ಆಲೂಗಡ್ಡೆ ಬೆಲೆ ದಿಢೀರ್ ಕುಸಿತ
Team Udayavani, Apr 16, 2023, 1:52 PM IST
ಹೊಸಕೋಟೆ: ಕೆಲವು ತಿಂಗಳಗಳ ಹಿಂದೆ ಆಲೂಗಡ್ಡೆಗೆ 30 ರಿಂದ 40 ರೂಪಾಯಿ ದರ ಇದ್ದು, ದಿಢೀರನೆ ಕುಸಿತವಾಗಿದೆ. ಕೆಜಿಗೆ ಮಾರುಕಟ್ಟೆಯಲ್ಲಿ 5ರಿಂದ 6ರೂ ಮಾತ್ರ ಬೆಲೆಯಿದೆ. ಇದರಿಂದ ರೈತ ಬಂಪರ್ ಬೆಳೆ ಬೆಳೆದರು ಕಷ್ಟಪಡುವ ಸ್ಥಿತಿ ತಲುಪಿದ್ದಾರೆ.
ಹೊಸಕೋಟೆ ತಾಲೂಕಿನಾದ್ಯಾಂತ ಆಲೂಗಡ್ಡೆ ಬೆಳೆ ಬೆಳೆದಿದ್ದಾರೆ. ನಂದಗುಡಿ ಹೋಬಳಿಯ ತಾವರೆಕೆರೆ, ಯಳಚಹಳ್ಳಿ, ಕಾಳಪ್ಪನಹಳ್ಳಿ, ಮಂಚಪ್ಪನಹಳ್ಳಿ, ಕಾರಹಳ್ಳಿ, ನೆಲ ವಾಗಿಲು ಹೀಗೆ ಅನೇಕ ಗ್ರಾಮಗಳಲ್ಲಿ ಕಳೆದ ಭಾರಿಗಿಂತಲೂ ಉತ್ತಮ ಬೆಳೆ ಬೆಳೆದಿದ್ದು. ಕೆಲವು ತಿಂಗಳಗಳ ಹಿಂದೆ ಅಕಾಲಿಕ ಮಳೆ ಬಿದ್ದು, ಆಲಿಕಲ್ಲು ಬಿದ್ದ ಪರಿಣಾಮ ಇದರಿಂದ ಆಲೂಗಡ್ಡೆ ಕೆಟ್ಟು ರೈತರ ಕೈಗೆ ಅರ್ಧ ಬೆಳೆ ಸಿಕ್ಕಿದೆ. ಬೇಡಿಕೆ ಕುಸಿತದಿಂದ ಬಂಡವಾಳ ಕೂಲಿಯು ಬರದ ಸ್ಥಿತಿಯಿಂದ ರೈತರು ಕಂಗಲಾಗಿದ್ದಾರೆ.
ಪ್ರತಿನಿತ್ಯ ಮಹಿಳೆಗೆ 400ರೂ ಪುರುಷರಿಗೆ 700ರೂ ಗಡ್ಡೆ ಹಗೆಯಲು ಮತ್ತು ಕೀಳಲು ಕೂಲಿ ಕೊಡಬೇಕಾಗುತ್ತದೆ. ಸುಮಾರು 2 ಎಕರೆ ಜಮೀನುನಲ್ಲಿ ಬೆಳೆದ ಬೆಳೆ ಕೇವಲ 50 ಸಾವಿರ ರೂಗಳಿಗೆ ಮಾರಾಟವಾಗಿದೆ. ಇದಕ್ಕೆ ತಗಲುವ ಖರ್ಚು 3 ಲಕ್ಷ ಸಾಲ ಮಾಡಿ ಹಾಕಿದ ಬಂಡವಾಳ ಪುನಃ ತಿರುಗಿ ಬಂದಿಲ್ಲ.
ತಿಂಗಳುಗಟ್ಟಲೇ ಶ್ರಮ ಮಣ್ಣು ಪಾಲು: ತಾಲೂಕಿನದ್ಯಾಂತ ಸುಮಾರು ಹೆಕ್ಟರ್ ಬೆಳೆ ಬೆಳೆದಿದ್ದು, ಲಕ್ಷಾಂತರ ರೂ ಖರ್ಚು ಮಾಡಿರುವ ಜೊತೆಗೆ ತಿಂಗಳು ಗಟ್ಟಲೇ ಶ್ರಮ ಮಣ್ಣು ಪಾಲಾಗುವ ಪರಿಸ್ಥಿತಿ ಎದುರಾಗಿದೆ. ಈ ಭಾರಿ ಹೆಚ್ಚಿನ ದರ ಸಿಗುವ ನಿರೀಕ್ಷೆಯಲ್ಲಿದ್ದ ರೈತರ ಲೆಕ್ಕಚಾರ ತಲೆ ಕೆಳಗಾಗಿದ್ದು. ತಲೆ ಮೇಲೆ ಕೈ ಹೊತ್ತು ಕೂರುವ ಪರಿಸ್ಥಿತಿ ಎದುರಾಗಿದೆ.
