ಪಿಡಿಒ ವರ್ಗಾವಣೆ: ಗ್ರಾಮಗಳ ಅಭಿವೃದ್ಧಿ ಕುಂಠಿತ
2 ಬಾರಿ ಕೊಯಿರಾ ಗ್ರಾಪಂ ಪಿಡಿಒಗಳ ವರ್ಗಾವಣೆ: ಅಭಿವೃದ್ಧಿ ಕಾರ್ಯಗಳಿಗೆ ಕುತ್ತು
Team Udayavani, Aug 25, 2021, 4:35 PM IST
ದೇವನಹಳ್ಳಿ: ಪಿಡಿಒಗಳನ್ನು ಸರ್ಕಾರ ವರ್ಗಾವಣೆ ಮಾಡುತ್ತಲೇ ಹೋಗುತ್ತಿದ್ದರೆ ಗ್ರಾಪಂ ವ್ಯಾಪ್ತಿಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನೆಡೆ ಯಾಗುತ್ತಿದೆ. ಇದ್ದಕ್ಕೆ ಸಾಕ್ಷಿ ಎಂಬಂತೆ ತಾಲೂಕಿನ ಕೊಯಿರಾ ಗ್ರಾಪಂನಲ್ಲಿ ಎರಡು ತಿಂಗಳಿನಲ್ಲಿ ಇಬ್ಬರು ಪಿಡಿಒಗಳ ವರ್ಗಾವಣೆ ಯಾಗಿರುವುದರಿಂದ ಗ್ರಾಮದ ಅಭಿವೃದ್ಧಿಗೆ ಹಿನ್ನೆಡೆಯಾಗಿದೆ.
ಕೊಯಿರಾ ಗ್ರಾಪಂ ಕಚೇರಿಯು ಸಂಪನ್ಮೂಲ ಕೊರತೆ ಎದುರಿಸುತ್ತಿದೆ. ತಾಲೂಕಿನಲ್ಲಿ 24 ಗ್ರಾಪಂಗಳಿದ್ದು ಅದರಲ್ಲಿ ಅಣ್ಣೇಶ್ವರ, ಕನ್ನಮಂಗಲ, ಜಾಲಿಗೆ, ಬೆಟ್ಟಕೋಟೆ, ವಿಶ್ವನಾಥಪುರ, ಕಾರಹಳ್ಳಿ ಮತ್ತು ಆವತಿ ಗ್ರಾಪಂ ಗಳನ್ನು ಹೊರತುಪಡಿಸಿ ಉಳಿದ 15 ಗ್ರಾಪಂಗಳಲ್ಲಿ ಸಂಪನ್ಮೂಲ ಕೊರತೆಯಿದೆ.
ಹೊಂದಿಕೊಳ್ಳಲು ಕಾಲಾವಕಾಶ ಬೇಕು: ಕನಿಷ್ಠ ಒಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ 2 ವರ್ಷದ ಅವಧಿಯನ್ನು ನೀಡಿದರೆ, ಆ ಗ್ರಾಪಂ ಗಳು ಹೆಚ್ಚು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಒಬ್ಬ ಪಂಚಾಯಿತಿ ಅಧಿಕಾರಿ ಕನಿಷ್ಠ ಪಕ್ಷ ಮೂರು ತಿಂಗಳು ಅಲ್ಲಿನ ಪಂಚಾಯಿತಿಗೆ ಹೊಂದಿಕೊಳ್ಳಲು ಕಾಲಾವಕಾಶ ಬೇಕಾಗುತ್ತದೆ. ಹೀಗಿರುವಾಗ ನಿರಂತರವಾಗಿ ಎರಡು ತಿಂಗಳಿಗೊಮ್ಮೆ ಈ ಪಂಚಾಯಿತಿಯಿಂದ ಆ ಪಂಚಾಯಿತಿಗೆ ವರ್ಗಾವಣೆಯಾದರೆ ಅಭಿವೃದ್ಧಿ ಕಾಣಲು ಹೇಗೆ ಸಾಧ್ಯ ಎಂಬುದು ಗ್ರಾಮಸ್ಥರ ಪ್ರಶ್ನೆಯಾಗಿದೆ.
ಇದನ್ನೂ ಓದಿ:ಮೈಸೂರು: ವಿದ್ಯಾರ್ಥಿನಿ ಮೇಲೆ ದುಷ್ಕರ್ಮಿಗಳಿಂದ ಸಾಮೂಹಿಕ ಅತ್ಯಾಚಾರ
ಡೆಪ್ಟೆಷನ್ ಕೈ ಬಿಡಿ: ಪಂಚಾಯಿತಿ ಪಿಡಿಒ, ಕಾರ್ಯದರ್ಶಿ ಹುದ್ದೆ ಖಾಲಿಯಿರುವ ಕಡೆ ಡೆಪ್ಟೆಷನ್ ಮೇಲೆ ನಿಯೋಜಿಸುವುದರಿಂದ ಹಾಲಿ ಮತ್ತು ನಿಯೋಜಿತ ಪಂಚಾಯಿತಿಯಲ್ಲಿ ಸೇವೆ ಸಲ್ಲಿಸಲು ಕಷ್ಟವಾಗುತ್ತದೆ. ಕೂಡಲೇ ಪ್ರತಿ ಪಂಚಾಯಿತಿಗೆ ಪಿಡಿಒ, ಕಾರ್ಯದರ್ಶಿ ಎರಡು ವರ್ಷ ಇರುವ ಜಾಗದಲ್ಲಿಯೇ ಕರ್ತವ್ಯ ನಿರ್ವಹಿಸುವಂತೆ ಆಗಬೇಕು. ಡೆಪ್ಟೆಷನ್ ಕಾರ್ಯವೈಖರಿಯನ್ನು ಕೈಬಿಡಬೇಕು ಎಂದುಗ್ರಾಪಂ ಸದಸ್ಯರು ಆಗ್ರಹಿಸಿದ್ದಾರೆ.
