ಸಾಕಾನೆ ಹಿಂಡು ನೋಡಿ ಬೆದರಿದ ಜನತೆ
Team Udayavani, Jun 7, 2018, 1:03 PM IST
ಆನೇಕಲ್: ಬನ್ನೇರುಘಟ್ಟದ ಜೈವಿಕ ಉದ್ಯಾನವನದ 8 ಸಾಕಾನೆಗಳ ತಂಡ ಬಾಲಾಜಿ ಕಲ್ಯಾಣ ಮಂಟಪದ ಬಳಿಯ ಬಡಾವಣೆಯಲ್ಲಿ ಬಾರ್ ಮುಂದೆ ಪ್ರತ್ಯಕ್ಷವಾಗಿ ಅಕ್ಕ ಪಕ್ಕದಲ್ಲಿದ್ದ ಬಾಳೆ, ಒಣ ಹುಲ್ಲು ತಿಂದು ಅಪಾರ ನಷ್ಟ ಮಾಡಿವೆ.
ಬನ್ನೇರುಘಟ್ಟ ಕಗ್ಗಲಿಪುರ ರಸ್ತೆಯಲ್ಲಿನ ಜನರು ವಾಕಿಂಗ್ ಮಾಡಲು ಬಾಲಾಜಿ ಕಲ್ಯಾಣ ಮಂಟಪದ ಬಡಾವಣೆಯ ರಸ್ತೆಯಲ್ಲಿ ಹೋಗುತ್ತಿದ್ದಂತೆ 8 ಆನೆಗಳ ತಂಡ ಕಂಡು ಕೆಲವರು ದಿಕ್ಕಾಪಾಲಗಿ ಓಡಿದ್ದರು. ಸುದ್ದಿ ತಿಳಿದು ಸ್ಥಳೀಯರು ಗುಂಪು ಸೇರಿ ಆನೆಗಳ ಕಾಲಿಗೆ ಕಬ್ಬಣದ ಸರಪಳಿ ಇರುವುದನ್ನು ಕಂಡು ಪಾರ್ಕಿನ ಆನೆಗಳು ಎಂದು ಸಮಾಧಾನ ದಿಂದ ಹತ್ತಿರ ಬಂದು ಮೊಬೈಲ್‌ಗಳಲ್ಲಿ ಪೋಟೋ ತೆಗೆದುಕೊಂಡರು ಇನ್ನು ಕೆಲವರು ಸಮೀಪಕ್ಕೆ ಹೋಗಿ ಸೆಲ್ಪಿ ತೆಗೆದು ಕೊಂಡು ಖುಷಿಪಟ್ಟರೆ, ಕೆಲವರು ಫೇಸ್‌ಬುಕ್ ಲೈವ್ ಸಹ ಬಿಟ್ಟು ಎಲ್ಲರೂ ನೋಡಲು ಅವಕಾಶ ಕಲ್ಪಿಸಿದರು.
ಇನ್ನೊಂದಷ್ಟು ಮಂದಿ ಹೊಸದಾಗಿ ಬಾರ್ ಆಗಿದ್ದು ಅದನ್ನು ನೋಡಲು ಆನೆಗಳು ಬಂದಿವೆ ಎಂದು ತಮಗೆ ತೋಚಿದಂತೆ ಮಾತುಗಳನ್ನು ಆಡುತ್ತ ಹಾಸ್ಯ ಚಟಾಕಿ ಹಾರಿಸಿ ಕುಣಿದಾಡಿದರು. ಸುದ್ದಿ ಹರಡುತ್ತಿದ್ದಂತೆ ಜನ ಸೇರುತ್ತಿದ್ದಂತೆ ಆನೆಗಳು ಬೆಟ್ಟದ ದಾರಿ ಹಿಡಿದವು, ಪಾರ್ಕಿನ ಸಿಬ್ಬಂದಿಗೂ ಸುದ್ದಿ ತಿಳಿದು ಮಾವುತರ ತಂಡ ಬಂದು ಆನೆಗಳನ್ನು ಉದ್ಯಾನವನಕ್ಕೆ ಕರೆದು ಕೊಂಡು ಹೋದರು.
ಕುತೂಹಲ: ಉದ್ಯಾನವನದ ಆನೆಗಳು ಮನೆಗಳ ಹತ್ತಿರ ಬಂದಿದ್ದು ಇದೇ ಮೊದಲು, ಹತ್ತಾರು ವರ್ಷಗಳ ಹಿಂದೆ ಬಡಾವಣೆ ಇದ್ದ ಜಾಗದಲ್ಲಿ ಹೊಲ ತೋಟಗಳಿತ್ತು ಆಗ ಕಾಡಾನೆಗಳು, ಸಾಕಾನೆಗಳು ಬಂದು ಹೋಗುತ್ತಿದ್ದವು. ಆದರೆ
ಸದ್ಯ ಹೊಲ ತೋಟಗಳು ಮಾಯವಾಗಿ ಮನೆಗಳು ತಲೆ ಎತ್ತಿವೆ. ಅಂಗಡಿಗಳು, ಅಷ್ಟೇ ಅಲ್ಲದೆ ಬಾರ್ ಸಹ ಆರಂಭವಾಗಿದೆ ಇಂತಹ ಜಾಗದಲ್ಲಿ ಆನೆಗಳು ಬಂದಿದ್ದು , ಇಳಿಜಾರಿನ ಬೆಟ್ಟ ಇಳಿದು ಬಂದಿದ್ದು ಮಾತ್ರ ತೀವ್ರ ಕುತೂಹಲ ಕೆರಳಿಸಿತ್ತು.
