ಕ್ಷಯರೋಗ ಪತ್ತೆಗೆ ಸಿದ್ಧತೆ ಮಾಡಿಕೊಳ್ಳಿ
ಜಿಲ್ಲಾಮಟ್ಟದ ಇಲಾಖೆಗಳ ಸಮನ್ವಯ ಸಮಿತಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಜಗದೀಶ್ ಸೂಚನೆ
Team Udayavani, Nov 26, 2020, 12:35 PM IST
ದೇವನಹಳ್ಳಿ: ಕ್ಷಯರೋಗ ಪತ್ತೆ ಹಚ್ಚುವಿಕೆಗೆಅಗತ್ಯವಿರುವ ಎಲ್ಲಾ ಸಿದ್ಧತೆ ಮಾಡಿಕೊಳ್ಳುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್‌ಕೆ.ನಾಯಕ್ ಸೂಚಿಸಿದರು.
ತಾಲೂಕಿನ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಕ್ರಿಯ ಕ್ಷಯರೋಗ ಪತ್ತೆ ಹಚ್ಚುವ ಆಂದೋಲನದ ಜಿಲ್ಲಾ ಮಟ್ಟದ ಇಲಾಖೆಗಳ ಸಮನ್ವಯ ಸಮಿತಿಯ ಪೂರ್ವಭಾವಿಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದ ಅಂಗವಾಗಿ ಸಕ್ರಿಯ ಕ್ಷಯ ರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನವನ್ನು2020ರ ಡಿ.1ರಿಂದ 31ರವರೆಗೆ ಹಮ್ಮಿಕೊಂಡಿದ್ದು, 2025ರ ವೇಳೆಗೆ ಕ್ಷಯರೋಗವನ್ನು ನಿರ್ಮೂಲನೆ ಮಾಡುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ ಎಂದು ತಿಳಿಸಿದರಲ್ಲದೆ, ವಾರಕ್ಕೆ ಒಂದು ಕಾರ್ಯಕ್ರಮದಂತೆವೇಳಾಪಟ್ಟಿ ತಯಾರಿಸಿ ಸಪ್ತಾಹದಂತೆ ಆಂದೋಲನ ಯಶಸ್ವಿಗೊಳಿಸಿ ಎಂದು ತಿಳಿಸಿದರು.
ಕ್ಷಯರೋಗದ ಲಕ್ಷಣಗಳ ಕುರಿತು ಅರಿವು: ಕಿಶೋರಿ, ಹದಿಹರೆಯದ ಮಕ್ಕಳಿಗೆ ಪೌಷ್ಟಿಕತೆ ಕುರಿತು ಮಾಹಿತಿ ನೀಡುವಾಗ ಕ್ಷಯ ರೋಗದ ಕುರಿತು ಒಂದಷ್ಟು ಮಾಹಿತಿ ನೀಡಿ ಎಂದರಲ್ಲದೆ, ಆನ್‌ಲೈನ್ ತರಗತಿಗಳ ವೇಳೆವಿದ್ಯಾರ್ಥಿಗಳಿಗೆ ಕ್ಷಯರೋಗದ ಲಕ್ಷಣಗಳಕುರಿತು ಅರಿವು ಮೂಡಿಸಿ ಎಂದು ತಿಳಿಸಿದರು. ಪ್ರತಿ ಗ್ರಾಮಗಳಲ್ಲೂ ಧ್ವನಿವರ್ಧಕಗಳನ್ನು ಬಳಸಿ, ಸಕ್ರಿಯ ಕ್ಷಯರೋಗ ಮತ್ತು ಚಿಕಿತ್ಸಾ ಆಂದೋಲನದ ಕುರಿತು ಜಾಗƒತಿ ಮೂಡಿಸಲು ಹಾಗೂ ಸಭೆಗಳಲ್ಲಿ ಕ್ಷಯ ರೋಗದ ಆಂದೋಲನದ ಕುರಿತು ಪ್ರಸ್ತಾಪ ಮಾಡುವಂತೆ ಪಿಡಿಒ, ಗ್ರಾಪಂ ಕಾರ್ಯದರ್ಶಿಗಳಿಗೆ ಸೂಚಿಸಿದರು.
