ತಾಲೂಕು ಕಚೇರಿಯಲ್ಲಿ ಕಾಗದರಹಿತ ಆಡಳಿತ
Team Udayavani, Dec 4, 2019, 11:26 AM IST
ನೆಲಮಂಗಲ: ನೆಲಮಂಗಲ ತಾಲೂಕು ಕಚೇರಿ ಇನ್ಮುಂದೆ ಸಂಪೂರ್ಣ ಇ–ಆಫೀಸ್ ವ್ಯಾಪ್ತಿಗೆ ಬರಲಿದೆ. ಇದರಿಂದಾಗಿ ಮಧ್ಯವರ್ತಿಗಳ ಹಾವಳಿಗೆ ಬ್ರೇಕ್ ಬೀಳಲಿದೆ. ಸರಕಾರಿ ಕಚೇರಿಗಳಲ್ಲಿ ಕಾಗದ ರಹಿತ ವ್ಯವಹಾರ ಸಾರ್ವಜನಿಕರಿಗೆ ಅನು ಕೂಲವಾಗುವುದರಿಂದ ಈ ವ್ಯವಸ್ಥೆ ಜಾರಿ ತರಲಾಗಿದೆ.
ಈ ಮೂಲಕ ಬೆಂಗಳೂರು ವಿಭಾಗದಲ್ಲಿ ಇ–ಆಫೀಸ್ಅ ಳವಡಿಸಿಕೊಂಡ ಮೊದಲ ತಾಲೂಕು ಎಂಬ ಹೆಗ್ಗಳಿಕೆಗೆ ತಾಲೂಕು ಕಚೇರಿ ಪಾತ್ರವಾಗಿದೆ. ಬೆಂಗಳೂರು ವಿಭಾಗದಲ್ಲಿ ರಾಮನಗರ, ಬೆಂ.ಗ್ರಾಮಾಂತರ, ಚಿತ್ರದುರ್ಗ, ಶಿವಮೊಗ್ಗ, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ ಸೇರಿದಂತೆ 8 ಜಿಲ್ಲೆಗಳು ಸೇರಿವೆ.ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳು 2020 ಜ.1ರಿಂದ ಕಾಗದ ರಹಿತ ಆಡಳಿತಕ್ಕೆ ನವೀಕರಣಗೊಳ್ಳಬೇಕಾಗಿದೆ. ಈಗಾಗಲೇ ಕೆಲವು ಕಚೇರಿಗಳು ಇ–ಆಫೀಸ್ ಗೆ ಬದ ಲಾವಣೆಯಾಗುವ ಹಂತದಲ್ಲಿವೆ. ಕಾಗದರಹಿತ ಆಡಳಿತದಿಂದ ಸಾರ್ವಜನಿಕರು ಟಪಾಲಿನಲ್ಲಿ ಅರ್ಜಿ ನೀಡಿದ ತಕ್ಷಣ ತಹಸೀಲ್ದಾರ್‌ಗೆ ಮಾಹಿತಿ ರವಾನೆಯಾಗುತ್ತದೆ.
ಇ–ಆಫೀಸ್ ಏಕೆ? : ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಕಾಗದ ರಹಿತ ವ್ಯವಹಾರ ನಡೆಸಲು ರಾಜ್ಯ ಸರಕಾರ ಇ– ಆಫೀಸ್ ಎಂಬ ವೆಬ್ ಅಪ್ಲಿಕೇಶನ್ ಪರಿಚಯಿಸಿದೆ. ಇದರಿಂದ ಸಾರ್ವಜನಿಕ ಕಚೇರಿಯಲ್ಲಿ ಕಾಗದ ರಹಿತ ವ್ಯವಹಾರದ ಜೊತೆ ಪಾರದರ್ಶಕ, ಜನಸ್ನೇಹಿ ಕಚೇರಿಯಾಗಿ ಪರಿವರ್ತಿಸಿಲು ಸಹಕಾರಿಯಾಗಿದೆ. ಟಪಾಲಿನಲ್ಲಿ ಸಲ್ಲಿಸಿದ ಅರ್ಜಿ ಕೇಸ್ ಸಿಬ್ಬಂದಿ, ಶೀರಸ್ಥೆದ್ಧಾರ್, ತಹಸೀಲ್ದಾರ್‌ಗೆ ನೇರವಾಗಿ ಮಾಹಿತಿ ತಿಳಿಯಲಿದೆ. ನೂತನ ತಹಶೀಲ್ದಾರ್ ಶ್ರೀನಿವಾಸಯ್ಯ ಅವರ ಇಚ್ಛಾಶಕ್ತಿಯಿಂದ ಇ–ಆಫೀಸ್ ಗೆ ಚಾಲನೆ ದೊರಕಿದ್ದು ಸಾರ್ವಜನಿಕರು ಇದರ ಅನುಕೂಲ ಪಡೆದುಕೊಳ್ಳಬೇಕಿದೆ.
