ಸಫಾಯಿ ಕರ್ಮಚಾರಿಗಳ ಸಮಸ್ಯೆಗೆ ಸ್ಪಂದಿಸಿ
Team Udayavani, Feb 10, 2021, 1:48 PM IST
ದೇವನಹಳ್ಳಿ: ಜೀತ ವಿಮುಕ್ತರ, ಸಫಾಯಿ ಕರ್ಮಚಾರಿಗಳಿಗೆ ಸರ್ಕಾರದಿಂದ ಸಾಕಷ್ಟು ಯೋಜನೆಗಳಿದ್ದು, ಅದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಂ.ಆರ್.ರವಿಕುಮಾರ್ ತಿಳಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಜಿಪಂ, ಸಮಾಜ ಕಲ್ಯಾಣ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾ ಯತ್ ರಾಜ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಜೀತ ವಿಮುಕ್ತರ, ಸಫಾಯಿ ಕರ್ಮ ಚಾರಿ ಗಳ ಪುನರ್ವಸತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಜೀತ ವಿಮುಕ್ತರಿಗೆ ಹಾಗು ಸಫಾಯಿ ಕರ್ಮ ಚಾರಿಗಳಿಗೆ ನರೇಗಾ ಮತ್ತು ವಸತಿ ಯೋಜನೆಗಳಲ್ಲಿ ಮೊದಲ ಪ್ರಾಮುಖ್ಯತೆ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು. ಯಾರಾದರೂ ಅರ್ಜಿ ಹಿಡಿದು ಬಂದಲ್ಲಿ, ಮೊದಲ ಪ್ರಾಮುಖ್ಯತೆಯನ್ನು ಸಫಾಯಿ ಕರ್ಮಚಾರಿಗಳಿಗೆಅಧಿಕಾರಿಗಳು ನೀಡಬೇಕು. ಸರ್ಕಾರ ಸಫಾಯಿಕರ್ಮ ಚಾರಿ ನಿಗಮವನ್ನು ಸ್ಥಾಪಿಸಿದ್ದು, ಇದರಲ್ಲಿ ಸಿಗುವಂತಹ ಸಾಲ ಸೌಲಭ್ಯ ಪಡೆದುಕೊಂಡು ಸ್ವಾವಲಂಬನೆಯ ಜೀವನವನ್ನು ಕಟ್ಟಿಕೊಳ್ಳುವಂತಾಗಬೇಕುಎಂದರು.
ಮಲಹೊರುವ ಪದ್ಧತಿ ನಿಷೇಧ: ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಕೃಷ್ಣಪ್ಪ ಮಾತನಾಡಿ, 2013ರ ಅಡಿಯಲ್ಲಿ ಮಲಹೊರುವ ಪದ್ಧತಿ ನಿಷೇಧಮಾಡಿದೆ. ನೈರ್ಮಲ್ಯ ರಹಿತ ಶೌಚಾಲಯ ಅಥವಾತೆರೆದ ಚರಂಡಿ ಅಥವಾ ಗುಂಡಿಯಲ್ಲಿರುವ ಮಲಮೂತ್ರವನ್ನು ಅದು ಸಂಪೂರ್ಣವಾಗಿ ಕೊಳೆಯುವಮುಂಚೆಯೇ ದೈಹಿಕವಾಗಿ ಸ್ವಚ್ಛಗೊಳಿಸಲು, ಸಾಗಿ ಸಲು, ತೆಗೆದು ಹಾಕಲು ಅಥವಾ ಅದನ್ನು ಯಾವುದೇ ರೀತಿಯಲ್ಲಿ ನಿರ್ವಹಿಸುವ ಸ್ಥಳೀಯ ಪ್ರಾಧಿಕಾರದಿಂದ ಅಥವಾ ಗುತ್ತಿದಾರರಿಂದ ನೇಮಕ ಗೊಂಡಿರುವ ವ್ಯಕ್ತಿಗಳು. ರಾಜ್ಯಾದ್ಯಂತ ಜೀತ ವಿಮು ಕ್ತರ ಮತ್ತು ಸಫಾಯಿ ಕರ್ಮಚಾರಿಗಳ ಸರ್ವೇ ಕಾರ್ಯ ನಡೆಯುತ್ತಿದೆ ಎಂದರು.
ಮನೆ ಕಟ್ಟಿಕೊಳ್ಳಲು ಅನುದಾನ: ಸಫಾಯಿ ಕರ್ಮಚಾರಿಗಳು ಮನೆ ಕಟ್ಟಿಕೊಳ್ಳಲು ಗ್ರಾಮೀಣ ಭಾಗದಲ್ಲಿ ಮೂರುವರೆ ಲಕ್ಷ ಹಾಗೂ ನಗರ ಪ್ರದೇಶದಲ್ಲಿ ಐದುವರೆ ಲಕ್ಷ ರೂ. ಅನುದಾನವನ್ನು ನೀಡಲಾಗುತ್ತದೆ. ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಾಯ ಹಾಗೂ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ ಎಂದು ವಿವರಿಸಿದರು.
