ರಂಜಾನ್: ಹಣ್ಣುಗಳಿಗೆ ಭಾರೀ ಬೇಡಿಕೆ; ಗ್ರಾಹಕರಿಗೆ ದುಬಾರಿಯಾದ ಹಣ್ಣುಗಳು
ಸರಕು ಸಾಗಾಣಿಕೆ ಮಾಡಿಕೊಂಡು ಬರಲು ದುಬಾರಿ ವೆಚ್ಚ ಭರಿಸಬೇಕಾಗಿದೆ
Team Udayavani, Apr 21, 2022, 5:49 PM IST
ದೇವನಹಳ್ಳಿ: ಮುಸ್ಲಿಮರ ಪವಿತ್ರ ಹಬ್ಬವಾದ ರಂಜಾನ್ ಒಂದು ತಿಂಗಳು ಉಪವಾಸ ಇರುವುದರಿಂದ ಹಣ್ಣು-ಹಂಪಲು ತಿನ್ನುವುದರ ಮೂಲಕ ಉಪವಾಸ ಬಿಡುವುದರಿಂದ ಜಿಲ್ಲಾದ್ಯಂತ ಹಣ್ಣುಗಳಿಗೆ ಎಲ್ಲಿಲ್ಲದ ಬೇಡಿಕೆ ಹೆಚ್ಚಾಗಿದೆ. ಗ್ರಾಹಕರು ದುಬಾರಿ ಹಣ ಕೊಟ್ಟು ಹಣ್ಣುಗಳನ್ನು ಖರೀದಿಸುತ್ತಿದ್ದಾರೆ.
ರಂಜಾನ್ ತಿಂಗಳಿನಲ್ಲಿ ಮುಸ್ಲಿಮರು ಒಂದು ತಿಂಗಳು ಬೆಳಗ್ಗೆ ಊಟ ಮಾಡಿದರೆ, ಸಂಜೆಯ ವರೆಗೆ ನೀರು ಸಹ ಕುಡಿಯದೆ ಉಪವಾಸ ಇರುವುದರಿಂದ ಸಂಜೆ ಹಣ್ಣು, ಜ್ಯೂಸ್ ಕುಡಿಯುವುದರ ಮೂಲಕ ಉಪವಾಸ ವನ್ನು ಬಿಡಲಿದ್ದಾರೆ. ರಂಜಾನ್ ಉಪವಾಸ ಪ್ರಾರಂಭವಾದಾಗಿನಿಂದಲೂ ಮುಗಿಯು ವವರೆಗೂ ಒಂದು ತಿಂಗಳು ಹಣ್ಣುಗಳ ಬೆಲೆ ಏರಿಕೆ ಹೆಚ್ಚಾಗಿ ರುತ್ತದೆ. ಒಂದೊಂದು ಹಣ್ಣುಗಳು ಒಂದೊಂದು ರೀತಿ ಬೆಲೆ ಏರಿಕೆ ಆಗಿದೆ. ಮುಸ್ಲಿಮರು ಒಂದು ಬಾರಿಗೆ 500 ರಿಂದ 600 ರೂ. ಬೆಲೆಯ ಹಣ್ಣು ಖರೀದಿ ಸುತ್ತಾರೆ.ಕರ್ಜೂರ, ಹೆಚ್ಚಾಗಿ ಬಳಸುವುದರಿಂದ ಅದರ ಬೆಲೆಯೂ ದುಬಾರಿಯಾಗಿದೆ.
