ರೋಗಗಳಿಗೆ ಆಹ್ವಾನ ನೀಡುತ್ತಿರುವ ಪ್ರಶಾಂತ ನಗರ
Team Udayavani, Jul 31, 2023, 2:47 PM IST
ದೇವನಹಳ್ಳಿ: ಸರ್ಕಾರ ಸ್ವಚ್ಛತೆಗೆ ಕೋಟ್ಯಂತರ ರೂ ವ್ಯಯಿಸುತ್ತಿದ್ದರೂ ಸಹ ಪಟ್ಟಣದ ಪಟ್ಟಣದ ಪ್ರಶಾಂತ ನಗರದ ಜೆಡಿಎಸ್ ಪಕ್ಕದ ಖಾಲಿ ಜಾಗದಲ್ಲಿ ಕಸ ಮತ್ತು ಗಿಡಗಂಟೆಗಳು ಬೆಳೆದಿರುವುದರಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ಸಾರ್ವಜನಿಕರು ಇದ್ದಾರೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸ್ವತ್ಛನಗರ ಸ್ವಚ್ಛಗ್ರಾಮ ಕೇವಲ ಒಂದು ಅಥವಾ ಎರಡು ದಿವಸ ಸ್ವಚ್ಛತೆಗೆ ಫೋಟೋ ತೆಗೆಸಿ ಹೋಗುತ್ತಾರೆ. ಪ್ರತಿ ದಿನವೂ ಸ್ವತ್ಛತೆಯಿಂದ ಕೂಡಿರಬೇಕು ಎಂದು ಕೇವಲ ಭಾಷಣ ಮತ್ತು ಹೇಳಿಕೆ ಸೀಮಿತವಾಗಬಾರದು ಎಂದು ಜನಸಾಮಾನ್ಯರು ಆಗ್ರಹಿಸುತ್ತಾರೆ.
ಜೆಡಿಎಸ್ ಕಚೇರಿ, ಸುತ್ತಮುತ್ತಲೂ ವಾಸದ ಮನೆಗಳು, ಅಂಗಡಿ ಮಳಿಗೆಗಳು, ಆಸ್ಪತ್ರೆ ಇರುವುದರಿಂದ ದ್ವಿಚಕ್ರ ವಾಹನ ಸವಾರರು ಹಾಗೂ ಇತರೆ ವಾಹನಗಳು ಓಡಾಡುತ್ತವೆ. ಕಸದ ಪ್ರದೇಶಗಳಿಗೆ ನಾಯಿಗಳು ಹೋಗುವುದರಿಂದ ರಸ್ತೆ ಪಕ್ಕ ದಲ್ಲಿ ಇರುವುದರಿಂದ ನಾಯಿಗಳ ದಂಡು ಕಿತ್ತಾಡಿಕೊಂಡು ರಸ್ತೆಗೆ ಬರುವುದರಿಂದ ವಾಹನ ಸವಾರರು ಬಿದ್ದು, ಆಸ್ಪತ್ರೆ ಸೇರುವ ಪರಿಸ್ಥಿತಿ ನಿರ್ಮಾಣ ವಾಗಿದೆ. ಇನ್ನಾದರೂ ಪುರಸಭಾ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಇಲ್ಲಿ ಕಸ ಹಾಕುವವರ ವಿರುದ್ಧ ದಂಡ ಹಾಕಬೇಕು. ಬರುವ ಕಸದ ವಾಹನಕ್ಕೆ ನೀಡುವಂತಾಗ ಬೇಕು. ಇಲ್ಲದಿದ್ದರೆ ಪರಿಸರ ಹಾಳಾಗುತ್ತದೆ.
ಸ್ವಚ್ಛತೆಗೆ ಮೊದಲ ಪ್ರಾಮುಖ್ಯತೆ ನೀಡಿ: ಸ್ವಚ್ಛತೆಗೆ ಮೊದಲ ಪ್ರಾಮುಖ್ಯತೆ ನೀಡಿ ಎಂದು ಹೇಳುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ರೀತಿ ಕಸ ಹಾಕುವವರಿಗೆ ದಂಡದ ಬಿಸಿ ಮುಟ್ಟಿಸಬೇಕು. ಎಲ್ಲೆಂ ದರಲ್ಲಿ ಕಸ ಹಾಕಬಾರದು ಎಂಬ ಅರಿವು ಮೂಡಿಸುವ ಕಾರ್ಯ ಆಗಬೇಕು. ಪಟ್ಟಣದ ಅಂದಚೆಂದವನ್ನು ಕೆಡಿಸುವಂತಿದೆ. ಎಲ್ಲೇ ಕಸ ಇದ್ದರೂ ಬಹುಪಾಲು ಪ್ಲಾಸ್ಟಿಕ್‌ನದ್ದೇ ಸಮಸ್ಯೆಯಾಗಿದೆ ಎಂದು ಸಾರ್ವ ಜನಿಕರ ಅಭಿಪ್ರಾಯವಾಗಿದೆ.
