ವಿಜೃಂಭಣೆಯ ಶನೈಶ್ಚರ ಸ್ವಾಮಿ ಜಾತ್ರೆ
Team Udayavani, Jun 4, 2019, 3:00 AM IST
ಆನೇಕಲ್: ತಾಲೂಕಿನ ಬಂಡಾಪುರ ಗ್ರಾಮದಲ್ಲಿ ಪುರಾತನ ಕಾಲದಿಂದ ನೆಲೆಸಿರುವ ಶ್ರೀ ಶನೈಶ್ಚರ ಸ್ವಾಮಿಯ ಜಾತ್ರಾ ಮಹೋತ್ಸವ ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು.
ಬಂಡಾಪುರ ಗ್ರಾಮವು ಆಚಾರ ವಿಚಾರ ದೈವತ್ವದ ಧಾರ್ಮಿಕತೆಯಲ್ಲಿ ಹೆಸರಾದ ಒಂದು ಪುಣ್ಯ ಕ್ಷೇತ್ರವಾಗಿದೆ. ಬಂಡಾಪುರ ಗ್ರಾಮದಲ್ಲಿ ಒಟ್ಟು ನಾಲ್ಕು ದೇವಾಲಯಗಳಿದೆ ಆದರೆ ಇಲ್ಲಿ ಅತಿ ಆಶ್ಚರ್ಯಕರವಾದ ಒಂದು ಅಪರೂಪದ ಆಕರ್ಷಣೀಯ ಸಂಗತಿ ಎಂದರೆ ಶನಿ ಮಹಾತ್ಮ ಮೂರ್ತಿ ಇದೆ, ಇಡೀ ಕರ್ನಾಟಕ ರಾಜ್ಯದಲ್ಲಿಯೇ ಎಲ್ಲಿಯೂ ನಿಂತ ನಿಲುವಿನ ಶನಿ ಮಹಾತ್ಮ ಸ್ವಾಮಿಯ ಮೂರ್ತಿಯನ್ನು ಕಾಣಲು ಸಾಧ್ಯವಿಲ್ಲ.
ಸ್ವಾಮಿಯು ಸಾಕ್ಷಾತ್ ನೀಲವರ್ಣ ರೂಪದಲ್ಲಿ ನಿಂತು ಪ್ರತಿನಿತ್ಯಾ ಜನರ ಸಮಸ್ಯೆಗಳನ್ನ ಬಗೆಹರಿಸುತ್ತಾ ರಾಜ್ಯ ಹಾಗೂ ಹೊರರಾಜ್ಯದ ಅಪಾರವಾದ ಭಕ್ತ ಸಮ್ಮೂಹವನ್ನು ಹೊಂದಿರುವುದು ಈ ಜಾತ್ರಾ ಮಹೋತ್ಸವು ಸಾಕ್ಷಿಯಾಗಿದೆ.
ಜಾತ್ರಾ ಮಹೋತ್ಸವ ಅಂಗವಾಗಿ ಭಕ್ತಾದಿಗಳು ಹಣ್ಣು ಹೂವು, ನವಧಾನ್ಯಗಳು, ತುಳಸಿ, ಎಳ್ಳುಬತ್ತಿ ಹಾಗೂ ಕುಂಬಳಕಾಯಿಯನ್ನ ಅರ್ಚಕರಿಗೆ ಧಾನಮಾಡುವುದು ಬಹಳ ಶಿಷ್ಟವಾಗಿದೆ. ಶನೈಶ್ಚರ ಸ್ವಾಮಿಯು ದೇವಾಲಯದ ಪ್ರಧಾನ ಅರ್ಚಕರಾದ ಮಾಂಕಾಳಪ್ಪ ಸ್ವಾಮಿಗಳ ಮೈಮೇಲೆ ಬಂದು ಭಕ್ತರ ಸಮಸ್ಯೆಗಳಿಗೆ ಪರಿಹಾರ ನೀಡಿರುವ ಸಾಕ್ಷಿ ಗುಂಡೆಗಳನ್ನು ಕಾಣಬಹುದಾಗಿದೆ.
ಶ್ರೀ ಶನೈಶ್ಚರ ಸ್ವಾಮಿಯ ದೇವಾಲಯದ ಪ್ರಧಾನ ಅರ್ಚಕ ಮಾಂಕಾಳಪ್ಪ ಸ್ವಾಮಿಗಳು ಸುದ್ದಿಗಾರರೊಂದಿಗೆ ಮಾತನಾಡಿ, ಸಮಾಜದಲ್ಲಿ ಯಾರು ಅಹಂಕಾರ ಮತ್ತು ದೌರ್ಜನ್ಯಗಳನ್ನ ಮಾಡುತ್ತಾ ಸಮಾಜಕ್ಕೆ ಕೆಡುಕನ್ನು ಬಯಸುತ್ತಾರೆ ಅಂಥವರ ರಾಶಿ ಫಲದ ಮೇಲೆ ಶನಿ ಅಂಟಿಕೊಂಡು ಆತನಿಗೆ ಬುದ್ಧಿ ಕಲಿಸುವುದೇ ಸ್ವಾಮಿಯ ಕೆಲಸವಾಗಿದ್ದು,
ಶನೈಶ್ಚರ ಜಾತ್ರಾ ಮಹೋತ್ಸವ ಅಂಗವಾಗಿ ಏರ್ಪಡಿಸಿದ್ದ ಲಕ್ಷ ದೀಪೋತ್ಸವ, ರಸಮಂಜರಿ ಹಾಗೂ ಗ್ರಾಮ ದೇವತೆಗಳ ಪಲ್ಲಕ್ಕಿ ಮತ್ತು ದ್ರೌಪದಮ್ಮ ದೇವಿಯ ಕರಗ ಮಹೋತ್ಸವ ಸಡಗರ ಸಂಭ್ರಮದಿಂದ ನಡೆಯಿತು ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Udupi: ಜಿಲ್ಲೆಯ ಬ್ಲ್ಯಾಕ್ ಸ್ಪಾಟ್ 30ರಿಂದ 20ಕ್ಕೆ ಇಳಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.