ಕೃಷಿ ಭೂಸ್ವಾಧೀನ ಖಂಡಿಸಿ ರಸ್ತೆ ತಡೆ
Team Udayavani, Feb 5, 2021, 1:17 PM IST
ದೊಡ್ಡಬಳ್ಳಾಪುರ: ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ಹುಲುಕುಂಟೆ ಬಳಿ ಮಲ್ಟಿ ಮಾಡಲ್ ಲಾಜಿಸ್ಟಿಕ್ ಪಾರ್ಕ್ ಸ್ಥಾಪನೆಗೆ ಮಾಡುತ್ತಿರುವ ಭೂಸ್ವಾಧೀನ ಪ್ರಕ್ರಿಯೆ ಕೈಬಿಡಬೇಕೆಂದು ಆಗ್ರಹಿಸಿ, ಕೃಷಿ ಭೂ ರಕ್ಷಣಾ Óಮಿತಿ ನೇತೃತ್ವದಲ್ಲಿ ಹುಲಿಕುಂಟೆ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಯಿತು.
ಕೇಂದ್ರ-ರಾಜ್ಯ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿದ ಪ್ರತಿಭಟನಾಕಾರರು ಭೂ ಸ್ವಾಧೀನ ಪಕ್ರಿಯೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಕೃಷಿ ಭೂಮಿ ವಶಪಡಿಸಿಕೊಳ್ಳಲು ಮುಂದಾಗಿರುವ ಕೆಎಡಿಬಿ ಇಲಾಖೆ ಅಧಿಕಾರಿಗಳು ಸ್ಥಳೀಯ ಸ್ಥಿತಿಗತಿ ಪರಿಗಣಿಸದೆ ಇರಲು ಕಾರಣವೇನು ತಿಳಿಯುತ್ತಿಲ್ಲ. ಈ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಭೂಮಿಗೆ ಚಿನ್ನದ ಬೆಲೆ ಬರಲಿದೆ. ಆದರೆ, ಸಂಸದರು, ಶಾಸಕರು, ಅಧಿಕಾರಿಗಳು ಈ ವ್ಯಾಪ್ತಿಯಲ್ಲಿ ಭೂಮಿ ಖರೀದಿ ಕೊಡುತ್ತಿದ್ದಾರೆ ಎಂದರು.
ರೈತರು ಜಾಗೃತರಾಗಬೇಕು: ತಾಲೂಕಿನಲ್ಲಿರುವ ಸುಮಾರು ನಾಲ್ಕು ನೂರು ಎಕರೆ ಖಾಲಿ ಜಮೀನಿನ ಮಾಹಿತಿ ಪಡೆದಿದ್ದು ಸರ್ಕಾರದ ಗಮನಕ್ಕೆ ತರಲಾಗಿದೆ. ಈ ಪ್ರದೇಶದಲ್ಲಿ ಹೈನುಗಾರಿಕೆ ಪ್ರಮುಖವಾಗಿದ್ದು, 4 ಸಾವಿರ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ರೈತರು ಜಾಗೃತರಾಗಬೇಕಿದ್ದು, ಮುಂದೆ ಒಂದು ಗುಂಟೆನೂ ಜಮೀನನ್ನು ಮಾರಬಾರದು ಎಂದು ಮನವಿ ಮಾಡಿದರು.
ಭೂಮಿ ವಶಕ್ಕೆ ಅವಕಾಶ ನೀಡಬೇಡಿ: ಬೇಟೆ ರಂಗನಾಥ ಸ್ವಾಮಿ ಟ್ರಸ್ಟ್‌ನ ಸೋಮಶೇಖರ್ ಮಾತ ನಾಡಿ, ಈ ಹಿಂದೆ ನೀಡಿರುವ ಭೂಮಿಗೆ ಇನ್ನೂ ಹಣ ಬಂದಿಲ್ಲ. ರೈತರು ಹಣದ ಆಸೆಗೆ ಒಳಗಾಗಿ ಕೃಷಿ ಭೂಮಿ ವಶ ಪಡಿಸಿಕೊಳ್ಳಲು ಅವಕಾಶ ನೀಡಬಾರದೆಂದು ಮನವಿ ಮಾಡಿದರು.
ಹೋರಾಟಕ್ಕೆ ಬೆಂಬಲ ನೀಡಿ: ಸ್ಥಳೀಯ ಮುಖಂಡ ವಿಶ್ವನಾಥ್ ಮಾತನಾಡಿ, ಈಗಾಗಲೇ ಕೈಗಾರಿಕಾ ಪ್ರದೇಶಗಳ ವ್ಯಾಪ್ತಿಯಲ್ಲಿ ಪರಿಸರ ಸಂಪೂರ್ಣ ಹಾಳಾಗಿ ಹೋಗಿದೆ. ನಮ್ಮ ನೆಲೆಯನ್ನು ಉಳಿಸಿಕೊಳ್ಳುವ ಹೊಣೆಗಾರಿಕೆ ನಮ್ಮ ಮೇಲಿದ್ದು, ರೈತರು ಒಟ್ಟಾಗಿ ಹೋರಾಟಕ್ಕೆ ಬೆಂಬಲ ನೀಡಬೇಕೆಂದರು.
