ನಿರಾಶ್ರಿತರಿಗೆ ನಿತ್ಯ ಅನ್ನದಾಸೋಹ
Team Udayavani, May 5, 2021, 3:18 PM IST
ದೊಡ್ಡಬಳ್ಳಾಪುರ: ನಗರದ ದರ್ಗಾಜೋಗಹಳ್ಳಿಯಲ್ಲಿಕಳೆದ ವರ್ಷ ಲಾಕ್‌ಡೌನ್ ಆದಾಗಿನಿಂದ ಇದುವರೆಗೆಸತತವಾಗಿ 400 ದಿನಗಳಿಂದ ಅನ್ನ ದಾಸೋಹಮಾಡಲಾಗುತ್ತಿದೆ. ದರ್ಗಾ ಜೋಗಹಳ್ಳಿಯಲ್ಲಿರುವ ಮಲ್ಲೇಶ್ ಮತ್ತು ತಂಡದಿಂದ ನಿರಾಶ್ರಿತರು ವೃಂದ ದವರು ಭಿಕ್ಷುಕರಿಗೆ ಸತತವಾಗಿ ದಾನಿಗಳ ನೆರವಿನಿಂದದಾಸೋಹ ನಡೆಸಿಕೊಂಡು ಬಂದಿದ್ದಾರೆ.
ಕಳೆದ ಲಾಕ್‌ಡೌನ್ ಸಂದರ್ಭದಲ್ಲಿ ನಿರಾಶ್ರಿತರನ್ನುಕಂಡ ಮಲ್ಲೇಶ ಮತ್ತು ತಂಡ ದಾನಿಗಳ ಸಹಾಯದಿಂದ ಅನ್ನ ದಾಸೋಹ ಮಾಡಲು ಪ್ರಾರಂಭಿಸಿ ಅಂದಿನಿಂದ ಇಂದಿನವರೆಗೂ 250 ಮಂದಿ ಹಿರಿಯ ನಾಗರಿಕರು,ನಿರಾಶ್ರಿತರಿಗೆ ಸತತವಾಗಿ ದಾನಿಗಳ ನೆರವಿನಿಂದ ಊಟದ ವ್ಯವಸ್ಥೆ ಮಾಡಿದ್ದಾರೆ.
ಈಗ ಸರ್ಕಾರ ಜನತಾ ಕರ್ಫ್ಯೂ ಹೇರಿರುವುದರಿಂದ, ಬಡವರು ಹಾಗೂ ಕೂಲಿಕಾರ್ಮಿಕರಿಗೆ ಊಟಕ್ಕೆ ತೊಂದರೆಯಾಗಿರುವುದನ್ನುಮನಗಂಡ ಮಲ್ಲೇಶ್ ಮತ್ತು ತಂಡ ದಾನಿಗಳನೆರವಿನಿಂದ ನಿತ್ಯ ದಾಸೋಹಕ್ಕೆ ಹೆಚ್ಚಿನ ಒತ್ತುನೀಡಿದ್ದಾರೆ. ಮಲ್ಲೇಶ್ ಮತ್ತು ತಂಡದಕಾರ್ಯವನ್ನು ಹಲವಾರು ಗಣ್ಯರು, ಪೊಲೀಸ್‌ಅಧಿಕಾರಿಗಳು ಶ್ಲಾಘಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.