ಲೇಖನ ಸಾಮಗ್ರಿ ಬೆಲೆ ಏರಿಕೆ: ಪೋಷಕರು ಕಂಗಾಲು

Team Udayavani, Jun 7, 2023, 3:28 PM IST

ಲೇಖನ ಸಾಮಗ್ರಿ ಬೆಲೆ ಏರಿಕೆ: ಪೋಷಕರು ಕಂಗಾಲು

ದೇವನಹಳ್ಳಿ: ಬೇಸಿಗೆ ರಜೆ ಮುಗಿಸಿ ಶಾಲಾ ಕಾಲೇಜು ಪ್ರಾರಂಭಗೊಂಡಿದ್ದು, ವರ್ಷವಿಧಿ ಶೈಕ್ಷಣಿಕ ಪ್ರಗತಿಗೆ ಹಾಗೂ ಅಧ್ಯಯನಕ್ಕಾಗಿ ಅಗತ್ಯ ವಿರುವ ನೋಟ್‌ ಪುಸ್ತಕಗಳನ್ನು ಖರೀದಿ ಸಲು ಅಂಗಡಿಗಳಿಗೆ ತೆರಳುತ್ತಿರುವ ಪೋಷಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಪ್ರತಿ ವರ್ಷ ದಂತೆ ಪೋಷ ಕರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನೋಟ್‌ ಪುಸ್ತಕ ಸೇರಿದಂತೆ ವಿವಿಧ ಲೇಖನ ಸಾಮಗ್ರಿಗಳು ಬೆಲೆ ಏರಿಕೆ ಯಾಗಿದೆ.

ಪುಸ್ತಕಗಳು ವಿತರಿಸಿದದ್ದ ಸಮಾಜ ಸೇವಕರು: ಹಿಂದಿನ ವರ್ಷ ಚುನಾವಣೆಯ ಹೊಸ್ತಿಲಿ ನಲ್ಲಿ ಸರ್ಕಾರಿ ಶಾಲೆಗಳು ಸೇರಿದಂತೆ ಬಹಳಷ್ಟು ಶಾಲೆಗಳಿಗೆ ಭೇಟಿ ನೀಡಿದ್ದ ಸಮಾಜ ಸೇವಕರು, ಶಾಲಾ ಮಕ್ಕಳಿಗೆ ತಮ್ಮ ಭಾವಚಿತ್ರ ಗಳುಳ್ಳ ನೋಟ್‌ ಪುಸ್ತಕಗಳು, ಬ್ಯಾಗ್‌ಗಳು, ಹಾಗೂ ಕಲಿಕೋಪಕರಣಗಳನ್ನು ವಿತರಣೆ ಮಾಡಿದ್ದರು. ಪ್ರತಿ ವರ್ಷ ದಾನವಾಗಿ ಪುಸ್ತಕ ಗಳು ಕೊಡಿಸುವುದಾಗಿ ಭರವಸೆಗಳನ್ನೂ ನೀಡಿ ದ್ದರು. ಈಗ ಚುನಾವಣೆ ಮುಗಿದಿದ್ದು, ಬಹು ತೇಕ ಸಮಾಜ ಸೇವಕರು ಕಣ್ಮರೆ ಯಾಗಿದ್ದು, ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಬಡ ಮಕ್ಕ ಳಿಗೆ ಸಹಕಾರ ನೀಡುವವರು ಇಲ್ಲವಾಗಿದ್ದಾರೆ. ಹುಟ್ಟುಹಬ್ಬಗಳಂತಹ ಕಾರ್ಯ ಕ್ರಮ ಗಳನ್ನು ಅದ್ಧೂರಿಯಾಗಿ ಆಚರಣೆ ಮಾಡಿ ಕೊಳ್ಳುವವರು, ದುಂದುವೆಚ್ಚಕ್ಕೆ ಕಡಿವಾಣ ಹಾಕಿ, ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳ ವಣಿ ಗೆಗೆ ಸಹಕಾರ ನೀಡಿದರೆ ಅನುಕೂಲ ವಾಗಲಿದೆ.