ಆಲೂರು ದುದ್ದನಹಳ್ಳಿ ಗ್ರಾಪಂಗೆ ಈ ಹಿಂದೆ ಇದ್ದ ಕಾರ್ಯದರ್ಶಿ ಭಾರತಿ ವರ್ಗಾವಣೆಯಿಂದಾಗಿ ಕೊಯಿರಾ ಗ್ರಾಪಂ ಕಾರ್ಯದರ್ಶಿಯಾಗಿ ಆದೆಪ್ಪ
ಅವರನ್ನುಡೆಪ್ಟೆಷನ್‌ಮೇರೆಗೆನಿಯೋಜಿಸಲಾಗಿದೆ. ಕಳೆದ ಎರಡು ವರ್ಷಗಳ ಹಿಂದೆ ಪಿಡಿಒ ಮೆಹಬೂಬ್ ಪಾಷಾ ವರ್ಗಾವಣೆಯಾದ ನಂತರ
ಆ ಜಾಗಕ್ಕೆ ಪಿಡಿಒ ಆಗಿ ಮಲ್ಲೇಶ್ ಅವರನ್ನು ನೇಮಿಸಲಾಗಿತ್ತು. ಇವರನ್ನು ನೇಮಿಸಿದ 5-6 ತಿಂಗಳ ಒಳಗಾಗಿ ಕನ್ನಮಂಗಲ ಗ್ರಾಪಂಗೆ
ವರ್ಗಾಯಿಸಿ ಆ ಜಾಗಕ್ಕೆ ಕುಂದಾಣ ಪಿಡಿಒ ಆದರ್ಶಕುಮಾರ್ ಅವರನ್ನು ನೇಮಿಸಿದೆ.
ಮತ್ತೆ 2 ತಿಂಗಳಲ್ಲಿ ಪಿಡಿಒ ಆದರ್ಶ್ ಕುಮಾರ್‌ರನ್ನು ಕನ್ನಮಂಗಲ ಗ್ರಾಪಂಗೆ ನಿಯೋಜಿಸಿದ್ದಾರೆ. ಮತ್ತೆ ಕೊಯಿರಾ ಗ್ರಾಪಂಗೆ ಪಿಡಿಒ ಆಗಿ ಮಲ್ಲೇಶ್ ರನ್ನು ನೇಮಿಸಲಾಗಿದೆ. ಈ ರೀತಿ ವರ್ಗಾವಣೆ ಮಾಡುತ್ತಿದ್ದರೆ ಗ್ರಾಮಗಳ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.
ಗ್ರಾಪಂಗಳ ಅಭಿವೃದ್ಧಿಯಾಗಲು ಪಿಡಿಒ ಕಾರ್ಯದರ್ಶಿ ಕಡ್ಡಾಯವಾಗಿ 2 ವರ್ಷಗಳಕಾಲ ಪಂಚಾಯಿತಿ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸಬೇಕು. ಆದರೆ
ಎರಡು ತಿಂಗಳಿಗೆ ಪಿಡಿಒ ಕಾರ್ಯದರ್ಶಿಗಳ ವರ್ಗಾವಣೆ ಹಾಗೂ ಡೆಪ್ಟೆಷನ್ ಮಾಡಿದರೆ ಗ್ರಾಮಗಳ ಅಭಿವೃದ್ಧಿ ಕಾಣಲು ಸಾಧ್ಯವೇ?
-ವಿ.ರಮ್ಯಾ ಶ್ರೀನಿವಾಸ್,
ಕೊಯಿರಾ ಗ್ರಾಪಂ ಅಧ್ಯಕ್ಷೆ
ಪಿಡಿಒ ಸಮಸ್ಯೆಯನ್ನು ಬಗೆಹರಿಸುತ್ತೇವೆ. ಮಲ್ಲೇಶ್ ಅವರು ರಜೆಯಲ್ಲಿ ಇದ್ದಾರೆ.ಯಾವುದೇ ಗ್ರಾಪಂನಲ್ಲಿ ಸಮಸ್ಯೆ ಎದುರಾದರೆ ತಕ್ಷಣ ಸಮಸ್ಯೆ
ಪರಿಹಾರಕ್ಕೆ ಆದ್ಯತೆ ನೀಡಲಾಗುತ್ತದೆ.
-ಎಚ್.ಡಿ.ವಸಂತಕುಮಾರ್, ತಾಪಂ ಇಒ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.