![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jun 19, 2022, 2:19 PM IST
ನೆಲಮಂಗಲ: ವಿದ್ಯುತ್ ಸಮಸ್ಯೆಗಳನ್ನು ಸಮಗ್ರವಾಗಿ ಬಗೆಹರಿಸಲು ಅಧಿಕಾರಿಗಳು ಮತ್ತು ಗ್ರಾಹಕರು, ರೈತರು ಒಂದೇ ವೇದಿಕೆಯಲ್ಲಿ ಮುಕ್ತವಾಗಿ ಚರ್ಚಿಸಿ ಪರಿಹಾರ ಕಂಡಕೊಳ್ಳಲು ವಿದ್ಯುತ್ ಅದಾಲತ್ ಸಹಕಾರಿಯಾಗಿದೆ ಎಂದು ಬೆಸ್ಕಾಂ ಇಲಾಖೆಯ ಬೆಂಗಳೂರು ವೃತ್ತದ ಅಧೀಕ್ಷಕ ಎಂಜಿನಿಯರ್ ವಿ.ಕೃಷ್ಣಪ್ರಸಾದ್ ಅಭಿಪ್ರಾಯಪಟ್ಟರು.
ತಾಲೂಕಿನ ತಿಮ್ಮಸಂದ್ರ ಗ್ರಾಮದಲ್ಲಿ ಬದ್ಧತೆಯ ಕಾರ್ಯ ಭರವಸೆಯ ಬೆಳಕು ಘೋಷ ವಾಕ್ಯ ದೊಂದಿಗೆ ಗ್ರಾಮೀಣ ಜನರ ವಿದ್ಯುತ್ ಸಮಸ್ಯೆ ಆಲಿಸಲು, ಪ್ರತಿ ತಿಂಗಳು ಮೂರನೇ ಶನಿವಾರ ನಡೆಸುವ ವಿದ್ಯುತ್ ಅದಾಲತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಉಪವಿಭಾಗವಾದ ಬೆಂಗಳೂರು ವೃತ್ತದ ಕೊನೆಯ ಗ್ರಾಮದ ಜನರ ವಿದ್ಯುತ್ ಸಮಸ್ಯೆಗಳ ಪರಿಹಾರಕ್ಕೆ ಇಂಧನ ಇಲಾಖೆ ಮತ್ತು ಸಚಿವ ಸುನೀಲ್ ಕುಮಾರ್ ಮಾರ್ಗದರ್ಶನದಲ್ಲಿ ಇಂತಹ ವಿದ್ಯುತ್ ಅದಾಲತ್ ನಡೆಸಲಾಗುತ್ತಿದೆ. ಸ್ಥಳದಲ್ಲಿ ಹಲವಾರು ಮನವಿ ಸ್ವೀಕರಿಸಿ ಸ್ಪಂದಿಸಿದ್ದೇವೆ ಎಂದರು.
ಸಭೆಯಲ್ಲಿ ಮುಖ್ಯ ಚರ್ಚೆ: ಗ್ರಾಪಂ ಮಾಜಿ ಸದಸ್ಯ ರವಿಕುಮಾರ್ ಮಾತನಾಡಿ, ಗ್ರಾಮದಲ್ಲಿ ಸುಮಾರು 08 ವಿದ್ಯುತ್ ಕಂಬ, ವಿದ್ಯುತ್ ಪರಿವರ್ತಕ ಹಾಗೂ ಗ್ರಾಮದ ಹೊರವಲಯ ನವಗ್ರಾಮಕ್ಕೆ ಪ್ರತ್ಯೇಕ ವಿದ್ಯುತ್ ಕಂಬ ಮತ್ತು ಸಂಪರ್ಕ ಕಲ್ಪಿಸಬೇಕೆಂದು ಒತ್ತಾಯಿಸಿದರು. ಸ್ಥಳದಲ್ಲೇ ಅಧಿಕಾರಿಗಳಿ ಕ್ರಮ ವಹಿಸುವಂತೆ ಕೃಷ್ಣಪ್ರಸಾದ್ ತಿಳಿಸಿದರು.
ತಿಮ್ಮಸಂದ್ರ ವಾಡ್ ìನ ಗ್ರಾಪಂ ಸದಸ್ಯ ರಂಗಸ್ವಾಮಿ ಮಾತನಾಡಿ, ನಮ್ಮ ಅರೇಬೊಮ್ಮನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಬೆಟ್ಟಗಳಲ್ಲಿ ಕಾಡುಪ್ರಾಣಿಗಳಾದ ಚಿರತೆ, ಕಾಡು ಹಂದಿ, ಸೀಳು ನಾಯಿ ಹಾವಳಿ ಹೆಚ್ಚು, ಲೈನ್‌ಮ್ಯಾನ್‌ಗಳು ರಾತ್ರಿವೇಳೆಯಲ್ಲಿ ಕೆಲಸ ನಿರ್ವಹಿ ಸಲು ರಕ್ಷಣಾ ಸಲಕರಣೆಗಳಾದ ಹಣೆಬ್ಯಾಟರಿ, ರೈನ್‌ಕೋಟ್, ಪ್ರತ್ಯೇಕ ವಾಹನ ನೀಡಲು ಒತ್ತಾಯಿಸಿದರು.
