ಮಳೆ ನೀರು ಕೊಯ್ಲು ಕಡ್ಡಾಯ
ಜಿಲ್ಲಾಧಿಕಾರಿ ಸೂಚನೆ ಪಾಲಿಸದಿದ್ದರೆ ಕಟ್ಟಡಗಳ ಪರವಾನಗಿ ರದ್ದು: ಪೌರಾಯುಕ್ತ ಮಂಜುನಾಥ್
Team Udayavani, May 27, 2019, 12:43 PM IST
ದೊಡ್ಡಬಳ್ಳಾಪುರ ನಗರಸಭೆಯಲ್ಲಿ ಹಮ್ಮಿಕೊಂಡಿದ್ದ ಕಲ್ಯಾಣ ಮಂದಿರ ಹಾಗೂ ಚಿತ್ರಮಂದಿರಗಳ ಮಾಲಿಕರ ಸಭೆಯಲ್ಲಿ ನಗರಸಭೆ ಪೌರಾಯುಕ್ತ ಆರ್.ಮಂಜುನಾಥ್ ಮಾತನಾಡಿದರು.
ದೊಡ್ಡಬಳ್ಳಾಪುರ: ನಗರಸಭೆ ನಿಗದಿಪಡಿಸಿರುವ ಹೆಚ್ಚಿನ ಅಳತೆಯ ಕಟ್ಟಡಗಳ ಮಾಲಿಕರು ಮಳೆ ನೀರು ಕೊಯ್ಲು ವ್ಯವಸ್ಥೆ ಮಾಡಿಕೊಳ್ಳದಿದ್ದರೆ ಜಿಲ್ಲಾಧಿಕಾರಿಗಳ ಸೂಚನೆಯಂತೆ ಕಟ್ಟಡಗಳ ಪರವಾನಗಿ ರದ್ದುಪಡಿಸಲು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ನಗರಸಭೆಆರ್.ಮಂಜುನಾಥ್ ಎಚ್ಚರಿಕೆ ನೀಡಿದರು.
ನಗರಸಭೆ ಸಭಾಂಗಣದಲ್ಲಿ ನಡೆದ ಕಲ್ಯಾಣ ಮಂದಿರ, ಚಿತ್ರಮಂದಿರಗಳ ಮಾಲಿಕರ ಸಭೆಯಲ್ಲಿ ಅವರು ಮಾತನಾಡಿದರು.
ಕಟ್ಟಡದ ಪರವಾನಗಿ ರದ್ದು: ನಗರದಲ್ಲಿ ಪ್ರಮುಖ ಕಲ್ಯಾಣ ಮಂದಿರ, ಚಿತ್ರಮಂದಿರ ಗಳು ಮಳೆ ನೀರು ಕೊಯ್ಲು ವ್ಯವಸ್ಥೆ ಮಾಡಿಕೊಂಡಿರುವ ಕುರಿತು ಸಭೆಯಲ್ಲಿ ಮಾಹಿತಿ ನೀಡಿದ ಅವರು, ಮಳೆ ನೀರು ಕೊಯ್ಲು ವ್ಯವಸ್ಥೆ ಮಾಡಿಕೊಳ್ಳುವಂತೆ ಕಲ್ಯಾಣ ಮಂದಿರ, ಚಿತ್ರಮಂದಿರಗಳ ಮಾಲಿಕರಿಗೆ ಈಗಾಗಲೇ ನೊಧೀಟಿಸ್‌ಗಳನ್ನು ನೀಡಲಾಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳ ಸೂಚನೆ ಪಾಲಿಸಿ: ನೊಧೀಟಿಸ್ ನೀಡಿದ್ದರೂ ಇನ್ನೂ ಕೆಲವು ಕಟ್ಟಡಗಳ ಮಾಲಿಕರು ಮಳೆ ನೀರು ಕೊಯ್ಲು ಪದ್ಧತಿಯನ್ನು ಅಳವಡಿಸಿಕೊಂಡಿಲ್ಲ. ಕೆಲವು ಕಟ್ಟಡಗಳ ಮಾಲಿಕರು ಕಟ್ಟಡದ ಅಳತೆಗೆ ಅನುಗುಣವಾಗಿ ವ್ಯವಸ್ಥೆ ಮಾಡಿಕೊಳ್ಳದಿರುವುದು ಕಂಡು ಬಂದಿದೆ. ಆದ್ದರಿಂದ, ಅದನ್ನು ಸರಿಪಡಿಸಿಕೊಳ್ಳುವಂತೆ ಸೂಚಿಸಿದರು.
ಕಟ್ಟಡದ ಪರವಾನಗಿರದ್ದು: ಮಳೆ ನೀರು ಕೊಯ್ಲು ವ್ಯವಸ್ಥೆ ಅಳವಡಿಸಿಕೊಳ್ಳದೇ ಇರುವವರು ಶೀಘ್ರದಲ್ಲಿಯೇ ಅಳವಡಿಸಿಕೊಳ್ಳ ದಿದ್ದರೆ ಅಂತಹವರ ಕಟ್ಟಡದ ಪರವಾನಗಿರದ್ದು ಮಾಡಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು.
