ಶಿಕ್ಷಣ ಕ್ಷೇತ್ರದಲ್ಲಿ ಖಾಸಗಿ ಸಹಭಾಗಿತ್ವ ಅಗತ್ಯ
Team Udayavani, Feb 12, 2019, 7:25 AM IST
ಹೊಸಕೋಟೆ: ಸರಕಾರ ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡುತ್ತಿದ್ದಾಗ್ಯೂ ಪರಿಪೂರ್ಣವಾಗಿ ಸೌಲಭ್ಯಗಳನ್ನು ಕಲ್ಪಿಸಲು ಸಾಧ್ಯವಾಗದ ಕಾರಣದಿಂದಾಗಿ ಖಾಸಗಿ ಸಹಭಾಗಿತ್ವ ಅಗತ್ಯವಾಗಿದೆ ಎಂದು ವಸತಿ ಸಚಿವ ಎನ್.ನಾಗರಾಜ್ ಹೇಳಿದರು.
ಸಮೀಪದ ಸರಕಾರ್ ಗುಟ್ಟಹಳ್ಳಿಯ ಜ್ಯೋತಿ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡಲ್ಲಿ ಮಾತ್ರ ಶಿಕ್ಷಣ ಸಾರ್ಥಕ ಗೊಳ್ಳಲಿದ್ದು ಆರ್ಥಿಕ, ಸಾಮಾಜಿಕ ಬೆಳವಣಿಗೆಗೆ ಪೂರಕವಾದ ಸೌಲಭ್ಯ ಕಲ್ಪಿಸಬೇಕು. ಶೈಕ್ಷಣಿಕ ಪ್ರಗತಿ ಸಾಧಿಸಿ ಪೋಷಕರ, ಶಿಕ್ಷಕರ ಆಶೋತ್ತರಗಳನ್ನು ಈಡೇ ರಿಸಲು ವಿದ್ಯಾರ್ಥಿಗಳು ಶ್ರಮಿಸಬೇಕು ಎಂದರು.
ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಿ: ಇಂದು ಮಾತೃಭಾಷೆಯಾಗಿ ಕನ್ನಡದೊಂದಿಗೆ ಇಂಗ್ಲಿಷ್ ಭಾಷಾ ಜ್ಞಾನವನ್ನು ಹೊಂದಿದಲ್ಲಿ ಮಾತ್ರ ಸ್ಪರ್ಧೆ ಯನ್ನು ಸಮರ್ಪಕವಾಗಿ ಎದುರಿಸಲು ಸಹಕಾರಿ ಯಾಗಲಿದೆ. ಅಬ್ದುಲ್ ಕಲಾಂ, ಸಿದ್ಧಗಂಗೆಯ ಶಿವಕುಮಾರ ಸ್ವಾಮೀಜಿಯಂತಹ ಮಹಾನ್ ವ್ಯಕ್ತಿಗಳ ಆದರ್ಶ, ವ್ಯಕ್ತಿತ್ವವನ್ನು ಅಳವಡಿಸಿಕೊಳ್ಳುವ ಮೂಲಕ ಮೌಲ್ಯಗಳನ್ನು ಪಾಲಿಸಿ ಸತøಜೆಗಳಾಗಿ ರೂಪುಗೊಳ್ಳಬೇಕು.
ಗ್ರಾಮೀಣ ಪ್ರದೇಶದ ಜನರೂ ಸಹ ಗುಣಾತ್ಮಕ ಶಿಕ್ಷಣ ಪಡೆಯಲು ಅನುವಾ ಗುವಂತೆ ಆಡಳಿತ ಮಂಡಳಿ ತಂತ್ರಜ್ಞಾನ ಒಳಗೊಂಡ ಪದ್ಧತಿ ಅಳವಡಿಸಿಕೊಂಡು ಪ್ರೋತ್ಸಾಹಿ ಸುವುತ್ತಿರು ವುದು ಅಭಿನಂದನಾರ್ಹ ಎಂದು ತಿಳಿಸಿದರು.
