ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಗದ್ದುಗೆಗೆ ಪೈಪೋಟಿ

Team Udayavani, Jul 15, 2023, 1:41 PM IST

ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಗದ್ದುಗೆಗೆ ಪೈಪೋಟಿ

ದೇವನಹಳ್ಳಿ: ಗ್ರಾಪಂಗಳ ಎರಡನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಗಳಿಗೆ ಮೀಸಲು ಪಟ್ಟಿ ಪ್ರಕಟವಾದ ಹಿನ್ನೆಲೆ, ಕುರ್ಚಿ ಗಾಗಿ ಸದಸ್ಯರ ನಡುವೆ ತೀವ್ರ ಪೈಪೋಟಿ ಶುರುವಾಗಿದೆ.

ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಸದಸ್ಯರನ್ನು ವಿಶ್ವಾಸಕ್ಕೆ ತೆಗೆದು ಕೊಳ್ಳಲು ನಾನಾ ಕಸರತ್ತು ಆರಂಭಿ ಸಿದ್ದು, ಚುನಾವಣೆ ಘೋಷಣೆಗಾಗಿ ಕಾಯು ತ್ತಿದ್ದಾರೆ. ಗ್ರಾಮ ಪಂಚಾಯಿತಿ ಚುನಾವ ಣೆಯಲ್ಲಿ ಯಾವುದೇ ಪಕ್ಷಕ್ಕೂ ಮಾನ್ಯತೆ ಇಲ್ಲ. ಹೀಗಾಗಿ, ಸದಸ್ಯರು ಯಾರಿಗೆ ಬೇಕಾದರೂ ಮತ ಹಾಕುವ ಸ್ವಾತಂತ್ರ್ಯ ಇರುತ್ತದೆ. ಈ ಕಾರಣದಿಂದ ಪಂಚಾ ಯಿತಿ ವ್ಯಾಪ್ತಿಯ ಪ್ರಭಾವಿ ಮುಖಂಡರು ತಮ್ಮ ಪ್ರಭಾವ ಬಳಕೆ ಮಾಡಿ ಕೊಂಡು, ತಮಗೆ ಬೆಂಬಲ ನೀಡುವಂತೆ ಸದಸ್ಯರ ಮನೆ ಬಾಗಿಲುಗಳಿಗೆ ಎಡತಾಕುತ್ತಿದ್ದಾರೆ.

ಸದಸ್ಯರಿಗೆ ಔತಣಕೂಟ: ಮೊದಲ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಅವಧಿ ಕೊನೆ ಗೊಳ್ಳುವ ಮೊದಲೇ ಎರಡನೇ ಅವಧಿಯ ಮೀಸಲಾತಿ ನಿಗದಿಪಡಿಸಲಾಗಿದೆ. ಸದಸ್ಯರು ಅಧಿಕಾರ ಗಿಟ್ಟಿಸಿ ಕೊಳ್ಳಲು ತಂತ್ರಗಾರಿಕೆ ಆರಂಭಿಸಿದ್ದಾರೆ. ಸ್ಪರ್ಧಾ ಕಾಂಕ್ಷಿಗಳು ತಮ್ಮ ಪರವಾಗಿ ಸದಸ್ಯರ ಬಲ ಹೆಚ್ಚಿಸಿಕೊಳ್ಳಲು ಕಾರ್ಯ ಯೋಜನೆ ರೂಪಿಸಿದ್ದಾರೆ. ಕೆಲವರು ಸದಸ್ಯರಿಗೆ ಪ್ರವಾಸದ ಭಾಗ್ಯ ಕರುಣಿಸಿದರೆ, ಕೆಲವರು ಸಭೆಗಳ ನೆಪದಲ್ಲಿ ಸದಸ್ಯರಿಗೆ ಔತಣಕೂಟ ಏರ್ಪಡಿಸುತ್ತಿದ್ದಾರೆ.

ಆಣೆ ಪ್ರಮಾಣ: ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಸದಸ್ಯರ ಮನವೊಲಿಸಿ ಅವರಿಂದ ಒಪ್ಪಿಗೆ ಪಡೆದುಕೊಂಡ ನಂತರ, ಅವರ ಬಳಿಯಲ್ಲಿ ಆಣೆ, ಪ್ರಮಾಣ ಮಾಡಿಸುತ್ತಿರುವ ಪ್ರಕ್ರಿಯೆಗಳು ಕೂಡಾ ತೆರೆಮರೆಯಲ್ಲಿ ನಡೆಯುತ್ತಿದ್ದು, ಚುನಾವಣೆ ದಿನಾಂಕ ಘೋಷಣೆಗಾಗಿ ಕಾಯುತ್ತಿದ್ದಾರೆ.

