ಅಂಟಿಲ್ಲದ ಸೀಡ್‌ಲೆಸ್ ಹಲಸು..!
Team Udayavani, Nov 15, 2021, 12:02 PM IST
Representative Image used
ಬೆಂಗಳೂರು: ಹಲಸು ಪ್ರಿಯರಿಗೊಂಡು ಸಿಹಿ ಸುದ್ದಿ. ಇದೀಗ ಸೀಡ್‌ಲೆಸ್ ಮತ್ತು ಅಂಟಿಲ್ಲದ ಹಲಸು ಬಂದಿದೆ. ಪುತ್ತೂರಿನ ಗ್ರೀನ್ ವರ್ಲ್ಡ್ ನರ್ಸರಿಯು ಇಂತಹದ್ದೊಂದು ತಳಿಯನ್ನು ಸಂಶೋಧಿಸಿದ್ದು ಪೆರುಗ್ವೆ ದೇಶ ಮೂಲದ ಸೀಡ್‌ಲೆಸ್ ಹಲಸನ್ನು ರಾಜ್ಯದಲ್ಲಿ ಕಸಿ ಮಾಡುವ ಮೂಲಕ ರೈತರಿಗೆ ಬೆಳೆಯಲು ನೀಡುತ್ತಿದೆ. ಮೂರು ವರ್ಷಕ್ಕೆ ಫಲ ಬರಲಿದ್ದು, ಹಲಸಿನ ಋತುವಾದ ಬೇಸಿಗೆಯಲ್ಲಿಯೇ ಫಲ ಬರಲಿದೆ.
ಆರಂಭದ ವರ್ಷದಲ್ಲಿ 10 ರಿಂದ 25 ಕಾಯಿ ಬಿಡಲಿದೆ. ನಂತರದ ವರ್ಷಗಳಲ್ಲಿ 70 ರಿಂದ 100 ಕಾಯಿವರೆಗೂ ಫಲ ಕಟ್ಟಲಿದೆ. ಪ್ರತಿ ಕಾಯಿ ಕೂಡ 7 ರಿಂದ 10 ಕೆಜಿ ವರೆಗೂ ತೂಗ ಲಿದೆ ಎನ್ನುತ್ತಾರೆ ನರ್ಸ ರಿಯ ನಿರ್ವಹಣೆಗಾರ ಫಯಾಜ್. ಇತ್ತೀಚಿನ ದಿನಗಳಲ್ಲಿ ತುಂಬಾ ಬೇಡಿಕೆ ಇದ್ದು, ಜನರು ಕೂಡ ಬೆಳೆಯಲು ಆಸಕ್ತರಾಗಿದ್ದಾರೆ.
ಇದನ್ನೂ ಓದಿ:- ಗರೋಡಿಗಳು ಪಾವಿತ್ರ್ಯತೆಯ ಪುಣ್ಯಕ್ಷೇತ್ರಗಳಾಗಿವೆ: ನಿತ್ಯಾನಂದ ಡಿ. ಕೋಟ್ಯಾನ್
ಸಾಮಾ ನ್ಯವಾಗಿ ಅಂಟಿಲ್ಲದ ಹಲಸಿಲ್ಲ. ಆದ್ದರಿಂದ ಜನರು ಯಾವ ರೀತಿ ಇರಲಿದೆ ಎಂಬುದನ್ನು ಕೇಳಿಯೇ ಕುತೂಹಲ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ನೋಡೋಣ ಯಾವ ರೀತಿಯಲ್ಲಿ ಬೆಳೆಯಲಿದೆ ಎಂಬುದನ್ನು ನೋಡಲು ಕುತೂಹಲಕಾರಿಯಾಗಿ ದ್ದಾರೆ. ಅದೇ ರೀತಿ ಉತ್ತಮ ಬೇಡಿಕೆ ಕೂಡ ಬರುತ್ತಿದೆ. ಈ ಹಲಸನ್ನು ಯಾವುದೇ ವಾತಾವರಣದಲ್ಲಿ ಬೆಳೆಯಬಹುದು. ಈಗಾಗಲೇ ಹಲಸಿನ ಖಾದ್ಯಗಳು, ತಿನಿಸುಗಳನ್ನು ಮಾಡಲಾಗುತ್ತಿದೆ. ಇದೀಗ ಅಂಟು ಮತ್ತು ಬೀಜವಿಲ್ಲದಿದ್ದರೆ ಅದನ್ನು ಬಿಡಿಸುವುದು ಕೂಡ ಸುಲಭವಾಗಲಿದೆ. ಮಾರಾಟ ಮಾಡುವವರಿಗೆ ಸುಲಭವಾಗಲಿದೆ ಎನ್ನುತ್ತಾರೆ ಫಯಾಜ್.
ಅಭಿವೃದ್ಧಿ ಆಗಿದ್ದು ಹೇಗೆ?
ಬೇರೆ ನರ್ಸರಿಯೊಂದರಲ್ಲಿ ಈ ಗಿಡವನ್ನು ತರಲಾಗಿತ್ತು. ನಂತರ ನಮ್ಮ ನರ್ಸರಿಯಲ್ಲಿ ಕಸಿ ಮಾಡಿ ಅಭಿವೃದ್ಧಿ ಮಾಡಲಾಗಿದೆ. ಸುತ್ತಮುತ್ತಲಿನ ಜನರು ಈಗಾಗಲೇ ಬೆಳೆಯಲು ಆರಂಭಿಸಿದ್ದಾರೆ. ರಾಜ್ಯದ ಇತರೆಡೆಯೂ ಜನರು ಬೆಳೆಯಲು ಅವಕಾಶ ಕಲ್ಪಿಸಬೇಕು ಎಂಬ ಉದ್ದೇಶದಿಂದ ಕೃಷಿ ಮೇಳದಲ್ಲಿ ಮಳಿಗೆ ಇಡಲಾಗಿದೆ ಎಂದು ಫಯಾಜ್ ಅಭಿಪ್ರಾಯ ಹಂಚಿಕೊಂಡರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.