ಸಮರ್ಪಕ ಬೆಲೆ ಸಿಗುತ್ತಿಲ್ಲ: ಆಲೂಗಡ್ಡೆ ಹಗಿದು ರಾಶಿಗಳು ಮಾಡಲಾಗಿದೆ. ಇವುಗಳನ್ನ ಮಾರುಕಟ್ಟೆಗೆ ಸಾಗಿಸಿದರೆ ಅಲ್ಲಿ ಸಮರ್ಪಕ ಬೆಲೆ ಸಿಗುತ್ತಿಲ್ಲ. ಅಡಕತ್ತರಿಯಲ್ಲಿ ಸಿಲುಕಿರುವ ರೈತರು ಕಂಗಲಾಗಿದ್ದಾರೆ. ತಾಲೂಕಿನಲ್ಲಿ ಹಲವು ಕಡೆ ಆಲೂಗಡ್ಡೆ ಭರ್ಜರಿ ಫಸಲು ಬಂದಿದೆ. ಆದರೆ, ಆಲೂಗಡ್ಡೆ ಖರೀದಿಸುವವರೆ ಇಲ್ಲದಂತಾಗಿದೆ.
ಜಮೀನಿನಲ್ಲೇ ಕೊಳೆಯುತ್ತಿರುವ ಆಲೂ ಗಡ್ಡೆ: ಬಹುತೇಕ ಕಡೆ ಬಿಸಿಲು ಹೆಚ್ಚಾದ ಕಾರಣ ಜಮೀನಿನಲ್ಲೇ ಕೊಳೆಯುವಂತಾಗಿದೆ. ಬಿತ್ತನೆಗೆ ರಸಗೊಬ್ಬರಕ್ಕೆ ಹಾಕಿದ ಬಂಡವಾಳವು ವಾಪಸ್ ಬರುವ ಲಕ್ಷಣ ಕಾಣದ ಕಾರಣ ರೈತರು ಕಂಗಲಾಗಿದ್ದಾರೆ. ಒಂದು ಮೂಟೆ ಬಿತ್ತನೆ ಆಲೂಗಡ್ಡೆಗೆ 1600 ರೂವರೆಗೆ ಖರ್ಚು ಮಾಡಿದ್ದ ರೈತರು ಈಗ ಒಂದು ಮೂಟೆಗೆ ಕೇವಲ 250 ರಿಂದ 300 ರೂಪಾಯಿಗೆ ಮಾರುವ ಅನಿವಾರ್ಯತೆ ಎದುರಾಗಿದೆ.
ಪರಿಶ್ರಮಕ್ಕೂ ಸಿಗದ ಬಂಡವಾಳ: ಆಲೂಗಡ್ಡೆ ಬೆಲೆ ಕುಸಿತದಿಂದ ಕುಟುಂಬದವರೆಲ್ಲ ಬೆಳಗ್ಗೆ ಮಾಡಿದ ಪರಿಶ್ರಮಕ್ಕೂ ಸಿಗದೇ ಬಂಡ ವಾಳಕ್ಕೂ ಕುತ್ತು ಬಂದಿದೆ. ನಮ್ಮ ಮುಂದೆಯೆ ಆಲೂಗಡ್ಡೆ ಕೆಡುತ್ತಿರುವುದನ್ನು ನೋಡಲು ಸಾಧ್ಯವಾಗುತ್ತಿಲ್ಲ. ನಾವು ಬೆಳೆದ ಬೆಳೆಗೆ ತಕ್ಕ ಬೆಲೆ ಇಲ್ಲದೆ ಮಧ್ಯೆವರ್ತಿಗಳಿಗೆ ಹಾಗೂ ಮಾರಾಟಗಾರರಿಗಷ್ಟೇ ಲಾಭ. ಬೆಳೆ ಹೀಗೆ ಕೈ ಕೊಟ್ಟರೆ ನಾವು ಮಾಡಿದ ಸಾಲ ತೀರಿಸಲು ಆಗದೇ ಕಷ್ಟ ಅನುಭಸಬೇಕಾಗುತ್ತದೆ ಎಂದು ರೈತ ತಾವರೆಕೆರೆ ರೈತ ರವಿಕುಮಾರ್ ತಿಳಿಸಿದರು.
ಸ್ಥಳೀಯ ಮಾರುಕಟ್ಟೆ ಸಿಗದ ಬೆಲೆ: ಹೊರ ರಾಜ್ಯಗಳಾದ ಮಧ್ಯಪ್ರದೇಶ, ಉತ್ತರ ಪ್ರದೇಶ ಹಲವು ಜಿಲ್ಲೆಗಳಿಂದ ಮಾರುಕಟ್ಟೆಗೆ ಹೆಚ್ಚಿನ ಆಲೂಗಡ್ಡೆ ಬರುತ್ತಿದ್ದು, ಸ್ಥಳೀಯ ಮಾರುಕಟ್ಟೆಗಳಲ್ಲಿ ಬೆಲೆಯಿಲ್ಲದಂತಾಗಿದ್ದು. ಆದ್ದರಿಂದ ಸ್ಥಳೀಯ ರೈತರಿಗೆ ಸರ್ಕಾರದಿಂದ ಶೈತ್ಯಾಗಾರ ನಿರ್ಮಿಸಿ ಆಲೂಗಡ್ಡೆ ಇಡಲು ಅನುಕೂಲ ಮಾಡಿದರೆ ರೈತ ಬೆಳೆದ ಬೆಳೆ ಸುರಕ್ಷಿತ ವಾಗಿದ್ದು. ದರ ಸಿಗುವವರೆಗೂ ಇಡಲು ಅನುಕೂಲವಾಗುತ್ತದೆ ಎಂದು ನಂದಗುಡಿ ಹೋಬಳಿಯ ಸಹಾಯಕ ತೋಟಗಾರಿಕೆ ಅಧಿಕಾರಿ ಜೆ.ಎನ್. ಸುನೀಲ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.