Sevanthi Crop: ಬೆಳೆಗಾರರ ಬದುಕನ್ನು ಘಮ್ಮೆನ್ನಿಸದ ಸೇವಂತಿ
Team Udayavani, Sep 24, 2023, 3:59 PM IST
ದೇವನಹಳ್ಳಿ: ಬಯಲು ಸೀಮೆಯ ರೈತರು ಇರುವ ಅಲ್ಪಸಲ್ಪದ ನೀರಿನಲ್ಲಿಯೇ ತೋಟಗಾರಿಕೆ ಬೆಳೆಗಳನ್ನು ಬೆಳೆದು ಜೀವನ ಸಾಗಿಸುತ್ತಿದ್ದಾರೆ. ಆದರೆ, ಸೇವಂತಿಗೆ ಹೂ ಕೇವಲ 50 ರಿಂದ 60 ರೂಪಾಯಿ ಮಾರಾಟವಾಗುತ್ತಿರುವುದರಿಂದ ಇದರಿಂದ ಉತ್ಪಾದನೆಯ ವೆಚ್ಚವಿರಲಿ. ಹೂ ಕೀಳಲು ಕೊಡುವ ಕೂಲಿ ಹಣವು ಬೆಳೆಗಾರರಿಗೆ ಸಿಗದಂತಾಗಿದೆ. ಸೇವಂತಿಗೆ ಬೆಳೆಯುವ ರೈತರು ಬೆಲೆ ಕುಸಿತದಿಂದ ಕಂಗಲಾಗಿದ್ದಾರೆ.
ಜಿÇÉೆಯ ರೈತರು ಸೇವಂತಿಗೆ ಹೂವನ್ನು ಹೆಚ್ಚು ಬೆಳೆದಿದ್ದಾರೆ. ಗೌರಿ ಗಣೇಶ ಹಬ್ಬಕ್ಕೆ ಹೆಚ್ಚಿನ ಬೆಲೆ ಸಿಗುತ್ತದೆ ಎಂಬುವ ನಿರೀಕ್ಷೆಯಲ್ಲಿ ಇದ್ದವರಿಗೆ ನಿರಾಸೆ ಮೂಡಿಸಿದೆ. ಹಬ್ಬ ಮುಗಿದರೂ ಸಹ ಬೆಲೆ ಏರಲಿಲ್ಲ. ಪ್ರತಿ ಮಾರು 150ರ ಗಡಿ ತಲುಪುತ್ತಿತ್ತು. ಇದು ಬೆಳೆಗಾರರಿಗೂ ಲಾಭವನ್ನು ತಂದು ಕೊಡುತ್ತಿತ್ತು. ಇದನ್ನು ಕಂಡ ಹಲವು ರೈತರು ಸಾಂಪ್ರದಾಯಿಕ ಬೆಳೆಗಳನ್ನು ಕೈ ಬಿಟ್ಟು ಸೇವಂತಿಗೆ ಹೂವಿನ ಬೆಳೆಯುತ್ತಾ ಆಕರ್ಷಿತರಾದರು. ಮಹಾಲಕ್ಷ್ಮೀ ಹಬ್ಬದ ಸಂದರ್ಭದಲ್ಲಿ 250- 280 ಕೆ.ಜಿ. ಸೇವಂತಿಗೆ ಮಾರಾಟವಾಗುತ್ತಿತ್ತು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ, ನೆಲಮಂಗಲ ತಾಲೂಕುಗಳಲ್ಲಿ ಹೂ ಬೆಳೆಯುತ್ತಾರೆ. ಜಿಲ್ಲೆಯಲ್ಲಿ ಸಾವಿರಾರು ಹೆಕ್ಟರ್ ಪ್ರದೇಶದಲ್ಲಿ ರೈತರು ಹೂ ಬೆಳೆಯುತ್ತಿದ್ದು, ಹೇರಳವಾಗಿ ಗುಲಾಬಿ ಸೇವಂತಿ ಹಾಗೂ ಚೆಂಡು ಹೂಗಳನ್ನು ಬೆಳೆಯುತ್ತಾರೆ. ಮಲ್ಲಿಗೆ, ಕನಕಾಂಬರ ಸೇರಿದಂತೆ ಪಾಲಿ ಹೌಸ್‌ಗಳಲ್ಲಿ ಅಲಂಕಾರಿಕ ಹೂಗಳನ್ನು ಬೆಳೆಯುತ್ತಾರೆ. ಶೇಕಡ 40ಕ್ಕಿಂತ ಹೆಚ್ಚು ರೈತರು ಇತ್ತೀಚಿನ ವರ್ಷಗಳಲ್ಲಿ ಹೂ ಬೆಳೆಯುವ ಆಸಕ್ತಿ ತೋರಿದ್ದಾರೆ.
