ಹಲವು ವರ್ಷಗಳ ಬಳಿಕ ಶೆಟ್ಟೇರಹಳ್ಳಿ ರಸ್ತೆ ಸಮಸ್ಯೆಗೆ ಮುಕ್ತಿ
Team Udayavani, Jan 3, 2022, 12:33 PM IST
ದೇವನಹಳ್ಳಿ: ಹಲವು ವರ್ಷಗಳಿಂದ ಸುಗಮ ಸಂಚಾರಕ್ಕೆ ಸೂಕ್ತ ರಸ್ತೆಯಿಲ್ಲದ ಕಾರಣ, ಶೆಟ್ಟೆರಹಳ್ಳಿಗ್ರಾಮಸ್ಥರು ಪರದಾಡುತ್ತಿದ್ದರು. ಶಾಸಕ ಎಲ್.ಎನ್. ನಾರಾಯಣಸ್ವಾಮಿ ನೇತೃತ್ವದಲ್ಲಿ ರೈತರೊಂದಿಗೆ ನಡೆಸಿದ ಸಂಧಾನ ಸಫಲವಾಗಿದ್ದು, ರೈತ ತನ್ನ ಭೂಮಿಯಲ್ಲಿ ಲಕ್ಷಾಂತರ ರೂ. ಮೌಲ್ದಯ ಸುಮಾರು 6 ಗುಂಟೆ ಭೂಮಿಯನ್ನು ಸಾರ್ವಜನಿಕ ರಸ್ತೆಗೆ ಬಿಟ್ಟುಕೊಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ.
ತಾಲೂಕಿನ ವಿಶ್ವನಾಥಪುರ ಗ್ರಾಪಂ ವ್ಯಾಪ್ತಿಯ ಶೆಟ್ಟೆರಹಳ್ಳಿ ಗ್ರಾಮದ ಬೆಂಗಳೂರು ಮೂಲಕದ ರೈತಜಾಕೀರ್ ಖಾನ್ ಅವರು, ಸರ್ವೆ ನಂಬರ್ 3/1 ರಲ್ಲಿ ರಸ್ತೆಗಾಗಿ 10 ಅಡಿಗಳು ಅಗವಿರುವ ಭೂಮಿ ಯನ್ನು ಬಿಟ್ಟುಕೊಟ್ಟಿದ್ದಾರೆ. ಈ ಹಿಂದೆ ಸಮೀಪದ ರೈತರ ಮನವೊಲಿಸಿ, ಗ್ರಾಮಠಾಣೆಯವರೆಗೂ ರಸ್ತೆ ನಿರ್ಮಾಣ ಮಾಡಿಕೊಡುವಂತೆ ಸಾಕಷ್ಟು ಬಾರಿ, ಅಧಿಕಾರಿಗಳು, ಹಾಗೂ ಜನಪ್ರತಿನಿಧಿಗಳು ಮನವಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ.
ರೈತ ಜಾಕೀರ್ ಖಾನ್ ಮಾತನಾಡಿ, ನಮ್ಮೂರಿನ ಜನತೆಗೆ ಒಳ್ಳೆಯದಾಗಬೇಕು ಎನ್ನುವ ಉದ್ದೇಶದಿಂದ ಯಾವುದೇ ರೀತಿಯ ಪರಿಹಾರ ಪಡೆದುಕೊಳ್ಳದೇ, ಉಚಿತವಾಗಿ ಭೂಮಿ ಬಿಟ್ಟುಕೊಟ್ಟಿದ್ದೇನೆ. ನಾನು ಬಿಟ್ಟುಕೊಟ್ಟಿರುವ ಭೂಮಿಗೆ ಹಣ ಪಡೆದುಕೊಂಡರೆ ಅದು ಖರ್ಚಾಗುತ್ತದೆ. ಜನರು ನೆಮ್ಮದಿಯಿಂದ ಓಡಾಡಿದರೆ ನಮಗೆ ಒಳ್ಳೆಯದಾಗುತ್ತದೆ. ಶೆಟ್ಟೆರಹಳ್ಳಿ ಗ್ರಾಮಕ್ಕೆ ಹೋಗಿ ಬರಲಿಕ್ಕೆ ಬಂಡಿದಾರಿ 20 ಅಡಿಗಳಷ್ಟು ಇತ್ತು. ಗ್ರಾಮಸ್ಥರ ವಾಹನಗಳ ಸಂಚಾರ ಸೇರಿದಂತೆ ಪ್ರತಿಯೊಂದು ಕಾರ್ಯಚಟುವಟಿಕೆಗಳಿಗೂ ತುಂಬಾ ತೊಂದರೆಯಾಗಿತ್ತು. ಶಾಸಕ ಎಲ್.