ಅಂಡರ್‌ಪಾಸ್ ಜಲಾವೃತ: ಸಂಚಾರ ವ್ಯತ್ಯಯ
ಗ್ರಾಮಸ್ಥರಿಗೆ ನಿತ್ಯ ನರಕವಾದ ಅವ್ಯವಸ್ಥೆ ಅವೈಜ್ಞಾನಿಕಕಾಮಗಾರಿಗೆ ಸಾರ್ವಜನಿಕರ ಆಕ್ರೋಶ
Team Udayavani, Aug 28, 2021, 4:18 PM IST
ದೇವನಹಳ್ಳಿ: ತಾಲೂಕು ಮತ್ತು ಜಿಲ್ಲೆಯಲ್ಲಿ ರೈಲ್ವೆ ಇಲಾಖೆಯಿಂದ ನಿರ್ಮಾಣಗೊಂಡಿರುವ ರೈಲ್ವೆ ಅಂಡರ್ ಪಾಸ್‌ಗಳು ಮಳೆ ನೀರಿನಿಂದ ತುಂಬಿಕೊಂಡು ಜನಸಂಚಾರಕ್ಕೆ ಅಡಚಣೆ ಉಂಟಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪರ್ಯಾಯ ಮಾರ್ಗವಿಲ್ಲ: ಸಾರ್ವಜನಿಕರ ತೆರಿಗೆ ಹಣದಲ್ಲಿ ಕಾಮಗಾರಿ ಆರಂಭಿಸಿರುವ ಅಧಿಕಾರಿಗಳು ನಿಗದಿತ ಸಮಯದಲ್ಲಿ ಕಾಮಗಾರಿ
ಪೂರ್ಣಗೊಳಿಸಿಲ್ಲ, ಬದಲಿ ವ್ಯವಸ್ಥೆ ಕೂಡ ಮಾಡಿಲ್ಲ ಇದರಿಂದ ಸಾರ್ವಜನಿಕರಿಗೆ ಕಿರಿಕಿರಿ ಆಗಿದೆ. ಅವೈಜ್ಞಾನಿಕ ಅಂಡರ್ ಪಾಸ್‌ಗಳಿಂದ ಮಳೆ ನೀರು ನಿಂತು ವಾಹನ ಸವಾರರು ಜೀವಭಯದಲ್ಲಿ ಸಂಚರಿಸುವ ಸ್ಥಿತಿ ಎದುರಾಗಿದೆ.
ಸಂಚಾರಕ್ಕೆ ಸುತ್ತಿಬಳಸಿ ಬರಬೇಕು: ತಾಲೂಕಿನ ಯರ್ತಿಗಾನಹಳ್ಳಿ, ಐವಿಸಿ ರಸ್ತೆ, ಸಣ್ಣಅಮಾನಿಕೆರೆ, ಅಕ್ಕುಪೇಟೆ, ಬುಳ್ಳಹಳ್ಳಿ, ಇರಿಗೇನಹಳ್ಳಿ ಇತರೆ ಪ್ರದೇಶಗಳಲ್ಲಿ ರೈಲ್ವೆ ಇಲಾಖೆಯು ನಿರ್ಮಿಸಿರುವ ಅವೈಜ್ಞಾನಿಕ ಅಂಡರ್ ಪಾಸ್‌ಗಳಾಗಿವೆ. ಮಳೆ ನೀರು ತುಂಬಿಕೊಳ್ಳುವುದರಿಂದ ಸುತ್ತಮುತ್ತಲಿನ ಗ್ರಾಮಸ್ಥರು ಸುತ್ತಿ ಬಳಸಿ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಸಂಚಾರಕ್ಕೆ ಅಡಚಣೆ: ನಿರ್ಮಾಣವಾಗಿರುವ ಅಂಡರ್ ಪಾಸ್ ಜಲಾವೃತವಾಗಿದ್ದು ಅವಘಡ ಗಳಿಗೆ ಅಹ್ವಾನ ನೀಡುತ್ತಿದೆ. ಅವೈಜ್ಞಾನಿಕ
ಕಾಮಗಾರಿಯಿಂದ ವಾಹನಗಳ ತೀವ್ರ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಟ್ರಾಫಿಕ್ ಕಾರಣಕ್ಕೆ ಈ ಕಾಮಗಾರಿ ನಡೆಸಲಾಗಿತ್ತು. ಆದರೇ ಇದು ಅವೈಜ್ಞಾನಿಕವಾಗಿ ಕೂಡಿದ್ದು ಅಂಡರ್‌ಪಾಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ರೈಲ್ವೆ ಇಲಾಖೆ ಅಧಿಕಾರಿಗಳ ಕಾರ್ಯವೈಖರಿ ಟೀಕೆಗೆ ಗುರಿಯಾಗಿದೆ.