ಶ್ರಾವಣ ಮಾಸ ಮುಗಿದು ಸಾಲು ಸಾಲು ಹಬ್ಬಗಳು ಶುರುವಾಗುತ್ತಿದ್ದರು ಹೂ ಬೆಳೆಗಾರರು ಹತಾಶರಾಗಿದ್ದಾರೆ. ಗೌರಿ ಗಣೇಶ ಹಬ್ಬದಲ್ಲೂ ಹೂ ದರ ಚೇತರಿಸಿ ಕೊಳ್ಳದ ಕಾರಣ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಜಿಲ್ಲೆಯಾದ್ಯಂತ ಹೂವಿನ ಬೆಳೆ ಹೆಚ್ಚಾಗಿ ಬೆಳೆಯುತ್ತಿರುವುದರಿಂದ ಹೂಗಳ ಅತಿವೃಷ್ಟಿ ಯಾಗಿರುವ ಕಾರಣ ಮಂಡಿಗಳಲ್ಲಿ ಬೇರೆ ಜಿಲ್ಲೆ ಮತ್ತು ರಾಜ್ಯಗಳಲ್ಲೂ ಸ್ಥಳೀಯವಾಗಿ ಬೆಳೆದಿರುವ ಅವುಗಳೆ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗಳಿಗೆ ಬರುತ್ತಿರುವು ದರಿಂದ ಹೂವಿಗೆ ಬೇಡಿಕೆ ಕಡಿಮೆಯಾಗಿದೆ ಎನ್ನುತ್ತಾರೆ ವ್ಯಾಪಾರಸ್ಥರು.
ತೋಟದಲ್ಲೇ ಹೂ ಬಿಟ್ಟ ರೈತರು: ಈಗಾಗಲೇ ರೈತರು ತಮ್ಮ ತಮ್ಮ ತೋಟಗಳಲ್ಲಿ ಹೂಗಳನ್ನು ಕೇಳದೆ ಹಾಗೆ ಬಿಟ್ಟಿದ್ದಾರೆ. ಕೆಲವು ತೋಟಗಳಲ್ಲಿ ಹೂ ಬಾಡುತ್ತಿವೆ. ಇನ್ನು ಕೆಲವು ತೋಟಗಳಲ್ಲಿ ಒಣಗುತ್ತಿದೆ. ಹೂವಿನ ಗಿಡಗಳಿಗೆ ಟ್ಯಾಕ್ಟರ್‌ಗಳ ಮೂಲಕ ರೋಟರಿ ಹೊಡೆಯುತ್ತಿದ್ದಾರೆ. ಟ್ಯಾಕ್ಟರ್‌ನಲ್ಲಿ ಉಳುಮೆ ಮಾಡುತ್ತಿದ್ದಾರೆ. ಸೇವಂತಿಗೆ ಹೂವಿನ ಗಿಡವನ್ನು ಕಿತ್ತು ಬೇರೆ ಬೆಳೆಹಿಡಲು ತಯಾರಿ ನಡೆಸುತ್ತಿದ್ದಾರೆ. ಈ ಬಾರಿ ಸೇವಂತಿಗೆಯಲ್ಲಿ ಸಾಕಷ್ಟು ನಷ್ಟವನ್ನು ರೈತರ ಅನುಭವಿಸಿದ್ದಾರೆ.
ಬೆಲೆ ಕುಸಿತ, ಹಾಕಿದ ಬಂಡವಾಳವೂ ಇಲ್ಲ: ಸೇವಂತಿಗೆ ಹೂವನ್ನು ಸಾಮ ಮಾಡಿ ಹೂ ಬೆಳೆದರೂ ಹಾಕಿದ ಬಂಡವಾಳವೂ ಸಹ ಬಂದಿರುವುದಿಲ್ಲ. ಧಿಡೀರನೇ ಹೂವಿನ ಕುಸಿತದಿಂದ ರೈತರ ಸಾಕಷ್ಟು ಸಂಕಷ್ಟ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ. ಹೂವಿನ ಬೆಲೆ ತಳಮಟ್ಟಕ್ಕೆ ಇಳಿದ ಕಾರಣ. ಹೂ ಕಿತ್ತರೆ ಕನಿಷ್ಠ ಕೂಲಿಕಾರರಿಗೆ ನೀಡಬೇಕಾದ ಹಣವು ಸಹ ಸಿಗುವುದಿಲ್ಲ ಇಲ್ಲ ಎಂದು ರೈತರು ಹೇಳುತ್ತಾರೆ.
