ನಗರಸಭೆಯಿಂದ 1.75 ಕೋಟಿ ರೂ.ಉಳಿತಾಯ ಬಜೆಟ್
Team Udayavani, Feb 23, 2019, 7:29 AM IST
ದೊಡ್ಡಬಳ್ಳಾಪುರ: ನಗರಸಭೆಯಲ್ಲಿ ನಡೆದ ಸರ್ವ ಸದಸ್ಯ ಸಭೆಯಲ್ಲಿ ಅಧ್ಯಕ್ಷ ಟಿ.ಎನ್.ಪ್ರಭುದೇವ್ 2019-20ನೇ ಸಾಲಿಗೆ 1.75 ಕೋಟಿ ರೂ. ಉಳಿತಾಯ ಬಜೆಟ್ ಮಂಡಿಸಿದರು. ಬಜೆಜ್ ಗಾತ್ರ 58.16 ಕೋಟಿ ರೂ. ಇದ್ದು, ಇದರಲ್ಲಿ ಒಟ್ಟು ವೆಚ್ಚ 56.41 ಕೋಟಿ ರೂ. ಆಗಲಿದೆ. ಉಳಿತಾಯ 1.75 ಕೋಟಿ ರೂ. ಎಂದು ತಿಳಿಸಿದರು. ಹಸಿರು ಹಾಗೂ ನಿರ್ಮಲ ನಗರ ನಿರ್ಮಾಣಕ್ಕಾಗಿ 48.58 ಲಕ್ಷ ರೂ. ಅಂದಾಜಿಸಲಾಗಿದೆ.
ಉದ್ಯಾನವನಗಳ ನಿರ್ವಹಣೆಗಾಗಿ 20 ಲಕ್ಷ ರೂ., ಒಳಚರಂಡಿ ಶುದ್ಧೀಕರಣ ಫಟಕದ ಸುತ್ತಲು ಸಸಿ ಮತ್ತು ಮರಗಳನ್ನು ಬೆಳೆಸಲು 5.54 ಲಕ್ಷ ರೂ., ನಗರದ ಪ್ರಮುಖ ರಸ್ತೆ ಬದಿಗಳಲ್ಲಿ ಸಸಿಗಳನ್ನು ನೆಡುವ ಮತ್ತು ಟ್ರೀ ಗಾ ರ್ಡ್ ಅಳವಡಿಸಲು ಕೊಂಗಾಡಿಯಪ್ಪ ಹಸಿರು ವೃಕ್ಷ ಕಾರ್ಯಕ್ರಮಕ್ಕಾಗಿ 20 ಲಕ್ಷ ರೂ. ಮೀಸಲಿರಿಸಲಾಗಿದೆ ಎಂದರು.
ನೈರ್ಮಲ್ಯಕ್ಕಾಗಿ 2.65 ಕೋಟಿ ರೂ.: ನಗರ ನೈರ್ಮಲ್ಯ ಹಾಗೂ ಸ್ವತ್ಛತೆ ಕಾರ್ಯಗಳಿಗೆ ಮತ್ತು ಘನ ತ್ಯಾಜ್ಯ ವಸ್ತು ನಿರ್ವಹಣೆ ಕಾಮಗಾರಿಗಳಿಗಾಗಿ 2.65 ಕೋಟಿ ರೂ.ಗಳನ್ನು ಸ್ವತ್ಛತೆಗಾಗಿಯೇ ಮೀಸಲಿಡಲಾಗಿದೆ. ಸಾರ್ವಜನಿಕರಲ್ಲಿ ಆರೋಗ್ಯ, ಘನತ್ಯಾಜ್ಯ ವಸ್ತುಗಳ ನಿರ್ವಹಣೆ ಮತ್ತು ಸ್ವತ್ಛತೆ, ನೀರಿನ ಸದ್ಬಳಕೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು 10 ಲಕ್ಷ ರೂ. ಮೀಸಲಿಡಲಾಗಿದೆ ಎಂದು ತಿಳಿಸಿದರು.
ಪ್ರತಿಮೆ ನಿರ್ಮಾಣಕ್ಕೆ 20 ಲಕ್ಷ ರೂ.: ನಗರದ ವಿವಿಧ ಭಾಗದ ಪ್ರಮುಖ ವೃತ್ತಗಳಲ್ಲಿ ಕುವೆಂಪು, ಡಾ.ಶಿವಕುಮಾರ ಸ್ವಾಮೀಜಿ, ನಾಡಪ್ರಭು ಕೆಂಪೇಗೌಡರ ಪ್ರತಿಮೆಗಳ ನಿರ್ಮಾಣಕ್ಕಾಗಿ 20 ಲಕ್ಷ ರೂ.ಗಳನ್ನು ಮೀಸಲಿರಿಸಲಾಗಿದೆ ಎಂದರು.