ಪ್ರತಿ ತಿಂಗಳ ಮತ್ತು 15 ದಿನಕ್ಕೊಮ್ಮೆ ವಾರ್ಡ್‌ನಲ್ಲಿ ಪುರಸಭಾ ಸಿಬ್ಬಂದಿ ಸ್ವಚ್ಛತೆ ಕಾರ್ಯ ನಡೆಯುತ್ತಿದೆ. ಮನೆಮನೆಗೆ ಕಸ ಸಂಗ್ರಹಣೆ ಮಾಡಲು ಪುರಸಭಾ ವಾಹನ ಕಳಿಸಿಕೊಡುತ್ತಿದ್ದೇವೆ. ಆದರೂ ಸಹ ಕೆಲವು ಕಸಗಳನ್ನು ವಾಹನಕ್ಕೆ ಕೊಡದೆ ರಸ್ತೆ ಅಕ್ಕಪಕ್ಕದಲ್ಲಿ ಹಾಕುತ್ತಿರುವುದು ಎಷ್ಟು ಸರಿ ಎನಿಸುತ್ತದೆ? ವಾರ್ಡ್‌ನಲ್ಲಿ ಎಷ್ಟೆ ಸಮಸ್ಯೆ ಇದ್ದರೂ ಸಹ ಆದ್ಯತೆ ನೀಡಿದ್ದೇವೆ. – ಲಕ್ಷ್ಮೀ ಅಂಬರೀಶ್, ಪುರಸಭಾ ಸದಸ್ಯೆ
ಮನೆಯ ಅಕ್ಕಪಕ್ಕಗಳಲ್ಲಿ ಗಿಡಗಂಟೆಗಳು ಹೆಚ್ಚು ಬೆಳೆದಿದೆ. ಮನೆಯ ಮುಂದೆಯೇ ಕಸಗಳನ್ನು ಎಸೆದು ಹೋಗುತ್ತಿದ್ದಾರೆ. ಇದರಿಂದ ದುರ್ವಾಸನೆ ಮತ್ತು ಮನೆಗಳ ಹತ್ತಿರ ಸೊಳ್ಳೆ ಕಾಟದಿಂದ ಇರಲು ಸಾಧ್ಯವಾಗುವುದಿಲ್ಲ. ಕಸದಲ್ಲಿ ಬಹುಪಾಲು ಪ್ಲಾಸ್ಟಿಕ್‌ನದ್ದೇ ಕಾರುಬಾರು ಆಗಿರುವುದರಿಂದ ಸಾಕಷ್ಟು ಸಮಸ್ಯೆ ಎದುರಿ ಸುತ್ತಿದ್ದೇವೆ. ಅಧಿಕಾರಿಗಳು ಇನ್ನಾದರೂ ಕಸ ಹಾಕುವವರ ವಿರುದ್ಧ ಮತ್ತು ಗಿಡಗಂಟೆಗಳನ್ನು ಸ್ವತ್ಛಗೊಳಿಸುವಂತೆ ಆಗಬೇಕು. – ಇಂದಿರಾ, ನಾಗರಿಕರು.
ಕಸ ಎಲ್ಲೆಂದರಲ್ಲಿ ಹಾಕುವುದು ಕಾನೂನುಬಾಹಿರ. ಯಾರೇ ಕಸ ಹಾಕಿದರೂ ಅಂತಹ ವರಿಗೆ ದಂಡ ಹಾಕಲಾಗುತ್ತದೆ. ಕಸದ ವಾಹನಕ್ಕೆ ನಾಗರೀಕರು ಕಸ ನೀಡಬೆಕು. ಅದರಲ್ಲೂ ಹಸಿ ಕಸ ಮತ್ತು ಒಣಕಸವನ್ನು ಬೇರ್ಪಡಿಸಬೇಕು. ಬೆಳೆದಿರುವ ಗಿಡಗಂಟೆಗಳ ಮತ್ತು ಕಸದ ವಿಲೇ ವಾರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರಲ್ಲಿ ಸ್ವತ್ಛತೆ ಬಗ್ಗೆ ಅರಿವು ಮೂಡಿಸಬೇಕು. – ದೊಡ್ಡಮಲವಯ್ಯ, ಪುರಸಭಾ ಮುಖ್ಯಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nelamangala: ಸಾಕು ನಾಯಿ ಸತ್ತಿದ್ದಕ್ಕೆ ಮಾಲಕ ಆತ್ಮಹ*ತ್ಯೆ
Doddaballapur: ಹೊಲದಲ್ಲಿ ಹೂ ಬಿಡಿಸುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ: ಸಾವು
Road Mishap: ಬೈಕ್ ವ್ಹೀಲಿಂಗ್ ಮಾಡುವಾಗ ಕ್ಯಾಂಟರ್‌ಗೆ ಡಿಕ್ಕಿ; ಇಬ್ಬರು ಸಾವು
Tragic: ಮದುವೆ ಹರಕೆ ಹೊತ್ತು ಘಾಟಿ ದೇಗುಲಕ್ಕೆ ಬಂದಿದ್ದ ಯುವತಿ ಸಾವು
Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.