ಆಷಾಢದಲ್ಲಿ ಮಾಡಿಸುತ್ತೇವೆ: ಸಭೆಯಲ್ಲಿ ಹಾಜರಿದ್ದ ಕಲ್ಯಾಣ ಮಂದಿರಗಳ ಮಾಲಿಕರು ಮಾತನಾಡಿ, ಈಗ ಕಲ್ಯಾಣ ಮಂದಿರಗಳಲ್ಲಿ ಮದುವೆ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ. ಇವು ಮೂರ್‍ನಾಲ್ಕು ತಿಂಗಳ ಹಿಂದೆಯೇ ಬುಕಿಂಗ್ ಆಗಿರುವುದರಿಂದ ಕಟ್ಟಡದ ಕೆಲಸ ಮಾಡಿಸಲು ಅನಾನುಕೂಲವಾಗುತ್ತದೆ. ಜುಲೈ ತಿಂಗಳ ಆಷಾಢ ಮಾಸದಲ್ಲಿ ಸಾಮಾನ್ಯವಾಗಿ ಶುಭ ಕಾರ್ಯಗಳಿರುವುದಿಲ್ಲ. ಆಗ ಸಂಪ್ ನಿರ್ಮಿಸಲು ಹಾಗೂ ಕಟ್ಟಡದ ದುರಸ್ತಿ ಮಾಡಿಸಲು ಅನುಕೂಲವಾಗುತ್ತದೆ. ಅಲ್ಲಿಯ ವರೆಗೆ ಅವಕಾಶ ನೀಡಬೇಕು ಎಂದು ಅವರು ಮನವಿ ಮಾಡಿದರು.
ಕೆಲವು ಕಟ್ಟಡಗಳ ಮಾಲಿಕರು ಸಂಪ್ ನಿರ್ಮಿಸಲು ಸ್ಥಳಾವಕಾಶದ ಕೊರತೆ, ವಾಸ್ತು ದೋಷದ ಸಮಸ್ಯೆಗಳನ್ನು ಮುಂದಿಟ್ಟರು. ದೊಡ್ಡ ಕಟ್ಟಡಗಳಲ್ಲಿ ಶೀಟ್ಗಳ ಸಮೀಪ ಸಾರಿವೆ ಕಟ್ಟಲು ಸಹ ತಾಂತ್ರಿಕ ಸಮಸ್ಯೆಯಾಗುತ್ತದೆ ಎಂದು ಸಮಸ್ಯೆಗಳನ್ನು ಹೇಳಿಕೊಂಡರು.
ಈ ಕುರಿತು ಪ್ರತಿಕ್ರಿಯಿಸಿದ ಪೌರಾಯುಕ್ತರು ಈಗಾಗಲೇ ಜಿಲ್ಲೆಯ ನಾಲ್ಕು ತಾಲೂಕಿನ ನಗರಸಭೆ ವ್ಯಾಪ್ತಿಯಲ್ಲೂ 30 x 40ಕ್ಕಿಂತಲೂ ಹೆಚ್ಚಿನ ವಿಸ್ತೀರ್ಣ ಹೊಂದಿರುವ ಕಟ್ಟಡಗಳು, ಕೈಗಾರಿಕಾ ಪ್ರದೇಶದ ಕಟ್ಟಡ ಸೇರಿದಂತೆ ಎಲ್ಲರು ಸಹ ಮಳೆ ನೀರು ಸಂಗ್ರಹ ಮಾಡಿಕೊಳ್ಳುವಂತೆ ನೋಟಿಸ್ ನೀಡಿ ಸಭೆ ಗಳನ್ನು ನಡೆಸಲಾಗಿದೆ. ತೀರಾ ಅನಿವಾರ್ಯವಾದರೆ ಸಮಯಾವಕಾಶ ನೀಡಲಾಗುವುದು. ಆದರೆ, ಹೆಚ್ಚು ವಿಳಂಬ ಮಾಡದೇ ಮಳೆ ನೀರು ಸಂಗ್ರಹ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚಿಸಿದರು.
ಸಭೆಯಲ್ಲಿ ಕಲ್ಯಾಣ ಮಂದಿರ, ಚಿತ್ರ ಮಂದಿರಗಳ ಮಾಲಿಕರು ಹಾಗೂ ನಗರಸಭೆ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gas cylinder leakage: ಮನೆ ಛಿದ್ರ ಛಿದ್ರ, ಇಬ್ಬರಿಗೆ ಗಾಯ
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Nelamangala: ಸಾಕು ನಾಯಿ ಸತ್ತಿದ್ದಕ್ಕೆ ಮಾಲಕ ಆತ್ಮಹ*ತ್ಯೆ
Doddaballapur: ಹೊಲದಲ್ಲಿ ಹೂ ಬಿಡಿಸುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ: ಸಾವು
Road Mishap: ಬೈಕ್ ವ್ಹೀಲಿಂಗ್ ಮಾಡುವಾಗ ಕ್ಯಾಂಟರ್‌ಗೆ ಡಿಕ್ಕಿ; ಇಬ್ಬರು ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.