ಅಭಿವೃದ್ಧಿ ಕಾಮಗಾರಿಗಳು: 2019-20ನೇ ಸಾಲಿನಲ್ಲಿ ವಿವಿಧ ರಸ್ತೆ, ಚರಂಡಿಗಳ ನಿರ್ಮಾಣಕ್ಕಾಗಿ 749.36 ಲಕ್ಷ, ಬೀದಿ ದೀಪ ಅಳವಡಿಕೆಗಾಗಿ 30ಲಕ್ಷ ರೂ., ಮಳೆನೀರು ಚರಂಡಿ, ಕವರಿಂಗ್ ಸ್ಲಾಬ್ ನಿರ್ಮಾಣ 1.15 ಕೋಟಿ ರೂ., ಕೆ.ಆರ್.ಮಾರುಕಟ್ಟೆ ಮಳಿಗೆಗಳ ನಿರ್ಮಾಣಕ್ಕಾಗಿ ಈ ಸಾಲಿನಲ್ಲಿ 2.50 ಕೋಟಿ ರೂ. ವಿನಿಯೋಗಿಸಲು ನಿರ್ಧರಿಸಲಾಗಿದೆ. ಕೊಂಗಾಡಿಯಪ್ಪ ಬಸ್ ನಿಲ್ದಾಣ ಉನ್ನತೀಕರಣಕ್ಕಾಗಿ 50 ಲಕ್ಷ ರೂ., ಆಧುನಿಕ ಕಸಾಯಿಖಾನೆ ನಿರ್ಮಾಣಕ್ಕಾಗಿ 20 ಲಕ್ಷ ರೂ.,ನಗರದ ಪ್ರಮುಖ ರಸ್ತೆಗಳ ಒತ್ತುವರಿ ತೆರವು, ದಾವಾ ಮತ್ತು ಇತರೆ ಪೂರಕ ವೆಚ್ಚಗಳಿಗಾಗಿ 25 ಲಕ್ಷ ರೂ. ಎಂದು ಅಂದಾಜಿಸಲಾಗಿದೆ ಎಂದು ತಿಳಿಸಿದರು.
ದೊಡ್ಡಬಳ್ಳಾಪುರ ಹಬ್ಬ: ರಾಷ್ಟ್ರೀಯ ಹಬ್ಬ, ಸ್ಥಳೀಯ ಹಬ್ಬಗಳ ಆಚರಣೆಗಾಗಿ 8.30 ಲಕ್ಷ ರೂ., ದೊಡ್ಡಬಳ್ಳಾಪುರ ಹಬ್ಬ ಆಚರಣೆಗಾಗಿ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಕರಗ ಮಹೋತ್ಸವಕ್ಕಾಗಿ 3 ಲಕ್ಷ ರೂ.ಗಳನ್ನು ಈ ಬಾರಿ ವಿಶೇಷವಾಗಿ ಮೀಸಲಿರಿಸಲಾಗಿದೆ. ಪರಿಶಿಷ್ಟ ಜಾತಿ, ಪಂಗಡದ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ 90.25 ಲಕ್ಷ ರೂ.,ಅಂಗವಿಕಲರ ಕಲ್ಯಾಣಕ್ಕಾಗಿ 18.70 ಲಕ್ಷ ರೂ., ಪೌರ ಕಾರ್ಮಿಕರ ಬಿಸಿಯೂಟಕ್ಕಾಗಿ ಶೇ.24.10ರ ಯೋಜನೆಯಡಿ 10 ಲಕ್ಷ ರೂ.ಮೀಸಲಿರಿಸಲಾಗಿದೆ ಎಂದರು.