ಚುನಾವಣೆ ಅಧಿಕಾರಿಗಳ ನೇಮಕ: ತಾಲೂಕಿನಲ್ಲಿ ಈಗಾಗಲೇ ಗ್ರಾಪಂ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆ ಸಂಬಂಧಪಟ್ಟಂತೆ ಚುನಾವಣೆ ಅಧಿಕಾರಿಗಳ ನೇಮಕ ಹಾಗೂ ದಿನಾಂಕವನ್ನು ನಿಗದಿಪಡಿಸಲಾಗಿದೆ. ತಾಲೂಕಿನ ವಿವಿಧ ಪಂಚಾಯಿತಿಗಳಿಗೆ ಚುನಾವಣೆ ಅಧಿಕಾರಿಗಳ ನೇಮಕ ಮಾಡಿ ದಿನಾಂಕ ನಿಗದಿ ಮಾಡಿ ಘೋಷಣೆ ಮಾತ್ರ ಬಾಕಿ ಇದೆ.

ಅಧಿಕಾರ ಅನಿವಾರ್ಯ: ಶೀಘ್ರವಾಗಿ ಜಿಪಂ, ತಾಪಂ ಚುನಾವಣೆಗೆ ಮೀಸಲಾತಿಯ ಘೋಷಣೆ ಆಗಲಿದೆ. ಗ್ರಾಮೀಣ ಭಾಗದ ಮತದಾರರ ಒಲವು ಗಿಟ್ಟಿಸಿಕೊಳ್ಳಬೇಕಾದರೆ ಗ್ರಾಪಂಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದುಕೊಳ್ಳುವುದು ಅನಿವಾರ್ಯವಾಗಿದ್ದು, ಈ ನಿಟ್ಟಿನಲ್ಲಿ ತೀವ್ರ ಕಸರತ್ತುಗಳು ನಡೆಯುತ್ತಿವೆ. ಕೆಲವು ಸದಸ್ಯರಿಗೆ ಪ್ರವಾಸದ ಭಾಗ್ಯವೂ ಲಭಿಸಿದೆ.

ಟಾಪ್ ನ್ಯೂಸ್

Mangaluru: ನೇತ್ರಾವತಿ ಸೇತುವೆ ಬಳಿ ಬೈಕ್ ಅಪಘಾತ… ಓರ್ವ ಮೃತ್ಯು, ಮತ್ತೋರ್ವ ಗಂಭೀರ

Mangaluru: ನೇತ್ರಾವತಿ ಸೇತುವೆ ಬಳಿ ಬೈಕ್ ಅಪಘಾತ… ಓರ್ವ ಮೃತ್ಯು, ಮತ್ತೋರ್ವ ಗಂಭೀರ

Online Trading: ಉಡುಪಿ ಮೂಲದ ವ್ಯಕ್ತಿಗೆ 27 ಲಕ್ಷ ರೂ. ವಂಚನೆ

Online Trading: ಆನ್‌ಲೈನ್‌ ಲಿಂಕ್‌ ಅಪ್ಲಿಕೇಶನ್‌ ಬಳಸಿ 27 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ

Panambur: ಬೀಚ್‌ ಬಳಿ ನಿಲ್ಲಿಸಿದ್ದ ಕಾರಿನಿಂದ ಚಿನ್ನಾಭರಣ, ನಗದು ಕಳವು

Panambur: ಬೀಚ್‌ ಬಳಿ ನಿಲ್ಲಿಸಿದ್ದ ಕಾರಿನಿಂದ ಚಿನ್ನಾಭರಣ, ನಗದು ಕಳವು

India A vs Australia A: ಸುದರ್ಶನ್‌ 96, ಪಡಿಕ್ಕಲ್‌ 80, ಆಸೀಸ್‌ಗೆ ಭಾರತ ತಿರುಗೇಟು

India A vs Australia A: ಸುದರ್ಶನ್‌ 96, ಪಡಿಕ್ಕಲ್‌ 80, ಆಸೀಸ್‌ಗೆ ಭಾರತ ತಿರುಗೇಟು

Jammu – Kashmir: ಮುಂದುವರೆದ ಉಗ್ರರ ದಾಳಿ… ಇಬ್ಬರು ವಲಸೆ ಕಾರ್ಮಿಕರಿಗೆ ಗಾಯ

Jammu – Kashmir: ಮುಂದುವರೆದ ಉಗ್ರರ ದಾಳಿ… ಇಬ್ಬರು ವಲಸೆ ಕಾರ್ಮಿಕರಿಗೆ ಗಾಯ

1-reeee

BJP ಸ್ನೇಹಿತರಿಗೆ ಕೈ ಜೋಡಿಸಿ ಮನವಿ ಮಾಡಿಕೊಳ್ಳುವೆ, ದಾರಿ ತಪ್ಪಿಸಬೇಡಿ: ಜಮೀರ್‌

1st ODI: ಇಂಗ್ಲೆಂಡ್‌ ವಿರುದ್ಧ ವಿಂಡೀಸ್‌ಗೆ 8 ವಿಕೆಟ್‌ ಜಯ

1st ODI: ಇಂಗ್ಲೆಂಡ್‌ ವಿರುದ್ಧ ವಿಂಡೀಸ್‌ಗೆ 8 ವಿಕೆಟ್‌ ಜಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Market: ಬೆಲೆ ಕುಸಿತ; ಬೂದು ಕುಂಬಳ ಬೀದಿಪಾಲು!

Market: ಬೆಲೆ ಕುಸಿತ; ಬೂದು ಕುಂಬಳ ಬೀದಿಪಾಲು!

Crime: ಪಂಚೆ ಧರಿಸು ಎಂದಿದ್ದಕ್ಕೆ ಅಪ್ಪನನ್ನೇ ಕೊಂದ ಮಗ!

Crime: ಪಂಚೆ ಧರಿಸು ಎಂದಿದ್ದಕ್ಕೆ ಅಪ್ಪನನ್ನೇ ಕೊಂದ ಮಗ!

9-bng

Channapatna: ಸಾಲಕ್ಕೆ ಹೆದರಿ ದಂಪತಿ ನೇಣಿಗೆ ಶರಣು

7

Arrested: ಪಾಕ್‌ ಪ್ರಜೆಗಳಿಗೆ ಸಹಕಾರ; ಪೊಲೀಸರಿಂದ ಕಿಂಗ್‌ಪಿನ್‌ ಸೆರೆ

Road Mishap ಬೈಕ್‌ ಡಿಕ್ಕಿ: ಪಾದಚಾರಿ ಸಾವು

Road Mishap ಬೈಕ್‌ ಡಿಕ್ಕಿ: ಪಾದಚಾರಿ ಸಾವು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Mangaluru: ನೇತ್ರಾವತಿ ಸೇತುವೆ ಬಳಿ ಬೈಕ್ ಅಪಘಾತ… ಓರ್ವ ಮೃತ್ಯು, ಮತ್ತೋರ್ವ ಗಂಭೀರ

Mangaluru: ನೇತ್ರಾವತಿ ಸೇತುವೆ ಬಳಿ ಬೈಕ್ ಅಪಘಾತ… ಓರ್ವ ಮೃತ್ಯು, ಮತ್ತೋರ್ವ ಗಂಭೀರ

Online Trading: ಉಡುಪಿ ಮೂಲದ ವ್ಯಕ್ತಿಗೆ 27 ಲಕ್ಷ ರೂ. ವಂಚನೆ

Online Trading: ಆನ್‌ಲೈನ್‌ ಲಿಂಕ್‌ ಅಪ್ಲಿಕೇಶನ್‌ ಬಳಸಿ 27 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ

Panambur: ಬೀಚ್‌ ಬಳಿ ನಿಲ್ಲಿಸಿದ್ದ ಕಾರಿನಿಂದ ಚಿನ್ನಾಭರಣ, ನಗದು ಕಳವು

Panambur: ಬೀಚ್‌ ಬಳಿ ನಿಲ್ಲಿಸಿದ್ದ ಕಾರಿನಿಂದ ಚಿನ್ನಾಭರಣ, ನಗದು ಕಳವು

India A vs Australia A: ಸುದರ್ಶನ್‌ 96, ಪಡಿಕ್ಕಲ್‌ 80, ಆಸೀಸ್‌ಗೆ ಭಾರತ ತಿರುಗೇಟು

India A vs Australia A: ಸುದರ್ಶನ್‌ 96, ಪಡಿಕ್ಕಲ್‌ 80, ಆಸೀಸ್‌ಗೆ ಭಾರತ ತಿರುಗೇಟು

Jammu – Kashmir: ಮುಂದುವರೆದ ಉಗ್ರರ ದಾಳಿ… ಇಬ್ಬರು ವಲಸೆ ಕಾರ್ಮಿಕರಿಗೆ ಗಾಯ

Jammu – Kashmir: ಮುಂದುವರೆದ ಉಗ್ರರ ದಾಳಿ… ಇಬ್ಬರು ವಲಸೆ ಕಾರ್ಮಿಕರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.