ಬಿರುಕು ಬಿಟ್ಟ ಕೆರೆಗಳ ಏರಿ: ಕಳಪೆ ಕಾಮಗಾರಿ ಆರೋಪ
Team Udayavani, Jun 15, 2020, 7:23 AM IST
ದೇವನಹಳ್ಳಿ : ತಾಲೂಕಿನ ಕೆರೆಗಳ ಏರಿ ಬಿರುಕು ಬಿಟ್ಟಿದೆ. ಕೆರೆಗಳ ಕಳಪೆ ಕಾಮಗಾರಿಗೆ ಇದು ಸಾಕ್ಷಿ ಆಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಕೆರೆಗಳಿಗೆ ಎನ್.ಎಚ್ ವ್ಯಾಲಿ ಯೋಜನೆ ಅಡಿ ನೀರು ಹರಿಯುತ್ತಿದೆ. ದುರಸ್ತಿ ಮಾಡಿರುವ ಕೆರೆಗಳ ಏರಿ ಬಿರುಕು ಬಿಟ್ಟು ಕಾಮಗಾರಿ ಕಳಪೆ ಆಗಿರುವುದು ಕಂಡು ಬಂದಿದೆ.
ಹತ್ತಾರು ದಶಕಗಳಿಂದ ಕೆರೆಗಳಲ್ಲಿ ನೀರು ತುಂಬಿ ಕೋಡಿ ಹರಿಯುವುದು ಯಾವಾಗ ಎಂದು ಸ್ಥಳೀಯರು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದರು. ಕಳೆದ 25 ವರ್ಷಗಳಿಂದ ಕೆರೆಗಳಿಗೆ ಮಳೆ ನೀರು ಹರಿದು ಬಂದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸರಕಾರ ಕೈಗೊಂಡ ಯೋಜನೆಯಲ್ಲಿ ಶೇ.50 ರಷ್ಟು ಗುಣ ಮಟ್ಟ ಕಾಯ್ದುಕೊಂಡಿದ್ದರೆ ಸಾಕಾಗಿತ್ತು. ಆದರೆ, ಆ ಕೆಲಸ ಆಗಿಲ್ಲ.
ಇಲ್ಲಿನ ನಡೆದಿರುವ ಕಾಮಗಾರಿ ನಿರೀಕ್ಷಿತ ಮಟ್ಟದಲ್ಲಿ ಇಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಎತ್ತಿನ ಹೊಳೆ ಯೋಜನೆ ವಿಳಂಬವಾದ ಹಿನ್ನೆಲೆಯಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಕೆರೆಗಳಿಗೆ ಹೆಬ್ಟಾಳ, ನಾಗವಾರ ಕೆರೆಯ ತ್ಯಾಜ್ಯದ ನೀರು ಸಂಸ್ಕರಿಸಿ ಹರಿಸುವ ಯೋಜನೆ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರೂಪುಗೊಂಡಿತ್ತು. ಅದಕ್ಕೆ ಪೂರಕವಾಗಿ ಮಾಳಿಗೇನ ಹಳ್ಳಿ ಕೆರೆಯಲ್ಲಿ ನಡೆದಿರುವ ಕೋಡಿ ದುರಸ್ತಿ, ಕೆರೆ ಅಂಗಳದಲ್ಲಿನ ರಸ್ತೆ ನಿರ್ಮಾಣದ ಮಾರ್ಗ ಅವೈಜ್ಞಾನಿಕ ವಾಗಿದೆ. ಕೆರೆಗೆ ಮಳೆ ನೀರು ಹರಿಯದಂತೆ ಮಣ್ಣು ಹಾಕಲಾಗಿದೆ.
ಪೂರ್ವ ದಿಕ್ಕಿನಲ್ಲಿ ಒಂದೂವರೆ ಅಡಿ ಸುತ್ತಳತೆಯ ಪೈಪ್‌ಲೈನ್ ಮೂಲಕ ಸದ್ಯ ನೀರು ಬಿಡಲಾಗುತ್ತಿದೆ. ಜೋರಾಗಿ ಮಳೆ ಸುರಿದರೆ ಕೆರೆ ಬದಿಯಲ್ಲಿ ನಿರ್ಮಾಣ ಮಾಡಿರುವ ರಸ್ತೆ ಕೊಚ್ಚಿ ಹೋಗಲಿದೆ. ಅಲ್ಲದೇ ಮಳೆ ರೈತರ ಬೆಳೆಯನ್ನೂ ನಾಶಗೊಳಿಸುವ ಸಾಧ್ಯತೆ ಇದೆ ಎಂಬುದು ರೈತರ ಆತಂಕವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Love Reddy: ತೆರೆಗೆ ಬಂತು ʼಲವ್ ರೆಡ್ಡಿʼ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.