ಲೀಡ್‌ಬ್ಯಾಂಕ್ ವ್ಯವಸ್ಥಾಪಕ ಮಧುಸೂದನ್, ದೇವನಹಳ್ಳಿ ತಾಪಂ ಇಒ ಎಚ್.ಡಿ.ವಸಂತ್‌ಕುಮಾರ್, ದೊಡ್ಡಬಳ್ಳಾಪುರ ತಾಪಂ ಇಒ ಟಿ.ಮುರಡಯ್ಯ, ಹೊಸಕೋಟೆ ತಾಪಂ ಇಒ ಶ್ರೀನಾಥ್ ಗೌಡ, ನೆಲಮಂಗಲ ತಾಪಂ ಇಒ ಲಕ್ಷ್ಮೀನಾರಾಯಣಸ್ವಾಮಿ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕನರಸಿಂಹಮೂರ್ತಿ, ದೇವರಾಜು ಅರಸು ಅಭಿವೃದ್ಧಿನಿಗಮದ ವ್ಯವಸ್ಥಾಪಕಿ ಸುಜಾತಾ, ದೇವನಹಳ್ಳಿ ಪುರಸಭೆ ಮುಖ್ಯಾಧಿಕಾರಿ ಎ.ಎಚ್.ನಾಗರಾಜ್,ಸಫಾಯಿ ಕರ್ಮಚಾರಿ ಸಮಿತಿಯ ಜಿಲ್ಲಾ ಸಂಚಾಲಕ ಮ್ಯಾಥ್ಯು ಮುನಿಯಪ್ಪ, ಮೀನುಗಾರಿಕೆ ಉಪನಿರ್ದೇಶಕ ನಾಗರಾಜ್, ಸಮಾಜ ಕಲ್ಯಾಣ ಇಳಾಖೆ ತಾಲೂಕು ಸಹಾಯಕ ನಿರ್ದೇಶಕ ಬೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರ ಶ್ರೀನಿವಾಸ್, ನಾಲ್ಕು ತಾಲೂಕಿನ ಪಿಡಿಒಗಳು ಇದ್ದರು.
ಯಂತ್ರಗಳ ಮೂಲಕ ಸ್ವಚ್ಛಗೊಳಿಸಬೇಕು ; ಸಾರ್ವಜನಿಕರು ಸ್ಥಳೀಯ ಸಂಸ್ಥೆಗಳನ್ನು ಸಂಪರ್ಕಿಸಿ ಯಂತ್ರಗಳ ಮೂಲಕ ಮಲಗುಂಡಿಗಳನ್ನು ಸ್ವತ್ಛಗೊಳಿಸಿಕೊಳ್ಳಬೇಕು. ಅನಾದಿಕಾಲದಿಂದ ದೇಶದಲ್ಲಿ ನಡೆದುಕೊಂಡು ಬಂದ ಮಲ ಹೊರುವ ಅನಾಗರಿಕ ಪದ್ಧತಿ ಈ ದಿನದಿಂದಲೇ ಅಂತ್ಯವಾಗಲಿ. ಎಸ್‌ಸಿ, ಎಸ್‌ಟಿ ಇಲಾಖೆಗಳು ಒಳಗೊಂಡಂತೆ ಎಲ್ಲ ವಿವಿಧ ಇಲಾಖೆಗಳು ಜೀತ ವಿಮುಕ್ತರ ಹಾಗೂ ಸಫಾಯಿ ಕರ್ಮಚಾರಿಗಳಿಗೆ ಬರುವ ಸೌಲಭ್ಯಕಡ್ಡಾಯವಾಗಿ ನೀಡಬೇಕು ಎಂದು ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಂ.ಆರ್. ರವಿಕುಮಾರ್ ಹೇಳಿದರು.
5 ಲಕ್ಷ ರೂ. ದಂಡ :
ಮಲಹೊರುವ ಕೆಲಸ ಮಾಡಿಸಿದವರಿಗೆ ಮೊದಲ ಹಂತದಲ್ಲಿ ಉಲ್ಲಂಘನೆ ಮಾಡಿದರೆ, 50 ಸಾವಿರರೂ. ದಂಡ, 1 ವರ್ಷ ಜೈಲು ಶಿಕ್ಷೆ ಹಾಗೂಎರಡನೇ ಬಾರಿ ಅದೇ ತಪ್ಪನ್ನು ಪುನರಾವರ್ತನೆಮಾಡಿದರೆ, 1 ಲಕ್ಷ ರೂ. ದಂಡ, 2 ವರ್ಷ ಜೈಲು,ಮೂರನೇ ಬಾರಿ ಅದೇ ತಪ್ಪನ್ನು ಮಾಡಿದರೆ, 5ಲಕ್ಷ ರೂ. ದಂಡ, 5 ವರ್ಷ ಶಿಕ್ಷೆಗೆಗುರಿಯಾಗಲಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಕೃಷ್ಣಪ್ಪ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Nelamangala: ಸಾಕು ನಾಯಿ ಸತ್ತಿದ್ದಕ್ಕೆ ಮಾಲಕ ಆತ್ಮಹ*ತ್ಯೆ
Doddaballapur: ಹೊಲದಲ್ಲಿ ಹೂ ಬಿಡಿಸುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ: ಸಾವು
Road Mishap: ಬೈಕ್ ವ್ಹೀಲಿಂಗ್ ಮಾಡುವಾಗ ಕ್ಯಾಂಟರ್‌ಗೆ ಡಿಕ್ಕಿ; ಇಬ್ಬರು ಸಾವು
Tragic: ಮದುವೆ ಹರಕೆ ಹೊತ್ತು ಘಾಟಿ ದೇಗುಲಕ್ಕೆ ಬಂದಿದ್ದ ಯುವತಿ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್
State Budget Meeting: ಇಂದಿನಿಂದ ಸಿಎಂ ಬಜೆಟ್ ಪೂರ್ವಭಾವಿ ಸರಣಿ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.