ದಲಿತ ಕೇರಿಗಿಲ್ಲ ಆಶ್ರಯ ಭಾಗ್ಯ
Team Udayavani, Dec 23, 2021, 11:19 AM IST
ದೇವನಹಳ್ಳಿ: ತಾಲೂಕಿನ ಕುಂದಾಣ ಹೋಬಳಿ ಯ ಜಾಲಿಗೆ ಗ್ರಾಪಂ ವ್ಯಾಪ್ತಿಯ ಅರದೇಶನಹಳ್ಳಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಕಾಲೋನಿ ಯಲ್ಲಿ ಇದುವರೆಗೂ ಆಶ್ರಯ ಭಾಗ್ಯ ಕಲ್ಪಿಸುವಲ್ಲಿ ಈ ಭಾಗದ ಜನಪ್ರತಿನಿಧಿಗಳು ಮತ್ತು ಅಧಿ ಕಾರಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂಬುದು ದಲಿತ ಕೇರಿ ಜನರ ಆರೋಪವಾಗಿದೆ.
ಸರ್ಕಾರವು ದಲಿತರ ಕಾಲೋನಿಗಳ ಅಭಿವೃದ್ಧಿಗೆ ಕೋಟ್ಯಂತರ ರೂ.ಖರ್ಚು ಮಾಡುತ್ತಿದ್ದರೂ ಸಹ ಇಂದಿಗೂ ಸಹ ಮೂಲ ಸೌಕರ್ಯಗಳ ಕೊರತೆ ಹಾಗೂ ಒಂದೊಂದು ಮನೆಯಲ್ಲಿ ಮೂರ್‍ನಾಲ್ಕು ಕುಟುಂಬಗಳು ವಾಸಿಸುವ ಸ್ಥಿತಿ ಬಂದೊದಗಿದೆ. ಸರ್ಕಾರ ಆಶ್ರಯ ಯೋಜನೆಗಳಲ್ಲಿ ಹೆಚ್ಚಿನ ಮನೆ ನೀಡುತ್ತೇವೆ ಎಂದು ಹೇಳುತ್ತಾರೆ. ಕೇವಲ ಸರ್ಕಾರದ ಕಡತಗಳಲ್ಲಿ ಸೀಮಿತವಾಗುತ್ತಿದೆ. ಬಡವರಿಗೆ ನಿವೇಶನದ ಸೂರು ಕನಸಾಗಿಯೇ ಉಳಿಯುತ್ತಿದೆ ಎಂದು ದಲಿತ ಕುಟುಂಬಗಳ ಅಳಲಾಗಿದೆ.
ಡೀಸಿಗೂ ಸಹ ಮನವಿ: ಮಳೆಯಿಂದಾಗಿ ಕಾಲೋನಿಯಲ್ಲಿನ ಸುಮಾರು 3-4 ಮನೆಗಳು ಕುಸಿದಿದ್ದು, ಸ್ಥಳ ಪರಿಶೀಲನೆಗೆ ಅಧಿಕಾರಿಗಳು ಮೇಲ್ನೋಟಕ್ಕೆ ಬಂದು ಪರಿಶೀಲಿಸಿ ಹೋಗಿದ್ದಾರೆ. ಇದುವರೆಗೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಸಂತ್ರಸ್ತರಿಗೆ ಪರಿಹಾರ ನೀಡಿಲ್ಲ. ಸುಮಾರು ವರ್ಷಗಳಿಂದ ಸ್ಮಶಾನ ಮತ್ತು ನಿವೇಶನಕ್ಕಾಗಿ ಹೋರಾಟ ಮಾಡಲಾಗುತ್ತಿದ್ದರೂ ಯಾವೊಬ್ಬ ಅಧಿಕಾರಿಯೂ ಇತ್ತ ಗಮನಹರಿಸುತ್ತಿಲ್ಲ.
ಇದನ್ನೂ ಓದಿ: ಜನರ ಉತ್ತಮ ಭವಿಷ್ಯದ ಬದುಕನ್ನು ನಿರ್ಮಿಸುವ ಸರಕಾರ ನಮ್ಮದು: ಸಿಎಂ ಬೊಮ್ಮಾಯಿ
ಈ ಬಗ್ಗೆ ಜಿಲ್ಲಾಧಿಕಾರಿಗೂ ಸಹ ಮನವಿ ಮಾಡಲಾಗಿದೆ ಎಂದು ದಲಿತ ಮುಖಂಡ ಅರದೇಶನಹಳ್ಳಿ ಕುಮಾರ್ ಅವರ ಆರೋಪವಾಗಿದೆ. ಈ ಕೇರಿ ಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಪರಿಶಿಷ್ಟ ಜಾತಿಯ 40 ಬಡ ಕುಟುಂಬಗಳು ಬಹುತೇಕ ಕಲ್ಲುಮನೆ, ಸೀಟುಗಳು, ಹೆಂಚಿನ ಮನೆಗಳಲ್ಲಿ ವಾಸವಿದ್ದು, 2 ಸಾವಿರ ಜನಸಂಖ್ಯೆ ಹೊಂದಿದೆ.
ಒತ್ತುವರಿ ಆರೋಪ: ಒಂದೊಂದು ಮನೆಯಲ್ಲಿ 3-4 ಕುಟುಂಬಗಳು ವಾಸವಿದ್ದಾರೆ. ದಲಿತ ಕೇರಿಗೆ ಸ್ಮಶಾನದ ಜಾಗವಿಲ್ಲ. ಸುಮಾರು 80-90 ವರ್ಷದ ಹಿಂದಿನಿಂದಲೂ 10 ಗುಂಟೆ ಜಾಗದ ಸರ್ವೆ ನಂ.57ರಲ್ಲಿ ಸ್ಮಶಾನದ ಜಾಗವಿತ್ತು. ಆ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದು, ಅದನ್ನು ಅಧಿಕಾರಿಗಳು ಮಂಜೂರು ಮಾಡಿಕೊಟ್ಟಿರುತ್ತಾರೆ.
ವಾಸ್ತವದಲ್ಲಿ ಅದು ಗೋಮಾಳ ಜಾಗವಾಗಿದೆ. ನಿವೇಶನಗಳಿಗಾಗಿ ಸರ್ವೆ ನಂ.69ರಲ್ಲಿ ಸರ್ಕಾರಿ ಜಮೀನು ಇದ್ದು, ಅದನ್ನು ಬಡವರಿಗೆ ನಿವೇಶನಕ್ಕಾಗಿ ಮಂಜೂರು ಮಾಡುವುದನ್ನು ಬಿಟ್ಟು ಆ ಜಾಗವನ್ನು ಸ್ಮಶಾನಕ್ಕಾಗಿ ಮೀಸಲಿಟ್ಟಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಗ್ರಾಮಸ್ಥರು ಆಕ್ರೊಶ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.