ಗಮನಸೆಳೆದ ಸೋಲ್ ಸೌಂಡ್ಸ್ ಗಾಯನ
Team Udayavani, Dec 22, 2017, 12:44 PM IST
ದೇವನಹಳ್ಳಿ: ಕೆಂಪೇಗೌಡ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕ್ರಿಸ್‌ಮಸ್ ಹಬ್ಬದ ಅಂಗವಾಗಿ ಸಂಭ್ರಮದಲ್ಲಿ ಮಹಿಳೆ ಯರೇ ಇರುವ ಕೊಲಂಬೋ ಮೂಲದ ಸೋಲ್ ಸೌಂಡ್ಸ್ ಗಾಯನ ಪ್ರಯಾಣಿಕರ ಗಮನ ಸೆಳೆಯಿತು.
ಕ್ರಿಸ್‌ಮಸ್ ಕ್ಯಾರೋಲ್ ಸಂಗೀತ: ಹೆಸರಾಂತ ಸಂಗೀತ ಕಲಾವಿದರು ತಮ್ಮ ಕಾರ್ಯಕ್ರಮಗಳ ಮೂಲಕ ಸಭಿಕರನ್ನು ರಂಜಿಸಿದರು. ನಾಲ್ಕು ಹೆಸರಾಂತ ತಂಡಗಳು ಬೆಂಗಳೂರು ಮೆನ್ ಒಟ್ಟು 12 ಕಲಾವಿದರನ್ನು ಹೊಂದಿದ್ದರೆ, ಮಹಿಳೆಯರೇ ಇರುವ ಕೊಲಂಬೊ ಮೂಲದ ಸೋಲ್ ಸೌಂಡ್ಸ್, ಬೆಂಗಳೂರು ಮೂಲದ ಬೆಸ್ಟ್ ಕೆಪ್ಟ್ ಸೀಕ್ರೇಟ್, ಮೂನ್ ಅರ್ರಾ, ಬೆಂಗಳೂರು ಸ್ಕೂಲ್ ಆಫ್ ಮ್ಯೂಸಿಕ್ ತಂಡಗಳು ಸಭಿಕರನ್ನು ತಮ್ಮ ಕಾರ್ಯಕ್ರಮಗಳ ಮೂಲಕ ರಂಜಿಸಿದರು. ಇದರಲ್ಲಿ ಕ್ರಿಸ್‌ಮಸ್ ಕ್ಯಾರೋಲ್, ಇತರೆ ಜನಪ್ರಿಯ ಸಂಗೀತ ಕಾರ್ಯಕ್ರಮಗಳು ಇದ್ದವು.
ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ಹಾದು ಹೋಗುವ ಪ್ರಯಾಣಿಕರು ಈ ಸೀಸನ್ಸ್ ಆಫ್ ಸೇಲ್ಸ್ ಅವಧಿಯಲ್ಲಿ ಶಾಪಿಂಗ್ ಮಾಡಬಹುದಾಗಿದ್ದು, 299 ರಿಂದ 999 ರೂ. ವರೆಗೆ ಖರೀದಿಸುವ ಗ್ರಾಹಕರಿಗೆ ಹಾಗೂ ಪ್ರತಿ 500 ರೂ.ಗೆ ಹೆಚ್ಚುವರಿ ಶಾಪಿಂಗ್‌ಗೆ ಒಂದು ಕೂಪನ್ ಸಿಗಲಿದೆ. 10 ದ್ವಿತೀಯ ಹಾಗೂ 10 ತೃತೀಯ ಬಹುಮಾನಗಳು ಇರುತ್ತವೆ. ಮೆಗಾ ಬಹುಮಾನಗಳಲ್ಲಿ
ಜೀಪ್ ಕಾಂಪ್ಯಾಸ್, ಎಲ್‌ಜಿ ಹೋಂ ಆಡಿಯೊ ಸಿಸ್ಟಮ್, ಫಾಸಿಲ್ ವಾಚ್, ಎಲ್‌ಜಿ ಅಪ್ಲೆ„ಯನ್ಸಸ್ ಸೇರಿವೆ.
ವಿಮಾನ ನಿಲ್ದಾಣವು ಈ ನಗರದ ಪ್ರತಿಬಿಂಬ: ಈ ವೇಳೆ ಬಿಐಎಎಲ್‌ನ ಉಪಾಧ್ಯಕ್ಷ, (ಬ್ಯುಸಿನೆಸ್ ಡೆವಲಪ್ ಮೆಂಟ್ ಮಾರ್ಕೆಟಿಂಗ್ ಮತ್ತು ಸ್ಟ್ರಾಟಜಿ) ರಾಜ್ ಅಂಡ್ರಡೆ ಮಾತನಾಡಿ, ಸೀಸನ್ಸ್ ಆಫ್ ಸೇಲ್ಸ್‌ಗೆ ಪ್ರಯಾಣಿಕರು, ಗ್ರಾಹಕರು ಹೆಮ್ಮೆಯಿಂದ ಸ್ವಾಗತಿಸಿದ್ದಾರೆ. ವಿಮಾನ ನಿಲ್ದಾಣವು ಈ ನಗರದ ಪ್ರತಿಬಿಂಬ. ಹೀಗಾಗಿ, ಬೆಂಗಳೂರಿನ ಸಂಸ್ಕೃತಿ ಬಿಂಬಿಸಲಿದೆ. ಕ್ರಿಸ್‌ಮಸ್ ಹಬ್ಬದ ಬಗ್ಗೆ ಜನರಲ್ಲಿ ತಿಳಿವಳಿಕೆ ಹಬ್ಬದ ಸಂಭ್ರಮದ ಬಗ್ಗೆ ಪ್ರಯಾಣಿಕರಿಗೆ ತಿಳಿಸಿಕೊಡಲಾಗುತ್ತಿದೆ ಎಂದು ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.