ಗುಂಡಿ ಬಿದ್ದ ರಸ್ತೆಯಲ್ಲಿ ಸಂಚಾರ ಸವಾಲು

ಬೇಗಿಹಳ್ಳಿ ಬಳಿಯ ರಸ್ತೆ ದುಸ್ಥಿತಿ, 2 ಕಿ.ಮೀ.ಸಾಗಲು ಬೇಕು 20 ನಿಮಿಷ

Team Udayavani, Nov 28, 2020, 10:54 AM IST

ಗುಂಡಿ ಬಿದ್ದ ರಸ್ತೆಯಲ್ಲಿ ಸಂಚಾರ ಸವಾಲು

ಆನೇಕಲ್‌: ತಾಲೂಕಿನ ಬನ್ನೇರುಘಟ್ಟ-ಆನೇಕಲ್‌ ಮುಖ್ಯರಸ್ತೆ ಸದ್ಯ ಗುಂಡಿಗಳ ನಡುವೆ ರಸ್ತೆಇದೆಯಂತಾಗಿದೆ. ಬೆಳಗಿನಿಂದ ಸಂಜೆವರೆಗೂ ದೂಳು, ವಾಹನ ದಟ್ಟಣೆಯಿಂದ ಸವಾರರಿಗೆ ಹಿಂಸೆ ಒಂದೆಡೆಯಾದರೆ, ಮಳೆ ಬಂದಾಗ ಕೆರೆಯಂತಾಗುವ ರಸ್ತೆಯಲ್ಲಿ ವಾಹನ ಸಾಗ ಬೇಕಾದ ದುಸ್ಥಿತಿ ಬಂದೊದಗಿದೆ. ಪ್ರತಿ ದಿನ ಸಂಚರಿಸುವ ವಾಹನ ಸವಾರರು, ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ ಕಿಡಿಕಾರುತ್ತಿದ್ದಾರೆ.

ಕಾಮಗಾರಿ ತಟಸ್ಥ: ಕಳೆದಆರೇಳು ತಿಂಗಳಿನಿಂದ ಬನ್ನೇರುಘಟ್ಟದ ರಾಗೀಹಳ್ಳಿ ಗೇಟ್‌ನಿಂದ ಜಿಗಣಿವರೆಗೆ ರಸ್ತೆ ಕಾಮಗಾರಿ ಆರಂಭವಾಗಿತ್ತು. ಇದರ ನಡುವೆ ಲಾಕ್‌ಡೌನ್‌ನಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಲಾಕ್‌ಡೌನ್‌ ತೆರವು ಬಳಿಕ ಎಲ್ಲೆಡೆ ಕಾಮಗಾರಿಸಾಗುತ್ತಿದೆಯಾದರೂ ಇಲ್ಲಿ ಮಾತ್ರ ಕಾಮಗಾರಿತಟಸ್ಥವಾಗಿದೆ. ಇದರಿಂದ ಜಿಗಣಿ ಕೈಗಾರಿಕಾ ಪ್ರದೇಶಕ್ಕೆ ಹೋಗುವ ವಾಹನ ಸವಾರರು, ಕಾರ್ಮಿಕರು, ಆನೇಕಲ್‌ ಕಡೆಗೆ ಹೋಗುವ ನಾಗರಿಕರು ಬೇಗಿಹಳ್ಳಿ ಬಳಿಯ ರಸ್ತೆ ದುಸ್ಥಿತಿಯಿಂದ ಹಿಂಸೆ ಪಡುತ್ತಿದ್ದಾರೆ.

ನಾಗರಿಕರ ಟೀಕೆ: ಬೆಳಗ್ಗೆ 8 ರಿಂದ 11 ಗಂಟೆ ವರೆಗೂ ಸಂಜೆ 5ರಿಂದ 7 ಗಂಟೆವರೆಗೂ ಫ‌ುಲ್‌ಟ್ರಾಫಿಕ್‌ ಜಾಮ್‌.ಕೇವಲ ಎರಡುಕಿ.ಮೀ. ಸಾಗಬೇಕಾದರೆ 20 ನಿಮಿಷಗಳು ಬೇಕಾಗುತ್ತದೆ. ಅಪ್ಪಿತಪ್ಪಿ ಗುಂಡಿಯಲ್ಲಿ ವಾಹನ ನಿಂತರೆ ಒಂದು ಗಂಟೆಯಾದರೂ ರಸ್ತೆ ಸಂಚಾರ ಸುಗಮವಾಗುವುದಿಲ್ಲ. ಇದೇ ಸಮಸ್ಯೆ ತಿಂಗಳಾನುಗಟ್ಟಲೆ ಇದ್ದರೂ ಈ ಭಾಗದ ಶಾಸಕ ಕೃಷ್ಣಪ್ಪ, ಸಂಸದ ಡಿ.ಕೆ.ಸುರೇಶ್‌ ಆಗಲಿ ಇಲ್ಲಿನ ಸಮಸ್ಯೆ ಬಗೆಹರಿಸಲು ಗಮನ ಹರಿಸಿಲ್ಲ ಎಂದು ಸ್ಥಳೀಯ ನಾಗರೀಕರು ದೂರಿದ್ದಾರೆ.