ರದ್ಧಾಂತ: ಉದ್ಯಾನವನದ ಆನೆಗಳು ಕಳೆದ ಮೂರು ನಾಲ್ಕು ದಿನಗಳ ಹಿಂದೆಯೂ ಬೆಟ್ಟದ ಮೇಲಿನ ಶ್ರೀಲಕ್ಷ್ಮೀನರಸಿಂಹ ದೇವಾಲಯದ ಮುಂಭಾಗದಲ್ಲಿ ಭಕ್ತರ ಅನುಕೂಲಕ್ಕೆ ವ್ಯವಸ್ಥೆ ಮಾಡಿದ್ದ ನೀರಿನ ಟ್ಯಾಂಕ್, ನಲ್ಲಿ, ಪೈಪ್‌ಗಳನ್ನು ಮುರಿದು ಹಾಕಿ ರದ್ದಾಂತ ಮಾಡಿದ್ದವು. ಆ ಘಟನೆ ಮರೆಯುವ ಮುನ್ನವೇ ಬೆಟ್ಟ ಇಳಿದು ಮನೆಗಳ ಬಳಿ ಬಂದು ಮತ್ತಷ್ಟು ಆತಂಕ ಸೃಷ್ಟಿಸಿವೆ.
ಆಗ್ರಹ: ಉದ್ಯಾನವನದ ಸಾಕಾನೆಗಳು ದೇವಾಲಯದ ಪೈಪ್ ಗಳನ್ನು ಹಾಳುಮಾಡಿದೆ, ಗುರುವಾರ ಸಹ ಒಣಹುಲ್ಲಿನ ಮೆದೆ, ಬಾಳೆ ಗಿಡಗಳನ್ನು ತಿಂದು , ತುಳಿದು ಹಾಕಿದೆ. ಹೀಗೆ 8 ಆನೆಗಳು ಒಮ್ಮೆ ಬಂದರೆ ಎಷ್ಟು ಫಜೀತಿ ಮಾಡಿ ಹೋಗುತ್ತವೆ. ಪಾರ್ಕಿನ ಅಧಿಕಾರಿಗಳು ಆನೆಗಳನ್ನು ತಮ್ಮ ವ್ಯಾಪ್ತಿಯಲ್ಲಿ ಇರುವಂತೆ ವ್ಯವಸ್ಥೆ ಮಾಡಬೇಕು ಇಲ್ಲವಾದರೆ ಪಾರ್ಕ್ ಮುಂದೆ ತೀವ್ರ ಪತ್ರಿಭಟನೆ ಮಾಡ ಬೇಕಾಗುತ್ತದೆ ಎಂದು ಬನ್ನೇರುಘಟ್ಟದ ಶ್ರೀ ಚಂಪಕಧಾಮಸ್ವಾಮಿ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಎ.ಸಂಪಂಗಿರಾಮಯ್ಯ ಎಚ್ಚರಿಕೆ ನೀಡಿದರು.
ಆನೆ ಬಂದಿದ್ದು ಹೇಗೆ?: ಬನ್ನೇರುಘಟ್ಟ ಸುತ್ತ ಮುತ್ತಲ ಕೆಲ ಹಳ್ಳಿಗಳಲ್ಲಿ ಕಾಡಾನೆಗಳು ಬಂದು ಹೋಗುವುದು ಸಾಮಾನ್ಯ ಸಂಗತಿ ಆದರೆ ಸಾಕಾನೆಗಳು ಬಂದು ಫಜಿತಿ ಮಾಡುವುದು ಇದೇ ಮೊದಲು. ಸಹಜವಾಗಿ ಉದ್ಯಾನದಲ್ಲಿನ ಸಾಕಾನೆಗಳನ್ನು ರಾತ್ರಿ ವೇಳೆ ಕಾಡಿಗೆ ಬಿಡುವುದು ಮುಂಜಾನೆ ಆನೆ ಶಿಬಿರಕ್ಕೆ ತರೆದು ತರುವುದು ವಾಡಿಕೆ. ರಾತ್ರಿ ವೇಳೆ ಕಾಡಿನಲ್ಲಿ ಸುತ್ತಾಡುವ ಆನೆಗಳು ಹೀಗೆ ಒಂದೊಂದು ಸಾರಿ ಹಳ್ಳಿಗಳತ್ತ ಬಂದು ರದ್ಧಾಂತ ಸೃಷ್ಟಿಸುತ್ತವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
ಹೊಸ ವರ್ಷಾಚರಣೆಗೆ ಡ್ರಗ್ಸ್ ಪಾರ್ಟಿ: ಪೊಲೀಸ್ ನಿಗಾ
Mandya:ಹಲವು ರೋಗ ನಿವಾರಕ ವೈದ್ಯನಾಥೇಶ್ವರ ಸ್ವಾಮಿ-ಚರ್ಮದ ರೋಗಕ್ಕೆ ಹುತ್ತದ ಮಣ್ಣು ರಾಮಬಾಣ
C.T. Ravi ಅವರನ್ನು ತತ್ ಕ್ಷಣ ಬಿಡುಗಡೆ ಮಾಡಿ: ಹೈಕೋರ್ಟ್ ಆದೇಶ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.