ಅತ್ಯಾಚಾರ: ಆರೋಪಿ ಬಂಧನ
Team Udayavani, Jun 18, 2021, 3:31 PM IST
ಆನೇಕಲ್: ಫೇಸ್‌ಬುಕ್‌ನಲ್ಲಿ ಪರಿಚಯವಾದ ಮಹಿಳೆಗೆ ಸಹಾಯ ಮಾಡುವುದಾಗಿ ಮನೆಗೆ ಕರೆಸಿಕೊಂಡು ಗ್ರಾಪಂ ಸದಸ್ಯ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಿ ಮಹಿಳೆ ಬನ್ನೇರುಘಟ್ಟ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬನ್ನೇರುಘಟ್ಟ ಗ್ರಾಪಂ ಬಿಲವಾರದಹಳ್ಳಿ ಸದಸ್ಯ ಅಹಮ್ಮದ್ ಪಾಷ ಎಂಬಾತನ ಮೇಲೆ ಈ ಅತ್ಯಾಚಾರದ ಆರೋಪ ಕೇಳಿಬಂದಿದ್ದು, ದೂರು ದಾಖಲಿಸಿದ್ದಾರೆ. ಅಹಮ್ಮದ್ ಪಾಷ ಹಾಗೂ ಆತನ ಕಾರಿನ ಚಾಲಕ ವಾಹಿಬ್‌ನನ್ನ ಬನ್ನೇರುಘಟ್ಟ ಪೊಲೀಸರು ಬಂಧಿಸಿದ್ದಾರೆ.
ಬನ್ನೇರುಘಟ್ಟ ಸಮೀಪದ ಶಾನಭೋಗನಹಳ್ಳಿಯಲ್ಲಿರುವ ತನ್ನ ಮನೆಗೆ 28 ವರ್ಷದ ಮಹಿಳೆಯನ್ನು ಕರೆಸಿಕೊಂಡು ಅತ್ಯಾಚಾರ ಎಸಗಿದ್ದಾನೆ.
ಕಳೆದ 15 ದಿನಗಳ ಹಿಂದೆ ಫೇಸ್‌ಬುಕ್‌ನಲ್ಲಿ ಪರಿಚಯ ಆಗಿದ್ದ ಹೆಬ್ಟಾಳದ ಮಹಿಳೆಗೆ ಅಹಮ್ಮದ್ ಪಾಷ ಪರಿಚಯ ಆಗಿದ್ದ, ನಂತರ ಮಹಿಳೆಯ ಪೋನ್ ನಂಬರ್ ಪಡೆದು ಆಕೆಗೆ ನಾನು ಬನ್ನೇರುಘಟ್ಟ ಕಾರ್ಪೋರೇಟರ್ ಎಂದು ಹೇಳಿ, ಕೊರೊನಾ ವೇಳೆ ದಿನಸಿ ಕಿಟ್ ನೀಡುವ ಫೋಟೋಗಳನ್ನು ಮಹಿಳೆಗೆ ಕಳುಹಿಸಿಕೊಟ್ಟಿದ್ದ, ಇದಾದ ಬಳಿಕ ಮಹಿಳೆ ಆತನ ಬಳಿ ಕೆಲಸ ಬೇಕು ಎಂದು ಕೇಳಿದಾಗ, ಕೆಲಸ ಕೊಡಿಸುವುದಾಗಿ ಹೇಳಿ ಮಹಿಳೆಯನ್ನು ಮನೆಗೆ ಕರೆಸಿಕೊಂಡ ಪಂಚಾಯಿತಿ ಸದಸ್ಯ ಆಕೆಗೆ ಗನ್ ತೋರಿಸಿ ಅತ್ಯಾಚಾರವೆಸಗಿದ್ದಾನೆ. ಮಹಿಳೆಯನ್ನು ಬೆಂಗಳೂರಿನಿಂದ ತನ್ನ ಮನೆಗೆ ಈತನ ಕಾರು ಚಾಲಕನ ಮೂಲಕ ಕರೆಸಿಕೊಂಡಿದ್ದ ಕಿರಾತಕ, ಮಹಿಳೆಯ ಇಬ್ಬರು ಮಕ್ಕಳನ್ನು ಹಾಲ್‌ನಲ್ಲಿ ಆಟವಾಡಲು ಹೇಳಿ ಮಹಿಳೆಯನ್ನು ಬೆಡ್ ರೂಂಗೆ ಎಳೆದೊಯ್ದು ಅತ್ಯಾಚಾರಕ್ಕೆ ಮುಂದಾಗಿ¨ªಾನೆ. ಇದಕ್ಕೆ ಮಹಿಳೆ ವಿರೋಧಿಸಿದಾಗ ಗನ್ ತೋರಿಸಿ ಬೆದರಿಸಿದ್ದಾನೆ. ಆಕೆ ನಗ್ನ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿಯೂ ಹೆದರಿಸಿದ್ದಾನೆ ಎಂದು ದೂರು ದಾಖಲಾಗಿದೆ.
ಇನ್ನೂ ಈತ ಬಿಲವಾರದಹಳ್ಳಿ ಗ್ರಾಪಂ ಸದಸ್ಯನಾಗಿದ್ದ, ಜೊತೆಗೆ ರಿಯಲ್ ಎಸ್ಟೇಟ್ ಬಿಸಿನೆಸ್ ಸೇರಿದಂತೆ ವಿವಿಧ ಬಿಸಿನೆಸ್ ಮಾಡುತ್ತಿದ್ದ. ಇದೇ ರೀತಿ ಸುಮಾರು 10ಕ್ಕೂ ಹೆಚ್ಚು ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.