ಪೌರಕಾರ್ಮಿಕರಿಗೆ ಸೂರು: ವಸತಿ ರಹಿತ ಪೌರಕಾರ್ಮಿಕರಿಗೆ ಗೃಹ ನಿರ್ಮಾಣಕ್ಕಾಗಿ ಪೌರ ಕಾರ್ಮಿಕರಿಗೆ ಗುಂಪು ಮನೆ ನಿರ್ಮಾಣಕ್ಕಾಗಿ ಪ್ರಸಕ್ತ ಸಾಲಿನಲ್ಲಿ 1.50 ಕೋಟಿ ರೂ.ಗಳನ್ನು ವಿನಿಯೋಗಿಸಲಾಗುವುದು. ಸರ್ವರಿಗೂ ಸೂರು ಯೋಜನೆಯಡಿ ವಸತಿ ರಹಿತ ಬಡಜನರಿಗಾಗಿ ಗುಂಪು ಮನೆಗಳ ನಿರ್ಮಾಣಕ್ಕಾಗಿ 1 ಕೋಟಿ ರೂ., ಶೇ.7.25ರ ಯೋಜನೆಯಡಿ ಬೀದಿ ಬದಿ ಸಣ್ಣ ವ್ಯಾಪಾರಿಗಳಿಗೆ 25 ಕೈಗಾಡಿಗಳನ್ನು ವಿತರಿಸುವ ಉದ್ದೇಶ ಹೊಂದಲಾಗಿದೆ. ಇದಕ್ಕಾಗಿ 3 ಲಕ್ಷ ರೂ. ಕಾಯ್ದಿರಿಸಲಾಗಿದೆ. ವಿದ್ಯುತ್ ಚಿತಾಗಾರ ನಿರ್ಮಾಣಕ್ಕಾಗಿ 2 ಕೋಟಿ ರೂ. ಮೀಸಲಿರಿಸಲಾಗಿದೆ.
ಇದಕ್ಕಾಗಿ ನಗರದ ಹೊರವಲಯದ ತಿಮ್ಮಸಂದ್ರ ಸಮೀಪ 3.15 ಎಕರೆ ಭೂಮಿಯನ್ನು ಸರ್ಕಾರ ನಗರಸಭೆಗೆ ಮಂಜೂರು ಮಾಡಿದೆ. ನೇಕಾರ ಭವನ ನಿರ್ಮಾಣಕ್ಕಾಗಿ ನಗರಸಭೆಯಿಂದ 15 ಲಕ್ಷ ರೂ.ಮೀಸಲಿರಿಸಲಾಗಿದೆ. ನಗರದಲ್ಲಿ ದಿನ ಪತ್ರಿಕೆ ಹಂಚುವ ಬಡ ಯುವಜನರಿಗೆ ಚಿತ ಬೈಸಿಕಲ್ ವಿತರಣೆಗಾಗಿ 1.50 ಲಕ್ಷ ರೂ., ಲಯನ್ಸ್ ಕ್ಲಬ್‌ಗ ಡಯಾಲಿಸಿಸ್ ಯಂತ್ರ ಖರೀದಿಸಲು 5 ಲಕ್ಷ ರೂ. ಮೀಸಲಿರಿಸಲಾಗಿದೆ ಎಂದರು.
ಬಜೆಟ್ ಸಭೆಯಲ್ಲಿ ನಗರಸಭೆ ಪಾಧ್ಯಕ್ಷೆ ಜಯಲಕ್ಷಿ ನಟರಾಜ, ಪೌರಾಯುಕ್ತ ಆರ್.ಮಂಜುನಾಥ್, ಸ್ಥಾಯಿ ಸಮಿತಿ ಅಧ್ಯಕ್ಷ ಎನ್.ಕೆ.ರಮೇಶ್, ಕಾರ್ಯಪಾಲಕ ಇಂಜಿನಿಯರ್ ಶೇಖ್ ಫಿರೋಜ್ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Air Pollutionಗೆ ಪಾಕಿಸ್ತಾನ ಕಂಗಾಲು- 3 ದಿನ ಸಂಪೂರ್ಣ ಲಾಕ್ ಡೌನ್…AQI ಮಟ್ಟ 2000!
Keerthy Suresh: ಬಾಲ್ಯದ ಗೆಳೆಯನೊಂದಿಗೆ ಈ ದಿನ ನೆರವೇರಲಿದೆ ಕೀರ್ತಿ ಸುರೇಶ್ ವಿವಾಹ?
Belthangady: ಪತ್ರಕರ್ತ ಭುವನೇಂದ್ರ ಪುದುವೆಟ್ಟು ನಿಧನ
Max Movie: ಬಿಗ್ ಬಾಸ್ ವೇದಿಕೆಯಲ್ಲಿ ʼಮ್ಯಾಕ್ಸ್ʼ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್
Fraud: “ವಿಡಿಯೋಗೆ ಲೈಕ್ ನೀಡಿ’ 13.97 ಲಕ್ಷ ಕಳೆದುಕೊಂಡರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.