ವಿದ್ಯಾರ್ಥಿಗಳ ಸ್ಕ್ರೀನಿಂಗ್: ನಗರಸಭೆ ಹಾಗೂ ಪುರಸಭೆಯವರು ಪೌರ ಕಾರ್ಮಿಕರು ಹಾಗೂ ಅವರ ಕುಟುಂಬದ ಸದಸ್ಯರಿಗೆ ಕ್ಷಯ ರೋಗ ತಪಾಸಣೆ ಕಡ್ಡಾಯವಾಗಿ ಮಾಡಲುತಿಳಿಸಿದರಲ್ಲದೆ, ಸಮಾಜಕಲ್ಯಾಣಇಲಾಖೆಯ ಹಾಸ್ಟೆಲ್‌ಗಳಲ್ಲಿರುವ ವಿದ್ಯಾರ್ಥಿಗಳ ಸ್ಕ್ರೀನಿಂಗ್ ಮಾಡಲು ತಿಳಿಸಿದರು.
ಚಿಕಿತ್ಸೆಗೆ ಕ್ರಮ ವಹಿಸಿ: ಜಿಲ್ಲೆಯಲ್ಲಿನ ಕ್ವಾರಿಗಳಲ್ಲಿ ಧೂಳು ಮತ್ತು ಪ್ರದೂಷಣೆ ಹೊಂದಿರುವ ವಾತಾವರಣದಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರಲ್ಲಿ ಉಸಿರಾಟದ ಸಮಸ್ಯೆ ಹೆಚ್ಚು ಕಂಡು ಬರುವುದು. ಹಾಗಾಗಿ ಅಂತಹ ಪ್ರದೇಶಗಳನ್ನು ಗುರುತಿಸಿ ಅಲ್ಲಿನ ಕಾರ್ಮಿಕರನ್ನು ಸ್ಕ್ರೀನಿಂಗ್ ಮಾಡಿ, ಕ್ಷಯರೋಗದ ಲಕ್ಷಣಗಳಿದ್ದಲ್ಲಿ, ಚಿಕಿತ್ಸೆಗೆ ಕ್ರಮ ವಹಿಸಿ ಎಂದುಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗೆ ಸೂಚಿಸಿದರು.
ಔಷಧಿ ಅಂಗಡಿಗಳು ಭಾಗಿ: ಜಿಲ್ಲಾ ಕ್ಷಯರೋಗ ನಿಯಂತ್ರಣ ಘಟಕದ ಸಂಚಾಲಕಿ ಶಕೀಲಾ ಮಾತನಾಡಿ, ಒಂದು ತಿಂಗಳುನಡೆಯುವ ಕಾರ್ಯಕ್ರಮ ಇದಾಗಿದ್ದು,9,82,072 ಜನಸಂಖ್ಯೆ ತಲುಪುವ ಗುರಿ ಹೊಂದಿದೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ, ಸಂಘ-ಸಂಸ್ಥೆಗಳನ್ನೊಳಗೊಂಡ 447 ಗುಂಪು ರಚಿಸಲಾಗಿದೆ ಹಾಗೂ ಕ್ಷಯರೋಗದಆಂದೋಲನದಲ್ಲಿ ಎಂವಿಜೆ ಮತ್ತು ಆಕಾಶ್ ಮೆಡಿಕಲ್ ಕಾಲೇಜು, ಖಾಸಗಿ ಔಷಧಿ ಅಂಗಡಿ ಯವರು ಭಾಗವಹಿಸಲಿದ್ದಾರೆ ಎಂದರು.ಜಿಲ್ಲೆಯ ಖಾಸಗಿ ಆಸ್ಪತ್ರೆಗಳು ಕ್ಷಯ ರೋಗಿಗಳಿಗೆ ಕ್ಷ-ಕಿರಣ ಪರೀಕ್ಷೆಯನ್ನುಉಚಿತವಾಗಿ ಮಾಡುವ ಮೂಲಕ ಸಹಕಾರ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಂಜುಳಾ ದೇವಿ, ನೆಲಮಂಗಲ ಹಾಗೂ ಹೊಸಕೋಟೆ ತಾಲೂಕು ಆರೋಗ್ಯಾಧಿಕಾರಿಗಳು, ಆಕಾಶ್ ಮೆಡಿಕಲ್ ಕಾಲೇಜು ಹಾಗೂ ಎಂ.ವಿ.ಜೆ ಆಸ್ಪತ್ರೆ ವೈದ್ಯರು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಎನ್‌ಎಸ್‌ಎಸ್, ಶಾಲಾ ಕಾಲೇಜು ಪ್ರಾಂಶುಪಾಲರು, ಸಂಘ ಸಂಸ್ಥೆಯವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.