ರೈತನೇ ಮುಂದಾಳತ್ವ ವಹಿಸಬೇಕಿದೆ: ರೈತ ಸಂಘದ ತಾಲೂಕು ಅಧ್ಯಕ್ಷ ಹನುಮೇಗೌಡ, ಜಿಲ್ಲಾ ಮುಖಂಡ ಮುತ್ತೇಗೌಡ ಮಾತನಾಡಿ, ಈ ಹಿಂದೆ ರೈತರ ಹೋರಾಟದ ಫಲವಾಗಿ ಪವರ್‌ಗ್ರಿಡ್ ಕಂಪನಿಯಿಂದ 4ಲಕ್ಷ ರೂ.ವರೆಗೆ ಪರಿಹಾರ ಸಿಕ್ಕಿತ್ತು. ಹೋರಾಟವಿಲ್ಲದೇ ಯಾವುದೂ ಸಿಗುವುದಿಲ್ಲ. ರೈತನೇ ಅದರ ಮುಂದಾಳತ್ವ ವಹಿಸಬೇಕಿದೆ. ಭೂಮಿ ಬೆಲೆ ಹೆಚ್ಚಿಸುವ ಹೋರಾಟಕ್ಕೆ ರೈತ ಸಂಘ ಬೆಂಬಲ ನೀಡುವುದಿಲ್ಲ. ರೈತರು ಕೈಗಾರಿಕೆ ಸ್ಥಾಪನೆಯಿಂದ ಕೊಟ್ಟ ಭೂಮಿಗೆ ಹಣ, ಮನೆಗೆ ಕೆಲಸ ಸಿಗುತ್ತೆ ಎಂಬ ಭ್ರಮೆಯಿಂದ ಹೊರ ಬರಬೇಕೆಂದರು.
ಕೊಡಿಗೇಹಳ್ಳಿಯ ಲಕ್ಷ್ಮಣ ಮಠದ ಮೋಹನ್ ರಾಮ್ ಸ್ವಾಮೀಜಿ ಮಾತನಾಡಿ, ಫಲವತ್ತಾದ ಕೃಷಿ ಭೂಮಿ ಡೀಸೆಲ…, ಗ್ರೀಸ್, ಕಬ್ಬಿಣಕ್ಕೆ ನೀಡುತ್ತಿರುವ ಸರ್ಕಾರದ ನಿಲುವು ಖಂಡನೀಯ ಎಂದರು.
ಇದನ್ನೂ ಓದಿ : ಸರ್ಕಾರದ ಸ್ಪಂದನೆಯಿಂದ ಆತ್ಮ ವಿಶ್ವಾಸ ಹೆಚ್ಚಲಿ
ಮನವಿ ಪತ್ರ ಸ್ವೀಕರಿಸಿದ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಮಾತನಾಡಿ, ರೈತರ ಮನವಿಯನ್ನು ಸರ್ಕಾರದ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲಾಗುವುದು ಎಂದರು. ಉಪ ವಿಭಾಗಾಧಿಕಾರಿ ಅರುಳ್ ಕುಮಾರ್, ತಹಸೀಲ್ದಾರ್ ಟಿ.ಎಸ್.ಶಿವರಾಜ್ ಇದ್ದರು. ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಸನ್ನ, ಮುಖಂಡ ಸುಲೋಚನಮ್ಮ ವೆಂಕಟರೆಡ್ಡಿ, ಕನ್ನಡ ಪಕ್ಷದ ಸಂಜೀವ್ ನಾಯಕ್, ಕೃಷಿ ಕ್ಷಣಾ ಸಮಿತಿ ಅಧ್ಯಕ್ಷ ಎಚ್. ಆರ್.ದೇವರಾಜ್, ಸಮಿತಿಯ ವಿಶ್ವನಾಥಯ್ಯ, ಗೋಪಿನಾಥ್, ಸೋಮಶೇಖರಯ್ಯ, ರಘು ರಂಗಸ್ವಾಮಿ, ಶಂಕರಯ್ಯ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Memorial: ಮನಮೋಹನ್ ಸಿಂಗ್ ಸ್ಮಾರಕಕ್ಕೆ ಜಾಗ ನೀಡಲು ಕೇಂದ್ರ ಸರ್ಕಾರದ ಒಪ್ಪಿಗೆ
Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊ*ಲೆ; ಇಂದು ತೀರ್ಪು; ಭಾರೀ ಬಂದೋಬಸ್ತು
Surathkal: ಸಿಲಿಂಡರ್ ಸ್ಫೋ*ಟ ಪ್ರಕರಣ; ಮತ್ತೋರ್ವ ಮಹಿಳೆಯ ಸಾವು
Daily Horoscope: ದೀರ್ಘಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.