ಸಬ್‌ರಿಜಿಸ್ಟ್ರರ್ ಆಫೀಸ್‌ನಲ್ಲಿ ಸರ್ವರ್ ಸಮಸ್ಯೆ
Team Udayavani, Mar 6, 2020, 5:26 PM IST
ಸಾಂದರ್ಭಿಕ ಚಿತ್ರ
ದೇವನಹಳ್ಳಿ: ನಗರದ ಮಿನಿವಿಧಾನ ಸೌಧದಲ್ಲಿರುವ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಸರ್ವರ್ ಸಮಸ್ಯೆಯಿಂದ ನೋಂದಣಿದಾರರು ಪರದಾಡುವ ಸ್ಥತಿ ನಿರ್ಮಾಣವಾಗಿದೆ.
ನೋಂದಣಾಧಿಕಾರಿ ಕಚೇರಿಗೆ ನಿತ್ಯ ನೂರಾರು ಜನರು ನಿವೇಶನ , ಜಮೀನು, ಮನೆ ಮತ್ತು ಇನ್ನಿತರೆ ಸ್ಥಿರಾಸ್ತಿ ಮಾರಾಟ ಮಾಡಲು ಆಗಮಿಸುತ್ತಾರೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾರಂಭ ಗೊಂಡ ನಂತರ ಇಲ್ಲಿನ ಭೂಮಿಯ ಬೆಲೆ ಗಗನಕ್ಕೇರಿದೆ. ಒಂದೊಂದು ಗುಂಟೆಯ ಜಾಗಕ್ಕೆ ಚಿನ್ನದ ಬೆಲೆಯಿದೆ. ಸರ್ಕಾರ ನಿಗದಿ ಪಡಿಸಿರುವ 3 ಹಂತದ ಶುಲ್ಕಗಳು ವಿಪರೀತ ದುಬಾರಿ ಆಗಿದೆ. ವಾರ್ಷಿಕ ಕೋಟ್ಯಂತರ ರೂಪಾಯಿ ದೇವನಹಳ್ಳಿನೋಂದಣಿ ಇಲಾಖೆಗೆ ಸಂದಾಯವಾಗುತ್ತಿದ್ದರೂ, ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸದಿದ್ದರೆ ಹೇಗೆ ಎಂದು ನೋಂದಣಿದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸರ್ವರ್ ನಿಂದ ಅಪ್ ಲೋಡ್ ಮತ್ತು ಡೌನ್ ಲೋಡ್ ಮಾಡಿ ನೋಂದಣಿದಾರರ ಸಮಗ್ರ ಮಾಹಿತಿಯ ಪ್ರಿಂಟ್ ಔಟ್ ತೆಗೆದು ಮತ್ತೆ ದಾಖಲಾತಿ ಪರಿಶೀಲಿಸಿ, ಮಾರಾಟ ಗಾರರ ಮತ್ತು ಖರೀದಿ ದಾರರ ಭಾವ ಚಿತ್ರ ತೆಗೆಯಬೇಕು. ಸಾಕ್ಷೀದಾರರ ದೂರವಾಣಿ ಸಂಖ್ಯೆಯನ್ನು ಅಪ್‌ಲೋಡ್ ಮಾಡಿದಾಗ ಮೊಬೈಲ್ ಗೆ ಮೆಸೇಜ್ ಬಂದ ಬಳಿಕ ಮತ್ತೆ, ಮೂಲ ಕ್ರಯ ಪತ್ರವನ್ನು ಪರಿಶೀಲಿಸಿ ಪ್ರಿಂಟ್ ಔಟ್ ಪಡೆಯಬೇಕು. ಸರ್ವರ್ ಸಮಸ್ಯೆಯಿಂದ ದಿನನಿತ್ಯ ಇದು ಕಿರಿ ಕಿರಿ ಆಗುತ್ತಿದೆ ಎಂದು ವಿವರಿಸುತ್ತಾರೆ ನೋಂದಣಿದಾರರು.
ಸರ್ವರ್ ಸಮಸ್ಯೆ ಯಿಂದ ಎಲ್ಲಾ ಇಲಾಖೆಯಲ್ಲೂ ಸಮಸ್ಯೆ ಇದೆ. ನಾವು ಸರಿಪಡಿಸಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಹೇಳುತ್ತಲ್ಲೇ ಇದ್ದೇವೆ. ದಿನನಿತ್ಯ 40 ರಿಂದ 50 ನೋಂದಣಿ ಆಗುತ್ತದೆ. ಆದರೂ, ಸಮಸ್ಯೆ ಬಗೆ ಹರಿಯುತ್ತಿಲ್ಲ ಎನ್ನುತ್ತಾರೆ. -ರವೀಂದ್ರ ಗೌಡ, ಉಪ ನೋಂದಣಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.