ಇದನ್ನೂ ಓದಿ:ಮಹಿಳೆಯರ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವ ಬದಲು ಸುರಕ್ಷತಾ ಕಾರ್ಯ ಕೈಗೊಳ್ಳಿ : ನಟ ಚೇತನ್
ಗ್ರಾಮಸ್ಥರ ಪರದಾಟ: ಎಲ್ಲಾ ಕಡೆ ಅಂಡರ್ ಪಾಸ್ ನಿರ್ಮಾನ ಮಾಡಿರುವ ಜಾಗಗಳಲ್ಲಿ ರೈಲ್ವೇ ಇಲಾಖೆಯು ಸರಾಗವಾಗಿ ನೀರು ಹರಿದು ಹೋಗುವಂತೆ ವ್ಯವಸ್ಥೆ ಮಾಡಿಲ್ಲ. ಹಾಗಾಗಿ ಮಳೆಯಿಂದ ಕೆಳಸೇತುವೆ ಜಲಾವೃತವಾಗಿದೆ. ಡಾಬಾ ಗೇಟ್‌ನಿಂದ ಐವಿಸಿ ರಸ್ತೆ ಸಂಪರ್ಕಿಸುವ ರಸ್ತೆ ಆಗಿರುವುದರಿಂದ ಉಗನವಾಡಿ ಕನ್ನಮಂಗಲ ಪಾಳ್ಯ, ಜಾಲಿಗೆ , ಅರದೇಶನ ಹಳ್ಳಿ , ಸಿಂಗರಹಳ್ಳಿ, ಇಲ್ಲತೊರೆ ಇನ್ನಿತರೆ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಇದೇ ಮುಖ್ಯ ರಸ್ತೆಯಾಗಿದ್ದು, ಈ ರಸ್ತೆ ಬಿಟ್ಟರೆ ಸುತ್ತುಬಳಸಿ ಗ್ರಾಮಗಳನ್ನು ಸೇರಬೇಕು ಎಂದು ಗ್ರಾಮಸ್ಥರು ಅಳಲು ತೋಡಿ ಕೊಂಡಿದ್ದಾರೆ. ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ನೀರು ನಿಲ್ಲದಂತೆ ದುರಸ್ತಿಗೊಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ರೈಲ್ವೆ ಇಲಾಖೆಯು ಅವೈಜ್ಞಾನಿಕ ಅಂಡರ್ ಪಾಸ್‌ಗಳನ್ನು ನಿರ್ಮಾಣ ಮಾಡಿದ್ದು, ಇಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ
ಮಾಡಿಲ್ಲ. ಇಂತಹ ಅವೈಜ್ಞಾನಿಕ ಅಂಡರ್ ಪಾಸ್‌ಗಳಿಂದ ಐದಾರು ಕಿಲೋಮೀಟರ್ ಸುತ್ತಿ ಗ್ರಾಮಗಳನ್ನು ಸೇರಬೇಕಾದ ಪರಿಸ್ಥಿತಿ ಎದುರಾಗಿದೆ.
-ಪಿ.ನಾಗೇಶ್,
ಕನ್ನಮಂಗಲ ಗ್ರಾಪಂ ಸದಸ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.