ಸೀಲ್‌ಡೌನ್ ಗ್ರಾಮಗಳ ರೈತರ ಹಿತಕ್ಕೆ ಆದ್ಯತೆ
Team Udayavani, May 26, 2020, 7:20 AM IST
ಹೊಸಕೋಟೆ: ಕೊರೊನಾ ಸೋಂಕು ದೃಢಪಟ್ಟಿರುವ ಸೀಲ್‌ಡೌನ್‌ಗೆ ಒಳಗಾಗಿರುವ ಗ್ರಾಮಗಳಲ್ಲಿನ ರೈತರ ಹಿತ ಕಾಪಾಡಲು ಆದ್ಯತೆ ನೀಡಲಾ ಗುತ್ತಿದೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು. ತಾಲೂಕಿನ ನಂದಗುಡಿ ಹೋಬಳಿ ಚಿಕ್ಕಕೊರಟಿ ಗ್ರಾಮಕ್ಕೆ ಭೇಟಿ ನೀಡಿ ಮಾತನಾಡಿದರು.
ಕೊರೊನಾ ಸೋಂಕು ಹರಡುವಿಕೆ ತಡೆಗೆ ಸರಕಾರ ಕೈಗೊಂಡಿರುವ ಲಾಕ್‌ಡೌನ್ ನಿಯಮ, ಸೋಂಕು ದೃಢಪಟ್ಟಿರುವ ಗ್ರಾಮಗಳಿಗೆ ವಿಧಿಸಿರುವ ಷರತ್ತು ಪಾಲಿಸುವುದು ಜಿಲ್ಲಾಧಿಕಾರಿ, ತಹಶೀಲ್ದಾರ್ ಒಳ ಗೊಂಡಂತೆ ಜನಪ್ರತಿನಿಧಿಗಳ, ಸಾರ್ವಜನಿಕರ ಆದ್ಯ ಕರ್ತವ್ಯವಾಗಿದೆ. ಇಂತಹ ಸಂದಿಗಟಛಿ ಪರಿಸ್ಥಿತಿ ಯಲ್ಲಿ ಹಾಲು ಉತ್ಪಾ ದಕರಲ್ಲಿ ಅನವಶ್ಯ ಗೊಂದಲ ಮೂಡಿಸಿ, ಹಾಲನ್ನು ಚರಂಡಿಗೆ ಸುರಿಯುವಂತೆ ಪ್ರೇರೇಪಿಸಿರುವುದು ಖಂಡನೀಯ.
ಗ್ರಾಮದ ಸೀಲ್‌ಡೌನ್ ಅಂತ್ಯಗೊಳ್ಳು ವವರೆಗೆ ಹಾಲು ಸಂಗ್ರಹ ಸಾಧ್ಯವಿಲ್ಲದ ಕಾರಣ ಉತ್ಪಾದ ಕರು ತುಪ್ಪ ತಯಾರಿಸಲು ಗಮನಹರಿಸ ಬೇಕು. ಉತ್ಪನ್ನವನ್ನು ಒಕ್ಕೂಟವೇ ಖರೀದಿಸಲು ಅಧಿಕಾರಿಗಳಿಗೆ ಮನವಿ ಮಾಡಲಾಗುವುದು. ಇದರಿಂ ದ ಉಂಟಾಗುವ ನಷ್ಟ ನಿವಾರಣೆಗೊಳ್ಳಲಿದೆ. ಗ್ರಾಮದ ಎಲ್ಲಾ ಮನೆಗಳಲ್ಲೂ ಕೊರೊನಾ ತಪಾಸಣೆ ಕೈಗೊಳ್ಳಲಾಗುತ್ತಿದ್ದು, ಆರೋಗ್ಯ ಇಲಾಖೆ ಸಿಬ್ಬಂದಿಯೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಬೆಂಗಳೂರು ಹಾಲು ಒಕ್ಕೂಟದ ಹೊಸಕೋಟೆ ಶಿಬಿರ ಕಚೇರಿಯ ಉಪವ್ಯವಸ್ಥಾಪಕ ಡಾ.ಶಿವಾಜಿ ನಾಯಕ್ ಮಾತನಾಡಿದರು. ಬೆಂಗಳೂರು ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ. ಕೆ.ಸ್ವಾಮಿ, ಪ್ರಧಾನ ವ್ಯವಸ್ಥಾಪಕ ಡಾ. ಬಿ.ಕೆ.ಜಗದೀಶ್, ತಹಶೀಲ್ದಾರ್ ವಿ.ಗೀತಾ, ಕಾರ್ಯ ನಿರ್ವಹಣಾಧಿಕಾರಿ ಸಿ.ಎಸ್.ಶ್ರೀನಾಥ್‌ಗೌಡ, ಮುಖಂಡ ಬಿ.ವಿ.ರಾಜಶೇಖರ ಗೌಡ ಇನ್ನಿತರರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಬಂಧನ
Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್ ಉತ್ಸವ’ ಮಾಡಲ್ಲ: ಬಿಜೆಪಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.