ಹೂವಿನ ಬೆಲೆ ಕುಸಿತಕ್ಕೆ ಮಳೆ ಕಾರಣ: ನೆರೆ ರಾಜ್ಯಗಳಿಗೆ ರಫ್ತು ಆಗುತ್ತಿತ್ತು. ಆದರೆ,ಇಲ್ಲಿ ಹೂವಿಗೆ ಸೂಕ್ತ ಬೇಡಿಕೆ ಇಲ್ಲವಾಗಿದೆ.ಅಲ್ಲದೆ ನೆರೆಯ ಆಂಧ್ರ ರಾಜ್ಯಗಳಲ್ಲಿ ಮಳೆಯೂ ಹೆಚ್ಚಾಗಿರುವುದು. ಬೆಲೆ ಕುಸಿತಕ್ಕೆ ಕಾರಣವಾಗಿದೆ. ಕೇರಳ ದಲ್ಲಿ ಓಣಂ ಮುಗಿದಿರುವುದರಿಂದ ಅಲ್ಲಿಯೂ ಹೂಗಳಿಗೆ ಬೇಡಿಕೆ ಇಲ್ಲವಾಗಿದೆ.ಇದರಿಂದ ಮಾರು ಕಟ್ಟೆಯಲ್ಲಿ ಹೂವಿನ ಬೆಲೆ ರಫ್ತುವಾಗದೆ. ಹೂ ಬೆಲೆ ಕುಸಿಯಲು ಧೀಡಿರ್ ಕಾರಣವಾಗಿದೆ ಎನ್ನುತ್ತಾರೆ. ಹೂವಿನ ವ್ಯಾಪಾರಿಗಳು.
ಸೇವಂತಿಗೆ ಬೆಳೆಯಲಿ ಲಾಭ ಕಾಣಬಹುದೆಂಬ ಆಸೆಯಿಂದ ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ಸೇವಂತಿಗೆ ಬೆಳೆಯುವುದಕ್ಕೆ ಮುಂದಾಗಿದ್ದೆ ಬೆಲೆ ಕುಸಿಯುವುದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಮಳೆಯ ಕೊರತೆಯ ನಡುವೆಯೂ ಸೇವಂತಿಗೆಗೆ ಬಂಪರ್ ಬೆಳೆ ಬಂದಿತ್ತು. ಬೇಡಿಕೆಗಿಂತ ಹೆಚ್ಚಿನವು ಮಾರುಕಟ್ಟೆಯನ್ನು ಸೇರಿತ್ತು ಇದರ ಪರಿಣಾಮ ಬೆಲೆ ಇದ್ದಕ್ಕಿದ್ದಂತೆ ಕುಸಿಯ ತೊಡಗಿತು.
ಸೇವಂತಿಗೆ ಬೆಳೆಯನ್ನು ಸಾಲ ಮಾಡಿ ಬೆಳೆದಿದ್ದೇವೆ. ಹೂವಿಗೆ ಬೆಲೆ ಇಲ್ಲದೆ ಕಂಗಾಲು ಆಗಿ ದ್ದೇವೆ. ಹೂ ಕೀಳಲು ದಿನಕ್ಕೆ ಒಬ್ಬರಿಗೆ ಕೂಲಿ 200-250ರೂ ನೀಡಬೇಕು. ಆದರೆ, ಈಗ ಹೂವಿನ ಬೆಲೆ ಕುಸಿತವಾಗಿರುವುದರಿಂದ ಕೂಲಿ ನೀಡಲು ಸಾಧ್ಯವಾಗುತ್ತಿಲ್ಲ.-ಜಯರಾಮ್ ರೈತ
ಹೂಗಳ ಬೆಲೆ ಕುಸಿತಗೊಂಡಿದೆ.ಸೇವಂತಿಗೆ ಹೂವು ಹೆಚ್ಚು ಬೆಳೆದಿರುವುದರಿಂದ ಬೆಲೆ ಕುಸಿತ ವಾಗಿದೆ. ಹೊರ ರಾಜ್ಯಗಳಲ್ಲಿ ಹೂವಿಗೆ ಬೇಡಿಕೆ ಇಲ್ಲದ ಪರಿಣಾಮ ಜಿಲ್ಲೆಯಿಂದ ಹೂ ರಫ್ತು ಆಗುತ್ತಿಲ್ಲ. ಹೂವಿನ ಇಳುವರಿ ಹೆಚ್ಚಾಗಿದ್ದು ಇದರಿಂದ ಹೂ ಬೆಲೆ ಕುಸಿತ ಕಾರಣವಾಗಿದೆ.-ಉಮೇಶ್ ಹೂವಿನ ವ್ಯಾಪಾರಿ
-ಎಸ್.ಮಹೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.