ಹಾಲಿನ ಡೇರಿ ಅಧ್ಯಕ್ಷ ಕೃಷ್ಣಪ್ಪ ಮತ್ತು ಸಿಇಒ ಶ್ರೀನಿವಾಸ ಮೂರ್ತಿ, ಡೇರಿ ಮೇಲೆ ಹಾದುಹೋಗಿರುವ ತಂತಿಗಳಿಗೆ ಸೂಕ್ತ ಪ್ಲಾಸ್ಟಿಕ್ ಪೈಪ್ ಮತ್ತು ಗ್ರಾಮದ ಏಳು ಮನೆಗಳಿಗೆ ವಿದ್ಯುತ್ ಸಂಪರ್ಕ, ರೈತರ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕಕ್ಕೆ ಒತ್ತಾಯಿಸಿದರು.
ವಿದ್ಯುತ್ ಉಪಕೇಂದ್ರ: ನಮ್ಮ ಕೊನೆಯ ಗ್ರಾಮಗಳಿಗೆ ಡಾಬಸ್ ಪೇಟೆ ಶಾಖೆಯಿಂದ ಸುಮಾರು 10ಕ್ಕೂ ಅಧಿಕ ಕಿ.ಮೀ. ದೂರವಿರುವದರಿಂದ ಮಳೆ, ಗಾಳಿಯಾದರೂ ವಿದ್ಯುತ್ ವ್ಯತ್ಯಯವಾಗುತ್ತದೆ. ಈ ಭಾಗದಲ್ಲಿ ಶಾಶ್ವತ ವಿದ್ಯುತ್ ಪರಿಹಾರಕ್ಕೆ ವಿದ್ಯುತ್ ಉಪಕೇಂದ್ರ ಮಹಿಮಾಪುರದಲ್ಲಿ ನಿರ್ಮಾಣ ಮಾಡುವಂತೆ, ಲೈನ್‌ಮ್ಯಾನ್ ಸಿಬ್ಬಂದಿ ಹಾಗೂ ರೈತರ ಪಂಪ್ ಸೆಟ್‌ಗೆ ಹಗಲಿನ ವೇಳೆ ವಿದ್ಯುತ್ ಹಾಗೂ ಪಂಪ್ ಸೆಟ್ ಅಕ್ರಮಸಕ್ರಮ ಯೋಜನೆಗೆ ಸಾನ್ ಸಂಘದ ತಾಲೂಕು ಅಧ್ಯಕ್ಷ ದೊಡ್ಡೇರಿ ಚಂದ್ರಮೋಹನ್ ಸಭೆಗೆ ತಿಳಿಸಿದರು.
ಎಇಇ ರಮೇಶ್, ಜೆ.ಇ ಹನುಮಂತರಾಜು, ತಿಮ್ಮಯ್ಯ, ಎಇ ಸುನೀಲ್‌ಕುಮಾರ್, ಸಿಬ್ಬಂದಿ ಗೋವಿಂದರಾಜು, ಮಂಜುನಾಥ್, ಶಿವು, ಗುತ್ತಿಗೆದಾರರಾದ ಕಾಸರಘಟ್ಟ ರಾಜಣ್ಣ, ಹಲ್ಕೂರು ಸಿದ್ದಗಂಗಯ್ಯ, ಗ್ರಾಪಂ ಸದಸ್ಯ ರಂಗಸ್ವಾಮಿ ತಿಮ್ಮಸಂದ್ರ ಗ್ರಾಮದ ಹನುಮಂತರಾಜು, ರವಿಕುಮಾರ್, ಸಂಪತ್, ಸಿದ್ದಯ್ಯ, ನಿವೃತ್ತ ಶಿಕ್ಷಕ ಚಿಕ್ಕಣ್ಣ, ದೊಡ್ಡೇರಿ ಡೇರಿ ಅಧ್ಯಕ್ಷ ಸೋಮಶೇಖರ್, ಚಂದ್ರಪ್ಪ ಹಾಗೂ ಗ್ರಾಮಸ್ಥರು ಇದ್ದರು.
You seem to have an Ad Blocker on.
To continue reading, please turn it off or whitelist Udayavani.