ಉದ್ಯಾನವನ ಪ್ರಾಣಿಗಳ ರಕ್ಷಣೆಗೆ ಅಧಿಕಾರಿಗಳ ಚಿಂತನೆ
Team Udayavani, May 3, 2020, 6:54 PM IST
ಆನೇಕಲ್: ಕೋವಿಡ್ 19 ಲಾಕ್‌ಡೌನ್ ಮುಗಿದ ನಂತರವೂ ಪರಿಸ್ಥಿತಿ ಅವಲೋಕಿಸಿ ಬನ್ನೇರುಘಟ್ಟ ಉದ್ಯಾನವನಕ್ಕೆ ಬರುವ ಪ್ರವಾಸಿಗರು ಸಾಮಾಜಿಕ ಅಂತರವನ್ನು ಹೇಗೆ ಕಾಪಾಡಿಕೊಳ್ಳಬೇಕೆಂಬ ಕುರಿತು ಉದ್ಯಾನವನದ ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ.
ತಾತ್ಕಾಲಿಕ ಬ್ರೇಕ್: ಉದ್ಯಾನವನದ ಪಿಕ್‌ನಿಕ್ ಕಾರ್ನರ್, ಸಫಾರಿ, ಚಿಟ್ಟೆ ಉದ್ಯಾನವನ, ಬೋಟಿಂಗ್ ಸೇರಿದಂತೆ ವಿವಿಧ ಕಡೆ ಇಂತಿಷ್ಟು ಸಮಯ, ಇಂತಿಷ್ಟೇ ಅಂತರ ಕಾಪಾಡಿಕೊಳ್ಳಬೇಕೆಂಬ ನಿಯಮ ಜಾರಿಗೆ ತರಲಿದ್ದಾರೆ.
ಆನ್‌ಲೈನ್ ಟಿಕೆಟ್ ಮಾತ್ರ: ಕೌಂಟರ್ ಬಳಿ ಟಿಕೆಟ್ ಪಡೆದು ಪ್ರವೇಶಿಸುತ್ತಿದ್ದರು. ಆದರೆ, ಇನ್ನು ಮುಂದೆ ಆನ್‌ಲೈನ್‌ನಲ್ಲಿ ಟಿಕೆಟ್ ಪಡೆದವರಿಗಷ್ಟೇ ಪ್ರವೇಶ ನೀಡಲಿದ್ದಾರೆ. ಅದೂ ದಿನ ಒಂದಕ್ಕೆ ಇಂತಿಷ್ಟು ಪ್ರವಾಸಿಗರಿಗೆ ಮಾತ್ರ ಅವಕಾಶವಿದೆ. ಮೃಗಾಲಯ ವೀಕ್ಷಣೆಗೆ ಕೇವಲ 2 ಗಂಟೆ ನಿಗದಿ ಮಾಡಲಾಗಿದ್ದು ಕೇವಲ 2 ಸಾವಿರ ಪ್ರವಾಸಿಗರು ವೀಕ್ಷಣೆ ಮಾಡಬಹುದಾಗಿದೆ ಎಂಬ ಲೆಕ್ಕಾಚಾರದಲ್ಲಿ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
ಅಂತರಕ್ಕೆ ಛತ್ರಿ ಬಳಕೆ : ಉದ್ಯಾನವನ ಆರಂಭದ ಬಳಿಕ ನಿಗದಿತ ಗುಂಪು, ಕುಟುಂಬಗಳಿಗೆ ಪ್ರವೇಶ ದ್ವಾರದಲ್ಲೇ ಒಂದು ಛತ್ರಿ ನೀಡಲಾಗುವುದು. ಅದಕ್ಕೊಂದು ಹೆಸರು ಅಥವಾ ಬಣ್ಣ ನೀಡಲಾಗುವುದು. ಹೀಗೆ ಒಂದು ಕುಟುಂಬ ಮತ್ತೂಂದು ಕುಟುಂಬದ ನಡುವೆ ಛತ್ರಿಗಳು ಸಹಜವಾಗಿ ಅಂತರ ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ.
ಉದ್ಯಾನವನಕ್ಕೆ 1 ದಿನದಲ್ಲಿ 23000 ಸಾವಿರ ಪ್ರವಾಸಿಗರು ಭೇಟಿ ನೀಡಿರುವ ನಿದರ್ಶನಗಳಿವೆ. ಹೀಗಾಗಿ ಹಲವು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಕೋವಿಡ್ -19 ಪರಿಸ್ಥಿತಿ ಅವಲೋಕಿಸಿ ಉದ್ಯಾನವನ ಆರಂಭಿಸಲಾಗುವುದು. –ವನಶ್ರೀ ಪಿನ್ ಸಿಂಗ್, ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.