬೇಕಿದೆ ಕಾಯಕಲ್ಪ!

11

Lack of Bus stand: ಹೊಸಕೋಟೆ; ಬಸ್‌ ನಿಲ್ದಾಣವಿಲ್ಲದೆ ಪರದಾಟ!

Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ

Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ

Anekal: ರೌಡಿಶೀಟರ್‌ ಮೇಲೆ ಮಾರಕಾಸ್ತ್ರಗಳಿಂದ ದಾಳಿ

Anekal: ರೌಡಿಶೀಟರ್‌ ಮೇಲೆ ಮಾರಕಾಸ್ತ್ರಗಳಿಂದ ದಾಳಿ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Atlee to collaborate with Salman Khan

Atlee Kumar; ಸಲ್ಮಾನ್‌ ಖಾನ್‌ ಜತೆಗೆ ಅಟ್ಲಿ ಸಿನಿಮಾ

11-

ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ

10-tumkur

Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.