ಪಟಾಕಿ ಭರಾಟೆ: ಅಕ್ರಮಕ್ಕೆ ಪೊಲೀಸ್‌ ಕಣ್ಣು

ಅಕ್ರಮ ಪಟಾಕಿ ಮಳಿಗೆಗಳ ತೆರವಿಗೆ ಒತ್ತು ಪೊಲೀಸರಿಂದ ವಿಶೇಷ ಕಾರ್ಯಾಚರಣೆ

Team Udayavani, Nov 3, 2021, 2:27 PM IST

ಪಟಾಕಿ ಭರಾಟೆ- ಅಕ್ರಮಕ್ಕೆ ಪೊಲೀಸ್‌ ಕಣ್ಣು

ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿ ಸಮೀಪಿಸುತ್ತಿ ರುವುದರಿಂದ ನಗರದಲ್ಲಿ ಪಟಾಕಿ ಮಾರಾಟ ಭರಾಟೆ ಜೋರಾಗಿದೆ. ಅದರ ಬೆನ್ನಲ್ಲೇ ಅಕ್ರಮ ಪಟಾಕಿ ಮಳಿಗೆ, ಗೋದಾಮುಗಳು ಕೂಡ ನಾಯಿ ಕೊಡೆಯಂತೆ ಕೆಲವೆಡೆ ತಲೆ ಎತ್ತುತ್ತಿವೆ.

ಈ ಮಧ್ಯೆ ಹಸಿರು ಪಟಾಕಿ ಜತೆಗೆ ಸಾಮಾನ್ಯ ಪಟಾಕಿಗಳನ್ನು ಅಲ್ಲಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ಸಂಬಂಧ ನಗರ ಪೊಲೀಸರು “ವಿಶೇಷ ಕಾರ್ಯಾಚರಣೆ’ ಆರಂಭಿ ಸಿದ್ದಾರೆ. ಒಂದೂವರೆ ತಿಂಗಳ ಹಿಂದೆ ಚಾಮರಾಜಪೇಟೆಯ ವಿ.ವಿ.ಪುರಂ ಠಾಣೆ ವ್ಯಾಪ್ತಿಯ ತರಗುಪೇಟೆಯಲ್ಲಿ ಅಕ್ರಮ ಗೋದಾಮಿನಲ್ಲಿ ನಡೆದ ಬೆಂಕಿ ದುರಂತ ಸಂಭವಿಸಿ ಮೂವರು ಮೃತಪಟ್ಟಿದ್ದರು.

ಈ ಘಟನೆ ವೇಳೆಯೇ ನಗರದಲ್ಲಿ ಅಕ್ರಮ ಪಟಾಕಿ ಗೋದಾಮುಗಳಿವೆ ಎಂಬ ಮಾಹಿತಿ ಬಯಲಿಗೆ ಬಂದಿತ್ತು. ಮತ್ತೂಂದೆಡೆ ತಮಿಳುನಾಡಿನ ಶಿವಕಾಶಿ ಸೇರಿ ಕೆಲವೆಡೆ ಪಟಾಕಿ ಉತ್ಪಾದನಾ ಕಾರ್ಖಾನೆಗಳು ಬೇಡಿಕೆಗೂ ಅಧಿಕ ಪಟಾಕಿಗಳನ್ನು ಉತ್ಪಾದಿಸಿದ್ದು, ನಿರೀಕ್ಷೆಯಂತೆ ನಗರದಲ್ಲಿ ಪಟಾಕಿ ಮಾರಾಟ ಹೆಚ್ಚಾಗಿಯೇ ಇದೆ. ಹೀಗಾಗಿ ನಗರದಲ್ಲಿ ಪ್ರಮಖವಾಗಿ ಚಿಕ್ಕಪೇಟೆ, ಕಾಟ ನ್‌ಪೇಟೆ, ಸಿಟಿ ಮಾರುಕಟ್ಟೆ, ಚಾಮರಾಜಪೇಟೆ, ವಿ.ವಿ. ಪುರಂ ಸೇರಿ ನಗರದ ಎಲ್ಲೆಡೆ ಇರುವ ಗೋದಾಮುಗಳ ಮೇಲೆ ನಿಗಾವಹಿಸಲಾಗಿದೆ.

