ರಸ್ತೆ ಗುಂಡಿಯಲ್ಲಿ ಕುಳಿತು ಅಹೋರಾತ್ರಿ ಧರಣಿ
Team Udayavani, Oct 4, 2022, 3:32 PM IST
ನೆಲಮಂಗಲ: ಸ್ವಾತಂತ್ರ ಪೂರ್ವದಿಂದ ತಾಲೂಕಿನ ಬಚ್ಚೆಗೌಡನಪಾಳ್ಯದ ರಸ್ತೆ ಅಭಿವೃದ್ಧಿ ಕಾಣದ ಪರಿಣಾಮ ಗಾಂಧಿ ಜಯಂತಿ ದಿನದಿಂದ ಗ್ರಾಮಸ್ಥರು ಅಹೋರಾತ್ರಿ ಧರಣಿ ಮಾಡುತ್ತಿದ್ದು, ರಸ್ತೆ ಅಭಿವೃದ್ಧಿಗೆ ಆಗ್ರಹಿಸಿದ್ದಾರೆ.
ತಾಲೂಕಿನ ಸೋಲದೇವನಹಳ್ಳಿ ಗ್ರಾಪಂನ ಬೋಳಮಾರನಹಳ್ಳಿ ಸಮೀಪದ ಬಜ್ಜೆಗೌಡನಪಾಳ್ಯದಿಂದ ಬಾಣಸವಾಡಿ ಮೂಲಕ ತಾವರೆಕೆರೆಗೆ ಸೇರುವ ರಸ್ತೆ ಸಂಪೂರ್ಣ ಕೆಸರು ಗದ್ದೆಯಾಗಿದ್ದು, ಶಾಸಕ ಡಾ.ಕೆ ಶ್ರೀನಿವಾಸಮೂ ರ್ತಿಗೆ ಆರೇಳು ವರ್ಷದಿಂದ ಮನವಿ ಮಾಡಿದರೂ, ಅನುದಾನ ನೀಡಿ ರಸ್ತೆ ಅಭಿವೃದ್ಧಿ ಮಾಡಲು ಹಿಂದೇಟು ಹಾಕುತ್ತಿ ದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿ, ಗಾಂಧಿ ಪೋಟೋ ಎದುರು ಆಹೋರಾತ್ರಿ ಸತ್ಯಾಗ್ರಹ ಮಾಡುತ್ತಿದ್ದು, ಶಾಸಕರು ಸ್ಥಳಕ್ಕೆ ಬರುವ ತನಕ ನಮ್ಮ ಸತ್ಯಾಗ್ರಹ ನಿಲ್ಲಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೃದ್ಧರು, ವಿದ್ಯಾರ್ಥಿಗಳ ಕಣ್ಣೀರು: ಧರಣಿಯಲ್ಲಿ ಭಾಗಿ ಯಾಗಿರುವ ವಿದ್ಯಾರ್ಥಿಗಳು ಹಾಗೂ ವೃದ್ಧರು ನಮಗೆ ರಸ್ತೆ ಮಾಡಿಕೊಡಿ ಎಂದು ಕಣ್ಣೀರು ಹಾಕಿದ್ದಾರೆ. ಗ್ರಾಮದ ಅಜ್ಜಿಯೊಬ್ಬರು ಹಾಲು ತರಲು ಹೋಗಿ ರಸ್ತೆಯಲ್ಲಿ ಬಿದ್ದಿದ್ದರೆ, ವಿದ್ಯಾರ್ಥಿಗಳು ಶಾಲೆಗೆ ಹೋಗಲು ಪರದಾಡಬೇಕಾಗಿದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು.
ಅಧಿಕಾರಿಗಳ ಭೇಟಿ ಇಲ್ಲ: ಗ್ರಾಮದ ಜನರು ರಸ್ತೆಗಾಗಿ ಧರಣಿ ಮಾಡುತ್ತಿದ್ದರೂ, ಯಾವುದೇ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಅವರ ಕಷ್ಟ ಕೇಳುವುದಾಗಲಿ,ಅವರಿಗೆ ಭರವಸೆ ನೀಡುವುದಾಗಲಿ ಮಾಡದಿರುವುದು ದುರಂತವೇ ಸರಿ. ಗಾಂಧಿ ಜಯಂತಿ ಮಾಡಿದ ಅಧಿಕಾರಿಗಳಿಗೆ ಗಾಂಧಿ ಕನಸು ನನಸು ಮಾಡುವ ಕನಿಷ್ಠ ಜ್ಞಾನವಿಲ್ಲದಿ ರುವುದು ದುರದುಷ್ಟವೇ ಸರಿ. ಮಳೆ ಬಂದರೆ ದ್ವೀಪವಾಗುವ ಗ್ರಾಮ: ಸೋಲದೇವನಹಳ್ಳಿ ಭಾಗದಲ್ಲಿ ಧಾರಕಾರ ಮಳೆಯಾದರೆ ಬಜ್ಜೆಗೌಡನಪಾಳ್ಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಬಂದ್ ಆಗಲಿದೆ. ಕಾರಣ ಗ್ರಾಮಕ್ಕೆ ಸಂಪರ್ಕ ಕಲಿ ಎರಡು ಕಡೆ ಎರಡು ರಾಜಕಾಲುವೆ ಹರಿದು ಹೋಗಲಿದ್ದು, ಎರಡು ರಾಜಕಾಲುವೆ ತುಂಬಿದರೆ ಗ್ರಾಮದ ಜನರು ಒಳಗೆ, ಹೊರಗೆ ಹೋಗಲು ಸಾಧ್ಯವಾಗದೇ ದ್ವೀಪ ಗ್ರಾಮದ ಸ್ಥಿತಿ ನಿರ್ಮಾಣವಾಗಲಿದೆ. ರಸ್ತೆ ಅಭಿವೃದ್ಧಿಯ ಜತೆ ಎರಡು ಸೇತುವೆ ನಿರ್ಮಾಣ ವಾದರೆ ಗ್ರಾಮದ ಜನರ ಸಮಸ್ಯೆ ಬಗೆಹರಿಯಲಿದೆ.