ಶಿಸ್ತು ಪಾಲನೆ ಮುಖ್ಯ: ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ್ ಮಾತನಾಡಿ, ಜೀವನದ ಪ್ರತಿ ಹಂತದಲ್ಲೂ ಶಿಸ್ತು ಪಾಲನೆ ಮಾಡುವುದು ಶಿಕ್ಷಣದ ಮೂಲಗುರಿಯಾಗಿದ್ದು ಮನುಷ್ಯನಲ್ಲಿರುವ ಅಂಧಕಾರವನ್ನು ನಿವಾರಿಸಿ ಸ್ವಸ್ಥ ಸಮಾಜ ನಿರ್ಮಾಣ ಮಾಡುವುದು ಪ್ರಮುಖ ಉದ್ದೇಶವಾಗಿದೆ.
ಕಳೆದ 15 ವರ್ಷಗಳಿಂದ ಆಡಳಿತ ಮಂಡಳಿಯ ಸೇವಾ ಮನೋಭಾವದ ಪರಿಣಾಮವಾಗಿ ಶಾಲೆಯು ಸುಸಜ್ಜಿತವಾದ ಸೌಲಭ್ಯಗಳೊಂದಿಗೆ ಸುಲಭವಾಗಿ ವಿಷಯವನ್ನು ಗ್ರಹಿಸಲು ಆಧುನಿಕ ತಂತ್ರಜ್ಞಾನ ಒಳಗೊಂಡ ಶಿಕ್ಷಣ ಪದ್ಧತಿ ಅಳವಡಿಸಿಕೊಳ್ಳಲಾಗಿದೆ ಎಂದರು.
ಸೇವಾ ಮನೋಭಾವ ಬೆಳೆಸಿಕೊಳ್ಳಿ: ವಿದ್ಯಾರ್ಥಿ ಗಳು ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ರಾಜ್ಯ ಮಟ್ಟದಲ್ಲಿ ಭಾಗವಹಿಸಿದ್ದು ಪ್ರತಿಭೆಗಳಿಗೆ ಅಗತ್ಯ ಪ್ರೋತ್ಸಾಹ ನೀಡಲಾಗುತ್ತಿದೆ. ಮಕ್ಕಳನ್ನು ಟೀವಿ, ಮೊಬೈಲ್ ಹಾವಳಿಯಿಂದ ಮುಕ್ತರನ್ನಾಗಿಸಿ ಶಿಕ್ಷಣಕ್ಕೆ ಪೂರಕವಾದ ವಾತಾವರಣವನ್ನು ಸೃಷ್ಟಿಸಬೇಕಾದ್ದು ಪೋಷಕರ ಆದ್ಯ ಕರ್ತವ್ಯವಾಗಿದೆ.
ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಶಿಕ್ಷರಷ್ಟೇ ಜವಾ ಬ್ದಾರಿಯನ್ನು ಪೋಷಕರು ಸಹ ನಿರ್ವಹಿಸ ಬೇಕಾ ದ್ದು ಅತ್ಯವಶ್ಯವಾಗಿದೆ. ಶಿಕ್ಷಣಕ್ಕೆ ನೀಡುವಷ್ಟೇ ಪ್ರಾ ಮುಖ್ಯತೆ ಧರ್ಮಪಾಲನೆ, ಸೇವಾ ಮನೋ ಭಾವ ಬೆಳೆಸಿಕೊಳ್ಳಲು ನೀಡಬೇಕು ಎಂದು ತಿಳಿಸಿದರು. ಉದ್ಯಮಿ ಎಸ್.ಷಡಕ್ಷರಿ, ಕಿರುತೆರೆ ನಟಿ ನಂದಿನಿ, ಸರ್ವಮಂಗಳ, ಅಧ್ಯಕ್ಷ ಬಸವರಾಜ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.