ಪೋಷಕರಿಂದ ವಸೂಲಿ: ಒಂದನೇ ತರಗತಿ ಯಿಂದ ಹಿಡಿದು, ದ್ವಿತೀಯ ಪಿಯುಸಿ ವರೆಗೂ ಸಾವಿರಾರು ಮಂದಿ ವಿದ್ಯಾರ್ಥಿಗಳು, ಕಲಿಕೆಗಾಗಿ ನೋಟ್‌ ಪುಸ್ತಕಗಳನ್ನು ಖರೀದಿ ಮಾಡುತ್ತಿದ್ದಾರೆ. ಖಾಸಗಿ ಶಾಲೆ ಗಳಲ್ಲಿ ದಾಖ ಲಾಗುವಂತಹ ವಿದ್ಯಾರ್ಥಿಗಳಿಗೆ ಶಾಲಾ, ಕಾಲೇಜುಗಳ ಆಡಳಿತ ಮಂಡಳಿಗಳು, ಆಯಾ ಶಾಲಾ, ಕಾಲೇಜುಗಳ ಪೋಟೊಗಳ ಸಮೇತ ವಿಳಾಸ ಮುದ್ರಿಸಿ, ಶುಲ್ಕ ಕಟ್ಟು ವಾಗಲೇ ಸಮವಸ್ತ್ರಗಳು, ನೋಟ್‌ ಪುಸ್ತಕ ಗಳಿಗೂ ಕೂಡಾ ಶುಲ್ಕ ನಿಗದಿ ಪಡಿಸಿ, ಪೋಷ ಕರಿಂದ ವಸೂಲಿ ಮಾಡುವ ಮೂಲಕ ಪೋಷ ಕರ ಹಣದಲ್ಲಿ ತಮ್ಮ ಸಂಸ್ಥೆಗಳನ್ನು ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ. ಒಂದು ವೇಳೆ ಪುಸ್ತಕಗಳು ಹಾಗೂ ನೋಟ್‌ ಪುಸ್ತಕಗಳನ್ನು ಖಾಸಗಿ ಶಾಲೆಗಳಲ್ಲಿ ಖರೀದಿ ಸದಿದ್ದರೆ, ದಾಖಲಾತಿ ನೀಡುವುದಿಲ್ಲ. ಆದ್ದರಿಂದ ಉಳ್ಳವರು ತಮ್ಮ ಮಕ್ಕಳನ್ನು ಖಾಸಗಿ ಶಾಲೆ ಗಳಿಗೆ ದಾಖಲು ಮಾಡಿ, ಅವರು ನಿಗದಿ ಪಡಿಸುವಷ್ಟು ಹಣ ಕಟ್ಟುತ್ತಾರೆ. ನಮ್ಮಂಥ ಬಡವರು, ನಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲು ಮಾಡಿಸು ತ್ತಿದ್ದೇವೆ. ನಮ್ಮ ಮಕ್ಕಳಿಗೆ ವರ್ಷ ವಿಡೀ ಬೇಕಾಗುವಂತಹ ನೋಟ್‌ ಪುಸ್ತಕಗಳು ಖರೀದಿಸಲು ಬಂದರೆ, 200 ಪೇಜ್‌ ಲಾಂಗ್‌ 55, ಕಿಂಗ್‌ಸೈಜ್‌ 40, 100 ಪೇಜ್‌ ಲಾಂಗ್‌ 35, ಕಿಂಗ್‌ಸೈಜ್‌ 25, ಜಾಮಿಟ್ರಿ ಬಾಕ್ಸ್‌ 140 ರೂ, ಪೆನ್ನುಗಳ ಬೆಲೆಯೂ ಜಾಸ್ತಿಯಾಗಿದೆ. 1500 ರೂಪಾಯಿ ಗಳಷ್ಟು ನೋಟ್‌ ಪುಸ್ತಕಗಳಿಗೆ ಖರ್ಚಾ ಗುತ್ತಿದೆ ಎಂದು ಪೋಷಕ ರಾಮ ಮೂರ್ತಿ ಹೇಳಿದರು.

ನಂದಿನಿ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಒಬ್ಬ ವಿದ್ಯಾರ್ಥಿಗೆ ಕನಿಷ್ಠ 10-15 ನೋಟ್‌ ಪುಸ್ತಕಗಳು ಬೇಕು. ಖಾಸಗಿ ಶಾಲೆಗಳಲ್ಲಿ 30-40 ನೋಟ್‌ ಪುಸ್ತಕಗಳು ಬೇಕಾಗುತ್ತವೆ. ಒಬ್ಬ ವಿದ್ಯಾರ್ಥಿಗೆ 1500- 2000 ರೂಪಾಯಿವರೆಗೂ ಬೇಕಾಗುತ್ತದೆ. ಒಂದು ಮನೆಯಲ್ಲಿ ಮೂರು ಮಂದಿ ಮಕ್ಕಳಿದ್ದರೆ ಸುಮಾರು 10 ಸಾವಿರ ರೂಪಾಯಿವರೆಗೂ ನೋಟ್‌ ಪುಸ್ತಕಗಳು, ಹಾಗೂ ಕಲಿಕೋಪಕರಣಗಳಿಗೆ ಬೇಕಾಗುತ್ತದೆ. ನಾವು ದಿನಗೂಲಿ ಮಾಡುವವರು, ಇಷ್ಟೊಂದು ದುಬಾರಿ ಹಣ ಖರ್ಚು ಮಾಡಿ ಮಕ್ಕಳನ್ನು ಓದಿಸುವುದು ತುಂಬಾ ಕಷ್ಟವಾಗುತ್ತಿದ್ದು, ಸಾಲ ಮಾಡದೇ ವಿಧಿಯಿಲ್ಲ ಎನ್ನುವಂತಾಗಿದೆ ಎಂದರು.