ಗಗನಕ್ಕೇರಿದ ಹಣ್ಣಿನ ಬೆಲೆ: ರಂಜಾನ್ ಮಾಸ ಪ್ರಾರಂಭವಾಗಿದೆ. ಈ ತಿಂಗಳಲ್ಲಿ ಉಪವಾಸ ಕಡ್ಡಾಯವಾಗಿದೆ. ಒಂದು ತಿಂಗಳು ಪೂರ್ತಿ ಉಪವಾಸ ಮಾಡುವ ಮೂಲಕ ಅಲ್ಲಾಹನ ಸ್ಮರಣೆ ಮಾಡುವ ಹಾಗೂ ಎಲ್ಲರೂ ಸಂಭ್ರಮಿಸುವ ಬಹುದೊಡ್ಡ ಹಬ್ಬವಾಗಿದೆ. ಹಣ್ಣಿನ ಗಾಡಿಗಳಿಗೆ ಇಫ್ತಾರ್ ವೇಳೆ ಬಿಡುವಿಲ್ಲದ ಕೆಲಸ. ಅದುವರೆಗೆ ಹಸಿದಿದ್ದವರನ್ನು ತಣಿಸುವುದು ಇದೇ ಅಂಗಡಿಗಳು. ಪಪ್ಪಾಯ, ಬಾಳೆಹಣ್ಣು, ಮೋಸಂಬಿ, ಆರೆಂಜ್, ಅನಾನಸ್, ಸೇಬು, ಕರಬೂಜ, ಕಲ್ಲಂಗಡಿ ಹಣ್ಣು, ದ್ರಾಕ್ಷಿ, ಶರಬತ್ತು, ಸೌತೇಕಾಯಿ, ಆಷ್, ಇತರೆ ಹೆಚ್ಚಿನ ಹಣ್ಣು ಹೆಚ್ಚಾಗಿ ರಂಜಾನ್ ಸಂದರ್ಭದಲ್ಲಿ ಉಪಯೋಗಿಸುತ್ತಾರೆ.ಅದಕ್ಕಾಗಿ ಹಣ್ಣಿನ ಬೆಲೆ ಗಗನಕ್ಕೇರಿದೆ.
ದುಬಾರಿ ವೆಚ್ಚ ಭರಿಸಬೇಕು: ಪೆಟ್ರೋಲ್, ಡೀಸೆಲ್ ಅಗತ್ಯ ವಸ್ತುಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಒಂದೊಂದು ಬೆಲೆಯೂ ದುಬಾರಿ ಆಗುತ್ತಿದೆ. ಪೆಟ್ರೋಲ್, ಡೀಸೆಲ್ ಹೆಚ್ಚಾಗಿರುವುದರಿಂದ ಬೆಂಗಳೂರು ಇತರೆ ಕಡೆಗಳಿಂದ ಸರಕು ಸಾಗಾಣಿಕೆ ಮಾಡಿಕೊಂಡು ಬರಲು ದುಬಾರಿ ವೆಚ್ಚ ಭರಿಸಬೇಕಾಗಿದೆ ಎಂದು ವ್ಯಾಪಾರಸ್ಥರು ಹೇಳುತ್ತಾರೆ.
ಆರ್ಥಿಕ ಸಂಕಷ್ಟದಿಂದ ಪಾರು: ಕಳೆದ ಎರಡು ವರ್ಷಗಳಿಂದ ಕೊರೊನಾ ಇದ್ದಿದ್ದರಿಂದ ಹಣ್ಣಿನ ವ್ಯಾಪಾರಿಗಳಿಗೆ ಲಾಕ್‌ಡೌನ್, ಸೀಲ್‌ಡೌನ್‌ಗಳು ರಂಜಾನ್ ಮಾಸದಲ್ಲಿ ಇದಿದ್ದರಿಂದ ವ್ಯಾಪಾರಸ್ಥರಿಗೆ ಆರ್ಥಿಕ ನಷ್ಟ ಎದುರಿಸುವಂತಾಗಿತ್ತು. ಈ ಬಾರಿ ಕೊರೊನಾ ಇಳಿಮುಖ ಆಗಿರುವುದರಿಂದ ಹಣ್ಣಿನ ವ್ಯಾಪಾರಿಗಳು ಆರ್ಥಿಕ ಸಂಕಷ್ಟದಿಂದ ಪಾರಾಗುವಂ ತಾಗಿದೆ ಎಂದು ಹಣ್ಣಿನ ವ್ಯಾಪಾರಿಗಳು ಹೇಳುತ್ತಾರೆ.