ಸಂಚಾರಕ್ಕೆ ಹರಸಾಹಸ: ರಸ್ತೆ ಕಾಮಗಾರಿ ಸ್ಥಗಿತಗೊಂಡಿರುವುದರಿಂದ ನಿತ್ಯ ಸಂಚಾರ ಮಾಡುವ ವಾಹನ ಸವಾರರುಅದರಲ್ಲೂಬೈಕ್‌ ಸವಾರರು ಮಾತ್ರ ಜೀವ ಭಯದಿಂದ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಅಭಿವೃದ್ಧಿಗಾಗಿ ಕಾಮಗಾರಿಪ್ರಾರಂಭಿಸಿ ಒಂದು ವರ್ಷವಾದರೂ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಸುಮಾರು ಅಡಿಗಳಷ್ಟು ಗುಂಡಿ ಬಿದ್ದುದ್ದರಿಂದ ಈ ಭಾಗದಲ್ಲಿ ಸಂಚಾರ ಮಾಡುವ ವಾಹನ ಸವಾರರು ಹರ ಸಾಹಸ ಪಡುತ್ತಿದ್ದಾರೆ.

ಇದನ್ನೂ ಓದಿ :ಕೇಂದ್ರಾಡಳಿತ ಪ್ರದೇಶವಾದ ಬಳಿಕ ಮೊದಲ ಬಾರಿಗೆ ಜಮ್ಮು-ಕಾಶ್ಮೀರದಲ್ಲಿ ಸ್ಥಳೀಯ ಸಮರ

ಇನ್ನೂ ಇತ್ತೀಚಿನ ದಿನಗಳಲ್ಲಿ ಮಳೆ ಹೆಚ್ಚಾಗುತ್ತಿರುವುದರಿಂದ ರಸ್ತೆ ತುಂಬ ನೀರು ನಿಂತಿರುವುದರಿಂದ ಹಾಳಾದ ರಸ್ತೆಯಲ್ಲಿ ವಿಧಿ ಇಲ್ಲದೇ ಸಂಚರಿಸಲು ಹೋಗಿ ಪ್ರತಿನಿತ್ಯ ಸಣ್ಣ ಪುಟ್ಟ ಅಪಘಾತಗಳು ಸಂಭವಿಸುತ್ತಲೇ ಇವೇ. ಇನ್ನೂ ರಸ್ತೆ ಕಾಮಗಾರಿಯನ್ನು ಕೆಎಲ್‌ಆರ್‌ಡಿಸಿ (ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ) ವತಿಯಿಂದ ಮಾಡಲಾಗುತ್ತಿದೆ.

ರಸ್ತೆ ಹಾಳು, ಪ್ರಗತಿ ಮಂದಗತಿ :  ವಾಹನ ಸವಾರ ಉಮೇಶ್‌ ಎಂಬುವರು ಉದಯವಾಣಿಗೆ ಪ್ರತಿಕ್ರಿಯಿಸಿ, ಬನ್ನೇರುಘಟ್ಟದಿಂದ ಆನೇಕಲ್‌ ಕಡೆಗೆ ಚಲಿಸುವಾಗ ಹಾರಗದ್ದೆಯಿಂದ ಶುರುವಾದರೆ ಬನ್ನೇರುಘಟ್ಟವರೆಗೂ ರಸ್ತೆಯಲ್ಲಿ ಸಂಚರಿಸುವುದುಕಷ್ಟ. ರಸ್ತೆಗಳು ಹಳ್ಳಕೊಳ್ಳಗಳಿಂದಕೂಡಿದ್ದು, ಮಳೆ ಬಂದರೆ ಗುಂಡಿಗಳಲ್ಲಿ ನೀರು ನಿಂತು ಸಂಚಾರ ವೇಳೆ ಪ್ರತಿ ನಿತ್ಯ ಅನೇಕ ವಾಹನ ಸವಾರರು ಬಿದ್ದು ಅಪಘಾತಗಳು ಸಂಭವಿಸುತ್ತಿವೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಈ ಭಾಗದ ಶಾಸಕ ಎಂ.ಕೃಷ್ಣಪ್ಪ ನಿರ್ಲಕ್ಷ್ಯ ಮಾಡದೆ ರಸ್ತೆ ಅಭಿವೃದಿಗೆ ಒತ್ತು ನೀಡಬೇಕು. ಜಿಗಣಿ ಕೈಗಾರಿಕಾ ಪ್ರದೇಶವಾಗಿರುವುದರಿಂದ ಸಂಚಾರ ದಟ್ಟಣೆ ಇರುತ್ತದೆ. ರಸ್ತೆ ಹಾಳಾಗಿದ್ದರೂ ಮತ್ತು ಪ್ರಗತಿ ಮಂದಗತಿಯಲ್ಲಿ ನಡೆದರೂ ಶಾಸಕರು ಇತ್ತ ಗಮನ ಹರಿಸದೇ ಸಂಬಂಧ ಇಲ್ಲದಂತಿದ್ದರೆ, ನಮ್ಮಕಷ್ಟ ಹೇಳುವುದುಯಾರಿಗೆ ಎಂದು ಪ್ರಶ್ನಿಸಿದರು.

