ಎನ್‌ಎಸ್‌ಎಸ್‌ನಿಂದ ಸೇವಾ ಮನೋಭಾವ
Team Udayavani, Oct 11, 2020, 2:03 PM IST
ವಿಜಯಪುರ: ಎನ್‌ಎಸ್‌ಎಸ್ ಶಿಬಿರದಿಂದ ಕಾಲೇಜು ವಿದ್ಯಾರ್ಥಿಗಳಿಗೆ ಸೇವಾ ಮನೋಭಾವ ಬೆಳೆಯುತ್ತದೆ ಎಂದು ಚನ್ನರಾಯಪಟ್ಟಣ ಠಾಣೆ ಪಿಎಸ್‌ಐ ಶರಣಪ್ಪ ತಿಳಿಸಿದರು.
ಚನ್ನರಾಯಪಟ್ಟಣ ಹೋಬಳಿ ಐಬಸಾಪುರ ಗ್ರಾಮದಲ್ಲಿ ಐಐಬಿಎಸ್ ಕಾಲೇಜು ವತಿಯಿಂದ ನಡೆದ ಎನ್‌ಎಸ್‌ಎಸ್ ಶಿಬಿರ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಗ್ರಾಮೀಣ ಭಾಗದಲ್ಲಿ ಸಾರ್ವಜನಿಕರಿಗೆ ಸ್ವಚ್ಛತೆ, ಪರಿಸರದ ಬಗ್ಗೆ ಅರಿವು ಮೂಡಿಸಬೇಕು. ಜತೆಗೆ ಕೋವಿಡ್ ಬಗ್ಗೆಯೂ ಹೆಚ್ಚಿನ ಅರಿವು ಮೂಡಿಸಬೇಕು.ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯವಾಗಿ ಧರಿಸುವಂತೆ ತಿಳಿ ಹೇಳಬೇಕು ಎಂದು ತಿಳಿಸಿದರು.
ಹಾಗೆಯೇ ಶಿಬಿರದಲ್ಲಿ ಹಲವಾರು ರೀತಿಯ ಆರೋಗ್ಯ ತಪಾಸಣೆ ಕಾರ್ಯ ಕ್ರಮಗಳನ್ನು ಆಯೋಜಿಸಿದರೆ ಬಡ ಜನತೆಗೆ ಅನುಕೂಲವಾಗುತ್ತದೆ ಎಂದರು.
ಎಂಪಿಸಿಎಸ್ ಮಾಜಿ ಅಧ್ಯಕ್ಷ ರಾಜಣ್ಣ ಮಾತನಾಡಿ, ನಮ್ಮ ಗ್ರಾಮದಲ್ಲಿ ಇಂತಹ ಶಿಬಿರಗಳನ್ನು ಆಯೋಜಿಸಿದರೆ ಗ್ರಾಮಕ್ಕೂಒಳ್ಳೆಯ ಕೆಲಸಗಳಾಗುತ್ತವೆ. ಈ ಶಿಬಿರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸಸಿ ನೆಟ್ಟರೆಪರಿಸರ ಕಾಪಾಡಬಹುದು. ವಿದ್ಯಾರ್ಥಿಗಳು ನಮ್ಮ ಗ್ರಾಮವನ್ನು ಆಯ್ಕೆ ಮಾಡಿಕೊಂಡಿರುವುದು ಅಭಿನಂದನಾರ್ಹ. ಶಿಬಿರಾರ್ಥಿಗಳಿಗೆ ನಮ್ಮ ಗ್ರಾಮಸ್ಥರೆಲ್ಲರೂ ಸಹಕಾರ ನೀಡುತ್ತೇವೆಂದರು .
ಐಐಬಿಎಸ್‌ಕಾಲೇಜು ಪ್ರಾಂಶುಪಾಲ ರಾದ ಡಾ.ತ್ರಿಪುರಾನೇಮಿಜಗ್ಗ, ಡಾ.ಬಸವ ರಾಜ್, ಐ.ಎಸ್. ಆನಂದ್, ಆಂಜಿನಪ್ಪ, ಟಿ. ರಾಮೇಗೌಡ, ಶಂಕರಪ್ಪ,ಪಿಡಿಒಆಶಾ ರಾಣಿ,ಮಂಡಿಬೆಲೆಪಿಡಿಒ ಮುನಿರಾಜು, ಗ್ರಾಪಂ ಮಾಜಿಸದಸ್ಯ ವೆಂಕಟೇಶ್, ವಿದ್ಯಾರ್ಥಿಗಳು, ಗ್ರಾಮಸ್ಥರು ಇದ್ದರು.