ಎನ್. ನಾರಾಯಣಸ್ವಾಮಿ ಸೇರಿದಂತೆ ಹಲವಾರು ಮಂದಿ ಬಂದು ನನ್ನ ಬಳಿ ಮನವಿ ಮಾಡಿಕೊಂಡರು ಎಂದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಆರ್.ಮುನೇಗೌಡ ಮಾತನಾಡಿ, ತಾಲೂಕಿನಲ್ಲಿ ಹಲವಾರು ಗ್ರಾಮಗಳಲ್ಲಿ ಬಹಳ ವರ್ಷಗಳಿಂದ ಇದ್ದಂತಹ ಸಮಸ್ಯೆಗಳನ್ನು ಹಳ್ಳಿಗಳ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಜಕೀಯ ರಹಿತವಾಗಿ ಬಗೆಹರಿಸಿದ್ದೇವೆ. ಈ ರಸ್ತೆಯೂ ಕೂಡಾ ದೊಡ್ಡಗೊಲ್ಲಹಳ್ಳಿಗೆ ಸೇರಿಕೊಳ್ಳಲಿದೆ. ಈಗ ಬೈಪಾಸ್ ರಸ್ತೆ ಕಾಮಗಾರಿ ನಡೆಯುತ್ತಿರುವ ಕಾರಣ, ಶೆಟ್ಟೆರಹಳ್ಳಿ ಗ್ರಾಮದ ರಸ್ತೆಯೂ ಉಪಯುಕ್ತವಾಗಲಿದೆ. ಹಲವಾರು ವರ್ಷಗಳಿಂದ ಇಲ್ಲಿ ರಸ್ತೆಯ ಸಮಸ್ಯೆಯಿದೆ. ಕ್ಷೇತ್ರದಲ್ಲಿ ಎಲ್ಲೆಲ್ಲಿ ರಸ್ತೆ ಸಮಸ್ಯೆಗಳಿವೆ ಎನ್ನುವುದನ್ನುಸ್ಥಳೀಯರಿಂದ ಮಾಹಿತಿ ಪಡೆದುಕೊಂಡು, ಮಾತುಕತೆಯ ಮೂಲಕ ಸಮಸ್ಯೆಗಳನ್ನು ಬಗೆಹರಿಸುವಂತಹ ಕೆಲಸವನ್ನು ನಾವು ಮಾಡಿಕೊಂಡು ಬರುತ್ತಿದ್ದೇವೆ ಎಂದರು.
ಉಚಿತವಾಗಿ ರಸ್ತೆಗೆ ಭೂಮಿ ಬಿಟ್ಟುಕೊಟ್ಟಿರುವ ಜಾಕೀರ್ ಖಾನ್ ಅವರನ್ನು ಗ್ರಾಮಸ್ಥರು ಅಬಿನಂದಿ ಸಿದರು. ಪುರಸಭೆ ಸದಸ್ಯರಾದ ಜಿ.ಎ.ರವೀಂದ್ರ,ಎಸ್.ನಾಗೇಶ್, ಗ್ರಾಪಂ ಮಾಜಿ ಅಧ್ಯಕ್ಷ ರಾಮಮೂರ್ತಿ, ಗ್ರಾಪಂ ಮಾಜಿ ಸದಸ್ಯನಾರಾಯಣಸ್ವಾಮಿ, ಭೂ ಮಾಪನ ಇಲಾಖೆಯಭೂಮಾಪಕ ಗಿರೀಶ್, ಮುಖಂಡ ನಾರಾಯಣಸ್ವಾಮಿ ಇತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.