![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Dec 6, 2022, 3:23 PM IST
ಆನೇಕಲ್: ಕಳೆದ ಮೂರು ದಿನಗಳಿಂದ ಕಾಣೆಯಾಗಿದ್ದ ವೃದ್ಧೆ ಪಕ್ಕದ ಮನೆಯೊಳಗಿನ ಬಟ್ಟೆಇಡುವ ಕಬೋರ್ಡನಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆಆನೇಕಲ್ ತಾಲೂಕಿನನೆರಳೂರು ಗ್ರಾಮದಲ್ಲಿ ನಡೆದಿದೆ.
ತುಮಕೂರಿನ ಶಿರಾ ಮೂಲದ ಪಾರ್ವತಮ್ಮ (80) ಮೃತ ವೃದ್ಧೆ. ಪಕ್ಕದ ಮನೆ ವಾಸಿ ಪಾಯಲ್‌ಖಾನ್ ಚಿನ್ನಾಭರಣಕ್ಕಾಗಿ ವೃದ್ಧೆಯನ್ನು ಕೊಂದು ಕೈಕಾಲು ಕಟ್ಟಿ ಮನೆಯ ಕಬೋರ್ಡ್‌ನಲ್ಲಿಟ್ಟು ಪರಾರಿಯಾಗಿದ್ದಾರೆ ಎಂಬ ಶಂಕೆ ವ್ಯಕ್ತಪಡಿಸಲಾಗಿದೆ.
ಮೃತ ಅಜ್ಜಿ ಮಗ ರಮೇಶ್, ಮಡದಿ ಮತ್ತು ಮೊಮ್ಮಕ್ಕಳು ಕಳೆದ ಹತ್ತು ತಿಂಗಳಿಂದ ನೆರಳೂರುಗ್ರಾಮದ ಅಂಬರೀಶ್ ಎಂಬುವರು ಬಿಲ್ಡಿಂಗ್‌ನಲ್ಲಿಬಾಡಿಗೆಗೆ ವಾಸವಾಗಿದ್ದಾರೆ. ಅದೇ ಬಿಲ್ಡಿಂಗ್‌ನ ಮೂರನೇ ಮಹಡಿಯಲ್ಲಿ ಪಾಯಲ್ ಖಾನ್ ಸಹವಾಸವಾಗಿದ್ದಾಳೆ. ಇಪ್ಪತ್ತು ದಿನದ ಹಿಂದೆ ಅಜ್ಜಿಪಾರ್ವತಮ್ಮ ಮಗ, ಸೊಸೆ ಮತ್ತು ಮೊಮ್ಮಕ್ಕಳನ್ನು ನೋಡಲು ಇಲ್ಲಿಗೆ ಬಂದಿದ್ದಾಳೆ.
ಪೊಲೀಸರಿಗೆ ದೂರು: ಮಗ ಕೆಲಸಕ್ಕೆ ಮತ್ತು ಮೊಮ್ಮಕ್ಕಳು ಶಾಲೆಗೆ ಹೋದರೆ ಸೊಸೆ ಮತ್ತು ಅಜ್ಜಿಮಾತ್ರ ಮನೆಯಲ್ಲಿ ಇರುತ್ತಿದ್ದರು. ಆದರೆ, ಕಳೆದಮೂರು ದಿನಗಳ ಹಿಂದೆ ಮಕ್ಕಳನ್ನು ಶಾಲೆಗೆ ಬಿಟ್ಟುಬರುವುದಾಗಿ ತಾವು ಮನೆಯಲ್ಲಿಯೇ ಇರಿ ಎಂದುಹೇಳಿ ಸೊಸೆ ಹೋಗಿದ್ದು, ವಾಪಾಸ್ ಬಂದಾಗ ಅಜ್ಜಿ ನಾಪತ್ತೆಯಾಗಿದ್ದಾರೆ. ಎಲ್ಲಾ ಕಡೆ ಹುಡುಕಾಡಿದರೂಪತ್ತೆಯಾಗಿಲ್ಲ. ಇದರ ನಡುವೆ ಮೂರನೇಮಹಡಿಯಲ್ಲಿ ವಾಸವಿದ್ದ ಒಂಟಿ ಮಹಿಳೆ ಪಾಯಲ್ ಖಾನ್ ಸಹ ಕಣ್ಮರೆಯಾಗಿದ್ದಾಳೆ.ಅನುಮಾನಗೊಂಡ ಅಜ್ಜಿ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ.
ಆರೋಪಿ ಪತ್ತೆಗಾಗಿ ತಂಡ ರಚನೆ: ದೂರು ಆಧರಿಸಿ ಪಾಯಲ್ ಖಾನ್ ವಾಸವಿದ್ದ ಮನೆ ಪರಿಶೀಲನೆ ನಡೆಸಿದಾಗ ಅಜ್ಜಿ ಮೃತದೇಹ ಕಬೋರ್ಡ್ ನಲ್ಲಿ ಪತ್ತೆಯಾಗಿದೆ. ಮಚ್ಚು, ಸೂðಡ್ರೈವರ್ ಮತ್ತುಕಟ್ಟಿಂಗ್‌ಪ್ಲೇರ್ ಘಟನಾ ಸ್ಥಳದಲ್ಲಿ ಪತ್ತೆಯಾಗಿದ್ದು, ಚಿನ್ನಾಭರಣಕ್ಕಾಗಿ ಕೊಲೆ ಮಾಡಿರುವ ಸಾಧ್ಯತೆ ಇದೆ. ಆರೋಪಿ ಪತ್ತೆಗಾಗಿ ಪೊಲೀಸರ ತಂಡರಚಿಸಲಾಗಿದ್ದು, ಶೀಘ್ರ ಆರೋಪಿಗಳನ್ನು ಬಂಧಿಸುವುದಾಗಿ ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.