ಅರ್ಜಿ ವಿಲೇವಾರಿ ಕಾಯುವಂತಿಲ್ಲ : ಇ– ಆಫೀಸ್ಬ ಳಕೆಗಿಂತ ಮುಂಚೆ ಟಪಾಲಿಗೆ ಬಂದ ಅರ್ಜಿ ಗ್ರಾಮ ಲೆಕ್ಕಾಧಿಕಾರಿ, ರಾಜಸ್ವ ನಿರೀಕ್ಷಕ, ಕೇಸ್ ಸಿಬ್ಬಂದಿ, ಶಿರಸ್ಥೆದ್ಧಾರ್ ಮೂಲಕ ತಹಶೀಲ್ದಾರ್ ಸಹಿಗೆ ನೀಡ ಬೇಕಾಗಿತ್ತು. ಇದರ ಮಧ್ಯೆ ಮದ್ಯವರ್ತಿಗಳ ಕಾಟ ದಿಂದ ಅರ್ಜಿ ಸಲ್ಲಿಸಿ ತಿಂಗಳಾದರೂ, ಅರ್ಜಿಗಳ ವಿಲೇವಾರಿಯಾಗುತ್ತಿರಲಿಲ್ಲ. ಕೆಲವು ಅಧಿಕಾರಿಗಳು
ಅನೇಕ ಕಾರಣಗಳನ್ನು ಹೇಳಿ ಅರ್ಜಿ ವಜಾ ಮಾಡುತಿದ್ದರು. ಇನ್ನೂ ಮುಂದೆ ನೇರ ತಹಸೀಲ್ದಾರ್‌ಗೆ ಮಾಹಿತಿ ರವಾನೆಯಾಗುವುದರಿಂದ ಅರ್ಜಿ ವಿಲೇವಾರಿ ವೇಗಪಡೆದುಕೊಳ್ಳುತ್ತದೆ.
ಕಡತಗಳಿಗೆ ತಂತ್ರಾಂಶ: ತಾಲೂಕು ಕಚೇರಿಯಲ್ಲಿನ ಕಡತಗಳನ್ನು ಸ್ಕ್ಯಾನ್ ಮಾಡುವ ಇ–ಆಫೀಸ್ ನಲ್ಲಿ ಸಂಗ್ರಹಿಸಲಾಗುತ್ತದೆ. ಕಾಗದ ಕಡತಗಳನ್ನು ಹುಡುಕಾಡುವ ಬದಲು ನೇರವಾಗಿ ತಂತ್ರಾಂಶದ ಮೂಲಕ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಕೆಲವೇ ದಿನಗಳಲ್ಲಿ ಐದರಿಂದ ಆರು ವರ್ಷದ ಕಾಗದದ ಕಡತಗಳನ್ನು ಸ್ಕ್ಯಾನ್ ಮಾಡುವ ಮೂಲಕ ಇ–ಆಫೀಸ್ಸ್ನಲ್ಲಿ ಸಂಗ್ರಹಿಸಲಾಗುವುದು ಎಂದು ತಹಶೀಲ್ದಾರ್ ಮಾಹಿತಿ ನೀಡಿದರು.
ಮಧ್ಯವರ್ತಿಗಳಿಗೆ ಬ್ರೇಕ್ : ತಾಲೂಕು ಕಚೇರಿಯಲ್ಲಿ ಸಾರ್ವಜನಿಕರು ಒಂದು ಅರ್ಜಿ ವಿಲೇವಾರಿ ಮಾಡಲು ಮಧ್ಯವರ್ತಿಗಳಿಗೆ ಸಾವಿರಾರು ಹಣ ನೀಡಬೇಕಾಗಿತ್ತು. ಆದರೆ ಇ–ಆಫೀಸ್ ನಿಂದ ಮಧ್ಯವರ್ತಿಗಳಿಗೆ ಅಕ್ಷರಶ: ಬ್ರೇಕ್ ಬಿದ್ದರೂ, ಅಧಿಕಾರಿಗಳಿಗೆ ಲಾಭವಾಗಲಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ತಾಲೂಕು ಕಚೇರಿಯು ಇ-ಆಫೀಸ್ ವ್ಯಾಪ್ತಿಗೆ ಬಂದಿದ್ದು, ಟಪಾಲಿಗೆ ಬಂದ ಅರ್ಜಿಗಳ ಬಗ್ಗೆ ನನಗೆ ತಕ್ಷಣ ತಿಳಿಯುತ್ತದೆ. ಸಾರ್ವಜನಿಕರಿಗೆ ಮಧ್ಯವರ್ತಿಗಳ ಕಾಟ ಕಡತ,ಅರ್ಜಿ ವಿಲೇವಾರಿ ವಿಳಂಬ ತಪ್ಪಿಸಲು ಈ ಸೌಲಭ್ಯ ಉತ್ತಮವಾಗಿದೆ. ಅನೇಕ ದಿನಗಳ ಪರಿಶ್ರಮದಿಂದ ಇ-ಆಫೀಸ್ ನಮ್ಮ ವಿಭಾಗದಲ್ಲಿ ಮೊದಲ ತಾಲೂಕು ಕಚೇರಿಯಾಗಿದೆ -ಎಂ ಶ್ರೀನಿವಾಸಯ್ಯ, ತಹಶೀಲ್ದಾರ್
-ಕೊಟ್ರೇಶ್ ಆರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.