ಮಳೆ: ಚೆಕ್ ಪೋಸ್ಟ್ ಸಿಬ್ಬಂದಿ ಕಂಗಾಲು
Team Udayavani, Jul 17, 2020, 4:05 PM IST
ನೆಲಮಂಗಲ: ವರುಣನ ಆರ್ಭಟಕ್ಕೆ ಚೆಕ್‌ಪೋಸ್ಟ್ ಸಿಬ್ಬಂದಿ ಕಂಗಾಲಾದರು. ಚೆಕ್‌ಪೋಸ್ಟ್‌ನ ಮೇಲ್ಚಾವಣಿಗೆ ಹಾನಿಯಾಗಿದ್ದರಿಂದ ಸಿಬ್ಬಂದಿ ಮಳೆಯಿಂದ ರಕ್ಷಣೆಗಾಗಿ ಪರದಾಡಿದರು.
ತಾಲೂಕಿನ ಯಂಟಗಾನಹಳ್ಳಿ ಹಾಗೂ ಹಳೆನಿಜಗಲ್ಲು ಚೆಕ್‌ಪೋಸ್ಟ್‌ಗಳಲ್ಲಿ ಸಿಬ್ಬಂದಿ ಕಾರ್ಯನಿರ್ವಹಿಸಲು ಬಟ್ಟೆಯ ಪೆಂಡಾಲ್ ನಿರ್ಮಾಣ ಮಾಡಲಾಗಿದೆ. ಗುರುವಾರ ಮಧ್ಯಾಹ್ನದಿಂದಲೇ ವರುಣನ ಆರ್ಭಟ ಜೋರಾಗುತ್ತಿದ್ದಂತೆ ಪೆಂಡಾಲ್ ಮೇಲ್ಭಾಗ ನೀರು ತುಂಬಿ ಬೀಳುವ ಹಂತಕ್ಕೆ ಬರುತ್ತಿದ್ದಂತೆ, ಅಪಾಯದಿಂದ ಪಾರಾದ ಅಧಿಕಾರಿಗಳು ಸಮೀಪದ ಟೋಲ್‌ನಲ್ಲಿ ಆಶ್ರಯ ಪಡೆದರು.
ಮಳೆಯಲ್ಲಿಯೇ ಕೆಲಸ: ಚೆಕ್‌ಪೋಸ್ಟ್‌ಗಳಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿ ಮಳೆಯಲ್ಲಿಯೇ ಕೆಲಸ ನಿರ್ವಹಿಸಿದರು. ಅವರ ಸುರಕ್ಷತೆಗೆ ಮೇಲಾಧಿಕಾರಿಗಳು ಸೌಲಭ್ಯ ನೀಡದಿರುವ ಹಿನ್ನೆಲೆಯಲ್ಲಿ ಕೋವಿಡ್ ಆತಂಕದ ಜತೆ ಬೇರೆ ಕಾಯಿಲೆಗಳು ಬರುವ ಆತಂಕದಲ್ಲಿದ್ದಾರೆ.
ಸೌಲಭ್ಯ ಕೊರತೆ: ಹೆದ್ದಾರಿ ಚೆಕ್‌ಪೋಸ್ಟ್‌ಗಳಲ್ಲಿ ಬ್ಯಾರಿಕೇಡ್ ಕೊರತೆ, ರಾತ್ರಿ ವೇಳೆ ವಿದ್ಯುತ್ ದೀಪಗಳಿಲ್ಲ, ಸಿಸಿ ಟೀವಿಗಳಿಲ್ಲ, ಮಳೆ ಬಂದರೆ ನಿಲ್ಲಲು ಜಾಗದ ಕೊರತೆ ಸೇರಿದಂತೆ ಅನೇಕ ಸಮಸ್ಯೆಗಳು ಎದುರಾಗಿದ್ದು, ಸೌಲಭ್ಯ ನೀಡುವಂತೆ ಸಿಬ್ಬಂದಿ ಮನವಿ ಮಾಡಿದ್ದಾರೆ. ಅವಶ್ಯಕತೆಯಿರುವ ಕಡೆ ನಿರ್ಮಿಸಿ: ವಾಹನ ನಿಯಂತ್ರಣ ಹಾಗೂ ತಪಾಸಣೆಗೆ ಸೂಕ್ತ ಸ್ಥಳವಲ್ಲದ ನಗರದ ನವಯುಗ ಟೋಲ್ ಬಳಿ ಬಿಬಿಎಂಪಿಯಿಂದ ತಗಡು ಸೀಟುಗಳ ಮೂಲಕ ಸುರಕ್ಷಿತ ಚೆಕ್‌ಪೋಸ್ಟ್ ಮಾಡಿದ್ದಾರೆ. ಆದರೆ ಗಡಿಯಲ್ಲಿ ವಾಹನ ನಿಯಂತ್ರಣ ಹಾಗೂ ತಪಾಸಣೆ ಮಾಡುವ ಸಿಬ್ಬಂದಿಗೆ ಸೂಕ್ತ ವ್ಯವಸ್ಥೆಗಳಿಲ್ಲದಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Israel; ಪ್ರಧಾನಿ ನಿವಾಸಕ್ಕೆ ಬಾಂಬ್ ದಾಳಿ: 3 ಮಂದಿ ಸೆರೆ
Belgavi:ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆಪ್ತನ ಮೇಲೆ ದುಷ್ಕರ್ಮಿಗಳ ತಂಡದಿಂದ ದಾಳಿ
PM Modi: ಜಗತ್ತಿನಲ್ಲಿ ಎಲ್ಲೇ ಸಮಸ್ಯೆಯಾದರೂ ಭಾರತದಿಂದ ಸ್ಪಂದನೆ
J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ
Udupi: ʼನ್ಯಾಯಾಂಗದಲ್ಲಿ ತಂತ್ರಜ್ಞಾನ ಬಳಕೆಯಿಂದ ಪಾರದರ್ಶಕತೆ, ಸಮಯ, ಹಣವೂ ಉಳಿತಾಯʼ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.