ಮಾಹಿತಿ ಪಡೆದು ಮನೆ ಕೊಡಿ: ಹೊರ ರಾಜ್ಯದ ಕಾರ್ಮಿಕರು ಯಾರೇ ಆಗಿದ್ದರೂ ಸಹ ಸರಿಯಾದರೀತಿಯಲ್ಲಿ ದಾಖಲೆ ಪಡೆದು ಬಾಡಿಗೆಗೆ ಮನೆನೀಡಬೇಕು. ಇಲ್ಲವಾದರೆ ಇಂತಹ ಕೃತ್ಯ ಮತ್ತೆ ಮತ್ತೆನಡೆಯುವ ಸಾಧ್ಯತೆ ಇದೆ ಎಂದು ಸ್ಥಳೀಯರಾದ ಮಲ್ಲಿಕಾರ್ಜುನ್ ಆಗ್ರಹಿಸಿದ್ದಾರೆ.
ಹಣದ ಆಸೆಗಾಗಿ ಮಹಿಳೆ ಕೊಲೆ ಮಾಡಿರುವ ಸಾಧ್ಯತೆ ಇದೆ. ಮನೆಗೆ ಅಜ್ಜಿಯನ್ನುಕರೆಸಿಕೊಂಡು ಕೊಲೆ ಮಾಡಿ ಬಳಿಕ ಕಬೋರ್ಡಿನಲ್ಲಿ ಬಟ್ಟೆಯಲ್ಲಿ ಸುತ್ತಿಟ್ಟು ಪರಾರಿಯಾಗಿದ್ದಾಳೆ.ಎನ್ನುವ ಅನುಮಾನದ ಹಿನ್ನೆಲೆ, ಎಲೆಕ್ಟ್ರಾನಿಕ್ಸ್ ಸಿಟಿಸಮೀಪದ ಶಿಕಾರಿಪಾಳ್ಯದ ಆರೋಪಿ ವಿಳಾಸಲಭ್ಯವಾಗಿದ್ದು, ಬಂಧನಕ್ಕಾಗಿ ಬಲೆ ಬೀಸಲಾಗಿದೆ. -ಮಲ್ಲಿಕಾರ್ಜುನ ಬಾಲದಂಡಿ ಬೆಂಗಳೂರು ಗ್ರಾಮಾಂತರ ಎಸ್ಪಿ
ಒಂಟಿ ಮಹಿಳೆ ಮನೆಯನ್ನುಒಂದು ವರ್ಷದ ಹಿಂದೆ ಬಾಡಿಗೆಗೆಪಡೆದಿದ್ದಳು. ದಾಖಲೆ ಪಡೆದುಅಗ್ರಿಮೆಂಟ್ ಆದ ಬಳಿಕ ಮನೆನೀಡಲಾಗಿತ್ತು. ಕಳೆದ ಹತ್ತು ತಿಂಗಳ ಹಿಂದೆ ಖಾಲಿ ಇದ್ದ ಮನೆಗೆ ಇನ್ನೊಂದುಕುಟುಂಬ ಬಂದಿದ್ದು, ಈಗ ಈ ರೀತಿಘಟನೆ ನಡೆದು ಹೋಗಿದೆ.-ಅಂಬರೀಶ್ ಮನೆ ಮಾಲೀಕ
ಅಜ್ಜಿ ನಮ್ಮ ಮನೆಯಲ್ಲಿ ವಾಸ ಇದ್ದರು. ಮನೆ ಮೇಲಿನ ಯುವತಿ ಜೊತೆ ಹಾಗೂ ನಮಗೆ ಯಾವುದೇ ಸಂಪರ್ಕ ಇರಲಿಲ್ಲ. ಮೂರು ದಿನದ ಹಿಂದೆ ನನ್ನ ಪತ್ನಿ ಮಕ್ಕಳನ್ನು ಕರೆದುಕೊಂಡು ಬರಲು ಹೋದಾಗ ಮನೆಗೆಕರೆಸಿಕೊಂಡು ಕೃತ್ಯ ಎಸಗಿದ್ದಾಳೆ. ಮೈ ಮೇಲೆಅಜ್ಜಿ ಚಿನ್ನಾಭರಣ ಹಾಕಿಕೊಂಡಿದ್ದು, ಅದೆಲ್ಲವನ್ನು ದೋಚಿ ಪರಾರಿಯಾಗಿದ್ದಾಳೆ.-ರಮೇಶ್ ಮೃತ ಪಾರ್ವತಮ್ಮನ ಮಗ
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.