ವಿವಿಧ ಹಣ್ಣಿಗಳ ಬೆಲೆ: ಸೇಬು ಒಂದು ಕೆ.ಜಿ.ಗೆ 200 ರೂ., ಸಪೋಟಾ 60 ರೂ., ಆರೆಂಜ್ 160 ರೂ., ಪಚ್ಚಬಾಳೆಹಣ್ಣು 30 ರೂ., ಏಲಕ್ಕಿ ಬಾಳೆಹಣ್ಣು 70 ರೂ., ದ್ರಾಕ್ಷಿ 100 ರೂ., ಮೋಸಂಬಿ 100 ರೂ., ದಾಳಿಂಬೆ 200 ರೂ., ಮಾವಿನಹಣ್ಣು 120 ರೂ., ಕರಬೂಜ 30ರೂ., ಕಲ್ಲಂಗಡಿ ಹಣ್ಣು 40 ರೂ., ಪಪ್ಪಾಯಿ 40ರೂ., ಅನಾನಸ್ 60 ರೂ. ಈ ರೀತಿ ಮಾರಾಟವಾಗುತ್ತಿದೆ.
ರಂಜಾನ್ ತಿಂಗಳ ವೇಳೆಯಲ್ಲಿ ಹಣ್ಣುಗಳ ಬೆಲೆ ಏರಿಕೆ ಹೆಚ್ಚಾಗಿ ಕಂಡು ಬರುತ್ತದೆ. ಹಣ್ಣುಗಳ ವ್ಯಾಪಾರ ಜೋರಾಗಿ ಮಾಡಲಾಗುತ್ತದೆ. ಎಲೆಕ್ಟ್ರಾನಿಕ್ ಸಿಟಿ ಹತ್ತಿರದ ಮಾರುಕಟ್ಟೆ, ಕೆ.ಆರ್.ಮಾರುಕಟ್ಟೆ, ರಸಲ್ ಮಾರುಕಟ್ಟೆ ಇತರೆ ಕಡೆಗಳಿಂದ ಹಣ್ಣನ್ನು ತರಲಾಗುತ್ತದೆ. ದುಬಾರಿ ವೆಚ್ಚದಲ್ಲಿ ಹಣ್ಣನ್ನು ತಂದು ಮಾರಾಟ ಮಾಡಲಾಗುತ್ತಿದೆ.
● ಬಾಬು, ಹಣ್ಣಿನ ವ್ಯಾಪಾರಿ
ರಂಜಾನ್ ವೇಳೆ ಹಣ್ಣಿನ ಬೆಲೆ ಎಷ್ಟೇ ದುಬಾರಿಯಾದರೂ ಹಣ್ಣನ್ನು ತಂದು ಸೇವನೆ ಮಾಡಬೇಕು. ರಂಜಾನ್ ನಮ್ಮ ಪವಿತ್ರ ಹಬ್ಬ. ಅದರ ಆಚರಣೆ ನಮಗೆ ಮುಖ್ಯವಾಗಿರುತ್ತದೆ. ಹಣ್ಣು-ಹಂಪಲು ತಿಂದು ಉಪವಾಸವನ್ನು ಬಿಡುತ್ತೇವೆ. ರಂಜಾನ್ ಹಬ್ಬ ಆಚರಿಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಇಫ್ತಾರ್ ವೇಳೆ ಎಲ್ಲ ರೀತಿ ಹಣ್ಣು ತೆಗೆದುಕೊಂಡು ಬರುತ್ತೇವೆ.
● ಅಬ್ದುಲ್, ಗ್ರಾಹಕ
*ಎಸ್.ಮಹೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.