ಇದನ್ನೂ ಓದಿ:- ಪದೇ ಪದೇ ಹೇಳ್ತೇನೆ ‘ದಲಿತ’ ಅನ್ನುವ ಪದ ಬಳಸಿಲ್ಲ : ಸಿದ್ದರಾಮಯ್ಯ

ಇದರೊಂದಿಗೆ ಬಿಬಿಎಂಪಿ ನಿಗದಿಸಿರುವ ಬಿಬಿಎಂಪಿ ಮೈದಾನಗಳು ಹಾಗೂಇತರೆಡೆ ತೆರೆದುಕೊಂಡಿರುವ ಪಟಾಕಿ ಮಳಿಗೆಗಳ ಪರವಾ ನಿಗೆ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಬಿಬಿಎಂಪಿ ಈ ವರ್ಷ 59 ಮೈದಾನಗಳಲ್ಲಿ ಚೆಲ್ಲರೆ ಪಟಾಕಿ ಮಳಿಗೆ ತೆರೆಯಲು ಅನುಮತಿ ನೀಡಿತ್ತು.ಅದರಂತೆ ಆನ್‌ಲೈನ್‌ ಮೂಲಕ 287 ಮಂದಿ ವ್ಯಾಪಾರಿಗಳಿಗೆ ನ.30ರಿಂದ ನ.5ರವರೆಗೆ ಮೂರು ದಿನಗಳ ಕಾಲ ಪಟಾಕಿ ಮಾರಾಟಕ್ಕೆ ಪೊಲೀಸರು ಅವಕಾಶ ನೀಡಿದ್ದು, ಪ್ರತಿಯೊಬ್ಬ ವ್ಯಾಪಾರಿ ಪರಿಸರ ಸ್ನೇಹಿ ಹಸಿರು ಪಟಾಕಿ ಯನ್ನೇ ಮಾರಾಟ ಮಾಡಬೇಕು. ನಿಯಮ ಉಲ್ಲಂಸಿ ದರೆ ಕಾನೂನುಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

 ಪೊಲೀಸರಿಂದ ತಪಾಸಣೆ: ಅಕ್ರಮ ಪಟಾಕಿ ಮಳಿಗೆ ಮತ್ತು ಗೋದಾಮುಗಳ ಮೇಲೆ ನಿಗಾವಹಿಸಲು ನಗರ ಪೊಲೀಸ್‌ ಆಯುಕ್ತರು ಈಗಾಗಲೇ ಆಯಾ ವಿಭಾಗ ಡಿಸಿಪಿಗಳಿಗೆ ಸೂಚಿಸಿದ್ದಾರೆ. ಈಹಿನ್ನೆಲೆಯಲ್ಲಿ ತಮ್ಮ ಠಾಣಾ ವ್ಯಾಪ್ತಿಯಲ್ಲಿರುವ ಗೋದಾಮುಗಳು ಹಾಗೂ ಮಳಿಗೆಗಳನ್ನು ಆಗಾಗ್ಗೆ ತಪಾಸಣೆ ನಡೆಸಬೇಕು ಎಂದು ಡಿಸಿಪಿಗಳು ಠಾಣಾಧಿಕಾರಿಗಳಿಗೆ ಆದೇಶಿಸಿದ್ದಾರೆ. ಹೀಗಾಗಿ ಪ್ರತಿಯೊಬ್ಬ ಬೀಟ್‌ ಸಿಬ್ಬಂದಿಯೂ ತಮ್ಮ ವ್ಯಾಪ್ತಿಯಲ್ಲಿ ಈ ಬಗ್ಗೆ ಮಾಹಿತಿ ಸಂಗ್ರಹಿಸಬೇಕು. ಒಂದು ವೇಳೆ ಅನುಮಾನ ಬಂದರೆ ಮೇಲಿನ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು.

 ಕ್ಯೂಆರ್‌ಕೋಡ್‌ ಅಥವಾ ಲೋಗೋ: ಕಳೆದ ವರ್ಷ ಹಸಿರು ಪಟಾಕಿ ಗುರುತಿಸಲು ಕ್ಯೂಆರ್‌ ಕೋಡ್‌ ಸ್ಕ್ಯಾನಿಂಗ್‌ಗೆ ಅವಕಾಶ ನೀಡಲಾಗಿತ್ತು. ಈ ಆಧಾರದ ಮೇಲೆ ಪೊಲೀಸರು ದಾಳಿ ನಡೆಸಿ ಸ್ಕ್ಯಾನ್‌ ಮಾಡಿ ಪರಿಸೀಲಿಸುತ್ತಿದ್ದರು. ಈ ಬಾರಿ ಅದರೊಂದಿಗೆ ಕೌನ್ಸಿಲ್‌ ಫಾರ್‌ ಸೈಟಿμಕ್‌ ಆ್ಯಂಡ್‌ ಇಂಡಸ್ಟ್ರೀಸ್‌ ರಿಸರ್ಚ್‌ ಅಭಿವೃದ್ಧಿ ಪಡಿಸಿದ ಹಸಿರು ಪಟಾಕಿಗಳನ್ನು, ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್‌ ಸಂಶೋ ಧನಾ ಸಂಸ್ಥೆ(ನೀರಿ) ದೃಢಪಡಿಸಿರುವ ಹಸಿರು ಪಟಾಕಿ ಎಂಬ ಲೋಗೋ ಇರುತ್ತದೆ. ಇದು ಪೊಲೀಸರಿಗೆ ತಪಾಸಣೆಗೆ ಸುಲಭವಾಗುತ್ತದೆ.