ಸ್ಥಳೀಯ ಮುಖಂಡರ ಬೆಂಬಲ: ಗ್ರಾಮದ ರಸ್ತೆಗಾಗಿ ಹೋರಾಟ ಮಾಡುತ್ತಿರುವ ಗ್ರಾಮದ ಜನರಿಗೆ ಸ್ಥಳೀಯ ಮುಖಂಡರಾದ ಭವಾನಿಶಂಕರ್ ಬೈರೇಗೌಡ, ಭಾವನಿ ಶಂಕರ್ ಮಂಜುನಾಥ್, ಗ್ರಾಪಂ ಮಾಜಿ ಸದಸ್ಯ ಅನ್ನದಾ ನಯ್ಯ, ವಿಜಯಕುಮಾರ್, ವಿನೋದ್, ಸತೀಶ್, ಬಾಲಕೃಷ್ಣ ಸೇರಿದಂತೆ ಅನೇಕ ಮುಖಂಡರು ಬೆಂಬಲ ಸೂಚಿಸಿ ಹೋರಾಟಕ್ಕೆ ಕೈಜೋಡಿಸಿದ್ದಾರೆ.
ಗ್ರಾಮಸ್ಥರ ಸಂಕಷ್ಟ ನೋಡದೆ ನ್ಯಾಯಕ್ಕಾಗಿ ರಸ್ತೆಯಲ್ಲಿ ಕುಳಿತು ಗಾಂಧೀ ಪೋಟೋ ಎದುರು ಧರಣಿ ಮಾಡಬೇಕಾದ ಅನಿವಾರ್ಯತೆ ಬಂದಿದೆ. ರಸ್ತೆ ಅಭಿವೃದ್ಧಿ ಮಾಡುವ ತನಕ ನಮ್ಮ ಧರಣಿ ನಿಲ್ಲುವುದಿಲ್ಲ. ಬಜ್ಜೆಗೌಡನಪಾಳ್ಯ ರಸ್ತೆ ಗಾಂಧಿಕಾಲದಿಂದಲೂ ಇದೇ ರೀತಿ ಇದ್ದು ಶಾಸಕರ ಬಳಿ ಆರೇಳು ವರ್ಷದಿಂದ ಮನವಿ ಮಾಡಿ ಸಾಕಾಗಿದೆ.- ಸಂದೀಪ್ ಬೋಳಮಾರನಹಳ್ಳಿ, ಸೋಲದೇವನಹಳ್ಳಿ ಗ್ರಾಪಂ ಸದಸ್ಯ
ಶಾಸಕರಿಗೆ ನಮ್ಮ ಗ್ರಾಮದ ಅಜ್ಜಿಯರು ಕಾಲಿಗೆ ಬಿದ್ದ ರಸ್ತೆ ಮಾಡಿಕೊಡಿ ಎಂದು ಬೇಡಿಕೊಂಡಿದ್ದಾರೆ. ಆದರೂ ನಮ್ಮ ಸಮಸ್ಯೆಗೆ ಸ್ಪಂದಿಸಿಲ್ಲ, ನಾವು ಶಾಲಾ-ಕಾಲೇಜಿಗೆ ಹೋಗಲು ಸಾಧ್ಯವಾಗುತ್ತಿಲ್ಲ, ನಮ್ಮೂರಿನ ಜನ ಮತ ನೀಡಿಲ್ಲವೇ, ನಾವು ನಿಮ್ಮ ಕ್ಷೇತ್ರದ ಜನರಲ್ಲವೇ ನಾವು ಏನು ದ್ರೋಹ ಮಾಡಿದ್ದೀವಿ ಸ್ವಾಮಿ, ರಸ್ತೆ ಮಾಡಿ ನಮ್ಮನ್ನು ಉಳಿಸಿ. – ಸುಮಾ, ಬಜ್ಜೆಗೌಡನಪಾಳ್ಯ ವಿದ್ಯಾರ್ಥಿ
ನಾನು ಈಗಾಗಲೇ ಬಜ್ಜೆಗೌಡನಪಾಳ್ಯ ರಸ್ತೆ ಅಭಿವೃದ್ಧಿಗೆ 1 ಕೋಟಿ ರೂ. ಅನುದಾನ ನೀಡಿದ್ದೇನೆ. ಸರ್ಕಾರದ ಹಣಕಾಸಿನ ವಿಭಾಗದಿಂದ ಕೊನೆ ಹಂತದ ಅನುಮೋಧನೆ ಬಾಕಿ ಇದ್ದು, 10 ದಿನದಲ್ಲಿ ರಸ್ತೆ ಕಾಮಗಾರಿ ಆರಂಭ ಮಾಡುತ್ತೇವೆ. ಗ್ರಾಮಸ್ಥರು ಯಾವುದೇ ಧರಣಿ ಮಾಡುವ ಅವಶ್ಯಕತೆ ಇಲ್ಲ. ನಾವು ಅಭಿವೃದ್ಧಿ ಮಾಡಲು ಬದ್ಧವಾಗಿದ್ದೇವೆ. – ಡಾ. ಕೆ. ಶ್ರೀನಿವಾಸಮೂರ್ತಿ, ಶಾಸಕ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.