ಕಂಪನಿಗಳ ಹೆಸರಿನ ಮೇಲೆ ಬೆಲೆ ನಿಗದಿ: ಮಾರುಕಟ್ಟೆಯಲ್ಲಿ ಸಿಗುತ್ತಿರುವ ನೋಟ್‌ ಪುಸ್ತಕಗಳು ಬೇರೆ ಬೇರೆ ಕಂಪನಿಗಳಿಗೆ ಸಂಬಂಧ ಪಟ್ಟಿದ್ದು, ಒಂದೊಂದು ಕಂಪನಿಯ ಪುಸ್ತಕಗಳ ಬೆಲೆ ಒಂದೊಂದು ರೀತಿಯಿದೆ. ಉಳ್ಳವರು ತಮ್ಮ ಪ್ರತಿಷ್ಟೆಗಾಗಿ ಹೆಚ್ಚಿನ ಬೆಲೆಯ ಉತ್ತಮ ಗುಣಮಟ್ಟದ ನೋಟ್‌ ಪುಸ್ತಕಗಳನ್ನು ಖರೀದಿಸುತ್ತಾರೆ. ಉತ್ತಮ ಗುಣಮಟ್ಟದ ಪುಸ್ತಕಗಳಾದರೆ, ಹೆಚ್ಚು ದಿನಗಳ ಕಾಲ ಬಾಳಿಕೆ ಬರುತ್ತವೆ. ತಮ್ಮ ಓದು ಮಗಿದ ನಂತರ ಬೇರೆಯವರಿಗೆ ನೀಡಬಹುದು. ಬಡವರು ತಮ್ಮ ಶಕ್ತಿಗನುಸಾರವಾಗಿ ಕಡಿಮೆ ಬೆಲೆಯ ಕಡಿಮೆ ಗುಣಮಟ್ಟದ ನೋಟ್‌ ಪುಸ್ತಕಗಳನ್ನು ಖರೀದಿಸುತ್ತಿದ್ದಾರೆ. ಅವು ಹೆಚ್ಚು ಕಾಲ ಬಾಳಿಕೆ ಬರುವುದಿಲ್ಲ. ಆದರೂ ವಿಧಿಯಿಲ್ಲದೆ ಖರೀದಿ ಮಾಡಬೇಕಾಗಿದೆ.

ಟಾಪ್ ನ್ಯೂಸ್

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

1-kasturi

Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Anekal: ರೌಡಿಶೀಟರ್‌ ಮೇಲೆ ಮಾರಕಾಸ್ತ್ರಗಳಿಂದ ದಾಳಿ

Anekal: ರೌಡಿಶೀಟರ್‌ ಮೇಲೆ ಮಾರಕಾಸ್ತ್ರಗಳಿಂದ ದಾಳಿ

nelamangala

Leopard Attack: ನೆಲಮಂಗಲ ಸಮೀಪ ಚಿರತೆ ದಾಳಿಗೆ ರೈತ ಮಹಿಳೆ ಬಲಿ

Stray dogs: ಅಂ.ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೀದಿ ನಾಯಿಗಳ ಹಾವಳಿ

Stray dogs: ಅಂ.ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೀದಿ ನಾಯಿಗಳ ಹಾವಳಿ

Tragic: ಮರದ ಕಾರ್ಖಾನೆಯಲ್ಲಿ ಆಕಸ್ಮಿಕ ಬೆಂಕಿ; ಕಾರ್ಮಿಕ ಸಜೀವ ದಹನ

Tragic: ಮರದ ಕಾರ್ಖಾನೆಯಲ್ಲಿ ಆಕಸ್ಮಿಕ ಬೆಂಕಿ; ಕಾರ್ಮಿಕ ಸಜೀವ ದಹನ

Market: ಬೆಲೆ ಕುಸಿತ; ಬೂದು ಕುಂಬಳ ಬೀದಿಪಾಲು!

Market: ಬೆಲೆ ಕುಸಿತ; ಬೂದು ಕುಂಬಳ ಬೀದಿಪಾಲು!

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ : ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !

Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ: ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.