![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Dec 8, 2020, 1:21 PM IST
ನೆಲಮಂಗಲ: ರೌಡಿಶೀಟರ್‌ಗಳು ಗ್ರಾಪಂ ಚುನಾವಣೆಯಲ್ಲಿ ಮತದಾರರಿಗೆಹಾಗೂ ಅಕಾಂಕ್ಷಿಗಳಿಗೆ ಹೆದರಿಸುವುದು ಕಂಡುಬಂದರೆ ತಕ್ಷಣ ಬಂಧಿಸಿ ಕಠಿಣಕಾನೂನು ಕ್ರಮಜರುಗಿಸಲಾಗುತ್ತದೆ ಎಂದು ವೃತ್ತನಿರೀಕ್ಷಕ ಎ.ವಿ.ಕುಮಾರ್ ಎಚ್ಚರಿಕೆ ನೀಡಿದರು.
ನಗರದ ಠಾಣೆ ಆವರಣದಲ್ಲಿ ನಡೆಸಲಾದ ನೆಲಮಂಗಲ ಉಪವಿಭಾಗದರೌಡಿಶೀಟರ್‌ಗಳ ಪರೇಡ್‌ನಲ್ಲಿ ಮಾತನಾಡಿ ಅನೇಕ ವರ್ಷಗಳಿಂದ ಬಹಳಷ್ಟು ಜನರು ಯಾವುದೇ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲದ ಬಗ್ಗೆ ಮಾಹಿತಿ ಇದೆ ಅದೇ ರೀತಿ ಮುಂದುವರಿದರೆ ರೌಡಿಶೀಟರ್ ಪಟ್ಟಿಯಿಂದ ಕೈಬಿಡಲಾಗು ವುದು. ಒಳ್ಳೆಯವರಾಗಲು ಅವಕಾಶನೀಡಿಲಾಗುತ್ತದೆ ಅದನ್ನು ದುರುಪ ಯೋಗ ಪಡಿಸಿಕೊಂಡರೆ ಯಾವುದೇ ಒತ್ತಡಗಳಿಗೆ ಒಳಗಾಗದೇ ಕ್ರಮಕೈಗೊಳ್ಳಲಾಗುತ್ತದೆ ಎಂದರು.
ಎಚ್ಚರಿಕೆ: ಗ್ರಾಪಂ ಚಟುವಟಿಕೆಯಲ್ಲಿ ರೌಡಿಶೀಟರ್‌ಗಳು ಭಾಗವಹಿಸಬಾರದು, ಚುನಾವಣೆಯಲ್ಲಿ ಯಾವುದೇ ರೌಡಿಶೀಟರ್‌ಗಳು ರಾತ್ರಿಯ ವೇಳೆ ಓಡಾಡುವಂತಿಲ್ಲ, ಆಕಾಂಕ್ಷಿಗಳಿಗೆ ಧಮ್ಕಿ ಹಾಕುವುದು, ತಮಗೆ ಬೇಕಾದ ವ್ಯಕ್ತಿಗೆಮತದಾನ ಮಾಡಲು ಒತ್ತಾಯ ಮಾಡುವುದು, ನಾಮಪತ್ರಗಳನ್ನು ಹಿಂಪಡೆಯುವಂತೆ ಅಭ್ಯರ್ಥಿಗಳಿಗೆ ಹೆದರಿಸುವುದನ್ನು ಮಾಡಿದರೆ ನೇರ ಜೈಲಿಗೆ ಕಳುಹಿಸಲಾಗುವುದು. ಎಂದು ರೌಡಿ ಶೀಟರ್‌ಗಳಿಗೆ ವೃತ್ತನಿರೀಕ್ಷಕ ಹಾಗೂ ಡಿವೈಎ ಸ್‌ಪಿ ಎಚ್ಚರಿಕೆ ನೀಡಿದರು.
3ರಿಂದ 5 ಬಾಂಡ್ ನೀಡಿ: ಚುನಾವಣೆ ಹಿನ್ನೆಲೆ ಯಲ್ಲಿ ಕೆಲವರು 3ರಿಂದ 5 ಲಕ್ಷಬಾಂಡ್‌ಗಳನ್ನು ತಹಶೀಲ್ದಾರ್ ಸಮ್ಮುಖದಲ್ಲಿ ನೀಡಬೇಕು. ಇಲ್ಲದೇ ಹೋದರೆ ವಶಕ್ಕೆ ಪಡೆದುಕೊಳ್ಳಲಾಗುತ್ತದೆ. ನಿಮ್ಮ ವ್ಯಾಪ್ತಿಯನ್ನು ಬಿಟ್ಟು ಬೇರೆ ಯಾವ ಕಡೆಯು ಹೋಗಬಾರದು ಎಂದುಹೇಳಿದರು.
ಮಾಧ್ಯಮದವರಿಗೆ ನಿಯಂತ್ರಣ: ನಗರ ಠಾಣೆಯ ಆವರಣದಲ್ಲಿ ನಡೆದ ಪರೇಡ್ ವೇಳೆ ವೃತ್ತನಿರೀಕ್ಷಕರು ಮಾಧ್ಯಮದವರೊಂದಿಗೆ ಮಾತನಾಡಿ, ರೌಡಿಗಳಿಗೆ ಎಚ್ಚರಿಕೆ ನೀಡುವ ವೇಳೆ ವಿಡಿಯೋಮಾಡದಂತೆ, ಪೋಟೋ ತೆಗೆಯದಂತೆ ಸೂಚನೆ ನೀಡಿದರು. ಡಿವೈಎಸ್‌ಪಿ ಜಗದೀಶ್, ಸಬ್‌ಇನ್‌ಸ್ಪೆಕ್ಟರ್ ಸುರೇಶ್, ಮಂಜುನಾಥ್,ಮೋಹನ್‌ಕುಮಾರ್,ವಸಂತ್,ಚಿಕ್ಕ ನರಸಿಂಹಯ್ಯ ಮತ್ತಿತರರಿದ್ದರು.
85 ಜನ ಮಾತ್ರ ಭಾಗಿ : ನೆಲಮಂಗಲ ಉಪವಿಭಾಗ ವ್ಯಾಪ್ತಿಯ ತ್ಯಾಮಗೊಂಡ್ಲು, ಸೋಂಪುರ, ಟೌನ್ ಹಾಗೂ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ150ಕ್ಕೂ ಹೆಚ್ಚು ರೌಡಿ ಶೀಟರ್‌ಗಳಿದ್ದು, ಸೋಮವಾರ ಕೇವಲ 85 ರೌಡಿಶೀಟರ್‌ಗಳನ್ನುಮಾತ್ರಕರೆಸಲಾಗಿದೆ.ಕೆಲವು ಪ್ರಮುಖ ರೌಡಿಶೀಟರ್‌ಗಳು ಗೈರಾಗಿದ್ದು ಉಳಿದವರಿಗೆ ವಿನಾಯಿತಿ ನೀಡಿದ್ದಾರೆಯೇ ಅಥವಾ ಮತ್ತೆ ಕರೆಸಿ ಎಚ್ಚರಿಕೆ ನೀಡುತ್ತಾರೆಯೇ ಎಂಬುದನ್ನು ಪೊಲೀಸ್ ಅಧಿಕಾರಿಗಳು ತಿಳಿಸಬೇಕಾಗಿದೆ.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.