“ಮೇಲ್ಭಾಗದ ಬಾಕ್ಸ್‌ಗಳಲ್ಲಿ ಮಾತ್ರವಲ್ಲ, ಒಳಭಾಗದ ಪಟಾಕಿ ಪ್ಯಾಕೆಟ್‌ಗಳಲ್ಲೂ “ನೀರಿ’ ಸಂಸ್ಥೆಯ ಲೋಗೋ ಇರಬೇಕು. ಆಗ ಮಾತ್ರ ಹಸಿರು ಪಟಾಕಿ ಎಂದು ದೃಢಪಡಿಸಲಾಗುತ್ತದೆ. ಒಂದು ವೇಳೆ ನಕಲಿ ಮಾಡಿದರೆ ಕಾನೂನು ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದರು. ನಗರದಲ್ಲಿ ಅಕ್ರಮ ಪಟಾಕಿ ಗೋದಾಮುಗಳು, ಮಳಿಗೆಗಳ ಮೇಲೆ ಪೊಲೀಸರಿಗೆ ನಿಗಾವಹಿಸುವಂತೆ ಸೂಚಿಸಲಾಗಿದೆ. ನಕಲಿ ಅಥವಾ ಅಕ್ರಮವಾಗಿ ಪಟಾಕಿ ಮಾರಾಟ ಮಾಡಿದರೆ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳುತ್ತೇವೆ.” – ಕಮಲ್‌ ಪಂತ್‌, ನಗರ ಪೊಲೀಸ್‌ ಆಯುಕ್ತ.

  • – ಮೋಹನ್‌ ಭದ್ರಾವತಿ

ಟಾಪ್ ನ್ಯೂಸ್

Shiva Rajkumar: ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Earthquake…! ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

Earthquake…! ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

WTC 25; India’s Test Championship finals road gets tough; Here’s the calculation

WTC 25; ಕಠಿಣವಾಯ್ತು ಭಾರತದ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಹಾದಿ; ಹೀಗಿದೆ ಲೆಕ್ಕಾಚಾರ

Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ

Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ

Jammu – Kashmir: ಬೆಳ್ಳಂಬೆಳಗ್ಗೆ ಕುಲ್ಗಾಮ್ ನಲ್ಲಿ ಎನ್‌ಕೌಂಟರ್‌… 5 ಭಯೋತ್ಪಾದಕರು ಹತ

Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

Crime: ರೌಡಿಶೀಟರ್‌ ಕೊಲೆ ಯತ್ನ; ಆರೋಪಿಗೆ ಗುಂಡೇಟು

Doddaballapur: ಎರಡೂ ಬಸ್‌ ನಿಲ್ದಾಣಕ್ಕೆ ಬೇಕಿದೆ ಕಾಯಕಲ್ಪ!

Doddaballapur: ಎರಡೂ ಬಸ್‌ ನಿಲ್ದಾಣಕ್ಕೆ ಬೇಕಿದೆ ಕಾಯಕಲ್ಪ!

11

Lack of Bus stand: ಹೊಸಕೋಟೆ; ಬಸ್‌ ನಿಲ್ದಾಣವಿಲ್ಲದೆ ಪರದಾಟ!

Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ

Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ

Anekal: ರೌಡಿಶೀಟರ್‌ ಮೇಲೆ ಮಾರಕಾಸ್ತ್ರಗಳಿಂದ ದಾಳಿ

Anekal: ರೌಡಿಶೀಟರ್‌ ಮೇಲೆ ಮಾರಕಾಸ್ತ್ರಗಳಿಂದ ದಾಳಿ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Shiva Rajkumar: ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Earthquake…! ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

Earthquake…! ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

WTC 25; India’s Test Championship finals road gets tough; Here’s the calculation

WTC 25; ಕಠಿಣವಾಯ್ತು ಭಾರತದ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಹಾದಿ; ಹೀಗಿದೆ ಲೆಕ್ಕಾಚಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.