ಬನ್ನೇರುಘಟ್ಟದಿಂದ ಆನೇಕಲ್‌ವರೆಗೂ ರಸ್ತೆ ಅಗಲೀಕರಣ ಮಾಡಲು 30 ತಿಂಗಳ ಅವಧಿಯಲ್ಲಿಕೆಲಸ ಪೂರ್ಣಗೊಳಿಸಲು ಸಮಯವಿದ್ದು, ಈಗಾಗಲೇ 15 ತಿಂಗಳು ಕಳೆದಿದೆ. ಮಳೆ ಇರುವ ಕಾರಣ ಕೆಲಸ ತಡವಾಗುತ್ತಿದೆ. ರಸ್ತೆಯ ಅಗಲೀಕರಣದ ಟೆಂಡರ್‌ 129.89 ಕೊಟಿ ಆಗಿದೆ. ಮಳೆಕಡಿಮೆ ಆದಕೂಡಲೇಕೆಲಸ ಬೇಗನೆ ಮುಗಿಸುತ್ತೇವೆ. ರಮೇಶ್‌, ಕಾರ್ಯನಿರ್ವಾಹಕ ಅಧಿಕಾರಿ, ಕೆಎಲ್‌ಆರ್‌ಡಿಸಿ

ಬನ್ನೇರುಘಟ್ಟ-ಹಾರಗದ್ದೆ ರಸ್ತೆ ಅಗಲೀಕರಣ ಮಾಡಿ ಡಬಲ್‌ ರಸ್ತೆನಿರ್ಮಾಣ ಮಾಡಲಾಗುತ್ತಿದ್ದು, ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. ಮಳೆಗಾಲದಲ್ಲಿ ಸಂಚಾರ ಮಾಡಲು ತೊಂದರೆಯಾಗಿದೆ.ಗುಂಡಿಗಳನ್ನು ಮುಚ್ಚಲುಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ಬೇಗ ರಸ್ತೆಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು. ಎಂ.ಕೃಷ್ಣಪ್ಪ, ಶಾಸಕ, ಬೆಂಗಳೂರು ದಕ್ಷಿಣ

ಮಂಜುನಾಥ ಎನ್‌. ಬನ್ನೇರುಘಟ್ಟ

ಟಾಪ್ ನ್ಯೂಸ್

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ

K L RAhul

KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಪಿಕ್ಸ್

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಫಿಕ್ಸ್

1-wewrewre

The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ

BBK11: ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ

BBK11: ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Stray dogs: ಅಂ.ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೀದಿ ನಾಯಿಗಳ ಹಾವಳಿ

Stray dogs: ಅಂ.ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೀದಿ ನಾಯಿಗಳ ಹಾವಳಿ

Tragic: ಮರದ ಕಾರ್ಖಾನೆಯಲ್ಲಿ ಆಕಸ್ಮಿಕ ಬೆಂಕಿ; ಕಾರ್ಮಿಕ ಸಜೀವ ದಹನ

Tragic: ಮರದ ಕಾರ್ಖಾನೆಯಲ್ಲಿ ಆಕಸ್ಮಿಕ ಬೆಂಕಿ; ಕಾರ್ಮಿಕ ಸಜೀವ ದಹನ

Market: ಬೆಲೆ ಕುಸಿತ; ಬೂದು ಕುಂಬಳ ಬೀದಿಪಾಲು!

Market: ಬೆಲೆ ಕುಸಿತ; ಬೂದು ಕುಂಬಳ ಬೀದಿಪಾಲು!

Crime: ಪಂಚೆ ಧರಿಸು ಎಂದಿದ್ದಕ್ಕೆ ಅಪ್ಪನನ್ನೇ ಕೊಂದ ಮಗ!

Crime: ಪಂಚೆ ಧರಿಸು ಎಂದಿದ್ದಕ್ಕೆ ಅಪ್ಪನನ್ನೇ ಕೊಂದ ಮಗ!

9-bng

Channapatna: ಸಾಲಕ್ಕೆ ಹೆದರಿ ದಂಪತಿ ನೇಣಿಗೆ ಶರಣು

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ

K L RAhul

KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಪಿಕ್ಸ್

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಫಿಕ್ಸ್

1-wewrewre

The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.