ಪ್ರಯಾಣಿಕರಿಗೆ ಚರಂಡಿ ಸ್ಲ್ಯಾಬ್ ಗಳೇ ಆಸರೆ
Team Udayavani, Jul 6, 2023, 2:45 PM IST
ದೇವನಹಳ್ಳಿ: ತಾಲೂಕಿನ ನಂದಿಬೆಟ್ಟಕ್ಕೆ ಹೋಗುವ ದಾರಿಯಲ್ಲಿರುವ ಕಾರಹಳ್ಳಿ ಸರ್ಕಲ್ ನಲ್ಲಿ ಪ್ರಯಾ ಣಿಕರಿಗೆ ತಂಗುದಾಣದ ವ್ಯವಸ್ಥೆ ಇಲ್ಲದೆ, ರಸ್ತೆ ಪಕ್ಕದಲ್ಲಿ ಹಾಕಿರುವ ಚರಂಡಿ ಸ್ಲ್ಯಾಬ್ ಗಳೇ ಆಸರೆಯಾಗಿವೆ. ನಂದಿಬೆಟ್ಟದ ಕಡೆಯಿಂದ ದೇವನಹಳ್ಳಿ ಮಾರ್ಗವಾಗಿ ಬರುವ ಬಸ್‌ಗಳಿಗೆ ಪ್ರಯಾಣಿಕರು ಕಾದು ನಿಂತು ಹೋಗುವ ಪರಿಸ್ಥಿತಿ ವರ್ಷಗಳೇ ಕಳೆಯುತ್ತಿದೆ.
ಸುಮಾರು ವರ್ಷಗಳ ಹಿಂದೆ, ಶಾಸಕರಾಗಿದ್ದ ಎಲ್.ಎನ್.ನಾರಾಯಣಸ್ವಾಮಿ ಅಧಿಕಾರದ ಅವಧಿ ಯಲ್ಲಿ ಸುಮಾರು 3.5ಕೋಟಿ ರೂ. ವೆಚ್ಚದಲ್ಲಿ ಹೈಟೇಕ್ ಬಸ್ ನಿಲ್ದಾಣ, ಶೌಚಾಲಯ, ಮೂಲಭೂತ ಸೌಕರ್ಯಗಳನ್ನು ಒಳಗೊಂಡಂತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆಯಾಗಿದ್ದರೂ ಸಹ ಕಾಮಗಾರಿಗಳು ಮಾತ್ರ ಅಪೂರ್ಣವಾಗಿದ್ದು, ಪ್ರಯಾಣಿಕರಿಗೆ ಮತ್ತು ಸಾರ್ವಜನಿಕರಿಗೆ ಅನಾ ನೂಕುಲಗಳ ದರ್ಶನವಾಗುತ್ತಿದೆ.
ಇನ್ನಾದರೂ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಸ್ಥಳೀಯವಾಗಿ ನಡೆಯಬೇಕಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಿ, ಪ್ರಯಾ ಣಿಕ ರಿಗೆ ಉಪಯೋಗ ವಾಗುವಂತೆ ಅನುಕೂಲ ಮಾ ಡಿಕೊಡಬೇಕೆಂದು ಸಾರ್ವಜನಿಕರು ಒತ್ತಾಯ ಸಿದ್ದಾರೆ.
ದೇವನಹಳ್ಳಿ ಪಟ್ಟಣಕ್ಕೆ ಹೋಗಬೇಕಾದರೆ, ಕಾರಹಳ್ಳಿ ಕ್ರಾಸ್‌ನಿಂದ ಹೋಗಬೇಕು. ಬಸ್ ಬರುವ ತನಕ ಬಿಸಿಲು, ಮಳೆ ಬಂದರೂ ಕಾದು ಕುಳಿತು ಪ್ರಯಾಣಿಸುವ ಪರಿಸ್ಥಿತಿ ಇದೆ. ಇಲ್ಲಿ ಯಾವುದೇ ಮೂಲಭೂತ ಸೌಕರ್ಯವಿಲ್ಲ. ಹೈಟೇಕ್ ಬಸ್ ನಿಲ್ದಾಣ ಮಾಡುತ್ತೇವೆಂದು ಹೇಳಿದ್ದರು ಆದರೆ ಇಲ್ಲಿಯ ತನಕ ಆಗಿಲ್ಲ. – ಸುಬ್ಬಣ್ಣ , ವಯೋವೃದ್ಧ, ಮೀಸಗಾನಹಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.