ಗುಣಮಟ್ಟದ ಹಾಲು ಸರಬರಾಜಿಗೆ ಆದ್ಯತೆ ನೀಡಿ :
ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆ ಹಾಲು ಉತ್ಪಾದಕರ ಸಂಘದ2020-21ನೇ ಸರ್ವ ಸದಸ್ಯರ ಸಾಮಾನ್ಯ ಸಭೆ ಸಂಘದ ಅಧ್ಯಕ್ಷ ಆವಲಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಪಂ ಮಾಜಿ ಸದಸ್ಯ ಎನ್.ಅರವಿಂದ್ ಮಾತನಾಡಿ, ಹಾಲು ಉತ್ಪಾದಕರು ರಾಸುಗಳಿಗೆ ಹಸಿರು ಹಾಗೂ ಒಣ ವೇವು ಮತ್ತು ಪಶುಆಹಾರವನ್ನು ಸಮತೋಲನವಾಗಿ ನೀಡಿ ಗುಣಮಟ್ಟದ ಹಾಲು ಸರಬರಾಜು ಮಾಡಿದರೆ ಮಾತ್ರ ಸಂಘ ಬೆಳೆಯುತ್ತದೆ. ಸಂಘದ ಸದಸ್ಯರು ಪ್ರೋತ್ಸಾಧನ ಪಡೆಯಲು ತಮ್ಮ ಭ್ಯಾಂಕ್ ಖಾತೆಗೆ ಆಧಾರ್‌ಕಾರ್ಡ್ ಅನ್ನು ಲಿಂಕ್ ಮಾಡಿದರೆ ತಮ್ಮ ಖಾತೆಗೆ ಹಣ ನೇರವಾಗಿ ಸಂದಾಯವಾಗುತ್ತದೆ ಎಂದರು.
ಇದೇ ವೇಳೆ ಗ್ರಾಹಕರು ಸಂಘದಲ್ಲಿ ಹಾಲು ನೀಡಿದಾಗ ರಶೀದಿ ನೀಡುತ್ತಿಲ್ಲ ಎಂದು ಪ್ರಶ್ನಿಸಿದಾಗ, ಇದಕ್ಕೆ ಉತ್ತರಿಸಿದ ಕಾರ್ಯದರ್ಶಿ ಶ್ರೀನಿವಾಸ್‌ಕೆಲವು ತಾಂತ್ರಿಕಕಾರಣಗಳಿಂದ ಬಿಲ್ ನೀಡಲಾಗುತ್ತಿಲ್ಲ. ಇನ್ನು2-3 ದಿನಗಳಲ್ಲಿ ಇಲ್ಲಿರುವಯಂತ್ರ ಸರಿಪಡಿಸಿ ಬಿಲ್ ನೀಡುತ್ತೇವೆಂದರು. ಕಿಸಾನ್‌ಕಾರ್ಡ್ ಮೂಲಕ ರೈತರು ಅರ್ಜಿ ಸಲ್ಲಿಸಿದ್ದುಇದುವರೆಗೆ ಬ್ಯಾಂಕಿನ ಅಧಿಕಾರಿಗಳು ಯಾವುದೇ ರೀತಿಸ್ವಂದಿಸಿಲ್ಲ ಎಂದು ಗ್ರಾಹಕರ ದೂರಿಗಾಗಿ ಪ್ರತಿಕ್ರಿಯಿಸಿದ ಉಪ ವ್ಯವಸ್ಥಾಪಕ ಗೋಪಾಲಕೃಷ್ಣ, ಬ್ಯಾಂಕಿನ ಅಧಿಕಾರಿಗಳುಡಿಸೆಂಬರ್ ನಂತರ ಒಂದು ಡೇರಿಗೆ30 ಗ್ರಾಹಕರಂತೆ ಗುರುತಿಸಿ ಹಂತಹಂತವಾಗಿ ಸಾಲ ವಿತರಿಸುವುದಾಗಿ ತಿಳಿಸಿದ್ದಾರೆಂದರು. ಎಪಿಎಂಸಿ ನಿರ್ದೇಶಕ ಎಸ್.ಆರ್. ಮುನಿರಾಜು, ಹಾಲುಉತ್ಪಾದಕರ ಸಂಘದ ಅಧ್ಯಕ್ಷ ಆವಲಪ್ಪ, ಬೆಂಗಳೂರು ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಗೋಪಾಲಕೃಷ್ಣ, ಎಲ್.ವಿ.ನಾಗರಾಜು, ವಿಸ್ತರಣಾಧಿಕಾರಿ ಅನಿತಾ, ಗ್ರಾಪಂ ಸದಸ್ಯ ಟಿ.ವಿ.ವೆಂಕಟೇಶ್, ಗಂಗರಾಜು, ಸಂಘದಕಾರ್ಯದರ್ಶಿ ಶ್ರೀನಿವಾಸ, ನಿರ್ದೇಶಕರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.